ಗೆದ್ದರೆ ಸಂತೋಷ, ಸೋತರೆ ಅನುಭವ: 20 'ವಿವೇಕ'ವಾಣಿ ಪಾಲಿಸಿದರೆ ಜೀವನವೇ ಪಾವನ!

First Published | Jul 4, 2019, 2:09 PM IST

ಏಳಿ ಏದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ..' ಎಂದು ಸತ್ತಂತೆ ಮಲಗಿದ್ದವರನ್ನು ಎಚ್ಚರಿಸಿದ ಸ್ವಾಮಿ ವಿವೇಕಾನಂದ ಅವರು ಸದಾ ಕಾಲಕ್ಕೂ ಸಲ್ಲುವವರು. ಮನದ ಸೋಂಬೇರಿತನವನ್ನು ಬಡಿದೆಚ್ಚರಿಸುವ ಅವರ ನುಡಿಮುತ್ತುಗಳು ಸದಾ ಕಾಲಕ್ಕೂ ಸ್ಫೂರ್ತಿ ನೀಡುವಂಥದ್ದು. ದೇಶದ ಅತ್ಯಂತ ಪ್ರಭಾವಿ ಆಧ್ಯಾತ್ಮಿಕ ಚಿಂತಕರಾಗಿದ್ದ ವಿವೇಕಾನಂದ ಅವರು ತಮ್ಮ ಭಾಷಣದ ಮೂಲಕ ಧಾರ್ಮಿಕತೆಯನ್ನು ಬಡಿದೆಬ್ಬಿಸುವಲ್ಲಿ ಯಶಸ್ವಿಯಾದವರು. ವೇದಾಂತ ತತ್ವಗಳ ಮೂಲಕ ದೌರ್ಜನ್ಯಕ್ಕೊಳಗಾದವರನ್ನು ಮೇಲೆತ್ತಲು ಶ್ರಮಿಸಿದರು. 'ಏಳಿ ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ' ಎಂದು ಯುವಜನತೆಯನ್ನು ಬಡಿದೆಬ್ಬಿಸಿದ ವಿವೇಕಾನಂದರ ಆಯ್ದ 20 'ಸಿಂಹವಾಣಿ' ಇಲ್ಲಿವೆ.

ಸಾಧ್ಯವೇ ಇಲ್ಲ ಎಂದುಕೊಂಡರೆ ಏನನ್ನೂ ಸಾಧಿಸಲಾಗದು. ಪ್ರಯತ್ನಿಸುವುದರಿಂದ ನಷ್ಟವೇನಿದೆ? ಗೆದ್ದರೆ ಸಂತೋಷ, ಸೋತರೆ ಅನುಭವ.
ನಮ್ಮ ದುಃಖಗಳಿಗೆಲ್ಲ ನಾವೇ ಜವಾಬ್ಧಾರರು, ಮತ್ತಾರೂ ಅಲ್ಲ. ನಮ್ಮ ಅದೃಷ್ಟವನ್ನು ರೂಪಿಸಿಕೊಳ್ಳುವವರು ನಾವೇ.
Tap to resize

ಸಾಧ್ಯವೇ ಇಲ್ಲ ಎಂದುಕೊಂಡರೆ ಏನನ್ನೂ ಸಾಧಿಸಲಾಗದು. ಪ್ರಯತ್ನಿಸುವುದರಿಂದ ನಷ್ಟವೇನಿದೆ? ಗೆದ್ದರೆ ಸಂತೋಷ, ಸೋತರೆ ಅನುಭವ.
ಕಾಲ ಕೆಟ್ಟಿತೆಂದು ಜನರು ಹೇಳುತ್ತಾರೆ. ಆದರೆ, ಕಾಲ ಕೆಡುವುದಿಲ್ಲ. ಕೆಡುವುದು ಜನರ ನಡತೆ ಮತ್ತು ಆಚಾರ- ವಿಚಾರ ಮಾತ್ರ.
ಗುರು ಎಂದರೆ ವ್ಯಕ್ತಿಯಲ್ಲ, ಒಂದು ಶಕ್ತಿ. ಅಜ್ಞಾನದ ಕತ್ತಲೆಯ ಕಳೆದು ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ಶಬ್ಧವೇ ಗುರು.
ಜೀವ ನಮ್ಮ ಮಾತನ್ನು ಕೇಳುವುದಿಲ್ಲ, ಯಾವಾಗ ಬೇಕಾದರೂ ಹೋಗಬಹುದು. ಜೀವನ ನಮ್ಮ ಮಾತನ್ನು ಕೇಳುತ್ತದೆ, ಹೇಗೆ ಬೇಕಾದರೂ ರೂಪಿಸಿಕೊಳ್ಳಬಹುದು.
ಸಾಧನೆ ಇಲ್ಲದೇ ಸತ್ತರೆ ಸಾವಿಗೆ ಅವಮಾನ. ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅವಮಾನ.
ನಿಮ್ಮನ್ನು ನೀವು ಜಯಿಸಿ, ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ.
ನೀನು ಯೋಚನೆ ಮಾಡದೆ ಹೇಳುವ ಒಂದೊಂದು ಮಾತು, ನಿನ್ನನ್ನು ಒಂದೊಂದು ನಿಮಿಷವೂ ಯೋಚನೆ ಮಾಡಿಸುತ್ತೆ.
ಮಾರ್ಗದರ್ಶನ ನೀಡುವವರು ಇಲ್ಲದಿದ್ದರೇನು? ಹೊಸ ಮಾರ್ಗ ಸೃಷ್ಟಿಸುವ ಧೈರ್ಯ, ತಾಕತ್ತು ನಿನ್ನಲ್ಲಿದ್ದರೆ ಇಡೀ ಜಗತ್ತು ನಿನ್ನ ಹಿಂದೆ.
ಹಣವಂತರ ಜೊತೆ ನೂರಾರು ವರ್ಷ ಬದುಕುವುದಕ್ಕಿಂತ, ಹರದಯವಂತರ ಜೊತೆ ಮೂರು ದಿನ ಬದುಕಿದರೂ ಜೀವನ ಸಾರ್ಥಕ.
ನಿನ್ನ ಹೃದಯದಲ್ಲಿ ಪ್ರಾಮಾಣಿಕತೆ ತುಂಬಿದ್ದರೆ ನಿನ್ನ ಶತ್ರು ಮಾತ್ರವಲ್ಲ, ಇಡೀ ಪ್ರಪಂಚ ನಿನ್ನೆದುರು ಆಯುಧವನ್ನು ಕೆಳಗಿಡುತ್ತದೆ.
ಮನಸ್ಸನ್ನು ಶಕ್ತಿಯುತವೂ, ಶಿಸ್ತುಬದ್ದವೂ ಆಗಿಸುವುದರಲ್ಲಿಯೇ ಜ್ಞಾನದ ಮೌಲ್ಯವಿರುವುದು.
ನಿಂತ ನೀರಿನಲ್ಲಿ ಕ್ರಿಮಿ ಹುಟ್ಟುತ್ತವೆ. ಕೆಲಸವಿಲ್ಲದವ ಮನುಷ್ಯನಲ್ಲಿ ಕೆಟ್ಟ ವಿಚಾರಗಳು ಜನಿಸುತ್ತವೆ.
ನಿನ್ನ ನಂಬಿದವರನ್ನು ಎಂದಿಗೂ ಮೋಸ ಮಾಡಬೇಡ, ಸಹಾಯ ಮಾಡಿದರವರನ್ನು ಮರೆಯಬೇಡ, ಮನೆ ಬಾಗಿಲಿಗೆ ಬಂದವರನ್ನು ಅವಮಾನ ಮಾಡಬೇಡ.
ಸತ್ಯಕ್ಕಾಗಿ ಯಾವುದನ್ನು ಬೇಕಾದರೂ ತ್ಯಾಗ ಮಾಡಿ. ಆದರೆ, ಯಾವುದಕ್ಕೂ ಸತ್ಯವನ್ನು ತ್ಯಾಗ ಮಾಡಬೇಡಿ.
ಬದುಕುವ ಆಸೆ ಇದ್ದರೆ ನಿನ್ನ ಶತ್ರುಗಳ ಕಣ್ಣೆದುರಲ್ಲೇ ಬದುಕು. ಅವರು ನಿನ್ನ ಎದುರು ಸುಳಿದಾಗೆಲ್ಲಾ ನಿನ್ನಲ್ಲಿ ಬದುಕುವ ಛಲ ಎಚ್ಚೆತ್ತುಕೊಳ್ಳುತ್ತದೆ.
ಇತರರಿಗಾಗಿ ಯಾರು ಮರುಗುತ್ತಾರೋ, ಅವರೇ ನಿಜವಾಗಿ ಬದುಕಿರುವವರು. ಉಳಿದವನು ಬದುಕಿದ್ದೂ ಸತ್ತಂತೆ.

Latest Videos

click me!