ಗ್ರಾಹಕರನ್ನು ಸಂತೋಷಪಡಿಸುವ ಮತ್ತು ನವೀನ ಉತ್ಪನ್ನಗಳನ್ನು ನೀಡುವ ತನ್ನ ದೂರದೃಷ್ಟಿ ಗೆ ಅನುಗುಣವಾಗಿ, ವಿಶ್ವದ ಅತಿದೊಡ್ಡ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಗಳ ಉತ್ಪಾದಕರಾದ ಹೀರೊ ಮೊಟೊಕಾರ್ಪ್ ಸ್ಪ್ಲೆಂಡರ್ ನ ಹೊಸ ಆವೃತ್ತಿಯನ್ನು ಪರಿಚಯಿಸಿದೆ - ಸ್ಪ್ಲೆಂಡರ್+ ಬ್ಲಾಕ್ ಮತ್ತು ಆಕ್ಸೆಂಟ್.
ಸ್ಪ್ಲೆಂಡರ್ + ಬ್ಲಾಕ್ ಮತ್ತು ಅಕ್ಸೆಂಟ್ ಆವೃತ್ತಿಗಳು ಪೂರ್ಣ ಕಪ್ಪು ಅವತಾರದಲ್ಲಿ, ಕಪ್ಪು ಟೈರ್, ಕಪ್ಪು ಇಂಜಿನ್, ಮತ್ತು ಕಪ್ಪು ಚೈನ್ ಕವರ್‍ನೊಂದಿಗೆ ಲಭ್ಯವಿದೆ.
ನೂತನ ಬೈಕ್ ಆಕರ್ಷಣೆಯನ್ನು 3ಡಿ ಹೀರೊ ಲೊಗೊವನ್ನು ಸೇರಿಸಿ ವರ್ಧಿಸಬಹುದು; ಇದು ಪರಿಕರವಾಗಿ ಲಭ್ಯವಿದೆ. ಹೆಚ್ಚುವರಿ ಆಕ್ಸೆಸರಿ ಕೂಡ ಬೈಕ್ ಜೊತೆ ಬಿಡುಗಡೆ ಮಾಡಲಾಗಿದೆ.
ಸ್ಪ್ಲೆಂಡರ್+ ಬ್ಲಾಕ್ ಮತ್ತು ಆಕ್ಸೆಂಟ್ ಎಲ್ಲಾ ಹೀರೊ ಮೊಟೊಕಾರ್ಪ್ ಡೀಲರ್ ಗಳಲ್ಲಿ ರೂ. 64,470-ಯ ದರದಲ್ಲಿ ಲಭ್ಯವಿದೆ(ಎಕ್ಸ್ ಶೋರೂಂ ದೆಹಲಿ) ಖರೀದಿಯ ಸಮಯದಲ್ಲಿ, ಗ್ರಾಹಕರು ಮೂರು ಪ್ರತ್ಯೇಕ ವಿನ್ಯಾಸಗಳಲ್ಲಿ ಆರಿಸಿಕೊಳ್ಳಬಹುದು.
ಮೋಟಾರ್ ಸೈಕಲ್ ವರ್ಗದಲ್ಲಿ ಮೊದಲ ಬಾರಿಗೆ ಮಾಡಲಾದ ಉಪಕ್ರಮವಾಗಿದ್ದು, ಸ್ಪ್ಲೆಂಡರ್+ ಬ್ಲಾಕ್ ಮತ್ತು ಆಕ್ಸೆಂಟ್ ಅನ್ನು ಖರೀದಿಯ ಸಮಯದಲ್ಲಿ ಗ್ರಾಹಕರು ಹೆಚ್ಚುವರಿ ಫೀಚರ್ಸ್‌ಗಳೊಂದಿಗೆ ಖರೀದಿಸುವ ಅವಕಾಶವಿದೆ.
ಮೂರು ವಿನ್ಯಾಸಗಳಲ್ಲಿ ನೂತನ ಬೈಕ್ ಲಭ್ಯವಿದೆ. ಯಾವುದೇ ಗ್ರಾಫಿಕ್ಸ್ ಇಲ್ಲದೆಯೂ ಗ್ರಾಹಕರು ಮೋಟಾರ್ ಸೈಕಲ್ ಅನ್ನು ಖರೀದಿಸಬಹುದು.
ಗ್ರಾಫಿಕ್ ಥೀಂಗಳ ದರ ಆಕರ್ಷಕವಾದ ರೂ.899 ಇದೆ, ದೇಶಾದ್ಯಂತ. ಗ್ರಾಹಕರು ಗ್ರಾಫಿಕ್ಸ್, 3ಡಿ ಹೀರೊ ಲೊಗೊ ಮತ್ತು ರಿಂ ಟೇಪ್ ಇರುವ ಪೂರ್ಣ ಕಿಟ್ ಅನ್ನು ರೂ. 1399ಗೆ ಕೊಳ್ಳಬಹುದು.