ಆಡಿಯೊ, ಹೋಮ್ ಥಿಯೇಟರ್, ಗೇಮಿಂಗ್ ಕ್ಯಾಬಿನೆಟ್ಸ್ ಇತ್ಯಾದಿ ಎಲೆಕ್ಟ್ರಾನಿಕ್ಸ್ ವಸ್ತುಗಳ ಮೂಲಕ ಜನಪ್ರಿಯವಾಗಿರುವ ಜೆಬ್ರಾನಿಕ್ಸ್ ಕಂಪನಿಯ ಭಾರತೀಯ ಮಾರುಕಟ್ಟೆಗೆ ಝೆಬ್ ಫಿಟ್2220ಸಿಎಚ್ ಸ್ಮಾರ್ಟ್ ಫಿಟ್ನೆಸ್ ಬ್ಯಾಂಡ್ ಬಿಡುಗಡೆ ಮಾಡಿದೆ. ಈ ಫಿಟ್ನೆಸ್ ಬ್ಯಾಂಡ್ ಹಲವು ವಿಶೇಷ ಫೀಚರ್‌ಗಳನ್ನು ಹೊಂದಿದ್ದು, ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ದೊರೆಯಲಿದೆ.
ಆಡಿಯೋ, ಸೌಂಡ್‌ಬಾರ್, ಹೋಮ್ ಥಿಯೇಟರ್, ಹೆಡ್‌ಫೋನ್ಸ್, ಇಯರ್ ಫೋನ್ಸ್, ಗೇಮಿಂಗ್ ಕ್ಯಾಬಿನೆಟ್ಸ್ ಇತ್ಯಾದಿ ಎಲೆಕ್ಟ್ರಾನಿಕ್ ವಸ್ತುಗಳ ಮೂಲಕ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನವನ್ನು ಮಾಡಿಕೊಂಡಿಕೊಂಡಿರುವ ಜೆಬ್ರಾನಿಕ್ಸ್ ಹೊಸ ಫಿಟ್ನೆಸ್ ಬ್ಯಾಂಡ್ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಅನ್‌ಲಿಮಿಟೆಡ್ ಡೇಟಾ, ಕಾಲ್ ಸೇವೆ ಒದಗಿಸುವ STV ಪ್ಲ್ಯಾನ್ ವಿಸ್ತರಿಸಿದ BSNL
undefined
ಸ್ಮಾರ್ಟ್‌ವಾಚ್‌ನಂತೆ ಕಾಣುವ ಜೆಬ್ರಾನಿಕ್ಸ್ ಝೆಬ್-ಫಿಟ್2220ಸಿಎಚ್ ಫಿಟ್ನೆಸ್ ಬ್ಯಾಂಡ್ ಇದೀಗ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾದ ಹೊಸ ಫಿಟ್ನೆಸ್ ಬ್ಯಾಂಡ್ ಆಗಿದೆ. ಈ ಜೆಬ್ರಾನಿಕ್ಸ್ ಝೆಬ್-ಫಿಟ್ 2220 ಸಿಎಚ್ ಫಿಟ್ನೆಸ್ ಬ್ಯಾಂಡ್ ಹಲವು ವಿಶಿಷ್ಟ ಮತ್ತು ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡಿದೆ.
ಬ್ಲಡ್ ಪ್ರೆಶರ್ ಮಾನಿಟರ್, ಹಾರ್ಟ್ ರೇಟ್ ಸೆನ್ಸರ್, ಬ್ಲಡ್ ಆಕ್ಸಿಜನ್ ಸ್ಯಾಚುರೇಷನ್ ಮಾನಿಟರ್ ಮಾಡುವ ಎಸ್‌ಪಿಒ2 ಸೇರಿದಂತೆ ಇನ್ನಿತರ ಫೀಚರ್‌ಗಳು ಈ ಹೊಸ ಜೆಬ್ರಾನಿಕ್ಸ್ ಝೆಬ್ ಫಿಟ್2220ಸಿಎಚ್ ಫಿಟ್ನೆಸ್ ಬ್ಯಾಂಡ್ ಒಳಗೊಂಡಿದೆ. ಈ ಸ್ಮಾರ್ಟ್ ಬ್ಯಾಂಡ್ 2.5 ಡಿ ಕರ್ವ್ಡ್ ಗ್ಲಾಸ್‌ನ 3.3ಸಿಎಂ ಟಿಎಫ್‌ಟಿ ಟಚ್ ಕಲರ್ ಡಿಸ್‌ಪ್ಲೇ ಅನ್ನು ಒಳಗೊಂಡಿದೆ. ವೃತ್ತಾಕಾರದ ಡಯಲ್ ಹೊಂದಿರುವ ಈ ಬ್ಯಾಂಡ್‌ನಲ್ಲಿ ಸುಮಾರು 100 ಕಸ್ಟಮೈಸೇಬಲ್ ವಾಚ್ ಫೇಸ್‌ಗಳಿವೆ. ಈ ಫಿಟ್ನೆಸ್ ಟ್ರ್ಯಾಕರ್ ಬ್ಯಾಂಡ್ ಐಪಿ68 ರೇಟಿಂಗ್ ಇರುವ ಧೂಳು ಮತ್ತು ನೀರು ನಿರೋಧಕ ವ್ಯವಸ್ಥೆಯನ್ನು ಹೊಂದಿದೆ. ಜತೆಗೆ ಬಳಕೆದಾರರು ಈ ಜೆಬ್ರಾನಿಕ್ಸ್ ಝೆಬ್-ಫಿಟ್ 2220ಸಿಎಚ್ ಬ್ಯಾಂಡ್ ಅನ್ನು ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳಿಗೆ ಹೊಂದಾಣಿಕೆ ಮಾಡಬಹುದು.
ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಜೆಬ್ರಾನಿಕ್ಸ್ ಝೆಬ್ ಫಿಟ್2220ಸಿಎಚ್ ಸ್ಮಾರ್ಟ್ ಬಾಂಡ್ ತುಂಬಾ ತುಟ್ಟಿಯಾಗೇನೂ ಇಲ್ಲ. ಕೈಗೆಟುಕುವ ದರದಲ್ಲಿ ಇದೆ. ಕಂಪನಿಯು ಈ ಸ್ಮಾರ್ಟ್ ಬ್ಯಾಂಡ್ ಅನ್ನು 2,999 ರೂಪಾಯಿಗೆ ಮಾರಾಟ ಮಾಡುತ್ತಿದೆ.
ಜೆಬ್ರಾನಿಕ್ಸ್ ಝೆಬ್ ಫಿಟ್ 2220ಸಿಎಚ್ ಫಿಟ್ ಬ್ಯಾಂಡ್ ಮೂರು ವಿಭಿನ್ನ ಮಾದರಿಯ ಬಣ್ಣಗಳಲ್ಲಿ ಬಳಕೆದಾರರಿಗೆ ಸಿಗಲಿದೆ. ಬ್ಲ್ಯಾಕ್ ಕೇಸ್, ಬ್ಲ್ಯಾಕ್ ಸ್ಟ್ರಾಪ್, ಗೋಲ್ಡ್ ಕೇಸ್ ಮತ್ತು ರೋಸ್ ಗೋಲ್ಟ್ ಸ್ಟ್ರ್ಯಾಪ್ ಮತ್ತು ಸಿಲ್ವರ್ ಕೇಸ್ ಮತ್ತು ಕೆಡೆಟ್ ಗ್ರೇ ಸ್ಟ್ರ್ಯಾಪ್‌ಗಳಲ್ಲಿ ಈ ಫಿಟ್ ಬ್ಯಾಂಡ್ ಮಾರಾಟಕ್ಕೆ ಸಿಗಲಿದೆ. ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಈ ಸ್ಮಾರ್ಟ್ ಬ್ಯಾಂಡ್ ಮಾರಾಟವಾಗಲಿದೆ.
6000 mAh ಬ್ಯಾಟರಿಯ ಟೆಕ್ನೋ ಸ್ಪಾರ್ಕ್ 7 ಸ್ಮಾರ್ಟ್ ಫೋನ್ ಬಿಡುಗಡೆ
ಜೆಬ್ರಾನಿಕ್ಸ್ ಝೆಬ್ ಫಿಟ್2220ಸಿಎಚ್ ಸ್ಮಾರ್ಟ್ ಬ್ಯಾಂಡ್ ಟಿಎಫ್‌ಟಿ ಟಚ್ ಕಲರ್, 3.3ಸಿಎಂ ವೃತ್ತಾಕಾರದ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಈಗಾಗಲೇ ಹೇಳಿದಂತೆ ಈ ಸ್ಮಾರ್ಟ್ ಬ್ಯಾಂಡ್‌ನಲ್ಲಿ ನೀವು ಸುಮಾರು 100 ವಾಚ್ ಫೇಸ್‌ಗಳನ್ನು ಕಾಣಬಹುದು.
ಇಲ್ಲಿ ಗಮನಿಸಬಹುದಾದ ಮತ್ತೊಂದು ಫೀಚರ್ ಎಂದರೆ, ಈ ಜೆಬ್ರಾನಿಕ್ಸ್ ಝೆಬ್ ಫಿಟ್2220ಸಿಎಚ್ ಸ್ಮಾರ್ಟ ಬ್ಯಾಂಡ್ ಎಂಟು ಸ್ಪೋರ್ಟ್ಸ್ ಮೋಡ್‌ಗಳನ್ನು ಹೊಂದಿದೆ. ಬ್ಯಾಡ್ಮಿಂಟನ್, ಬಾಸ್ಕೆಟ್‌ಬಾಲ್, ಸೈಕ್ಲಿಂಗ್, ಫುಟ್ಬಾಲ್, ರನ್ನಿಂಗ್ , ಸ್ಕಿಪ್ಪಿಂಗ್ ಮತ್ತು ಸ್ವಿಮ್ಮಿಂಗ್ ಮತ್ತು ವಾಕಿಂಗ್ ಸೇರಿದಂತೆ 8 ಸ್ಪೋರ್ಟ್ಸ್ ಮೋಡ್‌ಗಳನ್ನು ಬಳಕೆದಾರರು ಈ ಸ್ಮಾರ್ಟ್ ಬ್ಯಾಂಡ್‌ಲ್ಲಿ ಕಾಣಬಹುದಾಗಿದೆ.
ಇಷ್ಟು ಮಾತ್ರವಲ್ಲದೇ ಈ ಜೆಬ್ರಾನಿಕ್ಸ್ ಝೆಬ್ ಫಿಟ್2220ಸಿಎಚ್ ಫಿಟ್ನೆಸ್ ಬ್ಯಾಂಡ್ ಹಲವು ಟಾಸ್ಕ್‌ಗಳನ್ನು ಟ್ರ್ಯಾಕ್ ಮಾಡುತ್ತದೆ. ಸ್ಲೀಪ್, ಸ್ಟೆಪ್ಸ್, ಕ್ಯಾಲೋರಿಸ್ ಬರ್ನಂಟ್ ಮತ್ತು ಡಿಸ್ಟೆನ್ಸ್ ಸೇರಿದಂತೆ ಹಲವು ಟಾಸ್ಕ್‌ಗಳನ್ನು ಟ್ರ್ಯಾಕ್ ಮಾಡುತ್ತದೆ. ಈ ಸ್ಮಾರ್ಟ್ ಬ್ಯಾಂಡ್ ಇನ್ನೂ ಒಂದು ವಿಶೇಷ ಎಂದರೆ, ಕಾಲರ್ ಐಡಿ ಮತ್ತು ಕಾಲ್ ರಿಜೆಕ್ಟ್ ಫೀಚರ್‌ಗಳನ್ನೂ ಹೊಂದಿದೆ. ಜತೆಗೆ ಬಳೆಕೆದಾರರು, ಫಿಟ್ನೆಸ್ ಬ್ಯಾಂಡ್ ತಮ್ಮ ಸ್ಮಾರ್ಟ್‌ಫೋನ್‌ನೊಂದಿಗೆ ಪೇರ್ಡ್ ಮಾಡಿಕೊಂಡ ಮೇಲೆ, ಈ ಬ್ಯಾಂಡ್‌ನಿಂದಲೇ ಮ್ಯೂಸಿಕ್ ಮತ್ತು ಕ್ಯಾಮೆರಾವನ್ನು ನಿರ್ವಹಣೆ ಮಾಡಬಹುದು. ಅಂಥದೊಂದು ಅವಕಾಶವನ್ನು ಈ ಜೆಬ್ರಾನಿಕ್ಸ್ ಸ್ಮಾರ್ಟ್ ಬ್ಯಾಂಡ್ ನಿಮಗೆ ಕಲ್ಪಿಸಿಕೊಡುತ್ತದೆ.
ಈ ಜೆಬ್ರಾನಿಕ್ಸ್ ಕಂಪನಿಯ ಹೊಸ ಫಿಟ್ನೆಸ್ ಬ್ಯಾಂಡ್ ಬ್ಲೂಟೂಥ್ 5.0ನೊಂದಿಗೆ ಬರುತ್ತದೆ. ಇದರಲ್ಲಿ 200ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಇರುತ್ತದೆ. ಈ ಬ್ಯಾಟರಿಯನ್ನು ನೀವು ಒಮ್ಮೆ ಚಾರ್ಜ್ ಮಾಡಿದರೆ, 30 ದಿನಗಳವರೆಗೆ ಸ್ಟ್ಯಾಂಡ್ ಬೈ ಬರುತ್ತದೆ.
ಭಾರೀ ನಿರೀಕ್ಷೆಯ ಗೂಗಲ್ ಪಿಕ್ಸೆಲ್ 6 ಸ್ಮಾರ್ಟ್‌ಫೋನ್ ಯಾವಾಗ ರಿಲೀಸ್?