ಬಿಡುಗಡೆಯಾಯ್ತು ಕಡಿಮೆ ಬೆಲೆಯಲ್ಲಿ ಭಾರತದ ಮೊದಲ IP69 Realme 14x 5G ಸ್ಮಾರ್ಟ್‌ಫೋನ್; ದರ, ಬ್ಯಾಟರಿ, ಫೀಚರ್ಸ್ ಮಾಹಿತಿ

Published : Dec 18, 2024, 04:32 PM ISTUpdated : Dec 18, 2024, 04:42 PM IST
ಬಿಡುಗಡೆಯಾಯ್ತು ಕಡಿಮೆ ಬೆಲೆಯಲ್ಲಿ ಭಾರತದ ಮೊದಲ  IP69  Realme 14x 5G ಸ್ಮಾರ್ಟ್‌ಫೋನ್; ದರ, ಬ್ಯಾಟರಿ, ಫೀಚರ್ಸ್ ಮಾಹಿತಿ

ಸಾರಾಂಶ

ರಿಯಲ್‌ಮಿ 14x 5G ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದ್ದು, ಬೆಲೆ, ಕ್ಯಾಮೆರಾ ಸೇರಿದಂತೆ ಇನ್ನಿತರ ವೈಶಿಷ್ಟ್ಯಗಳು ಬಹಿರಂಗಗೊಂಡಿವೆ. 6,000mAh ಬ್ಯಾಟರಿ, 45W ವಯರ್ಡ್ ಸಪೋರ್ಟ್ ಚಾರ್ಜಿಂಗ್, IP68 ಮತ್ತು IP69 ರೇಟಿಂಗ್‌ ಹೊಂದಿದೆ.

ನವದೆಹಲಿ: ಬಹುನಿರೀಕ್ಷಿತ  Realme 14x 5G ಸ್ಮಾರ್ಟ್‌ಫೋನ್ ಇಂದು ಬಿಡುಗಡೆಯಾಗಿದ್ದು,  ಡಿವೈಸ್ ಬೆಲೆ, ಕ್ಯಾಮೆರಾ ಸೇರಿದಂತೆ ಇನ್ನಿತರ ವೈಶಿಷ್ಟ್ಯಗಳು ಬಹಿರಂಗಗೊಂಡಿವೆ. ರಿಯುಲ್ ಮಿ ಕಂಪನಿಯ ಹೊಸ  5G ಸ್ಮಾರ್ಟ್‌ಫೋನ್ ಹೈ ಎಂಡ್ ಫೀಚರ್ಸ್ ಮತ್ತು ಕೈಗೆಟುಕುವ ದರದಲ್ಲಿ ಗ್ರಾಹಕರ ಮುಂದೆ ಬಂದಿದೆ. ರಿಯಲ್ ಮಿಯ 5G ಸ್ಮಾರ್ಟ್‌ಫೋನಿನ ಫೀಚರ್ಸ್ ಮಾಹಿತಿ ಇಲ್ಲಿದೆ. 

Battery
ರಿಯಲ್‌ಮಿ 14ಎಕ್ಸ್  ಸ್ಮಾರ್ಟ್‌ಫೋನ್  6,000mAh ಬ್ಯಾಟರಿ  ಜೊತೆ  45W ವಯರ್ಡ್ ಸಪೋರ್ಟ್ ಚಾರ್ಜಿಂಗ್ ಟೆಕ್ನಾಲಜಿ ಹೊಂದಿದೆ. ಅಡ್ವಾನ್ಸ್ ಚಾರ್ಜಿಂಗ್ ಸಿಸ್ಟಮ್ ಹೊಂದಿದ್ದು, 38 ನಿಮಿಷದಲ್ಲಿ ಶೇ.50ರಷ್ಟು ಬ್ಯಾಟರಿ ಫುಲ್ ಆಗುತ್ತದೆ. ಫುಲ್‌ ಚಾರ್ಜ್ ಆಗಲು 93 ನಿಮಿಷಗಳು ಬೇಕಾಗುತ್ತದೆ.

Design, Durability, and Colours
ರಿಯಲ್ ಮಿ ಕೇವಲ ಸೈಲಿಶ್ ಜೊತೆ ಹೆಚ್ಚು ಬಾಳಿಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ. 14x ಕಪ್ಪು, ಗೋಲ್ಡ್ ಮತ್ತು ಕೆಂಪು ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.  14x 5G ಸ್ಮಾರ್ಟ್‌ಫೋನ್ 15,000 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗುತ್ತಿರುವ ಭಾರತದ ಮೊದಲ IP69 ಫೋನ್ ಆಗಿದೆ. IP68 ಮತ್ತು IP69 ಎರಡರ ರೇಟಿಂಗ್‌ ಹೊಂದಿದ್ದು,  ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧವನ್ನು ಹೊಂದಿದೆ ಎಂದು ರಿಯಲ್ ಮಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದೆ. 

Storage, Configuration
ರಿಯಲ್ ಮಿ 14x 5G ಸ್ಮಾರ್ಟ್‌ಫೋನ್ ಮೂರು ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಈ ವೇರಿಯಂಟ್ ಮೇಲೆ ಸ್ಮಾರ್ಟ್‌ಫೋನ್ ಬೆಲೆಯಲ್ಲಿ  ವ್ಯತ್ಯಾಸವಾಗಿರುತ್ತದೆ. 6GB + 128GB, 8GB + 128GB, and 8GB + 256GB ಈ ಮೂರು ವೇರಿಯಂಟ್‌ಗಳಲ್ಲಿಯ ರಿಯುಲ್ ಮಿಯ 14 ಎಕ್ಸ್ ಗ್ರಾಹಕರಿಗೆ ಸಿಗಲಿದೆ.

ಇದನ್ನೂ ಓದಿ: ಸ್ಯಾಮ್‌ಸಂಗ್‌ ಶಾಕ್ ಕೊಟ್ಟ ನೋಕಿಯಾ; ₹4999ಯಲ್ಲಿ 75Hz ಡಿಸ್‌ಪ್ಲೇ, 5000mah ಬ್ಯಾಟರಿ 5G ಸ್ಮಾರ್ಟ್‌ಫೋನ್

Display, Technical Specifications
ಈ ಸ್ಮಾರ್ಟ್‌ಫೋನ್ 6.67 ಇಂಚು HD+ IPS LCD ಡಿಸ್‌ಪ್ಲೇ ಹೊಂದಿದೆ. ಗೇಮಿಂಗ್, ಸ್ಟ್ರೀಮಿಂಗ್ ಮತ್ತು ಬ್ರೌಸಿಂಗ್‌ ಉತ್ತಮ ಅನುಭವವನ್ನು ನೀಡುತ್ತದೆ.  ರಿಯಲ್‌ಮಿಯ 12ಎಕ್ಸ್ 5ಜಿ ಸ್ಮಾರ್ಟ್‌ಫೋನ್‌ನಲ್ಲಿದ್ದ ಎಲ್ಲಾ ವೈಶಿಷ್ಟ್ಯಗಳನ್ನು ಈ ಡಿವೈಸ್‌ನಲ್ಲಿ ಸುಧಾರಿಸಲಾಗಿದೆ.

Price
ರಿಯಲ್ ಮಿ 5G ಸ್ಮಾರ್ಟ್‌ಫೋನ್ ಬೆಲೆ ಹೀಗಿದೆ. 6+128GB ವೇರಿಯಂಟ್ ₹14,999, 8+128GB ವೇರಿಯಂಟ್ ಬೆಲೆ ₹15,999 ರೂಪಾಯಿ ಆಗಿದೆ. ಈ ಸ್ಮಾರ್ಟ್‌ಫೋನ್ ಮೇಲೆ 1000 ರೂಪಾಯಿಯವರೆಗೂ ಡಿಸ್ಕೌಂಟ್ ಲಭ್ಯವಿದೆ. ಈ ಆಫರ್ ಡಿಸೆಂಬರ್ 18ರಿಂದ ಡಿಸೆಂಬರ್ 22ರವರೆಗೆ ಮಾತ್ರ ಲಭ್ಯವಿರಲಿದೆ.

ಇದನ್ನೂ ಓದಿ:ಹೊಸ ವಿನ್ಯಾಸದೊಂದಿಗೆ ಬರುತ್ತಿದೆ SAMSUNG; ಕಡಿಮೆ ಬೆಲೆ, ಪವರ್‌ಫುಲ್ ಬ್ಯಾಟರಿ, ಸೂಪರ್ ಕ್ವಾಲಿಟಿ ಕ್ಯಾಮೆರಾ

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ನಿಮ್ಮ ಪವರ್‌ ಬ್ಯಾಂಕ್‌ನಲ್ಲಿ ಈ 5 ಸಂಕೇತ ಕಂಡರೆ ಅದು ಟೈಂ ಬಾಂಬ್! ತಕ್ಷಣ ಈ ಕೆಲಸ ಮಾಡಿ, ದುರಂತ ತಪ್ಪಿಸಿ!
ಜಿ ಮೇಲ್ ಫುಲ್ ಆಗಿದ್ಯಾ? Zoho Mail ಟ್ರೈ ಮಾಡಿ