ಬರುತ್ತಿದೆ ಸೋಲಾರ್ ಎಲೆಕ್ಟ್ರಿಕ್ ಕಾರು , ಚಾರ್ಜಿಂಗ್ ಇಲ್ಲದೆ ಪ್ರತಿ ದಿನ 1,600 ಕಿ.ಮಿ ಮೈಲೇಜ್!

First Published Dec 7, 2020, 3:20 PM IST

ಎಲೆಕ್ಟ್ರಿಕ್ ವಾಹನದಲ್ಲಿ ಆವಿಷ್ಕಾರಗಳು ನಡೆಯುತ್ತಲೇ ಇದೆ. ಅತೀ ವೇಗದ ಚಾರ್ಜಿಂಗ್, ಗರಿಷ್ಠ ಪ್ರಯಾಣದ ರೇಂಜ್ ಸೇರಿದಂತೆ ಬ್ಯಾಟರಿ ಚಾಲಿತ ವಾಹನಗಳ ಇದೀಗ ಬಹು ಬೇಡಿಕೆ ಪಡೆಯುತ್ತಿದೆ. ಇದೀಗ ಹೊಸ ಎಲೆಕ್ಟ್ರಿಕ್ ಕಾರು ಆವಿಷ್ಕರಿಸಲಾಗಿದೆ. ಇದು ಸೋಲಾರ್ ಎಲೆಕ್ಟ್ರಿಕ್ ಕಾರಾಗಿದ್ದು, ಯಾವುದೇ ಚಾರ್ಜಿಂಗ್ ಅವಶ್ಯಕತೆ ಇಲ್ಲ, ಪ್ರತಿ ದಿನ 1,600 ಕಿ.ಮೀ ಪ್ರಯಾಣ ಮಾಡಬಹುದು. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಭಾರತ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಎಲೆಕ್ಟ್ರಿಕ್ ವಾಹನಗಳಿಗೆ ಭಾರಿ ಉತ್ತೇಜನ ನೀಡುತ್ತಿದೆ. 2030ಕ್ಕೆ ಭಾರತವನ್ನು ಸಂಪೂರ್ಣ ಎಲೆಕ್ಟ್ರಿಕ್ ವಾಹನ ಮಾಡಲು ಕೇಂದ್ರ ಸರ್ಕಾರ ಹೆಜ್ಜೆ ಇಟ್ಟಿದೆ.
undefined
ಇದರ ಜೊತೆ ಭಾರತದಲ್ಲಿ ಹಲವು ಸ್ಟಾರ್ಟ್ ಅಪ್ ಕಂಪನಿಗಳು ಎಲೆಕ್ಟ್ರಿಕ್ ವಾಹನ ಬಿಡುಗಡೆ ಮಾಡುತ್ತಿದೆ. ಇದೀಗ ಅಮೆರಿಕದ ಸ್ಟಾರ್ಟ್ ಅಪ್ ಕಂಪನಿ ಅಪ್ಟೇರಾ ಮೋಟಾರ್ಸ್ ಸೋಲಾರ್ ಎಲೆಕ್ಟ್ರಿಕ್ ಕಾರು ಆವಿಷ್ಕರಿಸಿದೆ.
undefined
ಸೋಲಾರ್ ಚಾರ್ಜಿಂಗ್ ಬ್ಯಾಟರಿ ಚಾಲಿತ ಕಾರು ಇದಾಗಿದ್ದು, ಸಂಪೂರ್ಣ ಚಾರ್ಜ್‌ಗೆ ಬರೋಬ್ಬರಿ 1,600 ಕಿ.ಮೀ ಮೈಲೇಜ್ ನೀಡಲಿದೆ.
undefined
ಸೋಲಾರ್ ವಿದ್ಯುತ್, ಸೋಲಾರ್ ಯಂತ್ರಗಳು ಈಗಾಗಲೇ ಭಾರಿ ಬೇಡಿಕೆ ಪಡೆಯುತ್ತಿದೆ. ಇದೀಗ ನೂತನ ಸೋಲಾರ್ ಕಾರು ವಿಶ್ವದ ಸಾರಿಗೆಯಲ್ಲಿ ಹೊಸ ಅಧ್ಯಾಯ ಬರೆಯಲಿದೆ.
undefined
ವಿಶೇಷ ಅಂದರೆ ರಾತ್ರಿ ವೇಳೆ ಚಾರ್ಜ್ ಸಂಪೂರ್ಣ ಖಾಲಿಯಾಗಿದ್ದರೆ, ವಿದ್ಯುತ್ ಚಾರ್ಚಿಂಗ್ ಕೂಡ ಲಭ್ಯವಿದೆ. ಕೇವಲ 1 ಗಂಟೆ ಚಾರ್ಜ್ ಮಾಡಿದರೆ 500 ಕಿ.ಮೀ ಮೈಲೇಜ್ ನೀಡಲಿದೆ.
undefined
ಸದ್ಯ ಸೋಲಾರ್ ಚಾಲಿತ ಕಾರು 3 ಚಕ್ರದ ಕಾರಾಗಿದೆ. ವಿಮಾನ ಶೈಲಿಯಲ್ಲಿರುವ ಈ ಕಾರಿನ ಗರಿಷ್ಠ ವೇಗ 177 ಕಿ.ಮೀ ಮೈಲೇಜ್ ಪ್ರತಿ ಗಂಟೆಗೆ ನೀಡಲಿದೆ.
undefined
3.3 ಸೆಕೆಂಡ್‌ಗಳಲ್ಲಿ ಸೋಲಾರ್ ಕಾರು 100 ಕಿ.ಮೀ ವೇಗ ತಲುಪಲಿದೆ. 201 hp ಪವರ್ ಹೊಂದಿದೆ. ಹೀಗಾಗಿ ಡೀಸೆಲ್ ಕಾರಿನ ಕಾರ್ಯಕ್ಷಮೆತೆ ಈ ಕಾರಿನಲ್ಲಿದೆ.
undefined
ಸೋಲಾರ್ ಪವರ್ ನೂತನ ಕಾರಿನ ಬೆಲೆ 19.10 ಲಕ್ಷ ರೂಪಾಯಿ($25,900) ಬೆಲೆ ಕೊಂಚ ದುಬಾರಿಯಾಗಿದ್ದರು, ಒಮ್ಮೆ ಕಾರು ಖರೀದಿಸಿದರೆ ಇತರ ಯಾವುದೇ ನಿರ್ವಹಣೆ ಖರ್ಚುಗಳಿಲ್ಲ.
undefined
click me!