ಪಾರಿಜಾತ ಗಿಡವನ್ನು ಅದೊಂದು ಆಲಂಕಾರಿಕ ಹೂವಿನ ಗಿಡವೆಂದೇ ಬಹಳಷ್ಟು ಜನ ಭಾವಿಸಿದ್ದಾರೆ. ಆದರೆ ಪಾರಿಜಾತ ಗಿಡಕ್ಕೆ ದೈವಿಕ ಹಿನ್ನೆಲೆಯಿದೆ. ಭಾರತೀಯ ಪುರಾಣಗಳು, ಆಧ್ಯಾತ್ಮಿಕ ಆಚರಣೆಗಳಲ್ಲಿ ಇದಕ್ಕೆ ವಿಶೇಷ ಸ್ಥಾನವಿದೆ. ಹಿಂದೂ ಪುರಾಣಗಳ ಪ್ರಕಾರ ಸಮುದ್ರ ಮಂಥನದ ಸಂದರ್ಭದಲ್ಲಿ ಪಾರಿಜಾತ ಗಿಡವು ಹೊರಹೊಮ್ಮಿತು ಎಂದು ಹೇಳಲಾಗುತ್ತದೆ. ಹೀಗಾಗಿ ಪಾರಿಜಾತವನ್ನು ದೈವಿಕ ಹೂವು ಆಗಿದೆ. ಪುರಾಣದ ಕಥೆಯೊಂದರಲ್ಲಿ ಶ್ರೀಕೃಷ್ಣನು ತನ್ನ ಪ್ರಿಯ ಪತ್ನಿ ರುಕ್ಮಿಣಿಗಾಗಿ ಪಾರಿಜಾತ ಗಿಡವನ್ನು ಭೂಮಿಗೆ ತಂದನು ಎಂದು ಹೇಳಲಾಗಿದೆ. ಹೀಗಾಗಿ ಪಾರಿಜಾತ ಹೂವುಗಳನ್ನು ಹಿಂದೂ ಧಾರ್ಮಿಕ ಪೂಜೆ, ದೇವಾಲಯಗಳಲ್ಲಿ, ಧಾರ್ಮಿಕ ಆಚರಣೆಗಳಲ್ಲಿ ಪಾರಿಜಾತ ಹೂವನ್ನು ದೇವರಿಗೆ ಅರ್ಪಿಸಲಾಗುತ್ತದೆ. ಈ ಹೂವು ಪವಿತ್ರತೆ, ಪ್ರೀತಿ, ಆಧ್ಯಾತ್ಮಿಕ ಭಕ್ತಿಯ ಸಂಕೇತವಾಗಿದೆ.
ಪಾರಿಜಾತ ಗಿಡದ ಔಷಧೀಯ ಗುಣಗಳು
ಇನ್ನು ಪಾರಿಜಾತ ಗಿಡವು ಧಾರ್ಮಿಕ ಮಹತ್ವದ ಜೊತೆಗೆ ಔಷಧೀಯ ಗುಣಗಳಿಗೂ ಪ್ರಸಿದ್ಧವಾಗಿದೆ. ಇದರ ಕಾಂಡ, ಎಲೆಗಳು, ಹೂವುಗಳು, ತೊಗಟೆ ಮತ್ತು ಬೀಜಗಳು ಆರೋಗ್ಯಕ್ಕೆ ಪ್ರಯೋಜನಕಾರಿ. ಇದರ ಜೊತೆಗೆ, ಪಾರಿಜಾತ ಗಿಡದಿಂದ ಸುಗಂಧ ದ್ರವ್ಯಗಳನ್ನು ಸಹ ತಯಾರಿಸಲಾಗುತ್ತದೆ.