12 ವರ್ಷದಿಂದ ಕೂತಿಲ್ಲ, ಮಲಗಿಲ್ಲ! ಶಿವನ ದರ್ಶನಕ್ಕಾಗಿ ನಿಂತಲ್ಲೇ ತಪಸ್ಸು ಮಾಡ್ತಿರೋ 'ಖರೇಶ್ವರಿ ಬಾಬಾ'

Published : Jun 14, 2026, 03:32 PM IST

Standing Baba Dulal Giri Ji Maharaj: ದೂಲಾಲ್ ಗಿರಿ ಜಿ ಮಹಾರಾಜ್ ಎಂಬ ಹಿಂದೂ ತಪಸ್ವಿ (ನಾಗಾ ಸಾಧು / ಖರೇಶ್ವರಿ) ಕಳೆದ 12 ವರ್ಷಗಳಿಂದ ನಿಂತುಕೊಂಡೇ ಇದ್ದಾರೆ. ಭಗವಂತನ ಸಾಕ್ಷಾತ್ಕಾರ ಅಥವಾ ದೇವರನ್ನು ನೋಡಬೇಕು ಎನ್ನುವ ಕಾರಣಕ್ಕೆ ನಿಂತಿದ್ದಾರಂತೆ. 

PREV
13
12 ವರ್ಷದಿಂದ ಒಮ್ಮೆಯೂ ಕುಳಿತಿಲ್ಲ

ಭಗವಾನ್ ಶಿವನ ದರ್ಶನವನ್ನು ಪಡೆಯಬೇಕು ಎಂದು ಸುಮಾರು 12 ವರ್ಷಗಳ ಕಾಲ ಎಂದಿಗೂ ಕುಳಿತುಕೊಂಡಿಲ್ಲ, ಮಲಗಿಲ್ಲ. ಈ ಮೂಲಕ ಕಠಿಣ ತಪಸ್ಸು ಮಾಡಿದ್ದಾರೆ. ಇದೊಂದು ತರ ಜೀವಿತಾವಧಿ ವ್ರತ ಆಗಿದೆ.

23
ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟರು

ತಪಸ್ಸಿನ ಜೀವನ ಮಾಡಬೇಕು ಎಂದು ಅವರು ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟರು. ಇವರು ಎಂದಿಗೂ ನೆಲದ ಮೇಲೆ ಕುಳಿತುಕೊಳ್ಳುವುದಿಲ್ಲ ಅಥವಾ ಮಲಗುವುದಿಲ್ಲ. ಇತ್ತೀಚೆಗೆ ಸಪೋರ್ಟ್‌ ಕೊಡುವ ರೀತಿಯಲ್ಲಿ ತೂಗಾಡುವ ಬೆಲ್ಟ್‌ ಬಳಸಿ ವಿಶ್ರಾಂತಿ ಪಡೆಯುತ್ತಾರೆ.

33
ಕಾಲುಗಳಲ್ಲಿ ಊತ

ಈ ರೀತಿ ನಿಂತುಕೊಂಡೋದರಿಂದ ಕಾಲುಗಳಲ್ಲಿ ತೀವ್ರವಾದ ಊತ ಆಗಿದ್ದು, ಆರೋಗ್ಯ ಸಮಸ್ಯೆಗಳು ಆಗಿವೆ. ಇವರನ್ನು ನೋಡಿಕೊಳ್ಳಲು ಕೆಲ ಸ್ವಯಂ ಸೇವಕರಿದ್ದಾರೆ. ಇವರ ಕಾಲುಗಳಿಗೆ ಕೆಲವರು ಮುಲಾಮು ಹಚ್ಚುತ್ತಾರೆ, ಸೋಂಕು ನಿವಾರಕ ಹಚ್ಚುತ್ತಾರೆ, ಬ್ಯಾಂಡೇಜ್‌ ಹಾಕ್ತಾರೆ. ಈ ರೀತಿ ಆಚರಣೆಯನ್ನು 'ಖರೇಶ್ವರಿಗಳು' ("ಸ್ಟ್ಯಾಂಡಿಂಗ್ ಬಾಬಾಗಳು") ಮಾಡುತ್ತಾರೆ. ಸಾಧುಗಳ ಒಂದು ನಿರ್ದಿಷ್ಟ ಪಂಥದವರು ಈ ರೀತಿ ಆಚರಣೆ ಮಾಡುತ್ತಾರೆ.

Read more Photos on
click me!

Recommended Stories