Samsung Galaxy F06 5G ಸ್ಮಾರ್ಟ್‌ಫೋನ್ ಹೊಸ ವಿನ್ಯಾಸ ಮತ್ತು ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ. 50MP ಕ್ಯಾಮೆರಾ, 5000mAh ಬ್ಯಾಟರಿ ಮತ್ತು ಇತರ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರಲಿದೆ.
Samsung Galaxy F06: ಟೆಕ್ ಕಂಪನಿಯಾಗಿರುವ ಸ್ಯಾಮ್‌ಸಂಗ್ ಹೊಸತನದೊಂದಿಗೆ Galaxy F06 5G ಸ್ಮಾರ್ಟ್ಫಫೋನ್ ಲಾಂಚ್ ಮಾಡಲು ತಯಾರಿ ಮಾಡಿಕೊಂಡಿದೆ. ಸ್ಯಾಮ್‌ಸಂಗ್ ಗ್ಯಾಲಕ್ಷಿ ಎಫ್06 ಸ್ಮಾರ್ಟ್‌ಫೋನ್‌ನನ್ನು ಹೊಸ ಡಿಸೈನ್‌ನಲ್ಲಿ ತರಲು ಮುಂದಾಗಿದೆ. ಸ್ಮಾರ್ಟ್‌ಫೋನ್ ಬಿಡುಗಡೆಗೂ ಮುನ್ನವೇ ಕೆಲ ಫೀಚರ್‌ಗಳು ಲೀಕ್ ಆಗಿವೆ. ಸ್ಮಾರ್ಟ್‌ಫೋನ್ ಬ್ಯಾಕ್ ಪ್ಯಾನಲ್ ಜೊತೆ ಬರುತ್ತಿದೆ. ಮೈಸ್ಮಾರ್ಟ್‌ಪ್ರೈಸ್ ವರದಿ ಪ್ರಕಾರ, Galaxy F06 5G ಸ್ಮಾರ್ಟ್ಫಫೋನ್ ಅತ್ಯಾಕರ್ಷಕ ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿದು ಬಂದಿದೆ.
ಲೀಕ್ ಅಗಿರುವ ಮಾಹಿತಿ ಪ್ರಕಾರ, ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಕಿತ್ತಳೆ, ಕಡು ಹಸಿರು, ಕಪ್ಪು, ನೀಲಿ ಮತ್ತು ನೇರಳೆ (orange, dark green, black, blue, and purple) ಒಟ್ಟು 5 ಬಣ್ಣಗಳಲ್ಲಿ ಬರಲಿದೆ. ಈ ಐದು ಬಣ್ಣಗಳಿಗೆ ಸ್ಯಾಮ್‌ಸಂಗ್ ವಿಶೇಷ ಹೆಸರನ್ನಿಡುವ ಮೂಲಕ ಮಾರುಕಟ್ಟೆಗೆ ಪರಿಚಯಿಸಲಿದೆ. ಸದ್ಯದ ಮಾಹಿತಿ ಪ್ರಕಾರ, F06 ಸ್ಮಾರ್ಟ್‌ಫೋನಿನ ಕ್ಯಾಮೆರಾ ಸೆಟ್‌ಅಪ್, ಗ್ಯಾಲಕ್ಸಿ A36 ಜೊತೆ ಸಾಮ್ಯತೆಯನ್ನು ಹೊಂದಿದೆ.
undefined
Samsung Galaxy F06 ಇನ್ನಿತರ ವೈಶಿಷ್ಟ್ಯಗಳು
Display: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್06 ಫೋನ್ 6.7-inch HD+ LCD ಸ್ಕ್ರೀನ್ ಜೊತೆ ಟಿಯರ್‌ಟ್ರಾಪ್-ಸ್ಟೈಲ್ ನಾಚ್ ಒಳಗೊಂಡಿದೆ.
Camera: ಸ್ಪೋರ್ಟ್ ಡ್ಯುಯಲ್ ರಿಯರ್ ಕ್ಯಾಮೆರಾ ಯುನಿಟ್ ಹೊಂದಿದೆ. ಪ್ರೈಮರಿ ಕ್ಯಾಮೆರಾ 50 ಮೆಗಾಪಿಕ್ಸೆಲ್ ಮತ್ತು 2 ಮೆಗಾಪಿಕ್ಸೆಲ್ ಆಕ್ಷಿಲರಿ ಲೆನ್ಸ್ ಒಳಗೊಂಡಿರಲಿದೆ. ಸೆಲ್ಫಿಗಾಗಿ 8 ಎಂಪಿ ಕ್ಯಾಮೆರಾ ನೀಡಲಾಗಿದೆ.
ಇದನ್ನೂ ಓದಿ: Samsung 430MP ರಿಂಗ್ ಕ್ಯಾಮೆರಾವುಳ್ಳ 5G ಸ್ಮಾರ್ಟ್‌ಫೋನ್; 7300mAh ಬ್ಯಾಟರಿಯೊಂದಿಗೆ 512GB ಸ್ಟೋರೇಜ್
Battery And Charging: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್06 ಸ್ಮಾರ್ಟ್‌ಫೋನ್ 5,000mAh ಬ್ಯಾಟರಿ ಜೊತೆ 25W ವೈರ್ ಸಪೋರ್ಟ್ ಮಾಡುವ ಚಾರ್ಜಿಂಗ್ ಕೇಬಲ್ ನೀಡಲಾಗುತ್ತದೆ. ಇದರ ಜೊತೆ USB Type-C 2.0 port ಸಹ ಹೊಂದಿರುತ್ತದೆ. ಮೈಕ್ರೋ ಎಸ್‌ಡಿ ಕಾರ್ಡ ಸ್ಲಾಟ್ ಸಹ ಲಭ್ಯವಿರಲಿದೆ ಎಂದು ವರದಿಯಾಗಿದೆ.
Samsung Galaxy F05
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್06 ಸ್ಮಾರ್ಟ್‌ಫೋನ್ ಬೆಲೆ ಮತ್ತು ಸ್ಟೋರೇಜ್ ಕುರಿತು ಯಾವುದೇ ನಿಖರ ಮಾಹಿತಿ ಬಂದಿಲ್ಲ. ಈ ಮೊದಲು ಸ್ಮಾಮ್‌ಸಂಗ್ Galaxy F05 ಲಾಂಚ್ ಮಾಡಿತ್ತು.ಇದರ ಬೆಲೆ 7,599 ರೂಪಾಯಿ ಆಗಿದ್ದು, GB RAM, 64GB ಸ್ಟೋರೇಜ್ ಹಂದಿದೆ. Twilight Blue ಬಣ್ಣದಲ್ಲಿ ಸಿಗುತ್ತಿದ್ದು, 6.70-inch ಡಿಸ್‌ಪ್ಲೇ, 50-megapixel + 2-megapixel ರಿಯರ್ ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮೆರಾ ಜೊತೆ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.
ಇದನ್ನೂ ಓದಿ: ಸ್ಯಾಮ್‌ಸಂಗ್ ಶಾಕ್ ಕೊಟ್ಟ ನೋಕಿಯಾ; ₹4999ಯಲ್ಲಿ 75Hz ಡಿಸ್‌ಪ್ಲೇ, 5000mah ಬ್ಯಾಟರಿ 5G ಸ್ಮಾರ್ಟ್‌ಫೋನ್