Mars Transit in Abhijit Nakshatra ನಕ್ಷತ್ರಗಳಲ್ಲಿ 28ನೇಯದ್ದು ಅಭಿಜಿತ್ ನಕ್ಷತ್ರ. ಇದು ಶುಭಕರ ಮತ್ತು ದೋಷರಹಿತ. ಮಂಗಳನು ಜನವರಿ 24 ರಂದು ಈ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಜನವರಿ 30 ರವರೆಗೆ ಇಲ್ಲೇ ಇರುತ್ತಾನೆ. ಈ ಸಮಯದಲ್ಲಿ ನಾಲ್ಕು ರಾಶಿಯವರಿಗೆ ಹೆಚ್ಚು ಅನುಕೂಲವಾಗಲಿದೆ.
ಅಭಿಜಿತ್ ನಕ್ಷತ್ರಕ್ಕೆ ಮಂಗಳನ ಪ್ರವೇಶದಿಂದ ಈ ರಾಶಿಯವರಿಗೆ ಅನೇಕ ಶುಭಫಲಗಳಿವೆ. ಅದೃಷ್ಟ ಕೈ ಹಿಡಿಯಲಿದೆ. ಆತ್ಮವಿಶ್ವಾಸ ಹೆಚ್ಚುತ್ತದೆ. ಸಂಪತ್ತು ವೃದ್ಧಿಯಾಗಲಿದೆ. ಆರ್ಥಿಕ ಸಂಕಷ್ಟಗಳು ದೂರವಾಗುತ್ತವೆ. ಭೂಮಿ ಖರೀದಿಸುವ ಯೋಗವಿದೆ.
24
ಸಿಂಹ ರಾಶಿ
ಅಭಿಜಿತ್ ನಕ್ಷತ್ರದಲ್ಲಿ ಮಂಗಳನ ಸಂಚಾರವು ಸಿಂಹ ರಾಶಿಯವರಿಗೆ ಗೌರವ ತರುತ್ತದೆ. ಶತ್ರುಗಳನ್ನು ಸೋಲಿಸಲು ಸಾಧ್ಯವಾಗುತ್ತದೆ. ರಾಜಕೀಯದಲ್ಲಿರುವವರಿಗೆ ಬಲ ಹೆಚ್ಚುತ್ತದೆ. ಕೆಲಸದ ಸ್ಥಳದಲ್ಲಿ ಗೌರವ, ಹೊಸ ಜವಾಬ್ದಾರಿಗಳು ಸಿಗಬಹುದು.
34
ವೃಶ್ಚಿಕ ರಾಶಿ
ಮಂಗಳನ ಸಂಚಾರದಿಂದ ವೃಶ್ಚಿಕ ರಾಶಿಯವರು ಪ್ರಗತಿ ಕಾಣುವರು. ಕಷ್ಟದ ಪರಿಸ್ಥಿತಿಗಳನ್ನು ಜಯಿಸಲು ಧೈರ್ಯ ಸಿಗುತ್ತದೆ. ವೈದ್ಯಕೀಯ ಕ್ಷೇತ್ರದವರಿಗೆ ಅದ್ಭುತ ಯಶಸ್ಸು ಸಿಗಲಿದೆ. ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುತ್ತವೆ.
44
ಮೀನ ರಾಶಿ
ಅಭಿಜಿತ್ ನಕ್ಷತ್ರಕ್ಕೆ ಮಂಗಳನ ಪ್ರವೇಶದಿಂದ ಮೀನ ರಾಶಿಯವರಿಗೆ ಶುಭ ಫಲ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ವೃತ್ತಿಜೀವನದಲ್ಲಿ ಉನ್ನತ ಸ್ಥಾನಕ್ಕೇರುವಿರಿ. ಆರ್ಥಿಕ ಸ್ಥಿರತೆ ಬರುತ್ತದೆ. ಬಾಕಿ ಹಣ ಕೈ ಸೇರಲಿದೆ.