ಹೊಸ 5G ಸ್ಮಾರ್ಟ್‌ಫೋನ್: 250MP ಕ್ಯಾಮೆರಾ, 6500mAh ಬ್ಯಾಟರಿ, ಅತ್ಯಧಿಕ ಫೀಚರ್ಸ್

Published : Feb 05, 2025, 06:34 PM IST
ಹೊಸ 5G ಸ್ಮಾರ್ಟ್‌ಫೋನ್: 250MP ಕ್ಯಾಮೆರಾ, 6500mAh ಬ್ಯಾಟರಿ, ಅತ್ಯಧಿಕ ಫೀಚರ್ಸ್

ಸಾರಾಂಶ

ಹೊಸ 5G ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಜ್ಜಾಗಿದೆ. 250MP ಕ್ಯಾಮೆರಾ, 6500mAh ಬ್ಯಾಟರಿ, AMOLED ಡಿಸ್‌ಪ್ಲೇಯಂತಹ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಈ ಫೋನ್ ಜೂನ್ ಅಥವಾ ಜುಲೈನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

Vivo New Look Smartphone: ವಿವೋ ತನ್ನ ಹೊಸ 5G ಸ್ಮಾರ್ಟ್‌ಫೋನ್ ಬಿಡುಗಡೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಹೊಸ 5G ಸ್ಮಾರ್ಟ್‌ಫೋನ್ ಅತ್ಯಧಿಕ ಫೀಚರ್ಸ್ ಹೊಂದಿದೆ ಎಂದು ಹೇಳಲಾಗುತ್ತಿದೆ. ಈ ಸ್ಮಾರ್ಟ್‌ಫೋನ್  ಅಮಲೋಡ್ ಡಿಸ್‌ಪ್ಲೇ  ಸ್ಕ್ರೀನ್ ಜೊತೆಯಲ್ಲಿ , 6500mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿಯನ್ನು ಒಳಗೊಂಡಿರಲಿದೆ. ಫಾಸ್ಟ್ ಚಾರ್ಜಿಂಗ್‌ ಸಪೋರ್ಟ್ ಮಾಡಲಿದ್ದು, ಇದು ಬ್ಯಾಟರಿ ದೀರ್ಘ ಸಮಯದವರೆಗೆ ಬಾಳಿಕೆ ಬರಲಿದೆ. ಪದೇ ಪದೇ ಬ್ಯಾಟರಿ ಚಾರ್ಜ್ ಖಾಲಿಯಾಗುತ್ತೆ ಅನ್ನೋರಿಗೆ ಈ ಸ್ಮಾರ್ಟ್‌ಫೋನ್ ಒಳ್ಳೆಯ ಆಯ್ಕೆಯಾಗಲಿದೆ. ಕೆಲ ವರದಿಗಳ ಪ್ರಕಾರ ವಿವೋ ಕಂಪನಿಯ ಹೊಸ ಸ್ಮಾರ್ಟ್‌ಫೋನ್ 250MP ಸಾಮರ್ಥ್ಯದ ಕ್ಯಾಮೆರಾ ಹೊಂದಿರಲಿದೆ. 

Display: Vivo T4x 5G ಸ್ಮಾರ್ಟ್‌ಫೋನ್ 6.67 ಇಂಚಿನ ಡಿಸ್‌ಪ್ಲೇ ಹೊಂದಿರಲಿದೆಯಂತೆ ಹಾಗೂ ಅತ್ಯಂತ ಸ್ಟ್ರಾಂಗ್ ಸ್ಕ್ರೀನ್‌ನೊಂದಿಗೆ ಗ್ರಾಹಕರಿಗೆ ಸಿಗಲಿದೆ. Amoled ಡಿಸ್‌ಪ್ಲೇ ಸ್ಕ್ರೀನ್ 1080×2400 ಪಿಕ್ಸೆಲ್ ಇರಲಿದ್ದು, 120Hz ರಿಫ್ರೆಶ್ ರೇಟ್‌ನೊಂದಿಗೆ ಬಿಡುಗಡೆಯಾಗುವ ಸಾಧ್ಯತೆಗಳಿವೆ. 

Camera: ಮಾರುಕಟ್ಟೆಯಲ್ಲಿ ವಿವೋ ಗುಣಮಟ್ಟದ ಕ್ಯಾಮೆರಾಗೆ ಫೇಮಸ್. ಮೇನ್ ಕ್ಯಾಮೆರಾ 250MP,ಸೆಕೆಂಡರಿ ಕ್ಯಾಮೆರಾ 28MP, ಅಲ್ಟ್ರಾ ವೈಡ್ 13MP ಇರಲಿದೆ ಎನ್ನಲಾಗಿದೆ. ಇನ್ನು ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಾಗಿ 43MP ಕ್ಯಾಮೆರಾ ಇರಲಿದೆ ಎಂದು ಹೇಳಲಾಗಿದೆ.

Battery: ಇನ್ನು ಬ್ಯಾಟರಿ ವಿಷಯಕ್ಕೆ ಬಂದ್ರೆ  Vivo T4x 5G ಸ್ಮಾರ್ಟ್‌ಫೋನ್ 6500mAh ಹೊಂದಿರಲಿದೆ. ಆದ್ರೆ ಇದಕ್ಕೆ ಸಪೋರ್ಟ್ ಮಾಡುವ ಚಾರ್ಜ್ ಎಷ್ಟು ಸಾಮರ್ಥ್ಯದ್ದು ಎಂದು ತಿಳಿದು ಬಂದಿಲ್ಲ. 

Memory: ಕೆಲ ವರದಿಗಳ ಪ್ರಕಾರ ವಿವೋ ಕಂಪನಿಯ ಹೊರ ಅವತರಣಿಕೆ ಸ್ಮಾರ್ಟ್‌ಫೋನ್  256GB ಸ್ಟೋರೇಜ್ ಹೊಂದಿರಲಿದೆ. ಹೊಸ ಸ್ಮಾರ್ಟ್‌ಫೋನ್ 8GBನಲ್ಲಿ ಲಭ್ಯವಿರಲಿದೆ. Vivo T4x ಮಾಡೆಲ್ ಬೇರೆ ಬೇರೆ ವೇರಿಯಂಟ್‌ಗಳಲ್ಲಿ ಲಭ್ಯವಿರೊ ಸಾಧ್ಯತೆಗಳಿವೆ. ಈ ವೇರಿಯಂಟ್ ಆಧಾರದ ಮೇಲೆ ಬೆಲೆಗಳು ಭಿನ್ನವಾಗಿರುತ್ತವೆ.

ಇದನ್ನೂ ಓದಿ: 50MP+32MP ಕ್ಯಾಮೆರಾ, 128GB ಸ್ಟೋರೇಜ್, 5000mAh ಬ್ಯಾಟರಿ ಸ್ಮಾರ್ಟ್‌ಫೋನ್ ಮೇಲೆ ₹7,000 ಡಿಸ್ಕೌಂಟ್

ವಿವೋ ಕಂಪನಿಯ ಹೊಸ ಸ್ಮಾರ್ಟ್‌ಫೋನ್ ಈ ಜೂನ್ ಅಥವಾ ಜುಲೈನಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಈವರೆಗೂ ವಿವೋ ಕಂಪನಿ  Vivo T4x 5G ಸ್ಮಾರ್ಟ್‌ಫೋನ್ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.  

Disclaimer: ಈ ಮಾಹಿತಿ ಅಂತರ್ಜಾಲದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸ್ಮಾರ್ಟ್‌ಫೋನ್ ಬಿಡುಗಡೆ ವೇಳೆ ಫೀಚರ್ ಸೇರಿದಂತೆ ವಿನ್ಯಾಸದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇರುತ್ತದೆ. ಸಂಭಾವ್ಯ ಖರೀದಿದಾರರು ಬೆಲೆ, ವೈಶಿಷ್ಟ್ಯಗಳು ಮತ್ತು ಲಭ್ಯತೆಯ ಬಗ್ಗೆ ದೃಢಪಡಿಸಿದ ವಿವರಗಳಿಗಾಗಿ Vivo ನಿಂದ ಅಧಿಕೃತ ಪ್ರಕಟಣೆಗಳಿಗಾಗಿ ಕಾಯಬೇಕಾಗುತ್ತದೆ.

ಇದನ್ನೂ ಓದಿ: ನಿಮ್ಮ ಬಜೆಟ್‌ನಲ್ಲಿ ಬರುತ್ತೆ 108MP ಕ್ಯಾಮೆರಾ, 24GB RAM ಹೊಂದಿರುವ 5G ಸ್ಮಾರ್ಟ್‌ಫೋನ್

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ನಿಮ್ಮ ಪವರ್‌ ಬ್ಯಾಂಕ್‌ನಲ್ಲಿ ಈ 5 ಸಂಕೇತ ಕಂಡರೆ ಅದು ಟೈಂ ಬಾಂಬ್! ತಕ್ಷಣ ಈ ಕೆಲಸ ಮಾಡಿ, ದುರಂತ ತಪ್ಪಿಸಿ!
ಜಿ ಮೇಲ್ ಫುಲ್ ಆಗಿದ್ಯಾ? Zoho Mail ಟ್ರೈ ಮಾಡಿ