ಇಂದಿನಿಂದ ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯ, ಇಲ್ಲದಿದ್ದರೆ ತೆರಬೇಕು ದುಬಾರಿ ದಂಡ!

First Published | Dec 15, 2020, 7:43 PM IST

ಮೋಟಾರು ವಾಹನ ನಿಯಮಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ, ತಿದ್ದುಪಡಿಗಳು, ಮಾರ್ಪಡುಗಳಾಗುತ್ತಿದೆ. ಇದರಲ್ಲಿ ಪ್ರಮುಖವಾಗಿ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ನಿಯಮ ಕೂಡ ಒಂದು. ಇಂದಿನಿಂದ(ಡಿ.15) ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯವಾಗಿದೆ. ಅಳವಡಿಸದಿದ್ದಲ್ಲಿ 5,500 ರೂಪಾಯಿ ದಂಡ ತೆರಬೇಕು.  ಏನಿದು ಹೈಸೆಕ್ಯೂರಿಟಿ ನಂಬರ್ ಪ್ಲೇಟ್?

ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯ ಆದೇಶವನ್ನು ಸುಪ್ರೀಂ ಕೋರ್ಟ್ ಎರಡು ವರ್ಷಗಳ ಹಿಂದೆ ನೀಡಿದೆ. ಇನ್ನು ಪೊಲೀಸರು ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯಗೊಳಿಸಲು ಹಲವು ಗಡುವು ನೀಡಿದ್ದಾರೆ.
ದೆಹಲಿ ಪೊಲೀಸರು ಡಿಸೆಂಬರ್ 15 ರಿಂದ ನಗರದ ಎಲ್ಲಾ ವಾಹನಗಳ ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯವಾಗಿರಬೇಕು ಎಂದು ಈ ಹಿಂದೆ ಸುತ್ತೋಲೆ ಹೊರಡಿಸಿದೆ.
Tap to resize

ಪೊಲೀಸ್ ಪ್ರಕಟಣೆ ಪ್ರಕಾರ ದೆಹಲಿ ವಾಹನಗಳು ಇಂದಿನಿಂದ(ಡಿ.15) ಹೆಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯವಾಗಿದೆ. ಇಲ್ಲದಿದ್ದರೆ 5,500 ರೂಪಾಯಿ ದಂಡ ವಿಧಿಸಲಾಗುತ್ತೆ.
ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಕೇವಲ ದೆಹಲಿಗೆ ಎಂದು ಸಂತಸ ಪಡುವಂತಿಲ್ಲ. ಬೆಂಗಳೂರು, ಕರ್ನಾಟಕ ಸೇರಿದಂತೆ ಎಲ್ಲಾ ಭಾಗಗಳಲ್ಲಿ ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯವಾಗುವ ದಿನಗಳು ದೂರವಿಲ್ಲ.
ಎಪ್ರಿಲ್ 1, 2019ರ ಬಳಿಕ ಖರೀದಿಸಿದ ನೂತನ ವಾಹನಗಳಿಗೆ ಡೀಲರ್‌ಗಳೇ ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಸುತ್ತಾರೆ. ಆದರೆ ಇದಕ್ಕಿಂತ ಮೊದಲಿನ ವಾಹನಗಳು ಹಳೇ ನಂಬರ್ ಪ್ಲೇಟ್ ಬದಲು ಹೊಸ ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಅಳಡಿಸಬೇಕು.
ಹೈಸೆಕ್ಯೂರಿಟಿ ನಂಬರ್ ಪ್ಲೇಟ್‌ನಲ್ಲಿ ಹೊಲೊಗ್ರಾಮ್ ಸ್ಟಿಕ್ಕರ್ ಅಂಟಿಸಿರುತ್ತಾರೆ. ಈ ಸ್ಟಿಕ್ಕರ್‌ನಲ್ಲಿ ಕಾರಿನ ನಂಬರ್, ಚಾಸಿ ನಂಬರ್, ಮಾಲೀಕರ ವಿಳಾಸ ಸೇರಿದಂತೆ ಎಲ್ಲವೂ ದಾಖಲಾಗಿರುತ್ತದೆ.
ಈ ಸ್ಟಿಕ್ಕರ್ ಸ್ಕಾನ್ ಮಾಡಿದ ಪೊಲೀಸರಿಗೆ ವಾಹನದ ಎಲ್ಲಾ ಮಾಹಿತಿ ಲಭ್ಯವಾಗುತ್ತದೆ. ವಾಹನ ಕಳ್ಳತನ ಸೇರಿದಂತೆ ಹಲವು ಪ್ರಕರಣ ಭೇದಿಸಲು ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಸಹಾಯವಾಗಲಿದೆ.

Latest Videos

click me!