ಆ್ಯಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್, ಫೇಸ್‌ಬುಕ್‌ನ ಮಾರ್ಕ್ ಜುಕರ್‌ಬರ್ಗ್‌ನಿಂದ ಹಿಡಿದು ವಿರಾಟ್ ಕೊಹ್ಲಿಯವರೆಗೆ ಅನೇಕ ಗಣ್ಯರು ನೀಮ್ ಕರೋಲಿ ಬಾಬಾರ ಕೈಂಚಿ ಧಾಮ್ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಅಷ್ಟಕ್ಕೂ ಅಲ್ಲೇನಿದೆ? ಕೈಂಚಿ ಧಾಮ್‌ನ ರಹಸ್ಯ, ವಿಶೇಷತೆಗಳು, ಅಲ್ಲಿಗೆ ತಲುಪುವುದು ಹೇಗೆ?
ಇತ್ತೀಚೆಗೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ವೃಂದಾವನದಲ್ಲಿರುವ ನೀಮ್ ಕರೋಲಿ ಬಾಬಾ ಆಶ್ರಮಕ್ಕೆ ಭೇಟಿ ನೀಡಿದ್ದರು. ಈ ಫೋಟೋಗಳು ವೈರಲ್ ಆದ ನಂತರ, ಈ ಆಶ್ರಮದ ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚಾಗಿದೆ. ಸ್ಟೀವ್ ಜಾಬ್ಸ್, ಮಾರ್ಕ್ ಜುಕರ್‌ಬರ್ಗ್‌ರಂತಹ ದಿಗ್ಗಜರು ಭೇಟಿ ನೀಡಿದ ಈ ಸ್ಥಳದ ಮಹತ್ವವೇನು?
25
ಕೈಂಚಿ ಧಾಮ್ ಹಿನ್ನೆಲೆ ಏನು? ಯಾರು ಈ ನೀಮ್ ಕರೋಲಿ ಬಾಬಾ?
ಈ ಆಶ್ರಮವನ್ನು 1964ರಲ್ಲಿ 'ನೀಮ್ ಕರೋಲಿ ಬಾಬಾ' ಸ್ಥಾಪಿಸಿದರು. ಅವರ ಮೂಲ ಹೆಸರು ಲಕ್ಷ್ಮಣ್ ನಾರಾಯಣ್ ಶರ್ಮಾ. 1900ರಲ್ಲಿ ಉತ್ತರ ಪ್ರದೇಶದ ಅಕ್ಬರ್‌ಪುರದಲ್ಲಿ ಜನಿಸಿದ ಅವರು, 1973ರ ಸೆಪ್ಟೆಂಬರ್ 11ರಂದು ವೃಂದಾವನದಲ್ಲಿ ಮಹಾಸಮಾಧಿಯಾದರು. ಭಕ್ತರು ಅವರನ್ನು ಹನುಮಂತನ ಅವತಾರವೆಂದು ನಂಬುತ್ತಾರೆ.
35
‘ನೀಮ್ ಕರೋಲಿ ಬಾಬಾ’ ಹೆಸರಿನ ಹಿಂದಿನ ರೋಚಕ ಕಥೆ
ಬಾಬಾರಿಗೆ ಈ ಹೆಸರು ಬರಲು ಒಂದು ರೈಲು ಘಟನೆಯೇ ಕಾರಣ. ಟಿಕೆಟ್ ಇಲ್ಲವೆಂದು ಬ್ರಿಟಿಷ್ ಅಧಿಕಾರಿ ಅವರನ್ನು ರೈಲಿನಿಂದ ಇಳಿಸಿದಾಗ, ರೈಲು ಮುಂದೆ ಚಲಿಸಲೇ ಇಲ್ಲ. ಕೊನೆಗೆ, ಬಾಬಾರನ್ನು ಗೌರವದಿಂದ ಮತ್ತೆ ಹತ್ತಿಸಿದ ಮೇಲೆಯೇ ರೈಲು ಚಲಿಸಿತು. ಈ ಘಟನೆ ನಡೆದ ಸ್ಥಳವೇ 'ನೀಮ್ ಕರೋಲಿ'. ಅಂದಿನಿಂದ ಅವರು 'ನೀಮ್ ಕರೋಲಿ ಬಾಬಾ' ಆದರು.
1974ರಲ್ಲಿ ಆ್ಯಪಲ್ ಸ್ಥಾಪನೆಗೂ ಮುನ್ನ ಸ್ಟೀವ್ ಜಾಬ್ಸ್ ಭಾರತಕ್ಕೆ ಬಂದು ಕೈಂಚಿ ಧಾಮ್‌ಗೆ ಭೇಟಿ ನೀಡಿದ್ದರು. ನಂತರ, ಫೇಸ್‌ಬುಕ್ ಸಂಕಷ್ಟದಲ್ಲಿದ್ದಾಗ, 2015ರಲ್ಲಿ ಮಾರ್ಕ್ ಜುಕರ್‌ಬರ್ಗ್‌ಗೆ ಇದೇ ಆಶ್ರಮಕ್ಕೆ ಭೇಟಿ ನೀಡುವಂತೆ ಸ್ಟೀವ್ ಜಾಬ್ಸ್ ಸಲಹೆ ನೀಡಿದ್ದರು. ಈ ಭೇಟಿಯ ನಂತರ ಇಬ್ಬರ ಕಂಪನಿಗಳೂ ಯಶಸ್ಸಿನ ಉತ್ತುಂಗಕ್ಕೇರಿದವು.
55
ಆಶ್ರಮಕ್ಕೆ ತಲುಪುವುದು ಹೇಗೆ?
ಉತ್ತರಾಖಂಡದ ಕೈಂಚಿ ಧಾಮ್‌ಗೆ ಹೋಗಲು ಕತ್‌ಗೋಡಮ್ ರೈಲು ನಿಲ್ದಾಣದಿಂದ ಟ್ಯಾಕ್ಸಿ/ಬಸ್ ಲಭ್ಯವಿದೆ. ಇನ್ನು, ಬಾಬಾರ ಮಹಾಸಮಾಧಿ ಇರುವ ವೃಂದಾವನದ ಆಶ್ರಮವು ಮಥುರಾದಲ್ಲಿದೆ. ಇದು ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣದಿಂದ ಕೇವಲ 2 ಕಿ.ಮೀ. ದೂರದಲ್ಲಿದೆ. ಇತ್ತೀಚೆಗೆ ಕೊಹ್ಲಿ ದಂಪತಿ ಭೇಟಿ ನೀಡಿದ್ದು ಇದೇ ಆಶ್ರಮಕ್ಕೆ.