1. ಹೆಂಗಸರ ಮೇಲೆ ಹಲ್ಲಿ ಬಿದ್ರೆ...
ಒಂದು ಹಲ್ಲಿ ಹೆಂಗಸಿನ ತಲೆ ಮೇಲೆ ಬಿದ್ರೆ ಅದು ಸಾವಿನ ಭಯವನ್ನ ಸೂಚಿಸುತ್ತೆ ಅಂತ ಅರ್ಥ. ಅದೇ ಎಡ ಕಣ್ಣ ಮೇಲೆ ಬಿದ್ರೆ ನೀವು ಪ್ರೀತಿಸ್ತಿರೋ ಗಂಡಸು ನಿಮ್ಮನ್ನೂ ಪ್ರೀತಿಸ್ತಿದ್ದಾನೆ ಅಂತ ಅರ್ಥ. ಬಲ ಕಣ್ಣ ಮೇಲೆ ಬಿದ್ರೆ ನೀವು ತುಂಬಾ ಒತ್ತಡ ಅನುಭವಿಸ್ತಿದ್ದೀರ ಅಂತ ಅರ್ಥ. ಹಲ್ಲಿ ಬಲ ಕೆನ್ನೆ ಮೇಲೆ ಬಿದ್ರೆ ಗಂಡು ಮಗು ಹುಟ್ಟುತ್ತೆ. ಬಲ ಕಿವಿ ಮೇಲೆ ಬಿದ್ರೆ ದುಡ್ಡು ಬರುತ್ತೆ. ಮೇಲ್ತುಟಿ ಮೇಲೆ ಬಿದ್ರೆ ಏನೋ ಸಮಸ್ಯೆ ಬರ್ತಿದೆ ಅಂತ ಅರ್ಥ.
ಕೆಳತುಟಿ ಮೇಲೆ ಬಿದ್ರೆ ಹೊಸ ವಸ್ತುಗಳನ್ನ ಕೊಳ್ಳುತ್ತೀರ. ಎರಡೂ ತುಟಿಗಳ ಮೇಲೆ ಬಿದ್ರೆ ಬೇಗನೆ ಏನೋ ಸಮಸ್ಯೆ ಬರ್ತಿದೆ ಅಂತ ಅರ್ಥ ಮಾಡ್ಕೊಂಡು ಅದನ್ನ ಎದುರಿಸೋಕೆ ರೆಡಿ ಆಗಿ. ಬೆನ್ನು ಮೇಲೆ ಬಿದ್ರೆ ಯಾರದ್ರೂ ಸಾವಿನ ಸುದ್ದಿ ಕೇಳೋ ಅವಕಾಶ ಇದೆ. ಬೆರಳ ಮೇಲೆ ಬಿದ್ರೆ ಜಗಳ ಆಗೋದು ಪಕ್ಕ. ಕೈ ಮೇಲೆ ಬಿದ್ರೆ ದುಡ್ಡು ಬರಬಹುದು. ಎಡಗೈ ಮೇಲೆ ಬಿದ್ರೆ ಒತ್ತಡ ಆಗೋ ಅವಕಾಶ ಇದೆ. ಬೆರಳುಗಳ ಮೇಲೆ ಬಿದ್ರೆ ಹೊಸ ಆಭರಣ ಕೊಳ್ಳೋ ಚಾನ್ಸ್ ಇದೆ.