ಬಹುನಿರೀಕ್ಷಿತ ರೆಡ್‌ಮಿ ಬುಕ್ 15 ಬೆಲೆ ಹದಿನೈದು ಸಾವಿರ ರೂಪಾಯಿನಾ?

By Suvarna NewsFirst Published Jul 30, 2021, 12:49 PM IST
Highlights

ಬಹುನಿರೀಕ್ಷೆಯ ಶಿಯೋಮಿ ಕಂಪನಿಯ ರೆಡ್‌ಮಿಬುಕ್ 15 ಆಗಸ್ಟ್ 3ರಂದು ಬಿಡುಗಡೆಯಾಗಲಿದೆ. ಆದರೆ, ಬಿಡುಗಡೆ ಮುನ್ನವೇ ರೆಡ್‌ಮಿಬುಕ್ ಬಗೆಗಿನ ಒಂದಿಷ್ಟು ಮಾಹಿತಿಗಳು ಸೋರಿಕೆಯಾಗಿವೆ. ಈ ರೆಡ್‌ಮಿಬುಕ್‌ ಹೊಂದಿರುವ ವಿಶೇಷತೆಗಳು, ಕಾರ್ಯಕ್ಷಮತೆ, ಬೆಲೆ ಸೇರಿದಂತೆ ಹಲವು ಮಾಹಿತಿಗಳು ಆಸಕ್ತಿಕರವಾಗಿವೆ.

ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಭಾರತೀಯ ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಕಾಪಾಡಿಕೊಂಡು ಬಂದಿದೆ. ಪ್ರೀಮಿಯಂ ಮತ್ತು  ಬಜೆಟ್ ಸ್ಮಾರ್ಟ್‌ಫೋನ್‌ಗಳ ಮೂಲಕ ಗ್ರಾಹಕವಲಯವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. 

ಈ ಶಿಯೋಮಿ ಕಂಪನಿಯು ಮತ್ತೊಂದು ಸಾಧನದ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಲು ಹೊರಟಿದೆ. ತನ್ನ ಮೊದಲ ರೆಡ್‌ಮಿಬುಕ್  ಅನ್ನು ಆಗಸ್ಟ್ 3ರಂದು ಲಾಂಚ್ ಮಾಡಲಿದೆ. ಈ ವಿಷಯವನ್ನು ಶಿಯೋಮಿ ಈಗಾಗಲೇ ಖಚಿತಪಡಿಸಿದೆ. ಈಗಿನ ಸುದ್ದಿ ಏನೆಂದರೆ, ಬಿಡುಗಡೆಯ ಮೊದಲೇ ರೆಡ್‌ಮಿಬುಕ್‌ನ ಕೆಲವು ಫೀಚರ್‌ಗಳು ಬೆಲೆಯ ಬಗ್ಗೆ ಮಾಹಿತಿಗಳು ಸೋರಿಕೆಯಾಗಿವೆ.

ನೋಕಿಯಾದಿಂದ ಮೊದಲ ಟ್ಯಾಬ್ಲೆಟ್! ನೋಕಿಯಾ ಟಿ20 ಟ್ಯಾಬ್ ವಿಶೇಷತೆಗಳೇನು?

ಟಿಪ್ಸಟರ್ ಯೋಗೇಶ್ ಬ್ರಾರ್ ಎಂಬುವವರು, ಆಗಸ್ಟ್ 3ರಂದು ಬಿಡುಗಡೆಯಾಗಲಿರುವ ರೆಡ್‌ಮಿಬುಕ್ ಲ್ಯಾಪ್‌ಟ್ಯಾಪ್ ಬಗೆಗಿನ ವಿಶೇಷತೆಗಳ ಬಗ್ಗೆ ಹೇಳಿದ್ದಾರೆ. ಭಾರತದಲ್ಲಿ ಬಿಡುಗೆಡೆಯಾಗಲಿರುವ ಲ್ಯಾಪ್‌ಟ್ಯಾಪ್ ಕಂಪನಿಯು  ರೆಡ್‌ಮಿಬುಕ್ 15 ಎಂದು ಹೆಸರಿಟ್ಟಿದೆ. ಈ ಲ್ಯಾಪ್‌ಟ್ಯಾಪ್ 15.6 ಇಂಚ್ ಫುಲ್ ಎಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ, ಇಂಟೆಲ್ 11ನೇ ಜನರೇಷನ್ ಕೋರ್ ಐ3 ಮತ್ತು ಕೋರ್ ಐ5 ಪ್ರೊಸೆಸರ್‌ಗಳನ್ನು ಒಳಗೊಂಡಿರುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನುತ್ತಿವೆ ಮಾಹಿತಿಗಳು. ಹಾಗೆಯೇ ಈ ಪ್ರೊಸೆಸರ್‌ಗಳನ್ನು 8 ಜಿಬಿ ರ್ಯಾಮ್‌ನೊಂದಿಗೆ ಹೊಂದಾಣಿಕೆ ಮಾಡಿರುವ ಸಾಧ್ಯತೆಗಳಿವೆ.

𝗥𝗲𝗱𝗺𝗶𝗕𝗼𝗼𝗸 𝟭𝟱

•15.6" Full HD panel
•Intel i5 11th Gen processor
•8GB RAM
•256/512GB SSD
•In-built webcam
•2x2W speaker
•BT 5.0, Dual band WiFi
•Upto 10hrs battery
•65W charger
•Thin and light form factor

Read more here 👇🏼https://t.co/ZeEztRcOFV

— 𓆩Yogesh𓆪 (@heyitsyogesh)

ಶಿಯೋಮಿ ಕಂಪನಿಯ ಈ ರೆಡ್‌ಮಿಬುಕ್ ಲ್ಯಾಪ್‌ಟ್ಯಾಪ್ ಡ್ಯುಯೆಲ್ ಬಾಂಡ್ ವೈಫೈ, ಬ್ಲೂಟೂಥ್ ವಿ5.0 ಕೆನೆಕ್ಟಿವಿಟಿ ಸೌಲಭ್ಯ ಹೊಂದಿರಲೂಬಹುದು. ಫ್ರಂಟ್‌ನಲ್ಲಿ ಎಚ್‌ಡಿ ವೆಬ್‌ಕ್ಯಾಮ್ ಅಳಿವಡಿಸಿರುವ ಮಾಹಿತಿಯೂ ಇದೆ. ಆದರೆ, ಕಂಪನಿಯು ತನ್ನ ಎಂಐ ನೋಟ್‌ಬುಕ್‌ಗಳಲ್ಲಿ ಈ ಎಚ್‌ಡಿ ವೆಬ್‌ಕ್ಯಾಮ್‌ಗಳನ್ನು ಬಳಸಿರಲಿಲ್ಲ. ಇವುಗಳಿಗೆ ಬದಲಿಗೆ ಯುಎಸ್‌ಬಿ ವೆಬ್‌ಕ್ಯಾಮ್‌ಗಳನ್ನು ಬಳಸಿತ್ತು. ಈ ಲ್ಯಾಪ್‌ಟಾಪ್‌ಗಳನ್ನು ಕಂಪನಿಯು ಕಳೆದ ವರ್ಷ ಬಿಡುಗಡೆ ಮಾಡಿತ್ತು ಎಂಬುದನ್ನು ಗಮನಿಸಬಹುದು.

ಇದಲ್ಲದೆ, ರೆಡ್‌ಮಿಬುಕ್ 15 ಸಹ, ಹೆಚ್ಚಾಗಿ ಸ್ಟಿರಿಯೋ ಕಾನ್ಫಿಗರೇಷನ್‌ನ ಹೊಂದಿರುವ ಎರಡು 2 ವ್ಯಾಟ್ ಸ್ಪೀಕರ್‌ಗಳನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಸಂಪರ್ಕ ಆಯ್ಕೆಗಳಲ್ಲಿ ಯುಎಸ್‌ಬಿ ಟೈಪ್-ಸಿ 3.1, ಯುಎಸ್‌ಬಿ ಟೈಪ್-ಎ, ಯುಎಸ್‌ಬಿ 2.0, ಎಚ್‌ಡಿಎಂಐ ಮತ್ತು ಆಡಿಯೋ ಜ್ಯಾಕ್ ಸೇರಿವೆ. ಲ್ಯಾಪ್ಟಾಪ್ ಅನ್ನು 65 ವ್ಯಾಟ್ ಚಾರ್ಜರ್‌ನೊಂದಿಗೆ ಸಾಗಿಸಲು ಸೂಚಿಸಲಾಗುತ್ತದೆ.

ಜುಲೈ 30ಕ್ಕೆ ಬರ್ತಿದೆ ಮೈಕ್ರೋಮ್ಯಾಕ್ಸ್ ಐಎನ್ 2ಬಿ ಸ್ಮಾರ್ಟ್‌ಫೋನ್

ಆಗಸ್ಟ್ 3ರಂದು ಬಿಡುಗಡೆಯಾಗಲಿರುವ ಈ ಲ್ಯಾಪ್‌ಟ್ಯಾಪ್‌ನ ಮತ್ತೊಂದು ವಿಶೇಷ ಎಂದರೆ, ಬಹುತೇಕ ಇದು ಅಗ್ಗದ ಬೆಲೆಯಲ್ಲಿ ಸಿಗಲಿದೆ. ಹೌದು, ಈಗ ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ, ಭಾರತೀಯ ಮಾರುಕಟ್ಟೆಯಲ್ಲಿ ಈ ಲ್ಯಾಪ್‌ಟ್ಯಾಪ್ ಬೆಲೆ 15,000 ರೂ.ಗಿಂತಲೂ ಕಡಿಮೆ ಇರಲಿದೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಕಂಪನಿ ಯಾವುದೇ ಮಾಹಿತಿಯನ್ನು ನೀಡಿಲ್ಲ. ಬಿಡುಗಡೆ ದಿನವೇ ಅಧಿಕೃತವಾಗಿ ಬೆಲೆ ಎಷ್ಟಿರಬಹುದು ಎಂದು ತಿಳಿಯಲಿದೆ.

ಶಿಯೋಮಿ ಬಿಡುಗಡೆ ಮಾಡಲಿರುವ ಈ ರೆಡ್‌ಮಿಬುಕ್ ಲ್ಯಾಪ್‌ಟ್ಯಾಪ್ ಬಳಕೆದಾರರಿಗೆ ಚಾರ್ಕೋಲ್ ಗ್ರೇ ಕಲರ್ ಆಯ್ಕೆಯಲ್ಲಿ ಖರೀದಿಸಲು ಸಿಗಲಿದೆ ಎಂದು ಕಂಪನಿಯೇ ಈಗಾಗಲೇ ಖಚಿತಪಡಿಸಿದೆ. ಈಗಿರುವ ಮಾಹಿತಿಯ ಪ್ರಕಾರ, ಆಗಸ್ಟ್ 3ರಂದು 15 ಇಂಚ್ ಡಿಸ್‌ಪ್ಲೇ  ಲ್ಯಾಪ್‌ಟ್ಯಾಪ್ ಬಿಡುಗಡೆಯಾಗಲಿದೆ. ಆದರೆ, ಅದೇ ದಿನ ಕಂಪನಿಯು 14 ಇಂಚಿನ್ ರೆಡ್‌ಮಿ ಬುಕ್ ಲ್ಯಾಪ್ ಟ್ಯಾಪ್ ಬಿಡುಗಡೆ ಮಾಡುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎನ್ನುತ್ತಾರೆ ಟಿಪ್ಸಟರ್‌ಗಳು. ಈಗಾಗಲೇ ಎಂಐ ಲ್ಯಾಪ್‌ಟ್ಯಾಪ್‌ಗಳು ಕೈಗೆಟುಕುವ ದರಲ್ಲಿ ಮಾರಾಟವಾಗುತ್ತಿದ್ದು, ಅದೇ ಸಾಲಿಗೆ ಈ ರೆಡ್‌ಮಿಬುಕ್ ಲ್ಯಾಪ್‌ಟ್ಯಾಪ್‌ಗಳು ಕೂಡ ಸೇರ್ಪಡೆಯಾಗಲಿವೆ.

ಒಪ್ಪೋ ವಾಚ್ 2 ಸ್ಮಾರ್ಟ್‌ವಾಚ್ ಅನಾವರಣ, ಏನೆಲ್ಲ ವಿಶೇಷತೆಗಳಿವೆ?

ಗ್ರಾಹಕರಿಗೆ ಕೈಗೆಟುಕುವ ದರಲ್ಲಿ  ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುವ ಮೂಲಕವೇ ಶಿಯೋಮಿ ತನ್ನದೇ ಆದ ಗ್ರಾಹಕವಲಯವನ್ನು ಸೃಷ್ಟಿಸಿಕೊಂಡಿದೆ. ಇದೀಗ ರೆಡ್‌ಮಿಬುಕ್ ಲ್ಯಾಪ್‌ಟ್ಯಾಪ್ ಮೂಲಕ ಅಂಥದ್ದೇ ಸಕ್ಸೆಸ್ ಸಾಧಿಸಲು ಪ್ರಯತ್ನ ನಡೆಸುತ್ತಿರುವಂತೆ ಕಾಣುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಎಐನೋಟ್‌ಬುಕ್‌ಗಳು ಚಾಲ್ತಿಯ್ಲಲಿವೆ ಎಂಬುದನ್ನು ಗಮನಿಸಬಹುದು.

click me!