ಮೊಬೈಲ್ ಸ್ಕ್ರೀನ್‌ನಲ್ಲಿ ಈ 3 ವಾಲ್‌ಪೇಪರ್ ಇಟ್ಟರೆ ನಿಮ್ಮ ಜೀವನದಲ್ಲಿ ಹೆಚ್ಚಾಗುತ್ತೆ ಹಣದ ಹರಿವು

Published : Sep 05, 2026, 06:51 PM IST

ನಿಮ್ಮ ಮೊಬೈಲ್ ವಾಲ್‌ಪೇಪರ್‌ನಲ್ಲಿ ಏನು ಹಾಕಿದ್ದೀರಿ? ವಾಲ್‌ಪೇಪರ್‌ ಬಗ್ಗೆ ಇಷ್ಟೊಂದು ತಲೆಕೆಡಿಸಿಕೊಳ್ಳುವ ಅಗತ್ಯವಿದೆಯಾ ಅನ್ನೋ ಪ್ರಶ್ನೆಗಳು ಹುಟ್ಟಿಕೊಳ್ಳುತ್ತದೆ. ಈ ಮೂರು ವಾಲ್‌ಪೇಪರ್ ಹಾಕಿದರೆ ನಿಮಗೆ ಹಣದ ಹರಿವು ಹೆಚ್ಚಾಗುತ್ತದೆ.

PREV
15
ವಾಲ್‌ಪೇಪರ್ ಸೀಕ್ರೆಟ್

ನಿಮ್ಮ ಮೊಬೈಲ್ ವಾಲ್‌ಪೇಪರ್‌ನಲ್ಲಿ ಯಾವುದೋ ಒಂದು ಫೋಟೋ ಹಾಕಬೇಡಿ. ವಾಲ್‌ಪೇಪರ್ ಕೂಡ ಧನಾತ್ಮಕವಾಗಿದ್ದರೆ ಉತ್ತಮ. ಸರಿಯಾದ ಫೋಟೋಗಳನ್ನು ಮೊಬೈಲ್ ವಾಲ್‌ಪೇಪರ್‌ನಲ್ಲಿ ಬಳಸುವ ಕಾರಣ ಅದೃಷ್ಠ, ಯಶಸ್ಸು, ಸಕಾರಾತ್ಮ ಶಕ್ತಿ, ಧನಾಕರ್ಷಣೆ ಹೆಚ್ಚಾಗಲಿದೆ. ಈ ಪೈಕಿ ಮೂರು ಚಿತ್ರಗಳಿಂದ ಹಣ ನಿಮ್ಮ ಕೈಸೇರಲಿದೆ ಎಂದು ವಾಸ್ತು ಹೇಳುತ್ತದೆ.

25
ಕುಳಿತ ಲಕ್ಷ್ಮೀ ದೇವಿ

ನಿಮ್ಮ ಮೊಬೈಲ್ ಫೋನ್‌ನಲ್ಲಿ ಕುಳಿತ ಲಕ್ಷ್ಮೀ ದೇವಿ ಫೋಟೋ ಬಳಸುವುದು ಅತ್ಯಂತ ಮುಖ್ಯ. ಇದು ಶಾಶ್ವತ ಸಮೃದ್ಧಿಯ ಸಂಕೇತವಾಗಿದೆ. ಕುಳಿತ ಲಕ್ಷ್ಮಿ ದೇವಿ ಆರ್ಥಿಕ ಪ್ರಗತಿ, ವೃತ್ತಿಪರ ಯಶಸ್ಸಿಗೆ ಕಾರಣವಾಗುತ್ತದೆ. ಪ್ರಮುಖವಾಗಿ ಹಣದ ಕೊರತೆ, ಹಣ ಉಳಿಸಲು ಸಾಧ್ಯವಾಗದೆ ಪರದಾಡುತ್ತಿರುವ ಮಂದಿ ಲಕ್ಷ್ಮಿ ದೇವಿ ಫೋಟೋ ವಾಲ್‌ಪೇಪರ್‌ನಲ್ಲಿ ಹಾಕಿದರೆ ಪ್ರತಿ ಬಾರಿ ಮೊಬೈಲ್ ತೆಗೆದಾಗ ಲಕ್ಷ್ಮಿ ದೇವಿಯ ಫೋಟೋ ದರ್ಶನವಾಗುತ್ತದೆ. ಇದು ಪಾಸಿಟೀವ್ ಎನರ್ಜಿ ಸೃಷ್ಟಿಸಲಿದೆ ಎಂದು ವಾಸ್ತು ಹೇಳುತ್ತದೆ.

35
7 ಓಡುವ ಬಿಳಿ ಕುದುರೆ

ವಾಸ್ತು ಪ್ರಕಾರ 7 ಬಿಳಿ ಓಡುವ ಕುದುರೆ ಫೋಟೋವನ್ನು ವಾಲ್‌ಪೇಪರ್‌ನಲ್ಲಿ ಹಾಕಿದರೆ ನಿಮ್ಮ ಕೆಲಸಗಳಿಗೆ ವೇಗ ಸಿಗುತ್ತದೆ. ಸ್ಥಗಿತಗೊಂಡಿರುವ ಅಥವಾ ಹಲವು ಅಡೆ ತಡೆಗಳಿಂದ ಅಪೂರ್ಣಗೊಂಡಿರುವ ಕೆಲಸಗಳು ಪೂರ್ಣಗೊಳ್ಳಲು ಸಹಾಯ ಮಾಡುತ್ತದೆ. ಕುದುರೆ ಚಿತ್ರಗಳು ಓಡುವಂತಿರಬೇಕು. ಎಡಕ್ಕೆ ಮುಖ ಮಾಡಿರಬಾರದು. ಇದರಿಂದ ಪಾಸಿಟೀವ್ ಹೆಚ್ಚಾಗುತ್ತದೆ. ಧನಲಾಭ, ಶುಭ ಸಂಯೋಗಗಳು ಒಲಿಯುತ್ತದೆ.

45
ಹರಿಯುವ ನೀರು ಅಥವಾ ಫೌಂಟೇನ್

ಹರಿಯುವ ನೀರು ಅಥವಾ ಫೌಂಟೇನ್ ಚಿತ್ರ ಹಣದ ಹರಿವು ಪ್ರತಿನಿಧಿಸುತ್ತದೆ. ನಿಮ್ಮ ಫೋನ್ ವಾಲ್‌ಪೇಪರ್‌ನಲ್ಲಿ ಈ ಫೋಟೋ ಇದ್ದರೆ ಆರ್ಥಿಕ ಸಮಸ್ಯೆಗಳು ದೂರವಾಗಲಿದೆ ಎಂದು ವಾಸ್ತು ಹೇಳುತ್ತದೆ. ಇಷ್ಟೇ ಅಲ್ಲ ಹಣದ ಆಗಮನ ಹೆಚ್ಚಾಗುತ್ತದೆ. ಸ್ವಚ್ಚವಾಗಿ ಹರಿಯುವ ನೀರಿನ ಫೋಟೋ ಬಳಸಬೇಕು. ಧನಪ್ರಾಪ್ತಿಗೆ ಇದು ಉತ್ತಮವಾಗಿದೆ.

55
ಯಾವುದು ಬಳಸಬಾರದು

ಕಪ್ಪು ಅಥವಾ ಕತ್ತಲೆಯ ಚಿತ್ರಗಳು, ಒಣಗಿದ ಮರಗಳು, ಯುದ್ಧ ಅಥವಾ ಹಿಂಸಾಚಾರದ ಚಿತ್ರಗಳು, ಭಯಾನಕ ಪ್ರಾಣಿಗಳು ಮತ್ತು ದುಃಖಿತ ಮುಖಗಳ ಚಿತ್ರಗಳನ್ನು ವಾಲ್‌ಪೇಪರ್ ಆಗಿ ಬಳಸಬಾರದು. ಇವು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ ಮತ್ತು ಜೀವನದಲ್ಲಿ ತೊಂದರೆಗಳನ್ನು ಉಂಟುಮಾಡುತ್ತವೆ. ಸ್ವಯಂ ಸೆಲ್ಫಿ ಫೋಟೋಗಳನ್ನೂ ವಾಲ್‌ಪೇಪರ್ ಆಗಿ ಬಳಸಬಾರದು

Read more Photos on
click me!

Recommended Stories