ಕಳೆದೆರಡು ವರ್ಷ ಭಾರತೀಯ ಆಟೋಮೊಬೈಲ್ ಪಾಲಿಗೆ ಹೇಳಿಕೊಳ್ಳುವಂತ ವರ್ಷವಾಗಿರಲಿಲ್ಲ. 20219ರಲ್ಲಿ ಜಿಎಸ್‌ಟಿ, ಕಚ್ಚಾವಸ್ತುಗಳ ಬೆಲೆ ಏರಿಕೆ ಸೇರಿದಂತೆ ಹಲವು ಕಾರಣಗಳಿಂದ ಮಾರಾಟ ಕುಸಿದಿತ್ತು.
undefined
2020ರಲ್ಲಿ ಕೊರೋನಾ ವೈರಸ್ ಕಾರಣ ಆಟೋಮೊಬೈಲ್ ಕ್ಷೇತ್ರದ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿತ್ತು. ಹೀಗಾಗಿ 2021ರಲ್ಲಿ ಈ ಎಲ್ಲಾ ಸಂಕಷ್ಟ ನಿವಾರಣೆಯಾಗಲಿದೆ ಅನ್ನೋ ಭರವಸೆ.
undefined
ಆದರೆ ಹೊಸ ವರ್ಷದ ಆರಂಭದಲ್ಲಿ ಮಹೀಂದ್ರ ಹಾಗೂ ಫೋರ್ಡ್ ಸಂಸ್ಥೆ ಬ್ರೇಕ್ ಅಪ್ ಮಾಡಿಕೊಂಡಿದೆ. ಜಂಟಿ ಪಾಲುದಾರಿಯಲ್ಲಿ ವಾಹನ ಉತ್ಪಾದನೆಗೆ ಒಪ್ಪಂದ ಮಾಡಿಕೊಂಡಿದ್ದ ಮಹೀಂದ್ರ ಹಾಗೂ ಫೋರ್ಡ್ ಇದೀಗ ದೂರವಾಗಿದೆ.
undefined
ಕಳೆದ ವರ್ಷ ಫೋರ್ಡ್ ಸಂಸ್ಥೆ ಭಾರತದಲ್ಲಿ ಮಹೀಂದ್ರ ಜೊತೆ ಜಂಟಿಯಾಗಿ ವಾಹನ ಉತ್ಪಾದನೆಗೆ ಒಪ್ಪಂದ ಮಾಡಿಕೊಂಡಿತ್ತು. 2021ರಿಂದ ಮಹೀಂದ್ರ ಫೋರ್ಡ್ ಜಂಟಿ ಪಾಲುದಾರಿಕೆ ಉತ್ಪಾದನೆ ಆರಂಭಗೊಳ್ಳಬೇಕಿತ್ತು.
undefined
ಭಾರತದಲ್ಲಿ ಜಂಟಿ ಪಾಲುದಾರಿಕೆಯಲ್ಲಿ ಹಲವು ಆಟೋಮೊಬೈಲ್ ಕಂಪನಿಗಳು ಯಶಸ್ಸು ಕಂಡಿದೆ. ಮಹೀಂದ್ರ ಹಾಗೂ ಫೋರ್ಡ್ ಹೊಸ ಅಧ್ಯಾಯ ಬರೆಯಲಿದೆ ಅನ್ನೋ ಮಾತುಗಳು ಕೇಳಿಬಂದಿತ್ತು.
undefined
ಆರ್ಥಿಕ ಪರಿಸ್ಥಿತಿ ಸುಧಾರಣೆ ಕಂಡಿಲ್ಲ. ಹೀಗಾಗಿ ಮಹೀಂದ್ರ ಜೊತೆಗಿನ ಜಂಟಿ ಪಾಲುದಾರಿ ಮುಂದುವರಿಸಲು ಅಸಾಧ್ಯವಾಗಿದೆ ಎಂದು ಫೋರ್ಟ್ ಇಂಡಿಯಾ ವಕ್ತಾರ ರೇಡ್ ಹೈಳಿದ್ದಾರೆ.
undefined
ಭಾರತದಲ್ಲಿ ಫೋರ್ಡ್ ವಾಹನ ಉತ್ಪಾದನೆ ವೆಚ್ಚ ಕಡಿಮೆ ಮಾಡಲು ಹಾಗೂ ಫೋರ್ಡ್ ವಾಹನಗಳ ಬೇಡಿಕೆ ಹೆಚ್ಚಿಸಲು ಫೋರ್ಡ್ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ.
undefined
ಮಹೀಂದ್ರ ಜೊತೆಗಿನ ಜಂಟಿ ಪಾಲುದಾರಿಕೆ ಅಂತ್ಯದಿಂದ ಗ್ರಾಹಕರಿಗೆ ಯಾವುದೇ ಸಮಸ್ಯೆ ಇಲ್ಲ. ಫೋರ್ಡ್ ಎಲ್ಲಾ ವಾಹನಗಳು ಕ್ಲಪ್ತ ಸಮಯದಲ್ಲಿ ಲಭ್ಯವಾಗಲಿದೆ. ನಿರ್ವಹಣೆ ಸೇರಿದಂತೆ ಎಲ್ಲಾ ಸರ್ವೀಸ್ ಲಭ್ಯವಿದೆ ಎಂದಿದ್ದಾರೆ.
undefined