ಜಾತಕದಲ್ಲಿ ಶುಕ್ರ ಮಹಾದಶಾ 20 ವರ್ಷಗಳ ಕಾಲ ಇರುತ್ತದೆ. ಶುಕ್ರನು ಶುಭ ಸ್ಥಾನದಲ್ಲಿದ್ದರೆ, ವ್ಯಕ್ತಿ ಐಷಾರಾಮಿ ಜೀವನ, ಸಂಪತ್ತು ಮತ್ತು ಉತ್ತಮ ಸಂಬಂಧಗಳನ್ನು ಪಡೆಯುತ್ತಾನೆ. ಆದರೆ, ಶುಕ್ರ ಅಶುಭ ಸ್ಥಾನದಲ್ಲಿದ್ದರೆ, ಆರ್ಥಿಕ ಸಂಕಷ್ಟ, ಕುಟುಂಬದಲ್ಲಿ ಕಲಹ ಮತ್ತು ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ.
ಜಾತಕದಲ್ಲಿ ಬಲವಾದ ಶುಕ್ರನಿದ್ರೆ ಇದನ್ನು ಮಹಾದಶಾ ಎಂದು ಕರೆಯಲಾಗುತ್ತದೆ. ಶುಕ್ರ ಮಹದಶಾ ಸುಮಾರು 20 ವರ್ಷಗಳ ಕಾಲವಿರುತ್ತದೆ. ಒಂದು ವೇಳೆ ಜಾತಕದಲ್ಲಿ ಶುಕ್ರ ಉತ್ತಮ ಸ್ಥಾನದಲ್ಲಿದ್ರೆ ಆತನ ಕೋಪಕ್ಕೆ ತುತ್ತಾಗಬೇಕಾಗುತ್ತದೆ. ಇದಿರಿಂದ ಜೀವನದಲ್ಲಿ ಹಣಕಾಸಿಕ ಕೊರತೆ, ಕುಟುಂಬದಲ್ಲಿ ಕಲಹ, ವೈವಾಹಿಕ ಜೀವನದಲ್ಲಿ ಬಿರುಕು ಸೇರಿದಂತೆ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಹಾಗೆಯೇ ವ್ಯಕ್ತಿಯ ಜೀವನದಲ್ಲಿ ಬಡತನ ತಾಂಡವ ಶುರುವಾಗಿ, ಎಲ್ಲಾ ವೈಭೋಗವನ್ನು ಕಳೆದುಕೊಳ್ಳುತ್ತಾನೆ. ಓರ್ವ ವ್ಯಕ್ತಿಯ ಜೀವನದಲ್ಲಿ ಶುಕ್ರ ಮಹದಶಾ ಶುರುವಾದ್ರೆ ಯಾವೆಲ್ಲಾ ಬದಲಾವಣೆಗಳು ಆಗುತ್ತವೆ ಎಂಬುದನ್ನು ನೋಡೋಣ ಬನ್ನಿ
25
ಶುಕ್ರಗ್ರಹ ಮಹಾದಶಾ ಆರಂಭವಾದ್ರೆ ಏನಾಗುತ್ತೆ?
ಒಬ್ಬ ವ್ಯಕ್ತಿಯ ಜಾತಕದಲ್ಲಿ ಶುಕ್ರ ಗ್ರಹ ಶುಭ ಸ್ಥಾನದಲ್ಲಿದ್ದು, ಮಹಾದಶಾ ನಡೆಯುತ್ತಿದ್ರೆ ಆತನ ಜೀವನ ತುಂಬಾನೇ ಆರಾಮದಾಯಕವಾಗಿರುತ್ತದೆ. ಹಾಗೆಯೇ ಆತ ಎಲ್ಲಾ ರೀತಿಯ ಐಷಾರಾಮಿ ಸೌಕರ್ಯಗಳನ್ನು ಅನುಭವಿಸುತ್ತಿರುತ್ತಾನೆ. ಜೀವನದಲ್ಲಿ ಭೌತಿಕ ಸಂಪತ್ತು, ಸಂತೋಷಕ್ಕೆ ಯಾವುದೇ ಕೊರತೆ ಇರುವುದಿಲ್ಲ.
35
ಹಣದ ಆಗಮನ
ಶುಕ್ರ ಬಲವಾದ ಸ್ಥಾನದಲ್ಲಿರುವ ಕಾರಣ ವೈವಾಹಿಕ ಸಂಬಂಧಗಳಲ್ಲಿ ಪ್ರೀತಿ ಇರುತ್ತದೆ. ಇತರೆ ಸಂಬಂಧಗಳಲ್ಲಿ ಬಾಂಧವ್ಯ ಚೆನ್ನಾಗಿರುತ್ತದೆ. ಹಾಗೆಯೇ ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿ ಗುರುತಿಸಿಕೊಳ್ಳುತ್ತೀರಿ. ಶ್ರೀಮಂತರಾಗುವ ಅಂದ್ರೆ ಹಣದ ಆಗಮನದ ಮಾರ್ಗಗಳು ಹೆಚ್ಚಾಗುತ್ತವೆ. ಮಾಡುವ ಎಲ್ಲಾ ಕೆಲಸಗಳು ಲಾಭದಾಯಕವಾಗಿ ಬದಲಾಗಿ ಹಣದ ಹರಿವು ಹೆಚ್ಚಾಗುತ್ತದೆ.
ಶುಕ್ರ ಮಹಾದಶಾ ಒಮ್ಮೆ ಬಂದ್ರೆ 20 ವರ್ಷಗಳ ಕಾಲವಿರುತ್ತದೆ ಹಾಗೂ ಜೀವಿತಾವಧಿಯಲ್ಲಿ ಒಂದು ಬಾರಿ ಬರುತ್ತದೆ. ಜಾತಕದಲ್ಲಿ ಶುಕ್ರ ಅಶುಭ ಸ್ಥಾನದಲ್ಲಿದ್ರೆ ವ್ಯಕ್ತಿಯು ಹಣದ ಸಮಸ್ಯೆಯನ್ನು ಬಲವಾಗಿ ಎದುರಿಸುತ್ತಾನೆ. ಇದರ ಜೊತೆಯಲ್ಲಿ ಮನೆಯಲ್ಲಿ ಮನಸ್ತಾಪ, ಕಲಹ, ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಒಂದು ವೇಳೆ ಆತನ ಬಳಿ ಮೊದಲೇ ಹಣ, ಮನೆ, ಕಾರ್ ಸೇರಿದಂತೆ ಆರ್ಥಿಕವಾಗಿ ಸದೃಢನಾಗಿದ್ರೂ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗದ ಪರಿಸ್ಥಿತಿಗಳು ನಿರ್ಮಾಣವಾಗುತ್ತಿರುತ್ತವೆ.
ವೈದಿಕ ಜ್ಯೋತಿಷ್ಯದಲ್ಲಿ 9 ಗ್ರಹಗಳು 120 ವರ್ಷದ ಮಹದಾಶ ಹೊಂದಿರುತ್ತವೆ. ಸೂರ್ಯ 6, ಚಂದ್ರ 0, ಮಂಗಳ 7, ಬುಧ 17, ಶುಕ್ರ 20, ಶನಿ 19, ರಾಹು 18 ಮತ್ತು ಕೇತು 7 ವರ್ಷದ ಮಹಾದಶಾ ಹೊಂದಿರುತ್ತವೆ.