October born girls: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಕ್ಟೋಬರ್‍ನಲ್ಲಿ ಜನಿಸಿದ ಹುಡುಗಿಯರ ಬಗ್ಗೆ ಹಲವು ಪಾಸಿಟೀವ್ ಅಭಿಪ್ರಾಯಗಳು ಇವೆ. ಇವರು ಎಲ್ಲಾ ಹೆಣ್ಮಕ್ಕಳಿಗಿಂತ ಒಂದು ಕೈ ಮೇಲೆ ಎಂದು ಹೇಳಲಾಗುತ್ತದೆ. ಅವರ ಸ್ವಭಾವ ಹಾಗೂ ಆಸಕ್ತಿದಾಯಕ ಮಾಹಿತಿ ಇಲ್ಲಿದೆ..
ಅಕ್ಟೋಬರ್ ತಿಂಗಳು ಹೆಚ್ಚು ಆಧ್ಯಾತ್ಮಿಕತೆಗೆ ಪ್ರಧಾನ್ಯತೆಯನ್ನು ಹೊಂದಿದೆ. ಶರನ್ನವರಾತ್ರಿ ಹಾಗೂ ದಸರಾ ಇದೇ ತಿಂಗಳಲ್ಲಿ ಬರುತ್ತದೆ. ಹೀಗಾಗಿ ಈ ತಿಂಗಳಲ್ಲಿ ಜನಿಸಿದ ಹುಡುಗಿಯರ ವ್ಯಕ್ತಿತ್ವವು ತುಂಬಾನೇ ವಿಶೇಷವಾಗಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಅಂದರೆ ಅವರ.. ಆಲೋಚನಾ ವಿಧಾನ, ವ್ಯಕ್ತಿತ್ವ ಮತ್ತು ಸಂಬಂಧಗಳು ಎಲ್ಲರೂ ಮೆಚ್ಚುವಂತದ್ದಾಗಿರುತ್ತದೆ. ಅದು ಹೇಗೆ ಅನ್ನೋ ವಿವರಗಳು ಈ ಕೆಳಗೆ ಇದೆ. ಇದು ಕೇವಲ ಜ್ಯೋತಿಷ್ಯ ಶಾಸ್ತ್ರದ ನಂಬಿಕೆ ಪ್ರಕಾರ..
26
ಹೇಗಿರುತ್ತಾರೆ?
ಆಕರ್ಷಕ ವ್ಯಕ್ತಿತ್ವ, ಆತ್ಮವಿಶ್ವಾಸವೇ ಅವರ ಶಕ್ತಿ ಆಗಿರುತ್ತದೆ
ಯಾವುದೇ ನಾಟಕೀಯವಿಲ್ಲದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ
ಮಾತನಾಡುವ, ವರ್ತಿಸುವ ರೀತಿ ಎಲ್ಲರೂ ಮೆಚ್ಚುವಂತೆ ಇರುತ್ತದೆ
ಎಲ್ಲೇ ಹೋದರೂ ತಮ್ಮನ್ನ ವಿಶೇಷ ಲಕ್ಷಣಗಳಿಂದ ಗುರುತಿಸಿಕೊಳ್ತಾರೆ
ಭಯ ಪಡುವ ಸ್ವಭಾವ ಅವರಿಲ್ಲ, ಕಠಿಣ ಸಂದರ್ಭ ಎದುರಿಸ್ತಾರೆ
ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮಾಡುತ್ತಾರೆ
ಒಂದು ಸಲ ಡಿಸೈಡ್ ಮಾಡಿದ್ರೆ ಮುಗೀತು, ಸಾಧಿಸಿಯೇ ತೀರುತ್ತಾರೆ
36
ಗೌರವಿಸುವ ಗುಣ
ಅಷ್ಟೇ ಅಲ್ಲದೇ ಅವರು ಎಲ್ಲರೊಂದಿಗೂ ಮುಕ್ತವಾಗಿ ಬದುಕಲು ಬಯಸುತ್ತಾರೆ. ಜೊತೆಗೆ ಅವರು ಹೇಗೆ ಬದುಕಬೇಕು ಅಂದುಕೊಳ್ತಾರೋ ಹಾಗೆಯೇ ಬದುಕಿ ತೋರಿಸುತ್ತಾರೆ. ಹೊಸ ವಿಷಯಗಳನ್ನ ಕಲಿಯಲು, ಹೊಸ ಸ್ಥಳಗಳಿಗೆ ಭೇಟಿ ನೀಡಲು ವಿಭಿನ್ನ ಅನುಭವ ಪಡೆಯಲು ಉತ್ಸುಕರಾಗಿರುತ್ತಾರೆ. ಜೊತೆಗೆ ಇತರರ ಅಭಿಪ್ರಾಯಗಳನ್ನೂ ಗೌರವಿಸುವ ಗುಣಗಳನ್ನು ಅವರು ಹೊಂದಿರುತ್ತಾರೆ.