Ugadi horoscope 2026: ಈ ಹೊಸ ವರ್ಷ ಈ 3 ರಾಶಿಗೆ ಅದೃಷ್ಟ, ಆದರೆ ಈ 3 ರಾಶಿಗೆ ಸಂಕಷ್ಟ

Published : Mar 16, 2026, 03:33 PM IST

Ugadi 2026 parabhava nama samvatsaraಈ ವರ್ಷ ಪರಾಭವ ಸಂವತ್ಸರ. ಪರಾಭವ ಅಂದ್ರೆ ಸೋಲು ಅಂತ ಅರ್ಥಅಲ್ಲ. ಈ ವರ್ಷ ಸಂಪೂರ್ಣ ಗೆಲುವು ಇದ್ದೇ ಇದೆ ಹಾಗಾದರೆ ಯಾರಿಗೆ ಅದೃಷ್ಟ? ಯಾರಿಗೆ ದುರಾದೃಷ್ಟ ನೋಡಿ. 

PREV
16
ಮೇಷ

ವರ್ಷದ ಆದಿಯಲ್ಲಿ ಔಷಧ ವ್ಯಾಪಾರ, ರಾಸಾಯನಿಕ ಕ್ಷೇತ್ರಗಳಲ್ಲಿ ಅಧಿಕ ಲಾಭ ಪಡೆಯಲಿದ್ದೀರಿ. ವಿದೇಶ ಸಂಪರ್ಕಗಳಿಂದ ಹೆಚ್ಚಿನ ಲಾಭಗಳಿಕೆಗೆ ಅವಕಾಶ ಇದೆ. ವೃತ್ತಿಯಲ್ಲಿ ಕಾರ್ಯ ವಿಳಂಬ ಇದ್ದೇಇದೆ. ಹಿರಿಯರಿಂದ ನಷ್ಟ ಸಂಭವದಂಥ ಫಲಗಳನ್ನು ಕಾಣುವಿರಿ. ಜೂನ್ ತಿಂಗಳಿಂದ ನಿಮ್ಮ ಜೀವನಕ್ಕೆ ಸುಖ-ಸಂತೋಷ ಫಲಗಳು ಸೇರ್ಪಡೆಯಾಗಲಿವೆ. ಭೂಮಿ-ವಾಹನ ಲಾಭಗಳನ್ನು ಕಾಣುತ್ತೀರಿ. ಮತ್ಸ್ಯೋದ್ಯಮ ಕ್ಷೇತ್ರಗಳಲ್ಲಿ ಲಾಭವಿದೆ.ಅಕ್ಟೋಬರ್ ನಂತರ ಗುರುಬಲ ಬರಲಿದ್ದು ಮನೆಯಲ್ಲಿ ಮಂಗಳಕಾರ್ಯಗಳು ನಡೆಯಲಿವೆ. ಸಂತಾ ಸೂಚನೆಯಂಥ ಫಲಗಳು ಉಂಟಾಗಲಿವೆ. ಹೆಚ್ಚಿನ ಅಧ್ಯಯನಗಳಲ್ಲಿ ತೊಡಗುತ್ತೀರಿ. ಮಕ್ಕಳ ಏಳಿಗೆ ಕಂಡು ಸಂತಸಗೊಳ್ಳುವಿರಿ. ಸ್ನೇಹಿತರು-ಬಂಧುಗಳಿಂದ ಸಂತಸ ಫಲವಿದೆ. ಇಡೀ ವರ್ಷದಲ್ಲಿ ಹಂತಹಂತವಾಗಿ ಎತ್ತರಕ್ಕೆ ಬೆಳೆಯುವ ಸಾಧ್ಯತೆ ಇದೆ.

26
ವೃಷಭ

ಯಗಾದಿಯ ವರ್ಷಾರಂಭ ನಿಮ್ಮ ಪಾಲಿಗೆ ಮಂಗಳವಾಗಿರಲಿದೆ. ಮನೆಯಲ್ಲಿ ಶುಭ ಕಾರ್ಯಗಳು, ಮಂಗಳ ಫಲಗಳನ್ನು ಕಾಣುತ್ತೀರಿ. ಧನ-ವಿದ್ಯೆಗಳಲ್ಲಿ ಉನ್ನತಿ ಇದೆ. ವೃತ್ತಿಯಲ್ಲೂ ವಿಶೇಷ ಲಾಭ ಕಾಣುತ್ತೀರಿ. ವೃತ್ತಿಯಲ್ಲಿ ಕೆಲವೊಮ್ಮೆ ಕಾಣದ ಕೈಗಳಿಂದ ಸಮಸ್ಯೆ ಎದುರಿಸಬೇಕಾಗುತ್ತದೆ. ವೃತ್ತಿ ಭಯ ಕಾಡಲಿದೆ. ಬಂಧು-ಮಿತ್ರರ ಬಾಂಧವ್ಯ ವೃದ್ಧಿಯಾಗಲಿದೆ. ನವೆಂಬರ್ ನಲ್ಲಿ ರಾಹು-ಕೇತುಗಳ ಪರಿವರ್ತನೆಯಿಂದ ಧರ್ಮ ಕಾರ್ಯಗಳಲ್ಲಿ ಹಿನ್ನಡೆಯಾಗಲಿದೆ. ಗಂಟಲು-ತೊಡೆ ಭಾಗಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹುದು. ವಿದೇಶ ವಹಿವಾಟು-ಪ್ರಯಾಣ ಇತ್ಯಾದಿ ಲಾಭಗಳನ್ನು ಕಾಣುತ್ತೀರಿ.

36
ಮಿಥುನ

ಯುಗಾದಿಯ ಪ್ರಾರಂಭದಲ್ಲಿ ಒಂದು ಹೊಸ ಪ್ರಯತ್ನಕ್ಕೆ ಸಿದ್ಧರಾಗುತ್ತೀರಿ. ವೃತ್ತಿಯಲ್ಲಿ ಹಿರಿಯರ ಸಹಕಾರಗಳು ದೊರೆಯಲಿವೆ. ಕಾರ್ಯಗಳಲ್ಲಿ ವಿಳಂಬವಾದರೂ ಗುರಿ ತಲುಪುತ್ತೀರಿ. ಊರು ಬಿಟ್ಟು ಬೇರೆ ಊರಿನಲ್ಲಿ ನೆಲೆಗೊಳ್ಳುವ ಸಾಧ್ಯತೆಗಳು ಹೆಚ್ಚಾಗಲಿವೆ. ಜೂನ್ ತಿಂಗಳಿಂದ ನಿಮ್ಮ ಬದುಕಲ್ಲಿ ಸಂಪತ್ತಿನ ಹೆಚ್ಚಳವಾಗಲಿದೆ. ಮಾತು-ಬರವಣಿಗೆ ಕ್ಷೇತ್ರದಲ್ಲಿ ಲಾಭಗಳಿಕೆಯಾಗಲಿದೆ. ಅಕ್ಟೋಬರ್ ನಂತರ ಸಹೋದರರ ಬಾಂಧವ್ಯ ವೃದ್ಧಿಯಾಗಲಿದೆ. ಧನ ನಷ್ಟವಾಗಲಿದೆ. ಕುಟುಂಬದಲ್ಲಿ ಘರ್ಷಣೆ ಸಾಧ್ಯತೆ ಇದೆ. ಅಷ್ಟಮ ರಾಹು ಅಪಮಾನ-ರೋಗ ಭಯ ತರಲಿದ್ದಾನೆ.

46
ಕರ್ಕಟಕ

ಈ ಯುಗಾದಿಯ ಪ್ರಾರಂಭ ಒಂದು ಗಾಢ ಚಿಂತೆಯೊಂದಿಗೆ ಪ್ರಾರಂಭವಾಗಲಿದೆ. ಆತ್ಮೀಯರ ಸಲುವಾಗಿ ನಷ್ಟ ಹೊಂದುವಿರಿ. ಅಲೆದಾಟ-ಪರಿಶ್ರಮ ಇರಲಿದೆ. ಆಲಸ್ಯ ನಿಮ್ಮನ್ನು ಕಾಡಲಿದೆ. ಜೂನ್ ನಿಂದ ನಿಮ್ಮ ರಾಶಿಗೆ ಪ್ರವೇಶಿಸುವ ಗುರುವಿನಿಂದ ವಿದೇಶ ಪ್ರಯಾಣ, ವಿದೇಶ ಉದ್ಯೋಗ-ವ್ಯವಹಾರಗಳಲ್ಲಿ ಶುಭಫಲ ಕಾಣುತ್ತೀರಿ. ಕಾರ್ಯಗಳಲ್ಲಿ ಆಗಾಗ ಪ್ರಶಂಸೆ-ಗೌರವಕ್ಕೆ ಪಾತ್ರರಾಗುತ್ತೀರಿ. ಅಕ್ಟೋಬರ್ ನಂತರ ಮನೆಯಲ್ಲಿ ಮಂಗಳಕಾರ್ಯಗಳು ನಡೆಯಲಿವೆ. ಹೆಚ್ಚಿನ ಒತ್ತಡಗಳಿಗೆ ಒಳಗಾಗುತ್ತೀರಿ.

56
ಸಿಂಹ

ವರ್ಷದ ಆದಿಯಲ್ಲಿ ಯುಗಾದಿ ನಿಮ್ಮ ಪಾಲಿಗೆ ಹೆಚ್ಚಿನ ಸಿಹಿಫಲವನ್ನು ಕರುಣಿಸುತ್ತದೆ. ಮನೆಯಲ್ಲಿ ಮಂಗಳಕಾರ್ಯಗಳು ನಡೆಯಲಿವೆ. ಉನ್ನತ ಪದವಿ ಪಡೆಯುವಿರಿ. ಹೆಚ್ಚಿನ ಗೌರವಕ್ಕೆ ಪಾತ್ರರಾಗುವಿರಿ. ಆದರೆ ಅಪಮಾನ-ವೈರುಧ್ಯಗಳು ಇಲ್ಲದಿಲ್ಲ. ಧನ ನಷ್ಟ-ಆಪ್ತರ ನಷ್ಟತೆ ಇರಲಿದೆ. ಜೂನ್ ತಿಂಗಳಿಂದ ಸ್ವಲ್ಪ ಹೆಚ್ಚಿನ ವ್ಯಯವನ್ನು ಕಾಣುತ್ತೀರಿ. ಆಪ್ತರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ಹೆಚ್ಚಿನ ಹೂಡಿಕೆಯೇ ಹೊರೆಯಾಗುತ್ತದೆ. ದೈವಾನುಕೂಲದಿಂದ ಸ್ವಲ್ಪ ಸ್ವಲ್ಪ ಶುಭಫಲವನ್ನೂ ಕಾಣುತ್ತೀರಿ. ಅಕ್ಟೋಬರ್ ನಂತರ ಓಡಾಟಗಳು ಹೆಚ್ಚಾಗಲಿವೆ. ಸ್ವಲ್ಪ ಆರೋಗ್ಯ ವ್ಯತ್ಯಾಸ ಉಂಟಾಗಲಿದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಿದೆ.

66
ಕನ್ಯಾ

ಈ ಯುಗಾದಿ ನಿಮ್ಮ ಪಾಲಿಗೆ ಶುಭಾಶುಭ ಮಿಶ್ರಫಲವನ್ನು ತರಲಿದೆ. ಪ್ರಾರಂಭದಲ್ಲಿ ಉದ್ಯೋಗದಲ್ಲಿ ಹೆಚ್ಚಿನ ಅನುಕೂಲ. ಬಡ್ತಿ ಇತ್ಯಾದಿ ಶುಭಫಲ ಕಾಣುತ್ತೀರಿ. ಹೊಸ ಅವಕಾಶ ಸಾಧ್ಯತೆ ಇದೆ. ದೂರ ಪ್ರಯಾಣಗಳಲ್ಲಿ ತೊಂದರೆ ಎದುರಿಸಬೇಕಾಗುತ್ತದೆ. ಹಣ-ವಾಹನ-ವಿವಾಹಾದಿ ಶುಭ ಫಲ ಕಾಣುತ್ತೀರಿ. ಪುತ್ರ-ಪೌತ್ರಾದಿ ಶುಭಯೋಗಗಳಿದ್ದಾವೆ. ಗೃಹ-ವಾಹನ ಸಮಸ್ಯೆಗಳು ಎದುರಾಗಬಹುದು. ನವೆಂಬರ್ ನಲ್ಲಿ ರಾಹು-ಕೇತುಗಳ ಬದಲಾವಣೆಯಿಂದ ಮಕ್ಕಳ ವಿಚಾರದಲ್ಲಿ ಘರ್ಷಣೆಗಳುಂಟಾಗಬಹುದು. ಉದರ ಸಂಬಂಧಿ ಸಮಸ್ಯೆಗಳು ಕಾಡಬಹುದು.

Read more Photos on
click me!

Recommended Stories