ವಾಸ್ತು ಶಾಸ್ತ್ರವು ಜ್ಯೋತಿಷ್ಯದ ಒಂದು ಭಾಗವಾಗಿದೆ. ವಾಸ್ತು ಪ್ರಕಾರ ಮನೆಯನ್ನು ನಿರ್ಮಿಸಿದರೆ ಜೀವನದಲ್ಲಿ ಸಂತೋಷ ನೆಲೆಸುತ್ತದೆ. ಹಾಗೆಯೇ, ಮನೆಯ ಸದಸ್ಯರು ಪಾಲಿಸಬೇಕಾದ ಕೆಲವು ವಾಸ್ತು ನಿಯಮಗಳಿವೆ. ಅದರಲ್ಲಿ ಮುಖ್ಯವಾಗಿ, ಹೆಂಡತಿ ಗಂಡನ ಯಾವ ಭಾಗದಲ್ಲಿ ಮಲಗಬೇಕು ಎನ್ನುವುದೂ ಒಂದು.
ಗಂಡ-ಹೆಂಡತಿಯ ದಾಂಪತ್ಯ ಜೀವನ ಸುಖವಾಗಿರಲು ಮಲಗುವ ಕೋಣೆಯಲ್ಲೂ ಕೆಲವು ವಾಸ್ತು ನಿಯಮಗಳನ್ನು ಪಾಲಿಸಬೇಕು ಅಂತ ವಾಸ್ತು ತಜ್ಞರು ಹೇಳ್ತಾರೆ. ಗಂಡ-ಹೆಂಡತಿ ಮಲಗುವ ರೀತಿ, ಮಂಚ ಇಟ್ಟಿರುವ ಜಾಗ ಕೂಡ ಅವರ ಜೀವನದ ಮೇಲೆ ಪರಿಣಾಮ ಬೀರುತ್ತೆ.
26
ಹೆಂಡತಿ ಗಂಡನ ಯಾವ ಕಡೆ ಮಲಗಿದ್ರೆ ಒಳ್ಳೆಯದ್ದು?
ಸಣ್ಣಪುಟ್ಟ ವಿಷಯಗಳೂ ಸಂಬಂಧವನ್ನು ಗಟ್ಟಿಗೊಳಿಸಲು ಸಹಾಯ ಮಾಡುತ್ತವೆ. ಹಾಗಾದ್ರೆ, ವಾಸ್ತು ಪ್ರಕಾರ ಹೆಂಡತಿ ಗಂಡನ ಯಾವ ಕಡೆ ಮಲಗಿದ್ರೆ ದಾಂಪತ್ಯ ಚೆನ್ನಾಗಿರುತ್ತೆ ಅಂತ ತಿಳಿಯೋಣ.
36
ಗಂಡ ಮಂಚದ ಬಲ ಭಾಗದಲ್ಲಿ ಮಲಗಬೇಕು
ವಾಸ್ತು ಶಾಸ್ತ್ರದ ಪ್ರಕಾರ, ರಾತ್ರಿ ಮಲಗುವಾಗ ಗಂಡ ಮಂಚದ ಬಲಭಾಗದಲ್ಲಿ ಮತ್ತು ಹೆಂಡತಿ ಎಡಭಾಗದಲ್ಲಿ ಮಲಗಬೇಕು. ಹೀಗೆ ಮಲಗುವುದರಿಂದ ದಾಂಪತ್ಯದಲ್ಲಿ ಸುಖ ಹೆಚ್ಚುತ್ತದೆ. ಪರಸ್ಪರ ಅರ್ಥಮಾಡಿಕೊಳ್ಳುವ ಶಕ್ತಿ ಬೆಳೆಯುತ್ತದೆ. ಗಂಡ-ಹೆಂಡತಿಯ ನಡುವೆ ಪ್ರೀತಿ, ಅನುರಾಗ ಗಟ್ಟಿಯಾಗುತ್ತದೆ. ಇದರಿಂದ ಕುಟುಂಬದಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚುತ್ತದೆ.
ದಂಪತಿಗಳು ಮಲಗುವಾಗ ತಮ್ಮ ತಲೆಯನ್ನು ದಕ್ಷಿಣ ಅಥವಾ ಪೂರ್ವ ದಿಕ್ಕಿಗೆ ಇಟ್ಟುಕೊಳ್ಳಬೇಕು. ಈ ರೀತಿ ಮಲಗುವುದರಿಂದ ಚೆನ್ನಾಗಿ ನಿದ್ದೆ ಬರುತ್ತದೆ ಮತ್ತು ದೇಹಕ್ಕೆ ವಿಶ್ರಾಂತಿ ಸಿಗುತ್ತದೆ.
56
ಉತ್ತರ ದಿಕ್ಕಿನಲ್ಲಿ ತಲೆಯಿಟ್ಟು ಮಲಗಲೇಬಾರದು!
ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗುವುದು ಒಳ್ಳೆಯದಲ್ಲ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಇದರಿಂದ ನಿದ್ರಾಹೀನತೆ, ಮಾನಸಿಕ ಸಮಸ್ಯೆಗಳು ಬರಬಹುದು.
66
ಬೆಡ್ ರೂಮ್ ದಿಕ್ಕು ಕೂಡಾ ಮುಖ್ಯ
ದಾಂಪತ್ಯ ಜೀವನ ಸುಖವಾಗಿರಲು ಬೆಡ್‌ರೂಮ್ ಇರುವ ದಿಕ್ಕೂ ಮುಖ್ಯ. ಮಲಗುವ ಕೋಣೆ ಸಾಮಾನ್ಯವಾಗಿ ನೈಋತ್ಯ (ದಕ್ಷಿಣ-ಪಶ್ಚಿಮ) ದಿಕ್ಕಿನಲ್ಲಿದ್ದರೆ ಒಳ್ಳೆಯದು. ಗಂಡ-ಹೆಂಡತಿ ಇಬ್ಬರೂ ಒಂದೇ ಮಂಚದ ಮೇಲೆ ಮಲಗಬೇಕು. ಮಂಚದ ಕೆಳಗೆ ಹೆಚ್ಚು ವಸ್ತುಗಳನ್ನು ಇಡಬಾರದು. ಹಾಗೆಯೇ, ಮಂಚದ ಎದುರು ಕನ್ನಡಿ ಇರಬಾರದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಈ ಸಣ್ಣ ಸಲಹೆಗಳನ್ನು ಪಾಲಿಸಿದರೆ ಮನೆಯಲ್ಲಿ ವಾತಾವರಣ ಚೆನ್ನಾಗಿರುತ್ತದೆ.