ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳ ಮೂಲಕ ಪರಿಚಿತವಾಗಿರುವ ರಿಯಲ್‌ಮಿ ಇದೀಗ ಟಿವಿ ಸೆಗ್ಮೆಂಟ್‌ಗೂ ಕಾಲಿಟ್ಟಿದೆ. ಕಂಪನಿ ಭಾರತೀಯ ಮಾರುಕಟ್ಟೆಗೆ ರಿಯಲ್‌ಮಿ ಸ್ಮಾರ್ಟ್ ಟಿವಿ 4ಕೆ ಬಿಡುಗಡೆ ಮಾಡಿದೆ. ಈ ಟಿವಿ 43 ಮತ್ತು 50 ಇಂಚ್‌ಗಳಲ್ಲಿ ವೆರಿಯೆಂಟ್‌ಗಳಲ್ಲಿ ಲಭ್ಯವಿದೆ.
ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಚೀನಾ ಮೂಲದ ರಿಯಲ್‌ಮೀ ಇದೀಗ ಸ್ಮಾರ್ಟ್ ಬಿಡುಗಡೆ ಮೂಲಕ ತನ್ನ ಕಾರ್ಯಕ್ಷೇತ್ರವನ್ನು ಹಿಗ್ಗಿಸಿಕೊಂಡಿದೆ. ಕಂಪನಿಯ ಭಾರತೀಯ ಮಾರುಕಟ್ಟೆಗೆ ರಿಯಲ್‌ಮಿ ಸ್ಮಾರ್ಟ್ ಟಿವಿ 4ಕೆ ಅನ್ನು ಲಾಂಚ್ ಮಾಡಿದೆ.
ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುವ ಮೂಲಕ ಯಶಸ್ವಿಯಾಗಿರುವ ಈ ಟಿವಿ ವಿಷಯದಲ್ಲೂ ಅದೇ ತಂತ್ರವನ್ನು ಪಾಲಿಸುತ್ತಿದೆ. ರಿಯಲ್‌ಮೀ ಬಿಡುಗಡೆ ಮಾಡಿರುವ ಟಿವಿಗಳೂ ಕೂಡ ತೀರಾ ತುಟ್ಟಿಯೇನಲ್ಲ.
undefined
ಜೂನ್ 10ಕ್ಕೆ 1+ ನಾರ್ಡ್ ಸಿಇ 5G ಸ್ಮಾರ್ಟ್‌ಫೋನ್ ಬಿಡುಗಡೆ, ಏನೆಲ್ಲ ವಿಶೇಷತೆಗಳಿವೆ?
ರಿಯಲ್‌ಮಿ ಸ್ಮಾರ್ಟ್ ಟಿವಿ 43 ಇಂಚ್ ಮತ್ತು 50 ಇಂಚ್‌ಗಳಲ್ಲಿ ದೊರೆಯುತ್ತದೆ. ಈ ಟಿವಿ ಡಾಲ್ಬಿ ವಿಶನ್ ಮತ್ತು ಡಾಲ್ಬಿ ಆಟ್ಮೋಸ್ ಸೇರಿದಂತೆ ಇನ್ನಿತರ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ. ಎಚ್‌ಡಿಎಂಐ ಮತ್ತು ಯುಎಸ್‌ಬಿ ಪೋರ್ಟ್ಸ್ ಸೇರಿದಂತೆ ವೈಫೈ ಹಾಗೂ ಬ್ಲೂಟೂಥ್‌ಗಳಂತ ಕನೆಕ್ಟಿವಿಟಿ ಆಪ್ಷನ್‌ಗಳನ್ನು ಈ ಟಿವಿ ಹೊಂದಿದೆ.
ಭಾರತದಲ್ಲಿ ಬಿಡುಗಡೆ ಕಂಡಿರುವ ರಿಯಲ್‌ಮಿ ಸ್ಮಾರ್ಟ್ ಟಿವಿ ಬೆಲೆ ಅಷ್ಟೇನೂ ತುಟ್ಟಿಯಲ್ಲ. 43 ಇಂಚಿನ ಟಿವಿ ಬೆಲೆ 27,999 ರೂಪಾಯಿಯಾಗಿದ್ದರೆ, 50 ಇಂಚಿನ ಟಿವಿ ಬೆಲೆ 39,999 ರೂಪಾಯಿಯಾಗಿದೆ. ಜೂನ್ 4ರಿಂದ ಈ ಟಿವಿ ಮಾರಾಟಕ್ಕೆ ಸಿಗಲಿದೆ. ಇ ಕಾಮರ್ಸ್ ತಾಣಗಳಾದ ಫ್ಲಿಪ್‌ಕಾರ್ಟ್, ರಿಯಲ್‌ಮೀ. ಕಾಮ್ ಮತ್ತು ಪ್ರಮುಖ ರಿಟೇಲ್ ಸ್ಟೋರ್‌ಗಳಲ್ಲಿ ಮಾರಾಟಕ್ಕೆ ದೊರೆಯಲಿದೆ.
Introducing series with:
👉Dolby Vision 4K Display
👉Dolby Atmos Audio System
👉Hands-free Voice Control
& more!
Available in:
👉108cm, ₹27,999
👉126cm, ₹39,999
1st sale at 12 PM, 4th June on https://t.co/n3vAbwuqXx & . pic.twitter.com/voSubinK6O
ರಿಯಲ್‌ಮಿ ಸ್ಮಾರ್ಟ್ ಟಿವಿಯು ಆಂಡ್ರಾಯ್ಡ್ ಟಿವಿ 10 ಆಧರಿತವಾಗಿದೆ. ಈ ಟಿವಿ 43 ಮತ್ತು 50 ಇಂಚ್ ಸ್ಕ್ರೀನ್ ಹೊಂದಿದೆ. ಕ್ವಾಡ್‌ಕೋರ್ ಮೀಡಿಯಾಟೆಕ್ ಎಸ್ಒಸಿ ಆಧರಿತವಾಗಿದೆ ಈ ರಿಯಲ್‌ಮಿ ಸ್ಮಾರ್ಟ್ ಟಿವಿ. ಜೊತೆಗೆ 2 ಜಿಬಿ ರ್ಯಾಮ್ ಮತ್ತು 16 ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನು ಈ ಟಿವಿಯಲ್ಲಿ ಇರಲಿದೆ.
ರಿಯಲ್‌ಮಿ ಟಿವಿ ನಾಲ್ಕು ಸ್ಪೀಕರ್‌ಗಳನ್ನುಹೊಂದಿದ್ದು ಒಟ್ಟಾರೆ 24 ವ್ಯಾಟ್ ಔಟ್‌ಪುಟ್ ನೀಡುತ್ತವೆ. ಜೊತೆಗೆ ಡಾಲ್ಬಿ ಆಟ್ಮೋಸ್ ಮತ್ತು ಡಾಲ್ಬಿ ಆಡಿಯೋ, ಡಿಟಿಎಸ್ ಎಚ್‌ಡಿಗೆ ಸಪೋರ್ಟ್ ಮಾಡುತ್ತದೆ. ಗೂಗಲ್ ಅಸಿಸ್ಟೆಂಟ್ ಮತ್ತು ವಾಯ್ಸ್ ಕಂಟ್ರೋಲ್ಸ್‌ಗೆ ನೆರವು ಒದಗಿಸುವ ಕ್ವಾಡ್ ಮೈಕ್ರೋಫೋನ್‌ಗಳಿವೆ.
ಹೊಸ ಡಿಜಿಟಲ್ ನಿಯಮಗಳಿಂದ ನಿಮ್ಮ ಖಾಸಗಿ ಹಕ್ಕಿಗೆ ಭಂಗ ಬರುತ್ತಾ?
ಅಮೆಜಾನ್ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್ ಮತ್ತು ಯಟೂಬ್ ಸೇರಿದಂತೆ ಹಲವು ಆಪ್‌ಗಳಿವೆ. ಗೂಗಲ್ ಪ್ಲೇ ಸ್ಟೋರ್, ಕ್ರೋಮ್‌ಕಾಸ್ಟ್‌ನಂಥವು ಈ ಟಿವಿಯಲ್ಲಿ ಇನ್‌ಬಿಲ್ಟ್ ಆಗಿ ಬರುತ್ತವೆ. ವೈ ಫೈ, ಬ್ಲೂಟೂತ್ ವಿ 5.0, ಇನ್ಫ್ರಾರೆಡ್, ಎರಡು ಎಚ್‌ಡಿಎಂಐ ಪೋರ್ಟ್ಸ್, ಎರಡು ಯುಎಸ್‌ಬಿ ಪೋರ್ಟ್ಸ್, ಎಚ್‌ಡಿಎಂಐ ಎಆರ್‌ಸಿ ಪೋರ್ಟ್ ಮತ್ತು ಲ್ಯಾನ್ ಪೋರ್ಟ್‌ಗಳಿವೆ. ಎವಿ ಕನೆಕ್ಟಿವಿಟಿಗೂ ಈ ಟಿವಿ ಸಪೋರ್ಟ್ ಮಾಡುತ್ತದೆ ಮತ್ತು ಆಪ್ಟಿಕಲ್ ಆಡಿಯೋ ಔಟ್‌ಪೋರ್ಟ್ ಕೂಡ ಇದೆ.
ರಿಯಲ್ ಕಂಪನಿ ಈ ಸ್ಮಾರ್ಟ್ ಟಿವಿ ಜತೆಗೆ ರಿಯಲ್‌ಮಿ ಎಕ್ಸ್7 ಮ್ಯಾಕ್ಸ್ 5ಜಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಫೋನ್ 8 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್, 12 ಜಿಬಿ ರ್ಯಾಮ್ ಮತ್ತು 256 ಜಿಬಿ ಸ್ಟೋರೇಜ್ ಆಯ್ಕೆಗಳಲ್ಲಿ ಗ್ರಾಹಕರಿಗೆ ಸಿಗಲಿದೆ. ಈ ಫೋನ್ ಬೆಲೆ ಕ್ರಮವಾಗಿ 26,999 ಮತ್ತು 29,999 ರೂಪಾಯಿಯಾಗಿರಲಿದೆ.
ಆಸ್ಟೆರಾಯ್ಡ್ ಬ್ಲ್ಯಾಕ್, ಮರ್ಕ್ಯೂರಿ ಸಿಲ್ವರ್ ಮತ್ತು ಮಿಲ್ಕಿ ವೇ ಬಣ್ಣಗಳಲ್ಲಿ ಈ ಸ್ಮಾರ್ಟ್‌ಫೋನ್ ಸಿಗಲಿದೆ. ಈಗ ಬಿಡುಗಡೆಯಾಗಿರುವ ಈ ಫೋನ್ ಒನ್‌ಪ್ಲಸ್‌ನ ನಾರ್ಡ್ ಮತ್ತು ಶಿಯೋಮಿಯ ಎಂಐ 11 ಎಕ್ಸ್ ಸ್ಮಾರ್ಟ್‌ಫೋನ್‌ಗಳಿಗೆ ಪೈಪೋಟಿ ನೀಡಲಿದೆ ಎನ್ನಲಾಗುತ್ತಿದೆ. ಈ ಫೋನ್‌ನೊಂದಿಗೆ ರಿಯಲ್ ಅಪ್‌ಗ್ರೇಡ್ ಪ್ರೋಗ್ರಾಮ್ ಕೂಡ ಪರಿಚಯಿಸುತ್ತಿದೆ.
ಶೀಘ್ರವೇ ಭಾರತದಲ್ಲಿ ಪೋಕೋ ಎಂ3 ಪ್ರೋ 5ಜಿ ಸ್ಮಾರ್ಟ್‌ಫೋನ್ ಬಿಡುಗಡೆ?