ಸ್ವಪ್ನ ಶಾಸ್ತ್ರದ ಪ್ರಕಾರ, ನಮಗೆ ಬೀಳುವ ಪ್ರತಿಯೊಂದು ಕನಸಿಗೂ ಒಂದೊಂದು ಅರ್ಥವಿರುತ್ತೆ. ಕೆಲವು ಕನಸುಗಳು ಕೆಟ್ಟದ್ದನ್ನು ಸೂಚಿಸಿದರೆ, ಇನ್ನು ಕೆಲವು ನಮ್ಮ ಜೀವನವನ್ನೇ ಬದಲಾಯಿಸುವ ಶುಭ ಸಂಕೇತಗಳಾಗಿರುತ್ತವೆ. ರಾತ್ರೋರಾತ್ರಿ ನಿಮ್ಮ ಬದುಕನ್ನೇ ಬದಲಿಸಬಲ್ಲ ಒಂದು ಅದ್ಭುತ ಕನಸಿನ ಬಗ್ಗೆ ಇಲ್ಲಿದೆ ಮಾಹಿತಿ.
ಸ್ವಪ್ನ ಶಾಸ್ತ್ರ ಹೇಳುವ ಪ್ರಕಾರ, ನಮ್ಮ ಕನಸಿನಲ್ಲಿ ಕಾಣುವ ಪ್ರತಿಯೊಂದು ದೃಶ್ಯವೂ ಭವಿಷ್ಯದ ಸಂಕೇತಗಳನ್ನು ನೀಡುತ್ತದೆ. ಅದರಲ್ಲೂ ಕಾಡಿನ ರಾಜ ಸಿಂಹ ನಿಮ್ಮ ಕನಸಲ್ಲಿ ಬಂದರೆ, ನೀವು ನಿಜಕ್ಕೂ ಅದೃಷ್ಟವಂತರು. ಸಿಂಹವು ಸಾಮಾನ್ಯವಾಗಿ ಶಕ್ತಿ, ಧೈರ್ಯ ಮತ್ತು ಅಪಾಯದ ಸಂಕೇತ. ಹಾಗಾಗಿ ಕನಸಲ್ಲಿ ಸಿಂಹ ಕಂಡರೆ ಅನೇಕರು ಹೆದರುತ್ತಾರೆ. ಆದರೆ ಸ್ವಪ್ನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಸಿಂಹ ಕಾಣಿಸಿಕೊಂಡರೆ ನಿಮ್ಮ ಜೀವನ ಬದಲಾಗಲಿದೆ ಮತ್ತು ಅದೃಷ್ಟ ನಿಮ್ಮ ಕೈ ಹಿಡಿಯಲಿದೆ ಎಂದರ್ಥ.
26
ಸಿಂಹವು ಶಾಂತವಾಗಿ ಕುಳಿತ ಕನಸು ಬಿದ್ದರೇ..
ನಿಮ್ಮ ಕನಸಿನಲ್ಲಿ ಸಿಂಹವು ಶಾಂತವಾಗಿ ಕುಳಿತು, ನಿಮಗೆ ಯಾವುದೇ ಹಾನಿ ಮಾಡದೆ ಕಾಣಿಸಿಕೊಂಡರೆ, ಅದು ತುಂಬಾ ಒಳ್ಳೆಯ ಸಂಕೇತ. ಇದು ನಿಮ್ಮಲ್ಲಿ ಅದ್ಭುತ ನಾಯಕತ್ವದ ಗುಣ ಮತ್ತು ಆತ್ಮವಿಶ್ವಾಸ ಇದೆ ಎಂಬುದನ್ನು ಸೂಚಿಸುತ್ತದೆ.
36
ನಿಮಗೆ ಯಶಸ್ಸು ಶತಸಿದ್ದ ಎನ್ನುವ ಸೂಚನೆ
ಈ ಕನಸಿನ ಅರ್ಥ, ಭವಿಷ್ಯದಲ್ಲಿ ಬರುವ ಸನ್ನಿವೇಶಗಳ ಮೇಲೆ ನೀವು ಸಂಪೂರ್ಣ ಹಿಡಿತ ಸಾಧಿಸುವಿರಿ. ನೀವು ಕೈ ಹಾಕುವ ದೊಡ್ಡ ಪ್ರಯತ್ನಗಳಲ್ಲಿ ಯಶಸ್ಸು ಗಳಿಸುತ್ತೀರಿ. ಅಲ್ಲದೆ, ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆಯುತ್ತೀರಿ ಎಂದು ಕೂಡ ಇದು ಹೇಳುತ್ತದೆ.
ಒಂದು ವೇಳೆ ನಿಮ್ಮ ಕನಸಿನಲ್ಲಿ ಸಿಂಹವು ಆಕ್ರಮಣಕಾರಿಯಾಗಿ, ಭಯಂಕರವಾಗಿ ಘರ್ಜಿಸುತ್ತಾ ದಾಳಿ ಮಾಡಲು ಬಂದರೆ, ಅದನ್ನು ನೀವು ಒಂದು ಎಚ್ಚರಿಕೆಯಾಗಿ ನೋಡಬೇಕು. ನಿಜ ಜೀವನದಲ್ಲಿ ಯಾವುದೋ ಒಂದು ದೊಡ್ಡ ಭಯ ಅಥವಾ ಸವಾಲಿನ ಪರಿಸ್ಥಿತಿ ಎದುರಾಗಲಿದೆ ಎಂದರ್ಥ.
56
ನಿಮ್ಮ ವಿರೋಧಿಗಳ ಮೇಲೆ ಕಣ್ಣಿಡಿ ಎನ್ನುವುದರ ಸೂಚನೆ
ನಿಮ್ಮ ಶತ್ರು ಅಥವಾ ಸವಾಲು ನಿಮ್ಮ ಮೇಲೆ ಎರಗಲಿದೆ ಎಂಬುದರ ಸೂಚನೆ ಇದು. ಹಾಗಾಗಿ, ನಿಮ್ಮ ವಿರೋಧಿಗಳ ಬಗ್ಗೆ ನೀವು ಬಹಳ ಜಾಗರೂಕರಾಗಿರಬೇಕು.
66
ಕನಸಿನಲ್ಲಿ ಸಿಂಹದ ಮರಿ ಕಂಡರೆ..
ನಿಮ್ಮ ಕನಸಿನಲ್ಲಿ ಸಿಂಹದ ಮರಿ ಕಂಡರೆ, ನಿಮ್ಮ ಜೀವನದಲ್ಲಿ ಒಂದು ಹೊಸ ಅಧ್ಯಾಯ ಶುರುವಾಗಲಿದೆ ಎಂಬುದರ ಸಂಕೇತ. ಇದು ಹೊಸ ಅವಕಾಶಗಳನ್ನು ಮತ್ತು ಬೆಳವಣಿಗೆಯನ್ನು ಸೂಚಿಸುತ್ತದೆ. ವೃತ್ತಿಜೀವನದಲ್ಲಿ ಹೊಸ ಜವಾಬ್ದಾರಿಗಳನ್ನು ನೀವು ಸ್ವೀಕರಿಸಲಿದ್ದೀರಿ ಎಂದರ್ಥ. ಸಿಂಹವು ಬೇಟೆಯಾಡುತ್ತಿರುವಂತೆ ಕನಸು ಬಿದ್ದರೆ, ಅದು ನಿಮ್ಮ ಶಕ್ತಿಯನ್ನು ತೋರಿಸುತ್ತದೆ. ನಿಮ್ಮ ಜೀವನದಲ್ಲಿರುವ ಕಷ್ಟಗಳನ್ನು ಮತ್ತು ಭಯವನ್ನು ನೀವು ಜಯಿಸಲಿದ್ದೀರಿ ಎಂದು ಈ ಕನಸು ಸೂಚಿಸುತ್ತದೆ.