ಸ್ಯಾಮ್‌ಸಂಗ್‌ನ ಮೊದಲ QD-OLED ಟಿವಿ ಘೋಷಣೆ, ಬೆಲೆ ಎಷ್ಟು? ಏನೆಲ್ಲಾ ವಿಶೇಷತಗಳಿವೆ?

By Suvarna News  |  First Published Mar 18, 2022, 1:05 PM IST

ಸ್ಯಾಮ್‌ಸಂಗ್ ತನ್ನ 2022ರ ಶ್ರೇಣಿಯ ಹೊಸ ಸ್ಮಾರ್ಟ್‌ಟಿವಿಗಾಗಿ ಅಧಿಕೃತವಾಗಿ ಪ್ರಿ ಆರ್ಡರ್‌ಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಘೋಷಿಸಿದೆ
 


Tech Desk: ವಿಶ್ವದ ಅತಿದೊಡ್ಡ ಟೆಕ್ ಶೋ ಸಿಇಎಸ್ 2022ರಲ್ಲಿ ಘೋಷಿಸಲಾದ ಎಲ್ಲಾ ಹೊಸ ಟಿವಿಗಳು ಗ್ರಾಹಕರಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿವೆ. ಇಂದು, ಸ್ಯಾಮ್‌ಸಂಗ್ ತನ್ನ 2022ರ ಶ್ರೇಣಿಯ ಹೊಸ ಸ್ಮಾರ್ಟ್‌ಟಿವಿಗಾಗಿ ಅಧಿಕೃತವಾಗಿ ಪ್ರಿ ಆರ್ಡರ್‌ಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಘೋಷಿಸಿದೆ. ಮತ್ತು ಮೊದಲ ಬಾರಿಗೆ ಕಂಪನಿಯು ಬಹು ದಿನಗಳಿಂದ ಚರ್ಚಿಸಲ್ಪಟ್ಟ  QD-OLED ಗ್ರಾಹಕ ಟಿವಿಯ ಪೂರ್ಣ ವಿವರಗಳು ಮತ್ತು ಬೆಲೆಗಳನ್ನು ಹಂಚಿಕೊಂಡಿದ್ದು, ಇದನ್ನು ಈಗ ಅಧಿಕೃತವಾಗಿ S95B ಎಂದು ಕರೆದಿದೆ. 

S95B 4K QD-OLED ಸೆಟ್ ಆಗಿದ್ದು ಅದು ಎರಡು ಗಾತ್ರಗಳಲ್ಲಿ ಬರುತ್ತದೆ, 55-ಇಂಚಿನ ಮಾದರಿಗೆ $2,399.99 (ಸರಿಸುಮಾರು 1,82,000) ಬೆಲೆ ನಿಗದಿಪಡಿಸಲಾಗಿದ್ದು  65ಇಂಚಿನ ಮಾದರಿ $3,499.99 (ಸರಿಸುಮಾರು 2,66,000)  ಬೆಲೆಯಲ್ಲಿ ಲಭ್ಯವಿರಲಿದೆ. ಅಮೆಝಾನ್ ಈಗಾಗಲೇ ಎರಡೂ ಗಾತ್ರಗಳಲ್ಲಿ ರಿಯಾಯಿತಿಗಳನ್ನು ನೀಡುತ್ತಿದೆ. ಪ್ರಮಾಣಿತ LG OLED ಟಿವಿಯ ಬೆಲೆಗಿಂತ ಗಮನಾರ್ಹವಾಗಿ ಸ್ಯಾಮ್‌ಸಂಗ್ ಬೆಲೆಗಳು ಹೆಚ್ಚಿದೆ. 

Tap to resize

Latest Videos

ಇದನ್ನೂ ಓದಿOnePlus TV Y1S, Y1S Edge ಡೇಟಾ ಸೇವರ್ ಮೋಡ್‌, ಬೆಜೆಲ್ ಲೆಸ್ ಡಿಸ್ಪ್ಲೇಗಳೊಂದಿಗೆ ಭಾರತದಲ್ಲಿ ಬಿಡುಗಡೆ!

ಆದರೆ ಸ್ಯಾಮ್‌ ಸಂಗ್‌ ಡಿಸ್ಪ್ಲೇ  QD-OLED ಪ್ಯಾನೆಲ್ ಹೊಳಪಿನ ಮಟ್ಟದಲ್ಲಿ ಉತ್ತಮವಾದ ಬಣ್ಣದ ನಿಖರತೆಯನ್ನು ನೀಡುತ್ತದೆ ಹಾಗೂ ಸಾಮಾನ್ಯಕ್ಕಿಂತ ಉತ್ತಮವಾದ ವಿವೀಂಗ್‌ ಆಂಗಲ್ ನೀಡುತ್ತದೆ. . Samsung QD-OLED ಡಿಸ್ಪ್ಲೇಯನ್ನು ಬಳಸಿಕೊಂಡು ಸೋನಿ ತನ್ನದೇ ಆದ ಟಿವಿಗಳನ್ನು ಸಹ ಘೋಷಿಸಿದೆ.

ಸ್ಯಾಮ್‌ಸಂಗ್‌ನ OLED ಅದರ ಇತರ 2022 ಫ್ಲ್ಯಾಗ್‌ಶಿಪ್‌ಗಳಂತೆಯೇ ಅದೇ ನ್ಯೂರಲ್ ಕ್ವಾಂಟಮ್ ಪ್ರೊಸೆಸರ್ 4K, ಅದೇ ಟೈಜೆನ್ ಸಾಫ್ಟ್‌ವೇರ್ ಮತ್ತು ಡಾಲ್ಬಿ ಅಟ್ಮಾಸ್‌ನೊಂದಿಗೆ ಉನ್ನತ-ಮಟ್ಟದ ಕ್ಯೂ-ಸಿಂಫನಿ ಧ್ವನಿಯನ್ನು ಹೊಂದಿದೆ. ಕಂಪನಿಯು "ಒಂದು OLED ಬ್ರೈಟ್‌ನೆಸ್ ಬೂಸ್ಟರ್ ಮತ್ತು ಪ್ರಖರವಾದ, ಹೆಚ್ಚು ನಿಖರವಾದ ಹೈಲೈಟ್ಸ್ ಮತ್ತು ಅತ್ಯಂತ ವಾಸ್ತವಿಕ ಮತ್ತಯ ಉತ್ತಮ ಬಣ್ಣಗಳನ್ನು ನೀಡಲು  ಕಲರ್ ಮ್ಯಾಪಿಂಗನ್ನು" ಕೂಡ ಉಲ್ಲೇಖಿಸುತ್ತದೆ.

ಅದರ ಉಳಿದ ಶ್ರೇಣಿಗೆ ಸಂಬಂಧಿಸಿದಂತೆ, ಸ್ಯಾಮ್‌ಸಂಗ್ ತನ್ನ ನಿಯೋ QLED 8K ಮತ್ತು 4K ಮಿನಿ LED ಟಿವಿಗಳನ್ನು  ಈ ವರ್ಷ  144Hz ವರೆಗಿನ ವೇರಿಯಬಲ್ ರಿಫ್ರೆಶ್ ದರಗಳಿಗೆ ಬೆಂಬಲ, 14-ಬಿಟ್ ಪ್ರೊಸೆಸಿಂಗ್ ಮತ್ತು ಸುಧಾರಿತ ಆಂಟಿ-ರಿಫ್ಲೆಕ್ಟಿವ್ ಲೇಯರ್ ಬೆಂಬಲದೊಂದಿಗೆ  ಸಾಫ್ಟ್‌ವೇರ್ ಅಪ್ಡೇಟ್‌ನೊಂದಿಗೆ ನವೀಕರಿಸುತ್ತಿದೆ.

ಇದನ್ನೂ ಓದಿSamsung India Guinness Record: ಗಿನ್ನೆಸ್ ರೆಕಾರ್ಡ್ ಸೇರಿದ ಸ್ಯಾಮ್ಸಂಗ್, ಏನದು ದಾಖಲೆ?

ಸ್ಯಾಮ್ಸಂಗ್ ತನ್ನ ಟಿವಿಗಳಲ್ಲಿ ಡಾಲ್ಬಿ ವಿಷನನ್ನು ನಿರ್ಲಕ್ಷಿಸುವುದನ್ನು ಮುಂದುವರೆಸಿದೆ. ಇದು ಟಿವಿ ಗ್ರಾಹಕರಿಗೆ ನಿರಾಶೆಯನ್ನುಂಟು ಮಾಡಬಹುದು. ಆದಾಗ್ಯೂ ಟೆಕ್‌ ವಿಶ್ಲೇಷಕರು   4K ಮಿನಿ ಎಲ್‌ಇಡಿ ಸೆಟ್‌ಗಳು  ಸ್ಯಾಮ್‌ಸಂಗ್ ಟಿವಿಯನ್ನು ಬಯಸುವ ಹೆಚ್ಚಿನ ಜನರಿಗೆ ಶಿಫಾರಸು ಮಾಡುತ್ತಾರೆ. ಸ್ಯಾಮ್‌ಸಂಗ್‌ನ ಹೆಚ್ಚಿನ 2022 ಟಿವಿ ಲೈನ್‌ಅಪ್ ಏಪ್ರಿಲ್‌ನಲ್ಲಿ ಶಿಪ್ಪಿಂಗ್ ಅನ್ನು ಪ್ರಾರಂಭಿಸುತ್ತವೆ, QN95B ಹೊರತುಪಡಿಸಿ, ಇದು ಮೇ 23 ರಂದು ಪ್ರಿ ಆರ್ಡರ್‌ಗೆ ಲಭ್ಯವಿರಲಿದೆ. 
 

click me!