ಸಾಮುದ್ರಿಕ ಶಾಸ್ತ್ರದ ಪ್ರಕಾರ, ಮಹಿಳೆಯರ ದೇಹದ ಕೆಲವು ಭಾಗಗಳಲ್ಲಿರುವ ಮಚ್ಚೆಗಳು ಅವರನ್ನು ಅದೃಷ್ಟವಂತರನ್ನಾಗಿ ಮಾಡುತ್ತವೆ. ಹಣಕಾಸಿನ ವಿಚಾರದಲ್ಲಿ ಇವರಿಗೆ ಕೊರತೆಯೇ ಇರುವುದಿಲ್ಲ. ಯಾವ ಜಾಗದಲ್ಲಿ ಮಚ್ಚೆಗಳಿದ್ದರೆ ಅದೃಷ್ಟವಂತರು ಎನಿಸಿಕೊಳ್ಳುತ್ತಾರೆ ಎಂದು ತಿಳಿಯಿರಿ.
ಸಾಮುದ್ರಿಕ ಶಾಸ್ತ್ರವು ವ್ಯಕ್ತಿಯ ದೇಹದ ರಚನೆ, ಬಣ್ಣ ಮತ್ತು ದೇಹದ ಮೇಲಿನ ಗುರುತುಗಳನ್ನು ಆಧರಿಸಿ ಅವರ ವ್ಯಕ್ತಿತ್ವ ಮತ್ತು ಭವಿಷ್ಯವನ್ನು ಹೇಳುತ್ತದೆ. ಇದರಲ್ಲಿ ಮಚ್ಚೆಗಳೂ ಒಂದು. ವಿಶೇಷವಾಗಿ ಮಹಿಳೆಯರ ದೇಹದ ಕೆಲವು ಭಾಗಗಳಲ್ಲಿರುವ ಮಚ್ಚೆಗಳು ಅವರನ್ನು ಅದೃಷ್ಟವಂತರನ್ನಾಗಿ ಮಾಡುತ್ತವೆ.
26
ದೇಹದ ಯಾವ ಭಾಗದಲ್ಲಿ ಮಚ್ಚೆಯಿದ್ದರೇ ಅದೃಷ್ಟ
ಇವರನ್ನು ಲಕ್ಷ್ಮೀ ಸ್ವರೂಪ ಎಂದೇ ಪರಿಗಣಿಸಲಾಗುತ್ತದೆ. ಇಂತಹ ಮಹಿಳೆಯರು ಕಾಲಿಟ್ಟ ಕಡೆ ಸಂಪತ್ತು ತುಂಬಿ ತುಳುಕುತ್ತದೆ. ದೇಹದ ಯಾವ ಭಾಗದಲ್ಲಿ ಮಚ್ಚೆಗಳಿದ್ದರೆ ಸಂಪತ್ತು ಮತ್ತು ಅದೃಷ್ಟದ ಸಂಕೇತ ಎಂದು ತಿಳಿಯೋಣ.
**ಮೂಗಿನ ತುದಿಯಲ್ಲಿ ಮಚ್ಚೆ**
ಮೂಗಿನ ಮೇಲೆ ಮಚ್ಚೆ ಇದ್ದರೆ ಸ್ವಲ್ಪ ಹಠಮಾರಿ ಸ್ವಭಾವದವರಾಗಿರುತ್ತಾರೆ. ಆದರೆ ಆರ್ಥಿಕವಾಗಿ ರಾಜಯೋಗವನ್ನು ಪಡೆಯುತ್ತಾರೆ. ಮೂಗಿನ ತುದಿಯಲ್ಲಿ ಮಚ್ಚೆ ಇರುವ ಮಹಿಳೆಯರು ಸಣ್ಣ ಪ್ರಯತ್ನದಿಂದಲೇ ದೊಡ್ಡ ಯಶಸ್ಸನ್ನು ಸಾಧಿಸುತ್ತಾರೆ. ಐಷಾರಾಮಿ ಜೀವನವನ್ನು ನಡೆಸುತ್ತಾರೆ. ಇವರಿಗೆ ಬೇಕೆಂದಾಗ ಕೈಗೆ ಹಣ ಬರುತ್ತದೆ.
36
ಹಣೆಯ ಮಧ್ಯದಲ್ಲಿ
ಸಾಮುದ್ರಿಕ ಶಾಸ್ತ್ರದ ಪ್ರಕಾರ, ಹಣೆಯ ಮಧ್ಯದಲ್ಲಿ ಅಥವಾ ಬಲಭಾಗದಲ್ಲಿ ಮಚ್ಚೆ ಇರುವ ಮಹಿಳೆ ಅದೃಷ್ಟವಂತೆ. ಆಕೆ ಆತ್ಮವಿಶ್ವಾಸದಿಂದ ಮುನ್ನಡೆಯುತ್ತಾಳೆ. ಸಮಾಜದಲ್ಲಿ ಗೌರವವನ್ನು ಗಳಿಸುತ್ತಾಳೆ. ಇವರಿಗೆ ಹಣದ ಕಷ್ಟ ಎಂದಿಗೂ ಬರುವುದಿಲ್ಲ. ಇವರ ಕುಟುಂಬವು ಸಂತೋಷದಿಂದ ಇರುತ್ತದೆ. ಇವರನ್ನು ಕುಟುಂಬದ ಲಕ್ಷ್ಮಿ ಎಂದೇ ಹೇಳಬಹುದು.
ಗದ್ದದ ಮೇಲೆ ಮಚ್ಚೆ ಇರುವ ಮಹಿಳೆ ತುಂಬಾ ಸುಂದರವಾಗಿರುತ್ತಾಳೆ. ಜೊತೆಗೆ ಆರ್ಥಿಕವಾಗಿಯೂ ಸದೃಢವಾಗಿರುತ್ತಾಳೆ. ಇಂತಹ ಮಹಿಳೆಯರು ಶಾಂತ ಸ್ವಭಾವದವರಾಗಿರುತ್ತಾರೆ. ಅವರು ಹಣವನ್ನು ಸರಿಯಾಗಿ ನಿರ್ವಹಿಸುತ್ತಾರೆ. ತಮ್ಮ ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತಾರೆ. ಇವರು ಇರುವ ಮನೆಯಲ್ಲಿ ಸಂಪತ್ತು ತುಂಬಿರುತ್ತದೆ.
56
*ಸೊಂಟದ ಮೇಲೆ ಮಚ್ಚೆ*
ಸೊಂಟದ ಮೇಲೆ ಮಚ್ಚೆ ಇರುವ ಮಹಿಳೆ ಖಂಡಿತವಾಗಿಯೂ ಶ್ರೀಮಂತಳಾಗುತ್ತಾಳೆ. ಈ ಮಹಿಳೆಯರು ಜೀವನದಲ್ಲಿ ಎಲ್ಲಾ ರೀತಿಯ ಸೌಕರ್ಯಗಳನ್ನು ಅನುಭವಿಸುತ್ತಾರೆ. ಸೊಂಟದ ಮೇಲೆ ಮಚ್ಚೆ ಇರುವ ಮಹಿಳೆಯರು ತಮ್ಮ ಪತಿಗೆ ಮತ್ತು ಅವರ ಕುಟುಂಬಕ್ಕೆ ಅದೃಷ್ಟವನ್ನು ತರುತ್ತಾರೆ.
ಅಂಗೈ ಒಳಗೆ
ಅಂಗೈಯ ಮಧ್ಯಭಾಗದಲ್ಲಿ ಮಚ್ಚೆ ಇದ್ದರೆ, ಅದು ಸಂಪತ್ತಿನ ಪ್ರಮುಖ ಸಂಕೇತವಾಗಿದೆ. ಅಂತಹ ಮಹಿಳೆಯರು ಖಂಡಿತವಾಗಿಯೂ ಶ್ರೀಮಂತರಾಗುತ್ತಾರೆ. ಇವರಿಗೆ ಬಲವಾದ ಆರ್ಥಿಕ ಹಿನ್ನೆಲೆಯೂ ಇರುತ್ತದೆ. ಅವರು ಸಹಜವಾಗಿಯೇ ಇತರರಿಗೆ ಸಹಾಯ ಮಾಡುವ ಗುಣ ಹೊಂದಿರುತ್ತಾರೆ.
66
**ಅಂಗಾಲಿನ ಮೇಲೆ ಮಚ್ಚೆ**
ಅಂಗಾಲಿನ ಮೇಲೆ ಮಚ್ಚೆ ಇದ್ದರೆ ಅದು ರಾಜಯೋಗವನ್ನು ಸೂಚಿಸುತ್ತದೆ. ಅಂತಹ ಮಹಿಳೆಯರು ಆಗಾಗ್ಗೆ ವಿದೇಶ ಪ್ರವಾಸ ಮಾಡುತ್ತಾರೆ. ಅಲ್ಲಿ ಉನ್ನತ ಶಿಕ್ಷಣ ಮತ್ತು ಉನ್ನತ ಹುದ್ದೆಗಳನ್ನು ಪಡೆಯುತ್ತಾರೆ. ಅವರ ಅದೃಷ್ಟವು ಅವರ ಕುಟುಂಬಕ್ಕೂ ಲಭಿಸುತ್ತದೆ.