ನಿಮ್ಮ ಬೆಡ್‌ ಪಕ್ಕ ಇರಲೇಬೇಕು ಲೆನೋವೋ ಸ್ಮಾರ್ಟ್‌ ಕ್ಲಾಕ್ 2

By Suvarna News  |  First Published Jul 18, 2021, 3:41 PM IST

ಸ್ಮಾರ್ಟ್‌ಕ್ಲಾಕ್, ಸ್ಮಾರ್ಟ್ ಕ್ಲಾಕ್ ಎಸೆನ್ಷಿಯಲ್ ಸಕ್ಸೆಸ್‌ನಿಂದ ಉತ್ತೇಜಿತರಾಗಿರುವ ಚೀನಾ ಮೂಲದ ಟೆಕ್ ದೈತ್ಯ ಲೆನೋವೋ ಕಂಪನಿ ಇದೀಗ ಸ್ಮಾರ್ಟ್‌ ಕ್ಲಾಕ್ 2 ಲಾಂಚ್ ಮಾಡಿದೆ. ಅತ್ಯಾಧುನಿಕ ಫೀಚರ್‌ಗಳನ್ನು ಹೊಂದಿರುವ ಈ ಕ್ಲಾಕ್‌ ನಿಮ್ಮ ಮನೆಯ ಕೋಣೆಯಲ್ಲಿ ಇರಲೇಬೇಕಾದ ಅತ್ಯಗತ್ಯ ಸ್ಮಾರ್ಟ್‌ ಸಾಧನವಾಗಿದೆ.


ಕಂಪ್ಯೂಟರ್, ಲ್ಯಾಪ್‌ಟ್ಯಾಪ್, ಟ್ಯಾಬ್ಲೆಟ್ ಮತ್ತು ಸ್ಮಾರ್ಟ್‌ಫೋನ್  ಉತ್ಪಾದನೆಯಲ್ಲಿ ಅಗ್ರಗಣ್ಯವಾಗಿರುವ ಚೀನಾ ಮೂಲದ ಲೆನೋವೋ ಹಲವು ಸ್ಮಾರ್ಟ್‌ ಸಾಧನಗಳನ್ನು ಪರಿಚಯಿಸುತ್ತಲೇ ಇರುತ್ತದೆ. ವಿಶೇಷವಾಗಿ ಸ್ಮಾರ್ಟ್‌ ಹೋಮ್ ಸಾಧನಗಳು ಗಮನಸೆಳೆಯುತ್ತವೆ. ಈ ಸಾಲಿಗೆ ಕಂಪನಿ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ, ಲೆನೋವೋ ಸ್ಮಾರ್ಟ್ ಕ್ಲಾಕ್ 2 ಅದ್ಭುತವಾಗಿದೆ.

ಲೆನೋವೋ ಬಿಡುಗಡೆ ಮಾಡಿರುವ ಈ ಹೊಸ ಸ್ಮಾರ್ಟ್‌ ಕ್ಲಾಕ್ 2 ನಿಮಗೆ ಆಪ್ಷನಲ್ ಆಗಿ ವೈರ್‌ಲೆಸ್ ಚಾರ್ಜರ್ ವೆರಿಯೆಂಟ್‌ನಲ್ಲಿ ದೊರೆಯುತ್ತದೆ. ಗೂಗಲ್‌ ಅಸಿಸ್ಟೆಂಟ್ ಸೌಲಭ್ಯದೊಂದಿಗೆ ಲಾಂಚ್ ಆಗಿರುವ ಈ ಸ್ಮಾರ್ಟ್‌ಕ್ಲಾಕ್ ಅನ್ನು ನೀವು ಡಾಕ್ ಮಾಡಿದಾಗ ತಳಭಾಗದಲ್ಲಿ ಆಂಬಿಯೆಂಟ್ ಲೈಟ್ ಬೆಳಗುತ್ತದೆ. ಇದು ನೋಡಲು ತುಂಬಾ ಆಕರ್ಷಕವಾಗಿಯೂ ಕಾಣುತ್ತದೆ.

Tap to resize

Latest Videos

undefined

ಆಗಸ್ಟ್‌ ಅಂತ್ಯಕ್ಕೆ ರಿಯಲ್‌ಮಿ ಲ್ಯಾಪ್‌ಟ್ಯಾಪ್ ಬಿಡುಗಡೆ?, ಏನೆಲ್ಲಾ ವಿಶೇಷಗಳು, ಬೆಲೆ ಎಷ್ಟು?

ಚೀನಾ ಮೂಲದ ಟೆಕ್ ದೈತ್ಯ ಕಂಪನಿಯು ಈ ಸ್ಮಾರ್ಟ್‌ ಕ್ಲಾಕ್ 2 ಅನ್ನು ಮರುಬಳಸಬಹುದಾದ ಹಾಗೂ ಸಾಫ್ಟ್ ಟಚ್ ಫ್ಯಾಬ್ರಿಕ್‌ನಿಂದ ಉತ್ಪಾದಿಸಿದ್ದು, ಗ್ರಾಹಕರಿಗೆ ಮೂರು ಬಣ್ಣಗಳಲ್ಲಿ ಇದು ದೊರೆಯಲಿದೆ. ಈ ಕ್ಲಾಕ್‌ ನಾಲ್ಕು ಇಂಚ್ ಟಚ್‌ಸ್ಕ್ರೀನ್ ಹೊಂದಿದ್ದು, ಅದು ನಿಮಗೆ ಸಮಯವನ್ನು, ಹವಾಮಾನವನ್ನು ತೋರಿಸುತ್ತದೆ. ಜೊತೆಗೆ ಈ ಸ್ಮಾರ್ಟ್‌ ಕ್ಲಾಕ್ ಸಂಪರ್ಕಿತಹೊಂದಿರುವ ಸ್ಮಾರ್ಟ್‌ಫೋನ್‌ನಿಂದ ಗೂಗಲ್ ಫೋಟೋಗಳನ್ನು ಸೈಡಿನಿಂದ ಪ್ರದರ್ಶಿಸುತ್ತದೆ. ಈ ಸ್ಮಾರ್ಟ್‌ ಕ್ಲಾಕ್‌ನಲ್ಲಿರುವ  ಸ್ಪೀಕರ್‌ಗಳೂ ಗಮನ ಸೆಳೆಯುತ್ತವೆ.

ಲೆನೋವೋ ಸ್ಮಾರ್ಟ್‌ ಕ್ಲಾಕ್ 2 ಆಗಸ್ಟ್‌ನಿಂದ ಖರೀದಿಗೆ ಲಭ್ಯವಾಗಲಿದೆ. ಲೆನೋವೋದ ಅಮೆರಿಕದ ವೆಬ್‌ತಾಣಧಲ್ಲಿ ಸ್ಮಾರ್ಟ್ ಕ್ಲಾಕ್ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಸ್ಮಾರ್ಟ್‌ ಕ್ಲಾಕ್ ಬೆಲೆ ಎಷ್ಟಿರಬಹುದು ಎಂಬ ಕುತೂಹಲವನ್ನು ಕಂಪನಿಯೇ ತಣಿಸಿದೆ. ಕಂಪನಿಯ ಹೇಳಿಕೆಯ ಪ್ರಕಾರ, ಈ ಸ್ಮಾರ್ಟ್‌ ಕ್ಲಾಕ್  2 ಬೆಲೆ 89.99 ಯುರೋ. ಅಂದರೆ, ಭಾರತೀಯ ರೂಪಾಯಿ ಲೆಕ್ಕದಲ್ಲಿ ಅಂದಾಜು ಎಂಟು ಸಾವಿರ. 

ಮೂರು ಬಣ್ಣಗಳಲ್ಲಿ ಲಭ್ಯವಿರುವ ಈ ಸ್ಮಾರ್ಟ್‌ ಕ್ಲಾಕ್ ಭಾರತೀಯ ಮಾರುಕಟ್ಟೆಗೆ ಯಾವಾಗ ಪ್ರವೇಶಿಸಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ, ಈಗಾಗಲೇ ಕಂಪನಿ ಬಿಡುಗಡೆ ಮಾಡಿರುವ ಸ್ಮಾರ್ಟ್‌ ಕ್ಲಾಕ್ ಎಸೆನ್ಷಿಯಲ್ ಮತ್ತು ಸ್ಮಾರ್ಟ್‌ ಕ್ಲಾಕ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯ ಇವೆ.

Redmi Note 10T 5G ಜು.20ಕ್ಕೆ ಬಿಡುಗಡೆ, ಫಾಸ್ಟ್ ಚಾರ್ಜಿಂಗ್‌ ಸೇರಿ ಹಲವು ಫೀಚರ್ಸ್

ಲೆನೋವೋ ಇಂಡಿಯಾ ವೆಬ್‌ತಾಣದಲ್ಲಿರುವ ಮಾಹಿತಿ ಪ್ರಕಾರ,  ಸ್ಮಾರ್ಟ್‌ ಕ್ಲಾಕ್ ಎಸೆನ್ಷಿಯಲ್ ಬೆಲೆ 4499 ರೂಪಾಯಿನಿಂದ ಆರಂಭವಾದರೆ, ಸ್ಮಾರ್ಟ್‌ ಕ್ಲಾಕ್ ಬೆಲೆ 5,999 ರೂಪಾಯಿನಿಂದ ಆರಂಭವಾಗುತ್ತದೆ. ಈ ಸಾಧನಗಳ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಇನ್ನು ಹೊಸದಾಗಿ ಬಿಡುಗಡೆಯಾಗಿರುವ ಈ ಸ್ಮಾರ್ಟ್‌ಕ್ಲಾಕ್ 2 ಬಗ್ಗೆ ಹೇಳಬೇಕೆಂದರೆ, ನಾಲ್ಕು ಇಂಚ್ ಟಚ್‌ಸ್ಕ್ರೀನ್ ಹೊಂದಿದ್ದು, ಸಮಯ ಸೇರಿದಂತೆ ಹಲವು ಮಾಹಿತಿಗಳನ್ನು ಅದು ಪ್ರದರ್ಶಿಸುತ್ತದೆ. ಮರುಬಳಸಬಹುದಾದ, ಸಾಫ್ಟ್ ಟಚ್ ಫ್ಯಾಬ್ರಿಕ್‌ನಿಂದ ಈ ಸ್ಮಾರ್ಟ್‌ಕ್ಲಾಕ್ ಸುತ್ತವರಿದಿದೆ.  ಸ್ಮಾರ್ಟ್‌ಕ್ಲಾಕ್‌ನ ಮೇಲ್ಭಾಗದಲ್ಲಿ ಎರಡು ಬಟನ್‌ಗಳನ್ನು ನೀಡಲಾಗಿದ್ದು, 3 ವ್ಯಾಟ್ ಸ್ಪೀಕರ್‌ಗಳ ವ್ಯಾಲೂಮ್‌ವನ್ನು ನಿಯಂತ್ರಿಸುತ್ತವೆ.  ಕೆಳ ಭಾಗದಲ್ಲಿರುವ ಸ್ಪೀಕರ್ ಪವರ್ ಜಾಕ್‌ ಮತ್ತು ಮೈಕ್ರೋಫೋನ್ ಮ್ಯೂಟ್‌ ಸ್ವಿಚ್‌ ಹೊಂದಿದೆ.
 
ಲೆನೊವೊ ಸ್ಮಾರ್ಟ್ ಕ್ಲಾಕ್ 2 ಯುಎಸ್ಬಿ ಟೈಪ್-ಎ ಪೋರ್ಟ್ ಅನ್ನು ಸಂಪೂರ್ಣವಾಗಿ ತೆಗೆದು ಹಾಕಿಲ್ಲ. ಬಳಕೆದಾರರು ಹೆಚ್ಚುವರಿ ಹತ್ತು ವಾಟ್ ವೈರ್‌ಲೆಸ್ ಚಾರ್ಜಿಂಗ್ ಡಾಕ್ ಅನ್ನು ಖರೀದಿಸಬಹುದು, ಅದು ಯುಎಸ್‌ಬಿ ಟೈಪ್-ಎ ಪೋರ್ಟ್ ಅನ್ನು ಹೊಂದಿದ್ದು ಮತ್ತು  ಅದು ರಾತ್ರಿಯಲ್ಲಿ ಆಂಬಿಯೆಂಟ್ ಬೆಳಕನ್ನು ನೀಡುತ್ತದೆ. 

1,299 ಮತ್ತು 1,799 ರೂಪಾಯಿಗೆ ಡಿಝೋ ಫೋನ್‌ ಲಾಂಚ್ ಮಾಡಿದ ರಿಯಲ್‌ಮಿ

ಡಾಕ್ ಪೊಗೊ ಪಿನ್‌ಗಳ ಮೂಲಕ ಸ್ಮಾರ್ಟ್ ಕ್ಲಾಕ್ 2 ಗೆ ಸಂಪರ್ಕಿಸುತ್ತದೆ.  ಒಂದೊಮ್ಮೆ ಡಾಕ್ ಮತ್ತು ಸ್ಮಾರ್ಟ್‌ಕ್ಲಾಕ್ ಸಂಪರ್ಕಿತಗೊಂಡರೆ ಅದು ನೈಟ್ ಲೈಟ್, ಸ್ಟಿರಿಯೊ ರೇಡಿಯೋ, ಚಾರ್ಜಿಂಗ್ ಪ್ಯಾಡ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ  ಮತ್ತು ಬೆಡ್ ಪಕ್ಕದ ಸಹಾಯಕ ರೀತಿಯಲ್ಲಿ ಕೆಲಸ ಮಾಡುತ್ತದೆ. ಇದೆಲ್ಲವೂ ಗೂಗಲ್ ಅಸಿಸ್ಟೆಂಟ್‌ನಿಂದ ಸಾಧ್ಯವಾಗುತ್ತಿದೆ.

click me!