Galaxy S25 FE: ಅಮೆಜಾನ್‌ನಲ್ಲಿ 14,000 ರೂ. ಡಿಸ್ಕೌಂಟ್! ಈ ಸೂಪರ್ ಡೀಲ್ ಮಿಸ್ ಮಾಡ್ಕೋಬೇಡಿ

Published : May 27, 2026, 01:14 PM IST
Samsung Galaxy S25 FE

ಸಾರಾಂಶ

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 FE ಸ್ಮಾರ್ಟ್‌ಫೋನ್ ಈಗ ಅಮೆಜಾನ್‌ನಲ್ಲಿ ಭರ್ಜರಿ ರಿಯಾಯಿತಿಯೊಂದಿಗೆ ಲಭ್ಯವಿದೆ. ಸುಮಾರು 14,000 ರೂ.ಗಳಷ್ಟು ಡಿಸ್ಕೌಂಟ್ ಸಿಗುತ್ತಿದ್ದು, ಪ್ರೀಮಿಯಂ ಫೀಚರ್‌ಗಳನ್ನು ಹೊಂದಿರುವ ಈ ಫೋನ್ 50,000 ರೂ. ಒಳಗಿನ ಅತ್ಯುತ್ತಮ ಆಯ್ಕೆಯಾಗಿದೆ.

ಬೆಂಗಳೂರು: 50,000 ರೂಪಾಯಿ ಒಳಗಿನ ಒಂದು ಒಳ್ಳೆ ಆಲ್‌ರೌಂಡರ್ ಫೋನ್ ಹುಡುಕುತ್ತಿರೋರಿಗೆ ಸ್ಯಾಮ್‌ಸಂಗ್ ಒಂದು ಸಖತ್ ಆಫರ್ ತಂದಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪ್ರೀಮಿಯಂ ಫೀಚರ್‌ಗಳು ಮತ್ತು ಗ್ಯಾಲಕ್ಸಿ AI ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಬಂದಿದ್ದ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 FE ಫೋನ್‌ಗೆ ಈಗ ಅಮೆಜಾನ್‌ನಲ್ಲಿ ಭರ್ಜರಿ ಡಿಸ್ಕೌಂಟ್ ಸಿಗುತ್ತಿದೆ. ಸುಮಾರು 14,000 ರೂಪಾಯಿವರೆಗೆ ರಿಯಾಯಿತಿ ಸಿಗುತ್ತಿರುವುದರಿಂದ, ಮಿಡ್-ಪ್ರೀಮಿಯಂ ಸೆಗ್ಮೆಂಟ್‌ನಲ್ಲಿ ಹೊಸ ಫೋನ್ ಖರೀದಿಸಲು ಪ್ಲಾನ್ ಮಾಡುತ್ತಿರುವವರಿಗೆ ಇದು ಒಂದು ಅದ್ಭುತ ಅವಕಾಶವಾಗಿದೆ.

S25 FE ಫೋನ್ ಲಾಂಚ್ ಆದಾಗ ಬೆಲೆ ಎಷ್ಟಿತ್ತು?

ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 FE ಫೋನ್ ಲಾಂಚ್ ಆದಾಗ ಅದರ ಆರಂಭಿಕ ಬೆಲೆ 59,999 ರೂ. ಇತ್ತು. ಆದರೆ, ಈಗ ಅಮೆಜಾನ್‌ನಲ್ಲಿ ಇದು ಕೇವಲ 48,355 ರೂಪಾಯಿಗೆ ಸಿಗುತ್ತಿದೆ. ಅಂದರೆ, ಗ್ರಾಹಕರಿಗೆ ನೇರವಾಗಿ 11,644 ರೂಪಾಯಿ ರಿಯಾಯಿತಿ ಸಿಕ್ಕಂತಾಯ್ತು. ಅಷ್ಟೇ ಅಲ್ಲ, ಅಮೆಜಾನ್ ಪೇ ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಪಾವತಿ ಮಾಡಿದರೆ ಇನ್ನೂ 2,417 ರೂಪಾಯಿ ಹೆಚ್ಚುವರಿ ಡಿಸ್ಕೌಂಟ್ ಕೂಡ ಸಿಗಲಿದೆ. ನಿಮ್ಮ ಹಳೆ ಸ್ಮಾರ್ಟ್‌ಫೋನ್ ಎಕ್ಸ್‌ಚೇಂಜ್ ಮಾಡಿದರೆ ಬೆಲೆ ಮತ್ತಷ್ಟು ಕಡಿಮೆ ಆಗಲಿದೆ.

ಫೀಚರ್ಸ್ ವಿಚಾರದಲ್ಲೂ ಗ್ಯಾಲಕ್ಸಿ S25 FE ಕಮ್ಮಿ ಏನಿಲ್ಲ. ಈ ಫೋನ್ 6.7 ಇಂಚಿನ HD+ ಅಮೋಲೆಡ್ ಡಿಸ್‌ಪ್ಲೇ, 120Hz ರಿಫ್ರೆಶ್ ರೇಟ್ ಮತ್ತು 1,900 ನಿಟ್ಸ್ ಬ್ರೈಟ್‌ನೆಸ್ ಹೊಂದಿದೆ. ಸ್ಕ್ರೀನ್ ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ಲಸ್ ಮತ್ತು ಧೂಳು-ನೀರಿನಿಂದ ರಕ್ಷಣೆಗಾಗಿ IP68 ರೇಟಿಂಗ್ ಕೂಡ ಇದೆ. ಈ ಫೋನ್ ಎಕ್ಸಿನೋಸ್ 2400 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಇದರಲ್ಲಿ 4,900mAh ಬ್ಯಾಟರಿ ಇದ್ದು, 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ.

ಕ್ಯಾಮೆರಾ ಫೀಚರ್ಸ್‌ ಹೇಗಿದೆ?

ಕ್ಯಾಮೆರಾ ವಿಷಯದಲ್ಲೂ ಸ್ಯಾಮ್‌ಸಂಗ್ ಹಿಂದೆ ಬಿದ್ದಿಲ್ಲ. ಫೋನ್‌ನ ಹಿಂಭಾಗದಲ್ಲಿ 50MP ಮುಖ್ಯ ಕ್ಯಾಮೆರಾ, 12MP ಅಲ್ಟ್ರಾವೈಡ್ ಲೆನ್ಸ್ ಮತ್ತು 3x ಜೂಮ್ ಸೌಲಭ್ಯವಿರುವ 8MP ಟೆಲಿಫೋಟೋ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಳಿಗಾಗಿ 12MP ಫ್ರಂಟ್ ಕ್ಯಾಮೆರಾವನ್ನು ನೀಡಲಾಗಿದೆ. ದೀರ್ಘಕಾಲದ ಸಾಫ್ಟ್‌ವೇರ್ ಅಪ್‌ಡೇಟ್‌ಗಳು, ಪ್ರೀಮಿಯಂ ಡಿಸೈನ್ ಮತ್ತು AI ಫೀಚರ್‌ಗಳಿಗೆ ಹೆಚ್ಚು ಆದ್ಯತೆ ಕೊಡುವವರಿಗೆ ಈ ಬೆಲೆಯಲ್ಲಿ ಗ್ಯಾಲಕ್ಸಿ S25 FE ಒಂದು ಅತ್ಯುತ್ತಮ ಡೀಲ್ ಆಗಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

iPhone 18 Pro ಹೊಸ ಅಧ್ಯಾಯ: ಹೊಸ ಬಣ್ಣ, ಪವರ್‌ಫುಲ್ ಚಿಪ್, ಬೆಸ್ಟ್ ಕ್ಯಾಮೆರಾ! ಭಾರತದಲ್ಲಿ ಬೆಲೆ ಎಷ್ಟು?
ಕೇವಲ ₹30,000ಕ್ಕೆ 200MP ಕ್ಯಾಮೆರಾ ಫೋನ್! ಫೋಟೋ, ವಿಡಿಯೋಗೆ ಲೈಕ್ಸ್ ಸುರಿಮಳೆ ಗ್ಯಾರಂಟಿ!