Affair Signs: ಅಕ್ರಮ ಸಂಬಂಧ ಇದ್ರೆ ನಿಮ್ಮ ಜಾತಕದಲ್ಲೇ ಗೊತ್ತಾಗುತ್ತೆ! ಆ ಸೂಚನೆಗಳೇನು?

Published : Feb 05, 2026, 03:22 PM IST

Illicit Relationship: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯ ಜಾತಕದಲ್ಲಿನ ಗ್ರಹಗಳ ಸ್ಥಿತಿ, ಸಂಯೋಗಗಳು, ಆ ವ್ಯಕ್ತಿಯ ನಡತೆ, ಸಂಬಂಧಗಳ ಮೇಲೆ ಬಲವಾದ ಪ್ರಭಾವ ಬೀರುತ್ತವೆ. ಶುಕ್ರ (Venus), ಮಂಗಳ (Mars), ರಾಹು (Rahu) ಗ್ರಹಗಳು ಜಾತಕದಲ್ಲಿ ಪ್ರೇಮ, ಕಾಮ, ಸುಖವನ್ನು ಪ್ರತಿನಿಧಿಸುತ್ತವೆ. 

PREV
15
ಶುಕ್ರ ಮತ್ತು ರಾಹುವಿನ ಸಂಯೋಗ

ಶುಕ್ರನು ಪ್ರೀತಿ, ಲೈಂಗಿಕತೆಯ ಕಾರಕ. ರಾಹುವು ಭ್ರಮೆ,ಮಿತಿಗಳನ್ನು ಮೀರುವ ಸ್ವಭಾವ ಹೊಂದಿದ್ದಾನೆ. ಜಾತಕದಲ್ಲಿ ಶುಕ್ರ, ರಾಹು ಒಂದೇ ಮನೆಯಲ್ಲಿದ್ದರೆ ಅಥವಾ ಪರಸ್ಪರ ದೃಷ್ಟಿ ಹೊಂದಿದ್ದರೆ, ಆ ವ್ಯಕ್ತಿಯು ಅಕ್ರಮ ಸಂಬಂಧಗ ಹೊಂದಿರುತ್ತಾನೆ.

25
ಮಂಗಳ ಮತ್ತು ಶುಕ್ರನ ಪ್ರಭಾವ

ಮಂಗಳನು ಕಾಮೋದ್ರೇಕನೂ ಹೌದು, ಧೈರ್ಯದ ಸಂಕೇತವೂ ಹೌದು. ಮಂಗಳ, ಶುಕ್ರನ ದೃಷ್ಟಿ ಸಂಬಂಧವಿದ್ದಾಗ ವ್ಯಕ್ತಿಯಲ್ಲಿ ಕಾಮದ ಆಸೆ ಹೆಚ್ಚಾಗಿರುತ್ತದೆ. ಇದು ನಿಯಂತ್ರಣ ತಪ್ಪಿದಾಗ ಮಾತ್ರ ಅವನು ಪರಸ್ತ್ರೀ ಅಥವಾ ಪರಪುರುಷ ಸಂಘ ಮಾಡುತ್ತಾನೆ.

35
7ನೇ ಮತ್ತು 12ನೇ ಮನೆಯ ದೋಷ

ಜಾತಕದ 7ನೇ ಮನೆ ಮದುವೆಯನ್ನು ಸೂಚಿಸಿದರೆ, 12ನೇ ಮನೆ ಲೈಂಗಿಕ ಸುಖವನ್ನು ಸೂಚಿಸುತ್ತದೆ. ಇದರ ಮೇಲೆ ಪಾಪ ಗ್ರಹಗಳಾದ ರಾಹು / ಶನಿಯ ಪ್ರಭಾವವಿದ್ದಾಗ, ವ್ಯಕ್ತಿಯು ವೈವಾಹಿಕ ಜೀವನದಲ್ಲಿ ಅತೃಪ್ತಿ ಹೊಂದುತ್ತಾನೆ, ಅಕ್ರಮ ಸಂಬಂಧಗಳತ್ತ ಆಕರ್ಷಿತನಾಗುತ್ತಾನೆ.

45
ಚಂದ್ರನ ಪಾತ್ರ

ಚಂದ್ರನು ಮನಸ್ಸಿನ ಕಾರಕ. ಚಂದ್ರನು ಪಾಪ ಗ್ರಹಗಳಿಂದ ಪೀಡಿತನಾಗಿದ್ದಾಗ ಅಥವಾ ನೀಚ ಸ್ಥಾನದಲ್ಲಿದ್ದಾಗ ವ್ಯಕ್ತಿಯ ಮನಸ್ಸು ನಿಜಕ್ಕೂ ಚಂಚಲವಾಗುತ್ತದೆ, ಅನೈತಿಕ ಆಲೋಚನೆಗಳು ಮೂಡುತ್ತವೆ.

55
ಲಗ್ನ ಅಥವಾ 8ನೇ ಮನೆಯಲ್ಲಿ ರಾಹು

8ನೇ ಮನೆಯು ರಹಸ್ಯಗಳನ್ನು ಸೂಚಿಸುತ್ತದೆ. ಇಲ್ಲಿ ರಾಹು ಇದ್ದರೆ ವ್ಯಕ್ತಿಯು ತನ್ನ ಸಂಬಂಧಗಳನ್ನು ಸೀಕ್ರೆಟ್‌ ಆಗಿಡಲು ಪ್ರಯತ್ನಿಸುತ್ತಾನೆ.

ಕೇವಲ ಒಂದು ಗ್ರಹದ ಸ್ಥಿತಿಯನ್ನು ನೋಡಿ ನಿರ್ಧಾರಕ್ಕೆ ಬರುವುದು ಸರಿಯಲ್ಲ. ಜಾತಕದ ಸಮಗ್ರ ವಿಶ್ಲೇಷಣೆ ಮಾಡಬೇಕು. ದಶೆ, ಗೋಚಾರ ಫಲಗಳೂ ಈ ಸಮಯದಲ್ಲಿ ಮುಖ್ಯ. ಇಂತಹ ದೋಷಗಳಿದ್ದಲ್ಲಿ ದೇವತಾ ಆರಾಧನೆ, ಗುರು ಹಿರಿಯರ ಮಾರ್ಗದರ್ಶನಯಿಂದ ಪರಿಹಾರ ಮಾಡಿಕೊಳ್ಳಬಹುದು.

Read more Photos on
click me!

Recommended Stories