25 ಕೋಟಿ ರೂ ಕಾರಿಗೆ 52 ಕೋಟಿ ರೂ ನಂಬರ್ ಪ್ಲೇಟ್; ದುಬಾರಿ ರಿಜಿಸ್ಟ್ರೇಶನ್‌ಗೆ ದಂಗಾದ ಪೊಲೀಸ್!

First Published | Dec 24, 2020, 2:44 PM IST

ದುಬಾರಿ ಹಾಗೂ ಐಷಾರಾಮಿ ಕಾರು ಖರೀದಿಸುವ ಬಹುತೇಕರು ತಮಗಿಷ್ಟವಾದ ನಂಬರ್ ಪ್ಲೇಟ್ ಖರೀದಿಸುತ್ತಾರೆ. ಇದಕ್ಕಾಗಿ  ಹೆಚ್ಚು ಹಣ ವ್ಯಯಿಸುತ್ತಾರೆ. ಲಕ್ಷ, ಕೋಟಿ ರೂಪಾಯಿ ಖರ್ಚು ಮಾಡಿ ತಮಗೆ ಬೇಕಾದ, ತಮ್ಮ ಅದೃಷ್ಠದ ನಂಬರ್ ಖರೀದಿಸುತ್ತಾರೆ. ಹೀಗೆ 25 ಕೋಟಿ ರೂಪಾಯಿ ನೀಡಿ ವಿಶ್ವದ ಅತ್ಯಂತ ದುಬಾರಿ ಬುಗಾಟಿ ಚಿರೋನ್ ಕಾರು ಖರೀದಿಸಿ ಮಾಲೀಕ, ನಂಬರ್ ಪ್ಲೇಟ್‌ಗಾಗಿ ಕಾರಿಗಿಂತ ಎರಡು ಪಟ್ಟು ಹಣ ಖರ್ಚು ಮಾಡಿದ್ದಾರೆ. ದುಬಾರಿ ನಂಬರ್ ಪ್ಲೇಟ್, ಕಾರಿನ ಮಾಹಿತಿ ಇಲ್ಲಿದೆ

ವಾಹನ ಖರೀದಿಸುವಾಗ ಹಲವರು ತಮಗಿಷ್ಟವಾದ, ಅದೃಷ್ಠದ ನಂಬರ್ ಪ್ಲೇಟ್ ಹೊಂದಲು ಬಯಸುತ್ತಾರೆ. ಇದಕ್ಕಾಗಿ ಹೆಚ್ಚಿನ ಹಣ ನೀಡಿ ನಂಬರ್ ಖರೀದಿ ಮಾಡುತ್ತಾರೆ. ಕೆಲ ನಂಬರ್‌ ಬಿಡ್ಡಿಂಗ್ ಮೂಲಕ ಪಡೆದುಕೊಳ್ಳಬೇಕು.
ವಿಶೇಷವಾಗಿ ದುಬಾರಿ ಹಾಗೂ ಐಷಾರಾಮಿ ಕಾರು ಖರೀದಿಸುವ ಬಹುತೇಕರ ಕಾರಿನ ನಂಬರ್ ಪ್ಲೇಟ್ ಸ್ಪೆಷಲ್ ಆಗಿರುತ್ತದೆ. ಇನ್ನು ದುಬೈ ಶ್ರೀಮಂತರ ಕತೆ ಬಿಡಿಸಿ ಹೇಳಬೇಕಿಲ್ಲ. ತಮಗಿಷ್ಠವಾದ ನಂಬರ್ ಅಥವಾ ಕಾರು ಖರೀದಿಸಲು ಎಷ್ಟು ಹಣ ಬೇಕಾದರು ಖರ್ಚು ಮಾಡುತ್ತಾರೆ.
Tap to resize

ದುಬೈನ ಶ್ರೀಮಂತ ವ್ಯಕ್ತಿಗೆ ಕಾರು ಕ್ರೇಝ್ ತುಸು ಹೆಚ್ಚೆ ಇದೆ. ಈತ ವಿಶ್ವದ ಅತ್ಯಂತ ದುಬಾರಿ ಕಾರಾದ ಬುಗಾಟಿ ಚಿರೋನ್ ಕಾರು ಖರೀದಿಸಿದ್ದಾರೆ. ಈ ಕಾರಿನ ಬೆಲೆ 25 ಕೋಟಿ ರೂಪಾಯಿ.
ಕಾರೇ ದುಬಾರಿ, ಇನ್ನು ಈ ಕಾರಿಗೆ ತನಗಿಷ್ಠವಾದ ರಿಜಿಸ್ಟ್ರೇಶನ್ ನಂಬರ್ ಬುಕ್ ಮಾಡಲು ಮುಂದಾಗಿದ್ದಾನೆ. ಆದರೆ ಅದೇ ನಂಬರ್‌ಗೆ ಹಲವು ಶ್ರೀಮಂತರು ಬೇಡಿಕೆ ಇಟ್ಟಿದ್ದರು.
ಬೇಡಿಕೆ ಹೆಚ್ಚಾದ ಕಾರಣ ದುಬೈ ಪೊಲೀಸರು ವಿಶೇಷ ನಂಬರ್‌ಗಾಗಿ ಬಿಡ್ಡಿಂಗ್ ನಡೆಸಿದ್ದಾರೆ. ಈ ಬಿಡ್ಡಿಂಗ್‌ನಲ್ಲಿ ಶ್ರೀಮಂತ ಬುಗಾಟಿ ಚಿರೋನ್ ಮಾಲೀಕ ಬರೋಬ್ಬರಿ 52 ಕೋಟಿ ರೂಪಾಯಿಗೆ ರಿಜಿಸ್ಟ್ರೇಶನ್ ನಂಬರ್ ಖರೀದಿಸಿದ್ದಾರೆ. ಈತನ ನಂಬರ್ ಕ್ರೇಝ್‌ಗೆ ದುಬ2 ಪೊಲೀಸರು ದಂಗಾಗಿದ್ದಾರೆ. ಕಾರಣ ಈತ 100 ಕೋಟಿಯಾದರೂ ನಂಬರ್ ಖರೀದಿಸಲು ತಯಾರಿದ್ದ.
ಕಾರಿನ ಬೆಲೆಗಿಂತ 2 ಪಟ್ಟು ಹೆಚ್ಚು ಹಣ ನೀಡಿ ರಿಜಿಸ್ಟ್ರೇಶನ್ ನಂಬರ್ ಖರೀದಿಸಿದ್ದಾರೆ. 52 ಕೋಟಿ ರೂಪಾಯಿ ನಂಬರ್ 9. ಕಾರಿನ ನಂಬರ್ ಪ್ಲೇಟ್‌ ಮೇಲೆ ದುಬೈ ರಿಡಿಸ್ಟ್ರೇಶನ್ 9 ಎಂದು ಬರೆಯಲಾಗಿದೆ.
ಬುಗಾಟಿ ಚಿರೋನ್ ಕಾರು ಹಾಗೂ ಇದರ ಸ್ಪೆಷಲ್ ನಂಬರ್ ಪ್ಲೇಟ್‌ಗಾಗಿ ಈ ಮಾಲೀಕ ಒಟ್ಟು 77 ಕೋಟಿ ರೂಪಾಯಿ ಖರ್ಚು ಮಾಡಿದ್ದಾನೆ. ಈ ಹಣದಲ್ಲಿ 2 ಬುಗಾಟಿ ಚಿರೋನ್ ಕಾರು ಖರೀದಿಸಿದರೂ ಇನ್ನೂ 2 ಕೋಟಿ ಬಾಕಿ ಉಳಿಯುತ್ತಿತ್ತು.
ಬುಗಾಟಿ ಚಿರೋನ್ ಕಾರು ದುಬೈನಲ್ಲಿ ಬಹುತೇಕ ಶ್ರೀಮಂತರ ಬಳಿ ಇದೆ. ಇದು ವಿಶ್ವದ ಅತ್ಯಂತ ದುಬಾರಿ ಮಾತ್ರವಲ್ಲ, ಅತೀ ವೇಗದ ಕಾರು ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. ಪ್ರತಿ ಗಂಟೆ 490 ಕಿ.ಮೀ ವೇಗದಲ್ಲಿ ಚಲಿಸಲಿದೆ.

Latest Videos

click me!