ಚೌತಿ ಎಲ್ಲರ ಬಾಳಿಗೂ ಶುಭದಾಯಕವಾಗಿರಲಿ. ಗಣಪತಿ ನಿಮಗೆ ಆರೋಗ್ಯ, ಸಂಪತ್ತು, ನೆಮ್ಮದಿಯನ್ನು ಕರುಣಿಸಲಿ. ನಿಮಗೂ ನಿಮ್ಮ ಕುಟುಂಬದವರಿಗೂ ಗಣೇಶ ಚತುರ್ಥಿಯ ಶುಭಾಶಯಗಳು
ಗಜಾನನ ನಮ್ಮ ಮಾರ್ಗದರ್ಶಕ. ನಮ್ಮ ರಕ್ಷಕ. ಏಕಮನಸ್ಸಿನಿಂದ ವಿಘ್ನೇಶನನ್ನು ಪೂಜಿಸೋಣ. ಲೋಕಕಲ್ಯಾಣಕ್ಕಾಗಿ ಒಟ್ಟಾಗಿ ಪ್ರಾರ್ಥಿಸೋಣ. ಸರ್ವರಿಗೂ ಚೌತಿಯ ಶುಭಾಶಯಗಳು
ಬದುಕಿನ ಕಷ್ಟವೆಲ್ಲಾ ದೂರವಾಗಲಿ, ದೇವರ ಆಶೀರ್ವಾದದ ಪ್ರಭೆಯಲ್ಲಿ ಖುಷಿಯೊಂದೇ ನೆಲೆಗೊಳ್ಳಲಿ. ಸರ್ವರಿಗೂ ಗಣೇಶ ಹಬ್ಬದ ಶುಭಾಶಯಗಳು
ನಾಯಕನ ಕೃಪಾದೃಷ್ಟಿಯಿಂದ ನಿಮ್ಮ ಕಷ್ಟಗಳೆಲ್ಲಾ ಸುಟ್ಟು ಬೂದಿಯಾಗಲಿ. ದೇವರ ಅನುಗ್ರಹವೂ ಅನುದಿನವೂ ನಿಮ್ಮ ಸಂತೋಷವನ್ನು ಹೆಚ್ಚಿಸಲಿ. ನಿಮಗೆ ಗಣೇಶ ಚತುರ್ಥಿ ಶುಭಾಶಯಗಳು
ಗಜವದನನ ಆಶೀರ್ವಾದದ ಬೆಳಕು ನಿಮ್ಮ ಜೀವನವನ್ನು ಇನ್ನಷ್ಟು ಸುಖಮಯವಾಗಿಸಲಿ. ಬದುಕಿನ ಎಲ್ಲಾ ಕಷ್ಟ ಕಾರ್ಪಣ್ಯಗಳು ಕೊನೆಯಾಗಲಿ. ನಿಮಗೂ ನಿಮ್ಮ ಕುಟುಂಬಕ್ಕೂ ಚೌತಿಯ ಶುಭಾಶಯಗಳು
Sushma Hegde