ಅಜ್ಜಿಯರು ಮನೆಯಲ್ಲಿ ಕೆಲವು ಕೆಲಸಗಳನ್ನು ಮಾಡದಂತೆ ತಡೆಯುತ್ತಾರೆ. ಅಂಗಿ ಉಲ್ಟಾ ಹಾಕಿದರೆ ಕೋಪಿಸಿಕೊಳ್ಳುತ್ತಾರೆ. ಚಪ್ಪಲಿ ಎಡದ್ದು ಬಲಕ್ಕೆ, ಬಲದ್ದು ಎಡಕ್ಕೆ ಹಾಕಿದರೂ ಬೈಯುತ್ತಾರೆ. ಮನೆಯೊಳಗೆ ಶೂ ಅಥವಾ ಚಪ್ಪಲಿಗಳು ತಲೆಕೆಳಗೆ ಬಿದ್ದರಂತೂ ಕೂಡಲೇ ಅವುಗಳನ್ನು ಸರಿಪಡಿಸಿ ಹಾಗೆಲ್ಲ ಹಾಕಬಾರದು ಎಂದು ಬೈಯುತ್ತಾರೆ. ನೀವು ಈ ರೀತಿ ಬೈಗುಳ ತಿಂದಿರಬಹುದು.
ಅಜ್ಜಿಯರು ಬೂಟುಗಳು ಅಥವಾ ಚಪ್ಪಲಿಗಳನ್ನು ತಲೆಕೆಳಗಾಗಿ ನೋಡಿದರೆ, ಅವರು ತಕ್ಷಣ ಅವುಗಳನ್ನು ನೇರಗೊಳಿಸಲು ಹೇಳುತ್ತಾರೆ. ಏಕೆ? ಉಲ್ಟಾ ಬಿದ್ದರೆ ಏನಾಗುತ್ತೆ ಎಂದು ಪ್ರಶ್ನಿಸಿ ನೋಡಿ ಅದಕ್ಕೆ ವಿವರವಾದ ಉತ್ತರವನ್ನು ನೀಡದೆ, ಅವರೇ ಶೂ ಮತ್ತು ಚಪ್ಪಲಿಯನ್ನು ಸರಿಯಾಗಿ ಜೋಡಿಸುತ್ತಾರೆ. ಚಪ್ಪಲಿ ಅಥವಾ ಶೂ ಮನೆಯೊಳಗೆ ಉಲ್ಟಾ ಬಿದ್ದಿದ್ದರೆ ಅದು ಅಶುಭ ಎಂದು ನಂಬಲಾಗಿದೆ.
ಅರೇ ಚಪ್ಪಲಿ, ಶೂ ಉಲ್ಟಾ ಬಿಳೋದಕ್ಕೂ ಮನೆಗೆ ಅಶುಭ ಆಗುವುದಕ್ಕೂ ಏನು ಸಂಬಂಧ ಅಂತಾ ನಿಮಗಿದು ವಿಚಿತ್ರವಾಗಿ ಕಾಣಿಸಬಹುದು, ಆದರೆ ಅದಕ್ಕೂ ಧಾರ್ಮಿಕ ಕಾರಣವಿದೆ. ನಮ್ಮ ಅಜ್ಜಿಯರು ತಮ್ಮ ಚಪ್ಪಲಿಯನ್ನು ತಲೆಕೆಳಗಾಗಿ ನೋಡಿದಾಗ ಏಕೆ ವಿರೋಧಿಸುತ್ತಾರೆ ಎಂಬುದನ್ನು ಧಾರ್ಮಿಕ ದೃಷ್ಟಿಕೋನದಿಂದ ತಿಳಿಯೋಣ.