ರಿಪಬ್ಲಿಕ್ ಡೇ ಆಫರ್ ಘೋಷಿಸಿದ ಥಾಮ್ಸನ್ ಟಿವಿ; ಕೊಡುಗೆ ಕೆಲ ದಿನ ಮಾತ್ರ!

By Suvarna News  |  First Published Jan 18, 2021, 10:16 PM IST

ಥಾಮ್ಸನ್ ಟಿ.ವಿ.ಯಿಂದ ಉತ್ಸಾಹದ 2021ರಹೊಸ ವರ್ಷಕ್ಕೆ ಚಾಲನೆ·  ಭಾರತದ ಪ್ರಪ್ರಥಮ ಆಂಡ್ರಾಯಿಡ್‍ಟಿ.ವಿ.ಗಳಾದ 42” ಪಾಥ್ ರೂ.19,999ಕ್ಕೆ ಬಿಡುಗಡೆ ಮತ್ತು 43” 43” ಫ್ರೇಮ್‍ಲೆಸ್‍ಪ್ರೀಮಿಯಂ ಪಾಥ್ ಸರಣಿ ರೂ.22,499ಕ್ಕೆ ಮಾತ್ರ  ರಿಪಬ್ಲಿಕ್ ದಿನದಮಾರಾಟ ಜನವರಿ 20ರಿಂದ 24ರವರೆಗೆ ಫ್ಲಿಪ್‍ಕಾರ್ಟ್‍ನಲ್ಲಿ ಮಾತ್ರ .
 


ಬೆಂಗಳೂರು(ಜ.18): ಅತ್ಯಂತಕೈಗೆಟುಕುವ ದರಗಳಲ್ಲಿ ಅತ್ಯುತ್ತಮ ತಂತ್ರಜ್ಞಾನವನ್ನು ಪೂರೈಸುವ ತನ್ನಬದ್ಧತೆಗೆ ಅನುಗುಣವಾಗಿ ಯೂರೋಪ್‍ನ ಮುಂಚೂಣಿಯ ಗ್ರಾಹಕ ಬ್ರಾಂಡ್ ಥಾಮ್ಸನ್ 2021ರಹೊಸ ವರ್ಷಕ್ಕೆ ಅದ್ಧೂರಿಯಾಗಿ ಚಾಲನೆ ನೀಡಿದೆ. ಮತ್ತೊಮ್ಮೆ ಈ ಬ್ರಾಂಡ್ ತನ್ನ ಹಿಂದೆಂದೂಕಾಣದ ಕೊಡುಗೆಗಳ ಮೂಲಕ ಆನ್‍ಲೈನ್ ಕೊಳ್ಳುಗರಿಗೆ ಸಂತೋಷ ನೀಡಲಿದೆ. ಇದುಪಿಎಟಿಎಚ್ ಸೀರೀಸ್ ಅಡಿಯಲ್ಲಿ ಆಂಡ್ರಾಯಿಡ್ ಟಿ.ವಿ.ಯನನು 42” ಮತ್ತು 43” ಅಳತೆಗಳಲ್ಲಿಬಿಡುಗಡೆ ಮಾಡಲು ಸಜ್ಜಾಗಿದೆ. ಈ ಟಿ.ವಿ.ಗಳು ಜನವರಿ 2ರಿಂದ ಜನವರಿ 24ರವರೆಗೆಫ್ಲಿಪ್‍ಕಾರ್ಟ್‍ನಲ್ಲಿ ಮಾತ್ರ ನಡೆಯುವ ರಿಪಬ್ಲಿಕ್ ದಿನದ ಮಾರಾಟದಲ್ಲಿ ರೂ.19,999/-ರವಿಶೇಷ ದರಗಳಲ್ಲಿ ಲಭ್ಯವಿದೆ! ಅದ್ಭುತ ವಿಶೇಷತೆಗಳೊಂದಿಗೆ ಬಂದಿರುವ ಈ ಮಾದರಿಗಳು ಈ ವಿಭಾಗದಲ್ಲಿಯಾವುದೇ ಪ್ರತಿಸ್ಪರ್ಧಿ ಬ್ರಾಂಡ್‍ಗಳು ಒದಗಿಸುತ್ತಿಲ್ಲ. ವಾಯ್ಸ್ ಕಂಟ್ರೋಲ್ ಗೂಗಲ್‍ಅಸಿಸ್ಟೆಂಟ್, ಪ್ರೈಮ್, ಯೂಟ್ಯೂಬ್ ಮತ್ತು ಸೋನಿಲಿವ್‍ಗೆ ವಿಶೇಷ ಗುಂಡಿಗಳು, ಎರಡೂಮಾದರಿಗಳು ವಿದ್ಯುತ್ ಕ್ಷಮತೆಯಲ್ಲಿ ಲೆವೆಲ್ 5 ಮತ್ತು ನೀಡಲಾದ ಬೆಲೆಯಲ್ಲಿಮಹತ್ತರ ಲಾಭವಾಗಿದೆ. 43 ಪಾಥ್ 40 ವ್ಯಾಟ್‍ಗಳ ಸೌಂಡ್ ಔಟ್‍ಪುಟ್ ಹೊಂದಿದ್ದು ಇದು ಈವರ್ಗದಲ್ಲಿ ಅತ್ಯುತ್ತಮವಾಗಿದೆ.  

ಜಾಗತಿಕವಾಗಿ ಕೈಗೆಟುಕುವ ಬೆಲೆಗಳಲ್ಲಿ ತನ್ನ `ಸ್ನೇಹಿ ತಂತ್ರಜ್ಞಾನ’ಕ್ಕೆಹೆಸರಾದ ಥಾಮ್ಸನ್ 3 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಯಶಸ್ವಿಯಾಗಿದೆ ಮತ್ತುಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮತ್ತು ಮುಂಚೂಣಿಯಲ್ಲಿರುವ ಟಾಪ್3 ಆನ್‍ಲೈನ್ ಮಾರಾಟದ ಸ್ಮಾರ್ಟ್ ಟಿ.ವಿ.ಬ್ರಾಂಡ್‍ಗಳಲ್ಲಿ ಒಂದಾಗಿದೆ. ಮಹತ್ತರ ರಿವ್ಯೂಗಳು,ಉನ್ನತ ಬ್ರಾಂಡ್ ಈಕ್ವಿಟಿ ಮತ್ತು ಗ್ರಾಹಕರ ಸಂತೃಪ್ತಿ ಹೊಂದಿದ ಇದು ತನ್ನ ವರ್ಗಗಳಲ್ಲಿಸತತವಾಗಿ ಸಾಧನೆಯನ್ನು ಮೀರಿದೆ.  ಈ ಬಿಡುಗಡೆಕುರಿತು ಭಾರತದಲ್ಲಿ ಥಾಮ್ಸನ್ ಟಿ.ವಿ.ಯ ವಿಶೇಷ ಬ್ರಾಂಡ್ ಲೈಸೆನ್ಸೀಯಾದ ಎಸ್‍ಪಿಪಿಎಲ್‍ನಸಿಇಒ ಶ್ರೀ ಅವ್‍ನೀತ್ ಸಿಂಗ್ ಮಾರ್ವಾ,“ಕಳೆದ ವರ್ಷ ನಮಗೆಲ್ಲರಿಗೂ ಅತ್ಯಂತ ಬದಲಾವಣೆ ಹಾಗೂ ಸವಾಲಿನದಾಗಿತ್ತು.

Tap to resize

Latest Videos

 ಕಳೆದವರ್ಷದಲ್ಲಿ ಕಲಿತ ಒಂದು ಪ್ರಮುಖ ಪಾಠವೆಂದರೆ ನಮ್ಮ ಪ್ರೀತಿಪಾತ್ರರೊಂದಿಗೆ ನಮ್ಮಬಾಂಧವ್ಯಗಳಿಗೆ ಮೌಲ್ಯ ಹಾಗೂ ಗೌರವ ಸಲ್ಲಿಸುವುವುದು. ಗ್ರಾಹಕರು ಸದಾ ಥಾಮ್ಸನ್‍ಗೆಅತ್ಯಂತ ಮೌಲ್ಯಯುತ ಮಿತ್ರರಾಗಿದ್ದಾರೆ ಮತ್ತು ನಾವು ಈ ವರ್ಷದ ಪ್ರಾರಂಭವನ್ನುಎರಡು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಮೂಲಕ ಸಂಭ್ರಮಿಸಲುಬಯಸುತ್ತಿದ್ದೇವೆ. ನಾವು ಭಾರತದ ಏಕೈಕ 42” ಆಂಡ್ರಾಯಿಡ್ ಟಿ.ವಿ.ಯನ್ನು ಬಿಡುಗಡೆಮಾಡುತ್ತಿದ್ದು ಈ ಹೊಸ ಉತ್ಪನ್ನಗಳೊಂದಿಗೆ ನಾವು ಅತ್ಯಂತ  ಕೈಗೆಟುಕುವ ದರಗಳಲ್ಲಿ ಅತ್ಯುತ್ತಮಉತ್ಪನ್ನಗಳನ್ನು ಒದಗಿಸುವುದನ್ನು ಮುಂದುವರಿಸುತ್ತೇವೆ” ಎಂದರು.
 

click me!