ವಾಸ್ತು ಪ್ರಕಾರ ನಾವು ಮಾಡುವ ಸಣ್ಣಪುಟ್ಟ ಕೆಲಸಗಳೇ ನಮ್ಮ ಭವಿಷ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಅದರಲ್ಲೂ, ಮನೆಯಲ್ಲಿ ಹಣವನ್ನು ಎಲ್ಲಿಡುತ್ತೇವೆ ಅನ್ನೋದು ನಮ್ಮ ಆರ್ಥಿಕ ಸ್ಥಿತಿಯನ್ನೇ ನಿರ್ಧರಿಸುತ್ತೆ ಅಂದ್ರೆ ನೀವು ನಂಬಲೇಬೇಕು.
ದಿನೇ ದಿನೇ ನಮ್ಮ ಆಸ್ತಿ ಹೆಚ್ಚಾಗಬೇಕು, ಸಂಪತ್ತು ದುಪ್ಪಟ್ಟಾಗಬೇಕು ಅಂತ ಎಲ್ಲರೂ ಬಯಸುತ್ತಾರೆ. ಆದರೆ, ಕೆಲವರು ಎಷ್ಟೇ ಕಷ್ಟಪಟ್ಟು ದುಡಿದರೂ ಅವರ ಕೈಯಲ್ಲಿ ಹಣ ನಿಲ್ಲುವುದಿಲ್ಲ.
26
ವಾಸ್ತು ಪ್ರಕಾರ ಸರಳ ಟಿಪ್ಸ್
ದುಡಿದ ಹಣವೆಲ್ಲಾ ಹೇಗೆ ಖರ್ಚಾಗುತ್ತೆ ಅಂತ ತಿಳಿಯದೇ ಕಷ್ಟಪಡುತ್ತಿರುತ್ತಾರೆ. ವಾಸ್ತು ಪ್ರಕಾರ ಕೆಲವು ಸರಳ ಟಿಪ್ಸ್ ಪಾಲಿಸಿದರೆ ಈ ಸಮಸ್ಯೆಯಿಂದ ಪಾರಾಗಬಹುದು. ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ.
36
ಹಣವಿಡಲು ಎರಡು ಪ್ರತ್ಯೇಕ ಜಾಗ ಮಾಡಿಕೊಳ್ಳಿ
ವಾಸ್ತು ಪ್ರಕಾರ, ಮನೆಯಲ್ಲಿ ಹಣ ಇಡಲು ಎರಡು ಪ್ರತ್ಯೇಕ ಜಾಗಗಳನ್ನು ಮಾಡಿಕೊಳ್ಳಬೇಕು. ಒಂದು ದೈನಂದಿನ ಖರ್ಚುಗಳಿಗಾಗಿ, ಇನ್ನೊಂದು ಉಳಿತಾಯ ಮತ್ತು ಚಿನ್ನಾಭರಣ ಇಡಲು. ಈ ಎರಡೂ ಜಾಗಗಳು ಬೇರೆ ಬೇರೆ ಕಡೆ ಇರಬೇಕು. ಆಗ ಮಾತ್ರ ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.
ನಾವು ಹಣ ಇಡುವ ದಿಕ್ಕು ಕೂಡ ನಮ್ಮ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಮನೆಯಲ್ಲಿ ಹಣ ಇಡಲು ಅತ್ಯುತ್ತಮ ಮತ್ತು ಹೆಚ್ಚು ಲಾಭದಾಯಕ ಸ್ಥಳವೆಂದರೆ ನೈಋತ್ಯ ದಿಕ್ಕು.
56
ದೈನಂದಿನ ಖರ್ಚಿಗೆ ಹೀಗೆ ಮಾಡಿ
ದಿನನಿತ್ಯದ ಖರ್ಚುಗಳಾದ ತರಕಾರಿ, ಹಾಲು ಅಥವಾ ಇತರ ಮನೆ ಅಗತ್ಯಗಳಿಗಾಗಿ ಬೇಕಾದ ಹಣವನ್ನು ಈ ದಿಕ್ಕಿನಲ್ಲಿ ಇಡುವುದು ಉತ್ತಮ. ಹೀಗೆ ಮಾಡುವುದರಿಂದ ನೀವು ಎಂದಿಗೂ ಆರ್ಥಿಕ ಸಂಕಷ್ಟವನ್ನು ಎದುರಿಸುವುದಿಲ್ಲ. ಆದರೆ, ಈ ದಿಕ್ಕಿನಲ್ಲಿ ವಾಸ್ತು ದೋಷಗಳಿಲ್ಲದಂತೆ ನೋಡಿಕೊಳ್ಳಬೇಕು. ಆಗ್ನೇಯ ದಿಕ್ಕಿನಲ್ಲಿ ಕಪ್ಪು ಅಥವಾ ನೀಲಿ ಬಣ್ಣಗಳು ಇರದಂತೆ ಎಚ್ಚರವಹಿಸಿ. ಈ ಬಣ್ಣಗಳು ಖರ್ಚನ್ನು ಹೆಚ್ಚಿಸುತ್ತವೆ. ಇದೇ ನೈಋತ್ಯ ದಿಕ್ಕಿನಲ್ಲಿ, ಉಳಿತಾಯದ ಹಣ ಮತ್ತು ಬಂಗಾರವನ್ನು ಪ್ರತ್ಯೇಕವಾಗಿ ಇಡಬೇಕು. ಇದನ್ನು ಪದೇ ಪದೇ ಬೇರೆ ಖರ್ಚುಗಳಿಗೆ ಬಳಸಬಾರದು.
66
ಹಣ ಉಳಿತಾಯ ಮಾಡಲು ಇತರ ಸಲಹೆಗಳು:
ವಾಸ್ತು ಪ್ರಕಾರ, ಪಶ್ಚಿಮ ಮತ್ತು ಉತ್ತರ ದಿಕ್ಕುಗಳ ಜೊತೆಗೆ, ಪಶ್ಚಿಮ-ನೈಋತ್ಯ, ವಾಯುವ್ಯ ಮತ್ತು ಉತ್ತರ-ವಾಯುವ್ಯ ದಿಕ್ಕುಗಳು ಕೂಡ ಹಣ ಇಡಲು ಬಹಳ ಒಳ್ಳೆಯದೆಂದು ಪರಿಗಣಿಸಲಾಗಿದೆ. ನೀವು ಈ ದಿಕ್ಕುಗಳಲ್ಲಿಯೂ ನಿಮ್ಮ ಹಣವನ್ನು ಇಡಲು ಜಾಗವನ್ನು ಮಾಡಿಕೊಳ್ಳಬಹುದು.