ಒಪ್ಪೋ ವಾಚ್ 2 ಸ್ಮಾರ್ಟ್‌ವಾಚ್ ಅನಾವರಣ, ಏನೆಲ್ಲ ವಿಶೇಷತೆಗಳಿವೆ?

By Suvarna News  |  First Published Jul 28, 2021, 2:54 PM IST

ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಒಪ್ಪೋ ಸ್ಮಾರ್ಟ್‌ವಾಚ್ ಬಿಡುಗಡೆಯಾಗಿ ಭಾರೀ ಸದ್ದು ಮಾಡಿತ್ತು. ಇದೀಗ ಕಂಪನಿಯು ಅದರ ಮುಂದಿನ ಆವೃತ್ತಿ ಎನಿಸಿಕೊಂಡಿರುವ ಒಪ್ಪೋ ವಾಚ್ 2 ಸ್ಮಾರ್ಟ್‌ವಾಚ್ ಅನಾವರಣಾ ಮಾಡಿದೆ. ಈ ಸ್ಮಾರ್ಟ್‌ವಾಚ್ ತಾಂತ್ರಿಕ ಶ್ರೀಮಂತಿಕೆಯನ್ನು ಹೊಂದಿದ್ದು, ಬಳಕೆದಾರರ ಸ್ನೇಹಿಯಾಗಿದೆ.


ಸ್ಮಾರ್ಟ್‌ಫೋನ್ ಮತ್ತು ಸ್ಮಾರ್ಟ್‌ಸಾಧನಗಳ ಉತ್ಪಾದನೆಯಲ್ಲಿ ಪ್ರಮುಖ ಕಂಪನಿಯಾಗಿರುವ ಚೀನಾ ಮೂಲದ ಒಪ್ಪೋ, ಒಪ್ಪೋ ವಾಚ್ 2 ಅನ್ನು ಅನಾವರಣ ಮಾಡಿದೆ. ಚೀನಾದಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಕಂಪನಿಯು ತನ್ನ ಈ ಸಾಧನವನ್ನು ಪರಿಚಯಿಸಿದೆ.

ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಕಂಪನಿಯು ಒಪ್ಪೋ ವಾಚ್ ಬಿಡುಗಡೆ ಮಾಡಿತ್ತು. ಈಗ ಅನಾವರಣಗೊಂಡಿರುವ ಒಪ್ಪೋ ವಾಚ್ 2, ಈ ಹಿಂದೆ ಬಿಡುಗಡೆಯಾಗಿದ್ದ ಒಪ್ಪೋ ವಾಚ್‌ನ ಹೊಸ ಆವೃತ್ತಿಯಾಗಿದೆ. ಈ ಸ್ಮಾರ್ಟ್‌ ವಾಚ್‌ನಲ್ಲಿ ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ ವೀಯರ್ 4100 ಪ್ರೊಸೆಸರ್ ಇದ್ದು, 16 ದಿನಗಳ ಕಾಲ ಚಾರ್ಜಿಂಗ್ ಬಾಳಿಕೆ ಬರುವ ಬ್ಯಾಟರಿಯನ್ನು ನೀಡಲಾಗುತ್ತಿದೆ. ಇದರ ಜೊತೆಗೆ ಕಂಪನಿಯು ಓಪ್ಪೋ ಎನ್ಕೋ ಏರ್ ಸ್ಮಾರ್ಟ್ ಎಡಿಷನ್ ಮತ್ತು ಓಪ್ಪೋ ಎನ್ಕೋ ಪ್ಲೇ ಎಂಬ ಎರಡು ಹೊಸ ಟ್ರೂ ವೈರ್‌ಲೆಸ್ ಇಯರ್‌ಬಡ್ಸ್ ಕೂಡ ಅನಾವರಣ ಮಾಡಿದೆ.

Tap to resize

Latest Videos

undefined

ನೋಕಿಯಾ 110 4ಜಿ ಫೀಚರ್ ಫೋನ್ ಲಾಂಚ್, ಮಾರಾಟ ಶುರು

ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಒಪ್ಪೋ ವಾಚ್ 2 ಬೆಲೆ ಅಂದಾಜ 14,900 ಇರಬಹುದು ಎಂದು ಹೇಳಲಾಗುತ್ತಿದೆ. ಇದು ವೈಫೈ ಮತ್ತು 42 ಎಂಎಂ ಸ್ಮಾರ್ಟ್‌ವಾಚ್ ಬೆಲೆ. ಹಾಗೆಯೇ, ಇದೇ ಸ್ಮಾರ್ಟ್‌ವಾಚ್ ಇಸಿಮ್ ಸಪೋರ್ಟ್ ಮಾಡುತ್ತದೆ. ಅದರ ಬೆಲೆ ಅಂದಾಜು 17,200 ರೂ. ಎನ್ನಲಾಗುತ್ತಿದೆ.  46 ಎಂಎಂ ವರ್ಷನ್ ಮತ್ತು ಟಾಪ್‌ಎಂಡ್ ಮಾಡೆಲ್ ಬೆಲೆ ಅಂದಾಜು 22,999 ರೂಪಾಯಿ ಇರಬಹುದು ಎಂದು ಹೇಳಲಾಗುತ್ತಿದೆ. ಈ ಸ್ಮಾರ್ಟ್‌ವಾಚ್ ಜಾಗತಿಕ ಮಾರುಕಟ್ಟೆಗೆ ಬಿಡುಗಡೆಗೊಂಡ ಬಳಿಕ ಬೆಲೆಯಲ್ಲಿ ವ್ಯತ್ಯಾಸವಾಗುವುದನ್ನು ಅಲ್ಲಗಳೆಯಲಾಗುದು.

ಆಂಡ್ರಾಯ್ಡ್ ಆಧರಿತ ಕಲರ್ ಓಎಸ್ ವಾಚ್  ಮೇಲೆ ಈ ಒಪ್ಪೋ ಸ್ಮಾರ್ಟ್‌ವಾಚ್ 2 ರನ್ ಆಗುತ್ತದೆ. 42 ಎಂಎಂ ಆವೃತ್ತಿಯು 1.75 ಇಂಚ್ ಅಮೋಎಲ್ಇಡಿ ಡಿಸ್‌ಪ್ಲೇಯನ್ನು ಹೊಂದಿದ್ದರೆ, 46 ಎಂಎಂ ವಾಚ್ 1.91 ಅಮೋಎಲ್‌ಇಡಿ ಪ್ರದರ್ಶಕವನ್ನು ಒಳಗೊಂಡಿದೆ. ಈ ಎರಡೂ ಪ್ರದರ್ಶಕಗಳ ರೆಸೂಲೆಷನ್ ಕೂಡ ಅದ್ಭತವಾಗಿದೆ ಎಂದು ಹೇಳಬಹುದು. ಜೊತೆಗೆ 3ಡಿ ಗ್ಲಾಸ್ ಪ್ರೊಟೆಕ್ಷನ್ ಕೂಡ ಇದೆ.

ನಾಲ್ಕು ಟ್ಯಾಬ್ಲೆಟ್ ಬಿಡುಗಡೆ ಮಾಡಿದ ಚೀನಾ ಮೂಲದ ಟಿಸಿಎಲ್    

ಈ ವಾಚ್‌ನ ತಾಂತ್ರಿಕ ವಿಶೇಷತೆಗಳ ಬಗ್ಗೆ ಹೇಳಬೇಕೆಂದರೆ, ಒಪ್ಪೋ ವಾಚ್ 2 ‌ಕ್ವಾಲಕಾಮ್ ಸ್ನ್ಯಾಪ್ ಡ್ರಾಗನ್‌ ವೀಯರ್ 4100 ಪ್ರೊಸೆಸರ್ ಒಳಗೊಂಡಿದೆ.  ಈ ಹಿಂದೆ ಬಿಡಗುಡೆಯಾಗಿದ್ದ ಒಪ್ಪೋ ವಾಚ್‌ನಲ್ಲಿ ಬಳಸಲಾಗಿದ್ದ ಸ್ನ್ಯಾಪ್‌ಡ್ರಾಗನ್ 2500 ಪ್ರೊಸೆಸರ್ ಮುಂದುವರಿದ ಆವೃತ್ತಿಯನ್ನೇ ಈ ಹೊಸ ವಾಚ್‌ನಲ್ಲಿ ಬಳಸಲಾಗಿದೆ. 1 ಜಿಬಿ ರ್ಯಾಮ್ ಮತ್ತು 9 ಜಿಬಿ ಸ್ಟೋರೇಜ್ ದೊರೆಯುತ್ತದೆ.
 
ಒಪ್ಪೋ ವಾಚ್ 2 ಸ್ಮಾರ್ಟ್‌ವಾಚ್‌ನಲ್ಲಿ ಡಿಫಾಲ್ಟ್ ಆಗಿಯೇ ಸಾಕಷ್ಟು ಫೀಚರ್‌ಗಳು ನಿಮಗೆ ಸಿಗುತ್ತವೆ. 100ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್‌ಗಳು, 24 ಗಂಟೆ ಹಾರ್ಟ್ ರೇಟ್ ಟ್ರ್ಯಾಕಿಂಗ್, ಎಸ್‌ಪಿಓ2 ಬ್ಲಡ್ ಆಕ್ಸಿಜನ್ ಮಾನಿಟರಿಂಗ್ ಸೇರಿ ಅನೇಕ ಫೀಚರ್‌ಗಳನ್ನು ನೀವು ಕಾಣಬಹುದಾಗಿದೆ. ಸ್ಲೀಪ್ ಅನಾಲಿಸಿಸ್, ಸ್ನೋರಿಂಗ್ ರಿಸ್ಕ್ ಅಸೆಸ್‌ಮೆಂಟ್, ಸ್ಟ್ರೆಸ್ ಮಾನಿಟಿರಿಂಗ್ ಸೇರಿದಂತೆ ಇನ್ನೂ ಅನೇಕ ಫೀಚರ್‌ಗಳು ಇವೆ.


ವೈಫೈ 802.11, ಜಿಪಿಎಸ್, ಎನ್‌ಎಫ್‌ಸಿ ಮತ್ತು ಬ್ಲೂಟೂತ್ ವಿ5.0 ಕನೆಕ್ಟಿವಿಟಿ  ಸೌಲಭ್ಯವನ್ನು ಓಪ್ಪೋ ವಾಚ್ 2 ಸ್ಮಾರ್ಟ್‌ವಾಚ್ ಒಳಗೊಂಡಿದೆ. ವಾಯ್ಸ್ ಕಾಲಿಂಗ ಸಾಮರ್ಥ್ಯದೊಂದಿಗೆ ಎಲ್‌ಟಿಇ ವೆರಿಯೆಂಟ್ಸ್ 4ಜಿ ಸಪೋರ್ಟ್ ಹೊಂದಿದೆ. ಬಹುತೇಕ ಈ ಎಲ್ಲ ಫೀಚರ್‌ಗಳು ಒಪ್ಪೋ ಸ್ಮಾರ್ಟ್‌ವಾಚ್ ಅನ್ನು ಹೆಚ್ಚು ಗ್ರಾಹಕ ಸ್ನೇಹಿಯಾಗಿಸಿವೆ ಎಂದು ಹೇಳಬಹುದು. ಬ್ಯಾಟರಿ ದೀರ್ಘಾವಧಿ ಬಾಳಿಕೆಯನ್ನು ಹೆಚ್ಚಿಸುವ ಅಲ್ಟ್ರಾ ಡೈನಾಮಿಕ ಡ್ಯೂಯಲ್ ಎಂಜನ್ ತಂತ್ರಜ್ಞಾನವನ್ನೂ ಈ ಸ್ಮಾರ್ಟ್‌ವಾಚ್  ಹೊಂದಿದೆ. ಈಗಷ್ಟೇ ಅನಾವರಣಗೊಂಡಿರುವ ಈ ಸ್ಮಾರ್ಟ್‌ ವಾಚ್, ಭಾರತೀಯ ಮಾರುಕಟ್ಟೆಯೂ ಸೇರಿದಂತೆ ಜಾಗತಿಕ ಮಾರುಕಟ್ಟೆಗೆ ಯಾವಾಗ ಪ್ರವೇಶ ಪಡೆಯಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲ.

ಜೆಡ್‌ಟಿಇ ಬ್ಲೇಡ್ ವಿ30, ಬ್ಲೇಡ್ ವಿ30 ವಿಟಾ ಸ್ಮಾರ್ಟ್‌ಫೋನ್ ಬಿಡುಗಡೆ    

click me!