ದೇವರಿಗೆ ಭಕ್ತಿಯಿಂದ ಪೂಜೆ ಮಾಡಬೇಕು ಅಂತ ಎಲ್ಲರೂ ಹೇಳ್ತಾರೆ. ಆ ಸಮಯದಲ್ಲಿ ಯಾವ ಆಲೋಚನೆಗಳು ಬರಬಾರದು, ಮನಸ್ಫೂರ್ತಿಯಿಂದ ದೇವರನ್ನ ಪೂಜಿಸಬೇಕು ಅಂತಾರೆ. ಹಾಗೆ ಪೂಜಿಸಿದ್ರೆ ಮಾತ್ರ ದೇವರ ಆಶೀರ್ವಾದ ಸಿಗುತ್ತೆ, ನಾವು ಕೇಳಿದ್ದನ್ನ ದೇವರು ಕೊಡ್ತಾರೆ ಅಂತ ನಂಬಿಕೆ. ಆದ್ರೆ ಕೆಲವೊಮ್ಮೆ ನಾವು ಎಷ್ಟೇ ಶ್ರದ್ಧೆ ತೋರಿಸಬೇಕು ಅನ್ಕೊಂಡ್ರು ದೇವರ ಮೇಲೆ ಶ್ರದ್ಧೆ ತೋರಿಸೋಕೆ ಆಗಲ್ಲ. ಬೇರೆ ಆಲೋಚನೆಗಳು ಬರ್ತಾ ಇರುತ್ತೆ. ಗುಡಿಗೆ ಹೋದ್ರೆ ಚಪ್ಪಲಿ ಇದೆಯೋ ಇಲ್ವೋ ಅಂತ ಯೋಚ್ನೆ ಮಾಡೋರು ಇದ್ರೆ, ಸಿನಿಮಾ ಬಗ್ಗೆ, ಬೇರೆ ವಿಷಯಗಳ ಬಗ್ಗೆ ಆಲೋಚನೆಗಳು ಬರ್ತಾ ಇರುತ್ತೆ. ಕೆಲವರಿಗೆ ಕಾಮದ ಬಗ್ಗೆ ಆಲೋಚನೆಗಳು ಬರುತ್ತೆ. ಹೀಗೆ ದೇವರ ಪೂಜೆ ಮಾಡುವಾಗ, ಗುಡಿಗೆ ಹೋದಾಗ ಈ ತರಹದ ಆಲೋಚನೆಗಳು ಬಂದ್ರೆ ಏನರ್ಥ? ತಜ್ಞರು ಏನ್ ಹೇಳ್ತಾರೆ ನೋಡೋಣ..