ನೀವು ಚಂದ್ರನ ಬೆಳಕಿನಲ್ಲಿ ಕುಳಿತು ಪವಿತ್ರ ದೈವಿಕ ಬೆಳಕಿನಲ್ಲಿ ಧ್ಯಾನವನ್ನು ಅಭ್ಯಾಸ ಮಾಡಬಹುದು. ಆ ಸಂದರ್ಭದಲ್ಲಿ ಮೆನಿಫೆಸ್ಟೇಷನ್ ಮಾಡಬಹುದು. ಇದರ ಅರ್ಥ, ಆರೋಗ್ಯ, ಸಂಪತ್ತು, ಶಿಕ್ಷಣ ಯಾವುದರ ಬಗ್ಗೆ ನಿಮ್ಮ ಇಷ್ಟಾರ್ಥ ಸಾಧನೆ ಆಗಬೇಕು ಎಂದು ಎನ್ನಿಸುತ್ತದೆಯೋ ಅವೆಲ್ಲವೂ ಆದ ಹಾಗೆ, ಅದು ನೆರವೇರಿದ ಮೇಲೆ ನೀವು ಎಷ್ಟು ಖುಷಿಯಾಗಿರುತ್ತೀರಿ, ನೀವು ಏನೇನು ಮಾಡುತ್ತೀರಿ ಎನ್ನುವಂಥ ಸಕಾರಾತ್ಮಕ ಕಲ್ಪನೆಯನ್ನು ನೀವು ಆ ಸಂದರ್ಭದಲ್ಲಿ ಮಾಡಬೇಕು. ಯಾವುದೇ ಕಾರಣಕ್ಕೂ ಅಲ್ಲಿ ನೆಗೆಟಿವ್ ಯೋಚನೆ ಬರಲೇಬಾರದು. ಕಣ್ಮುಚ್ಚಿಕೊಂಡು ಚಂದ್ರನ ಬೆಳಕಿನಲ್ಲಿ ನಿಮ್ಮೆಲ್ಲಾ ಇಷ್ಟಾರ್ಥ ಸಿದ್ಧಿಸಿದ ಹಾಗೆ ಕಲ್ಪನೆ ಮಾಡಿಕೊಳ್ಳಿ. ಬಳಿಕ ನಿಮ್ಮ ಇಷ್ಟದ ದೇವರನ್ನು ನೆನಪಿಸಿಕೊಳ್ಳಿ. ಇಲ್ಲವೇ ಓಂ ಎಂದು ಜಪಿಸಿಕೊಳ್ಳಿ.