ಸಂಖ್ಯಾಶಾಸ್ತ್ರದ ಪ್ರಕಾರ, ಪ್ರತಿಯೊಂದು ಜನ್ಮ ದಿನಾಂಕಕ್ಕೂ ಒಬ್ಬ ಅಧಿಪತಿ ಗ್ರಹ ಇರುತ್ತದೆ. ಕೆಲವು ವಿಶೇಷ ದಿನಾಂಕಗಳಲ್ಲಿ ಜನಿಸಿದವರಿಗೆ ಗ್ರಹಗಳ ಅನುಗ್ರಹ ಹುಟ್ಟಿನಿಂದಲೇ ಇರುತ್ತದೆ. ಇವರಿಗೆ ಅದೃಷ್ಟ ಕೂಡ ಹೆಚ್ಚಾಗಿರುತ್ತೆ. ಆ ದಿನಾಂಕಗಳು ಯಾವುವು ಅಂತ ನೋಡೋಣ ಬನ್ನಿ.
ಯಾವುದೇ ತಿಂಗಳ 5, 14, 23ನೇ ತಾರೀಖಿನಂದು ಹುಟ್ಟಿದವರು ಸಂಖ್ಯೆ 5ರ ಅಡಿಯಲ್ಲಿ ಬರುತ್ತಾರೆ. ಇವರ ಮೇಲೆ ಬುಧ ಗ್ರಹದ ಅನುಗ್ರಹ ಹೆಚ್ಚಾಗಿರುತ್ತೆ. ಬುಧ ಗ್ರಹವು ಬುದ್ಧಿವಂತಿಕೆ ಮತ್ತು ವ್ಯಾಪಾರಕ್ಕೆ ಕಾರಕ. ಇವರು ವೇಗವಾಗಿ ಯೋಚಿಸುತ್ತಾರೆ. ಇವರ ಸಂವಹನ ಕೌಶಲ್ಯ ಅದ್ಭುತವಾಗಿರುತ್ತೆ. ವ್ಯಾಪಾರ ಕ್ಷೇತ್ರದಲ್ಲಿ ಇವರು ಯಶಸ್ಸು ಸಾಧಿಸುತ್ತಾರೆ. ಯಾವುದೇ ವಯಸ್ಸಿನಲ್ಲೂ ಹೊಸ ವಿಷಯಗಳನ್ನು ಕಲಿಯುವ ಗ್ರಹಬಲ ಇವರಿಗಿರುತ್ತೆ.
26
ಸಂಖ್ಯೆ 9 (9, 18, 27)
ಯಾವುದೇ ತಿಂಗಳ 9, 18, 27ನೇ ತಾರೀಖಿನಂದು ಜನಿಸಿದವರು ಸಂಖ್ಯೆ 9ಕ್ಕೆ ಸೇರಿದವರು. ಇವರ ಅಧಿಪತಿ ಕುಜ (ಮಂಗಳ). ಕುಜ ಗ್ರಹ ಧೈರ್ಯ ಮತ್ತು ಶಕ್ತಿಗೆ ಸಂಕೇತ. ಇವರು ಎಂತಹ ಕಷ್ಟವನ್ನಾದರೂ ಸಹಿಸಿಕೊಳ್ಳುವ ಮನಸ್ಥಿತಿ ಹೊಂದಿರುತ್ತಾರೆ. ಏನನ್ನಾದರೂ ಸಾಧಿಸಬೇಕೆಂಬ ಛಲ ಇವರಲ್ಲಿ ಹೆಚ್ಚು. ಶತ್ರುಗಳ ಮೇಲೆ ಜಯ ಸಾಧಿಸುವುದರಲ್ಲಿ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಇವರಿಗೆ ಗ್ರಹಬಲ ಹೆಚ್ಚಾಗಿರುತ್ತೆ.
36
ಸಂಖ್ಯೆ 6 (6, 15, 24)
ಯಾವುದೇ ತಿಂಗಳ 6, 15, 24ನೇ ತಾರೀಖಿನಂದು ಜನಿಸಿದವರು ಸಂಖ್ಯೆ 6ಕ್ಕೆ ಸೇರಿದವರು. ಇವರ ಅಧಿಪತಿ ಶುಕ್ರ. ಶುಕ್ರ ಗ್ರಹವು ಐಷಾರಾಮಿ ಜೀವನ ಮತ್ತು ಕಲೆಗೆ ಅಧಿಪತಿ. ಇವರು ಹುಟ್ಟಿನಿಂದಲೇ ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಜೀವನದಲ್ಲಿ ಸುಖ, ಸಂತೋಷ ಮತ್ತು ವಾಹನ ಯೋಗಕ್ಕೆ ಇವರಿಗೆ ಕೊರತೆ ಇರುವುದಿಲ್ಲ. ಕಲಾ ಕ್ಷೇತ್ರ ಅಥವಾ ಮಾಧ್ಯಮದಲ್ಲಿ ಇವರು ದೊಡ್ಡ ಹೆಸರು ಮಾಡುತ್ತಾರೆ.
ಯಾವುದೇ ತಿಂಗಳ 3, 12, 21, 30ನೇ ದಿನಾಂಕದಂದು ಜನಿಸಿದವರು ಸಂಖ್ಯೆ 3ಕ್ಕೆ ಸೇರಿದವರು. ಇವರ ಮೇಲೆ ಗುರು ಗ್ರಹದ ಪ್ರಭಾವ ಮತ್ತು ಅನುಗ್ರಹ ಹೆಚ್ಚಾಗಿರುತ್ತೆ. ಗುರು ಗ್ರಹ ಸಂಪತ್ತು ಮತ್ತು ಜ್ಞಾನಕ್ಕೆ ಕಾರಕ. ಈ ಗ್ರಹದ ಪ್ರಭಾವದಿಂದ ಇವರು ತುಂಬಾ ಬುದ್ಧಿವಂತರಾಗಿರುತ್ತಾರೆ. ಜೊತೆಗೆ ಅದೃಷ್ಟವಂತರೂ ಹೌದು. ಆರ್ಥಿಕ ಸಂಕಷ್ಟಗಳು ಎದುರಾದರೂ, ಯಾರಾದರೊಬ್ಬರ ಸಹಾಯದಿಂದ ಬೇಗ ಚೇತರಿಸಿಕೊಳ್ಳುತ್ತಾರೆ. ಸಮಾಜದಲ್ಲಿ ಇವರಿಗೆ ಉತ್ತಮ ಗೌರವ ಸಿಗುತ್ತೆ.
56
ಸಂಖ್ಯೆ 1 (1, 10, 19, 28)
ಯಾವುದೇ ತಿಂಗಳ 1, 10, 19, 28ನೇ ತಾರೀಖಿನಂದು ಹುಟ್ಟಿದವರ ಮೇಲೆ ಸೂರ್ಯನ ಅನುಗ್ರಹ ಹೆಚ್ಚಾಗಿರುತ್ತೆ. ಇವರ ಪಾಲಿಗೆ ಒಂದು ರೀತಿ ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತೆ ಅದೃಷ್ಟ ಇವರ ಕಾಲಬುಡದಲ್ಲೇ ಇರುತ್ತದೆ.
66
ಸೂರ್ಯನ ಕೃಪೆಯಿಂದ ನಾಯಕತ್ವ ಗುಣ ಹೆಚ್ಚು
ಗ್ರಹಗಳ ರಾಜನಾದ ಸೂರ್ಯನ ಕೃಪೆಯಿಂದ ಇವರಿಗೆ ಸಹಜವಾಗಿಯೇ ನಾಯಕತ್ವದ ಗುಣಗಳಿರುತ್ತವೆ. ಇವರು ಎಲ್ಲಿಗೆ ಹೋದರೂ ವಿಶೇಷ ಮನ್ನಣೆ ಗಳಿಸುತ್ತಾರೆ. ಸರ್ಕಾರಿ ಉದ್ಯೋಗ ಅಥವಾ ಉನ್ನತ ಹುದ್ದೆಗಳು ಇವರನ್ನು ಹುಡುಕಿಕೊಂಡು ಬರುತ್ತವೆ.