ನೋಡಲು ಮಿನಿ ಸ್ಮಾರ್ಟ್‌ಫೋನ್, ಆದ್ರೆ 6000mAh ಬ್ಯಾಟರಿ; ಲೀಕ್‌ ಆಯ್ತು ಮಾಹಿತಿ

Published : Feb 17, 2025, 05:37 PM ISTUpdated : Feb 17, 2025, 05:38 PM IST
ನೋಡಲು ಮಿನಿ ಸ್ಮಾರ್ಟ್‌ಫೋನ್, ಆದ್ರೆ  6000mAh ಬ್ಯಾಟರಿ; ಲೀಕ್‌ ಆಯ್ತು ಮಾಹಿತಿ

ಸಾರಾಂಶ

ಒನ್‌ ಪ್ಲಸ್ ಅವರ ನೂತನ ಮಿನಿ ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆಯಾಗಲಿದೆ. 6000mAh ಬ್ಯಾಟರಿ, 6.3 ಇಂಚಿನ ಸ್ಕ್ರೀನ್ ಮತ್ತು 50MP ಕ್ಯಾಮೆರಾ ಹೊಂದಿರಲಿದೆ ಎನ್ನಲಾಗಿದೆ.

OnePlus 13 Mini : ಭಾರತದ ಮಾರುಕಟ್ಟೆಗೆ ಶೀಘ್ರದಲ್ಲಿಯೇ  ಒನ್‌ಪ್ಲಸ್ 13 ಮಿನಿ ಸ್ಮಾರ್ಟ್‌ಫೋನ್ ಲಗ್ಗೆ ಇಡಲಿದೆ. 2024 ಅಕ್ಟೋಬರ್‌ನಲ್ಲಿ ಚೀನಾದ ಮಾರುಕಟ್ಟೆಯಲ್ಲಿ ಒನ್‌ಪ್ಲಸ್ 13 ಮಿನಿ ಸ್ಮಾರ್ಟ್‌ಫೋನ್ ಪರಿಚಯಿಸಲಾಗಿತ್ತು.  ಚೀನಾದಲ್ಲಿ ಬಿಡುಗಡೆಯಾದ ಸ್ಮಾರ್ಟ್‌ಫೋನ್ 6.82 ಇಂಚಿನ  AMOLED ಸ್ಕ್ರೀನ್ ಹೊಂದಿತ್ತು.  ಇದೀಗ ಒನ್‌ಪ್ಲಸ್ 13 ಮಿನಿ ಸ್ಮಾರ್ಟ್‌ಫೋನ್ ಬಿಡುಗಡೆ ಮೊದಲೇ ಕೆಲ ಮಾಹಿತಿಗಳು ಲೀಕ್ ಆಗಿವೆ. ಲೀಕ್ ಮಾಹಿತಿಯಲ್ಲಿ ಡಿಸ್‌ಪ್ಲೇ,  ಚಿಪ್‌ಸೆಟ್,  ಬ್ಯಾಟರಿ ಮತ್ತು ಕ್ಯಾಮೆರಾ ವೈಶಿಷ್ಟ್ಯ ಹೊರ ಬಂದಿದೆ. ಈ ವರ್ಷ ಏಪ್ರಿಲ್‌ನಲ್ಲಿ ಈ ಸ್ಮಾರ್ಟ್‌ಫೋನ್ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ಚಿಕ್ಕ ಗಾತ್ರದ ಒನ್‌ಪ್ಲಸ್ ಸ್ಮಾರ್ಟ್‌ಫೋನ್  6,000mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿಯನ್ನು ಒಳಗೊಂಡಿರಲಿದೆ ಎಂದು ಹೇಳಲಾಗುತ್ತಿದೆ. 

ಒನ್‌ಪ್ಲಸ್ 13 ಮಿನಿ ಸ್ಮಾರ್ಟ್‌ಫೋನ್  ಫೀಚರ್ಸ್ 
ಚೀನಾದ ಟಿಪಸ್ಟರ್ ಡಿಜಿಟಲ್ ಚಾಟ್ ಸ್ಟೇಶನ್ (tipster Digital Chat Station) ವರದಿ ಪ್ರಕಾರ, ಒನ್‌ಪ್ಲಸ್ 13 ಮಿನಿ ಸ್ಮಾರ್ಟ್‌ಫೋನ್ 6,000mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿ ಮತ್ತು 6.3 ಇಂಚಿನ ಸ್ಕ್ರೀನ್ ಹೊಂದಿರಲಿದೆ.  ಇದೇ ವರ್ಷದ ಮಧ್ಯದಲ್ಲಿ ಈ ಫೋನ್ ಬಿಡುಗಡೆಯಾಗಲಿದೆ ಎಂದು ಟಿಪಸ್ಟರ್ ವರದಿ ಮಾಡಿದೆ. ಇದೇ ವರದಿಯಲ್ಲಿ OnePlus ಮತ್ತು Oppo ಸ್ಮಾರ್ಟ್‌ಫೋನ್ 2025ರ ಜೂನ್ ನಂತರ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಈ ಎರಡು ಡಿವೈಸ್‌ಗಳು ಕ್ರಮವಾಗಿ 6,500mAh ಮತ್ತು 7,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. 

ಒನ್‌ಪ್ಲಸ್ 13 ಮಿನಿ ಸ್ಮಾರ್ಟ್‌ಫೋನ್ ಕೆಲವು ಆಯ್ದ ಮಾರುಕಟ್ಟೆಯಲ್ಲಿ ಮಾತ್ರ ಬಿಡುಗಡೆ ಮಾಡಲಾಗುತ್ತೆ ಎಂದು ಹೇಳಲಾಗುತ್ತಿದೆ. ಒನ್‌ಪ್ಲಸ್ 13T 6.31 ಇಂಚಿನ, 1.5K LTPO OLED ಸ್ಕ್ರೀನ್  ಫ್ಲ್ಯಾಟ್ ಇರಲಿದೆ. ಇದು Snapdragon 8 Elite SoC ಮತ್ತು ಸೆಕ್ಯುರಿಟಿಗಾಗಿ ಫಿಂಗರ್‌ಪ್ರಿಂಟ್ ಸೆನ್ಸಾರ್ ಸಹ ಒಳಗೊಂಡಿದೆ. ಡಿವೈಸ್ ಗ್ಲಾಸ್ ಬಾಡಿ ಮೆಟಲ್ ಫ್ರೇಮ್‌ನೊಂದಿಗೆ ಬರಲಿದೆ. 

ಇನ್ನು ಕ್ಯಾಮೆರಾ ನೋಡೋದಾದ್ರೆ   ಒನ್‌ಪ್ಲಸ್ 13 ಮಿನಿ 5G ಸ್ಮಾರ್ಟ್‌ಫೋನ್  50 ಮೆಗಾಪಿಕ್ಸೆಲ್ ಪ್ರೈಮರಿ ರಿಯರ್ ಸೆನ್ಸಾರ್ ಜೊತೆ 50 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್  ಮತ್ತು  2x ವರ್ಟಿಕಲ್ ಝೂಮ್ ಸಪೋರ್ಟ್ ಹೊಂದಿರಲಿದೆ ಎನ್ನಲಾಗುತ್ತಿದೆ. ಇನ್ನು ಕೆಲ ವರದಿಗಳ ಪ್ರಕಾರ,  Sony IMX906 ಮೇನ್ ಸೆನ್ಸಾರ್ ಜೊತೆ 8 ಮೆಗಾಪಿಕ್ಸೆಲ್ ಥರ್ಡ್ 9 ಮೆಗಾಪಿಕ್ಸೆಲ್ ಟಿಲಿಫೋಟೋ ಶೂಟರ್ ಇರಲಿದೆ ಎನ್ನಲಾಗಿದೆ.

ಇದನ್ನೂ ಓದಿ: ಇದುವರೆಗಿನ ಜಬರ್ದಸ್ತ್ ಆಫರ್; ಕಡಿಮೆ ಬೆಲೆಗೆ 330MP ಕ್ಯಾಮೆರಾ, 16GB RAM, 6700mAh ಬ್ಯಾಟರಿಯ 5G ಸ್ಮಾರ್ಟ್‌ಪೋನ್

ಸ್ಲಿಮ್ IP68 and IP69-rated ಡಿಸೈನ್ ಹೊಂದಿರಲಿದ್ದು, ಶಾರ್ಪ್  120Hz ಡಿಸ್‌ಪ್ಲೇ ಇರಲಿದೆ. ಪವರ್‌ಫುಲ್ ಬ್ಯಾಟರಿ ಜೊತೆ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಸಿಗಲಿದೆ. ಇದೆಲ್ಲದರೊಂಗೆ ಈ ಸ್ಮಾರ್ಟ್‌ಫೋನ್ ಅತ್ಯಧಿಕ AI features ಹೊಂದಿರಲಿದೆಯಂತೆ. ಆದ್ರೆ ಸ್ಮಾರ್ಟ್‌ಫೋನ್  ಬೆಲೆ  ಮತ್ತು ಸ್ಟೋರೇಜ್ ಮಾಹಿತಿ ತಿಳಿದು ಬಂದಿಲ್ಲ. 

Disclaimer:ಈ ಮಾಹಿತಿ ಅಂತರ್ಜಾಲದಲ್ಲಿರುವ ಮಾಹಿತಿಯನ್ನು ಆಧರಿಸಿದೆ. 5G ಸ್ಮಾರ್ಟ್‌ಫೋನ್ ಬಿಡುಗಡೆ ವೇಳೆ ಫೀಚರ್ ಸೇರಿದಂತೆ ವಿನ್ಯಾಸದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇರುತ್ತದೆ. ಸಂಭಾವ್ಯ ಖರೀದಿದಾರರು ಬೆಲೆ, ವೈಶಿಷ್ಟ್ಯಗಳು ಮತ್ತು ಲಭ್ಯತೆಯ ಬಗ್ಗೆ ದೃಢಪಡಿಸಿದ ವಿವರಗಳಿಗಾಗಿ OnePlusನಿಂದ ಅಧಿಕೃತ ಪ್ರಕಟಣೆಗಳಿಗಾಗಿ ಕಾಯಬೇಕಾಗುತ್ತದೆ.

ಇದನ್ನೂ ಓದಿ: ಕೇವಲ 1406 ರೂಪಾಯಿಯಲ್ಲಿ ಮನೆಗೆ ತನ್ನಿ 8GB+256GB ಸ್ಟೋರೇಜ್ 5G ಸ್ಮಾರ್ಟ್‌ಫೋನ್ ಮೇಲೆ

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ನಿಮ್ಮ ಪವರ್‌ ಬ್ಯಾಂಕ್‌ನಲ್ಲಿ ಈ 5 ಸಂಕೇತ ಕಂಡರೆ ಅದು ಟೈಂ ಬಾಂಬ್! ತಕ್ಷಣ ಈ ಕೆಲಸ ಮಾಡಿ, ದುರಂತ ತಪ್ಪಿಸಿ!
ಜಿ ಮೇಲ್ ಫುಲ್ ಆಗಿದ್ಯಾ? Zoho Mail ಟ್ರೈ ಮಾಡಿ