ನಥಿಂಗ್ ಸ್ಮಾರ್ಟ್‌ಫೋನ್‌ಗೆ ರಣವೀರ್ ಸಿಂಗ್ ಬ್ರ್ಯಾಂಡ್ ಅಂಬಾಸಿಡರ್, ಭಾರತದಲ್ಲಿ ಹೊಸ ಅಧ್ಯಾಯ!

By Suvarna News  |  First Published Feb 25, 2024, 10:38 PM IST

ಲಂಡನ್ ಮೂಲದ ನಥಿಂಗ್ ಸ್ಮಾರ್ಟ್‌ಫೋನ್ ಇದೀಗ ತನ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ನಟ ರಣವೀರ್ ಸಿಂಗ್ ನೇಮಕ ಮಾಡಿದೆ. ಭಾರತದಲ್ಲಿ ಹೊಸ ಅಧ್ಯಾಯ ಆರಂಭಿಸಿರುವ ನಥಿಂಗ್ ಪ್ರತಿಸ್ಪರ್ಧಿಗಳಿಗೆ ನಡುಕು ನೀಡಿದೆ.


ಮುಂಬೈ(ಫೆ.25) ಲಂಡನ್ ಮೂಲದ ಗೃಹಬಳಕೆ ತಂತ್ರಜ್ಞಾನ ಬ್ರ್ಯಾಂಡ್ ನಥಿಂಗ್‌ ಭಾರತದ ಸುಪರ್‌ಸ್ಟಾರ್ ರಣವೀರ್ ಸಿಂಗ್ ಜೊತೆಗೆ ಸಹಭಾಗಿತ್ವ  ಘೋಷಿಸಿದೆ. ನಟ ರಣವೀರ್ ಸಿಂಗ್ ಇದೀಗ ನಥಿಂಗ್ ಸ್ಮಾರ್ಟ್‌ಫೋನ್ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ನಥಿಂಗ್ ಬ್ರ್ಯಾಂಡ್‌ನ ಡಿಜಿಟಲ್, ಪ್ರಿಂಟ್ ಹಾಗೂ ಟಿವಿಸಿ ಅಭಿಯಾನಗಳಲ್ಲಿ ರಣವೀರ್ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ.  ಈ ಮೂಲಕ ಭಾರತದಲ್ಲಿ ನಥಿಂಗ್ ಹೊಸ ಅಧ್ಯಾಯ ಆರಂಭಿಸಿದೆ. 

ನಥಿಂಗ್ ಜೊತೆಗಿನ ಒಪ್ಪಂದಕ್ಕೆ ರಣವೀರ್ ಸಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ.  ಈ ಕಂಪನಿಯ ಜೊತೆಗೆ ಸೇರಿಕೊಳ್ಳುವುದಕ್ಕೆ ನನಗೆ ನಿಜವಾಗಿಯೂ ಖುಷಿಯಾಗುತ್ತಿದೆ. ಅವರ ಬ್ರ್ಯಾಂಡ್‌ನ ಸೌಂದರ್ಯ ಮತ್ತು ಅದ್ಭುತ ವಿನ್ಯಾಸವು ನನ್ನನ್ನು ಸೆಳೆಯಿತು. ಈ ಪಾಲುದಾರಿಕೆಗೆ ಹೊಸ ಅರ್ಥ ಸಿಗುತ್ತದೆ ಎಂದು ನಾನು ಭಾವಿಸಿದೆ. ಸ್ಮಾರ್ಟ್‌ಫೋನ್ ಉದ್ಯಮದಲ್ಲಿ ಹೊಸ ಅಲೆ ಎಬ್ಬಿಸುವುದಕ್ಕೆ ನಥಿಂಗ್ ಬದ್ಧವಾಗಿದೆ. ನಥಿಂಗ್ ಜೊತೆಗೆ ಸಹಭಾಗಿತ್ವ ಸಾಧಿಸಲು ಮತ್ತು ನಿಜವಾಗಿಯೂ ಅದ್ಭುತವಾದುದನ್ನು ರಚಿಸಲು ನಾನು ಕಾತರದಿಂದ ಕಾಯುತ್ತಿದ್ದೇನೆ ಎಂದರು.

Tap to resize

Latest Videos

undefined

Nothing Phone (1) ಭಾರತದಲ್ಲಿ Jio 5G ಬೆಂಬಲಿತ ಮೊದಲ ಫೋನ್

“ನಥಿಂಗ್ ಅನ್ನು ನಾವು ಆರಂಭಿಸಿದಾಗಿನಿಂದಲೂ, ಭಾರತದಿಂದ ನಮಗೆ ಅಭೂತಪೂರ್ವ ಪ್ರತಿಕ್ರಿಯೆ ಮತ್ತು ಬೆಂಬಲ ವ್ಯಕ್ತವಾಗಿದೆ. ಭಾರತದ ಮಾರ್ಕೆಟ್‌ನಲ್ಲಿ ನಮ್ಮ ಮಹತ್ವಾಕಾಂಕ್ಷೆ ಪ್ರತಿ ದಿನವೂ ವಿಸ್ತರಿಸುತ್ತಲೇ ಇದೆ. ಭಾರತದಲ್ಲಿ ಉತ್ಪಾದನೆಯನ್ನು ಆರಂಭಿಸಿದಾಗಿನಿಂದ, ದೇಶದಲ್ಲಿ ನಾವು ಹಲವು ಗ್ರಾಹಕ ಸೇವಾ ಕೇಂದ್ರಗಳನ್ನು ತೆರೆಯುತ್ತಿದ್ದೇವೆ. ನಮ್ಮ ಬ್ರ್ಯಾಂಡ್ ಅನ್ನು ಇನ್ನಷ್ಟು ಬೆಳೆಸುವುದಕ್ಕೆ ಈ ಪಾಲುದಾರಿಕೆ ಅತ್ಯಂತ ನೈಸರ್ಗಿಕ ಹಂತವಾಗಿದೆ. ರಣವೀರ್ ಅವರನ್ನು ನಮ್ಮ ಜೊತೆಗೆ ಸೇರಿಕೊಳ್ಳಲು ಅಧಿಕೃತವಾಗಿ ನಾನು ಆಹ್ವಾನಿಸುತ್ತಿದ್ದೇನೆ! ನಾವು ಹಲವು ಕಾಲದಿಂದಲೂ ಬಾಂಧವ್ಯವನ್ನು ಹೊಂದಿದ್ದೆವು. ಅವರ ಕ್ರಿಯಾಶೀಲತೆಯು ನಮ್ಮ ಬ್ರ್ಯಾಂಡ್‌ಗೆ ಉತ್ತಮವಾಗಿ ಹೊಂದಿಕೆಯಾಗುತ್ತದೆ. ಈ ಬಾಂಧವ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಾವು ಕಾಯುತ್ತಿದ್ದೇವೆ  ಎಂದು ನಥಿಂಗ್‌ ಸಹ ಸಂಸ್ಥಾಪಕ ಅಕಿಸ್ ಇವಾಂಜೆಲಿಡಿಸ್‌ ಹೇಳಿದ್ದಾರೆ.

ನಥಿಂಗ್‌ನ ಮುಂಬರುವ ಸ್ಮಾರ್ಟ್‌ಫೋನ್ ಫೋನ್ (2ಎ) ಅನ್ನು ಮಾರ್ಚ್‌ 5 ರಂದು ಜಾಗತಿಕವಾಗಿ ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿತ್ತು. ಭಾರತದ ದೆಹಲಿಯಿಂದ ಈ ಕಾರ್ಯಕ್ರಮವನ್ನು ಲೈವ್ ಸ್ಟ್ರೀಮ್ ಮಾಡಲಾಗುತ್ತದೆ ಮತ್ತು ಇದರಲ್ಲಿ ಸಾವಿರಾರು ಜನರು ಭಾಗಿಯಾಗಲಿದ್ದಾರೆ. ದೈನಂದಿನ ಸ್ಮಾರ್ಟ್‌ಫೋನ್ ಅನುಭವವನ್ನು ಉತ್ತಮವಾಗಿಸಲು ಮತ್ತು ಮೂಲ ಬಳಕೆದಾರರ ಅಗತ್ಯವನ್ನು ದುಪ್ಪಟ್ಟು ಮಾಡಲು, ನಥಿಂಗ್‌ ವಿನ್ಯಾಸದ ಅನ್ವೇಷಣೆ, ಪರಿಣಿತಿ ಮತ್ತು ಕೌಶಲವನ್ನೆಲ್ಲ ಬಳಸಿಕೊಳ್ಳುವ ಉದ್ದೇಶದಿಂದ ಫೋನ್ (2ಎ) ಅನ್ನು ರೂಪಿಸಲಾಗಿದೆ. ಫೋನ್ (2) ಯಲ್ಲಿರುವ ಬಹುತೇಕ ವೈಶಿಷ್ಟ್ಯಗಳನ್ನು ಫೋನ್ (2ಎ) ಬಳಸಿಕೊಳ್ಳಲಿದೆ ಮತ್ತು ಎಲ್ಲ ವಿಷಯದಲ್ಲೂ ಫೋನ್ (1) ಗೆ ಹೋಲಿಸಿದರೆ ಅಪ್‌ಗ್ರೇಡ್ ಆಗಿರಲಿದೆ.

Nothing Phone (1): ಆ್ಯಪಲ್‌ ಐಫೋನ್‌ಗೆ ಸೆಡ್ಡು ಹೊಡೆಯಲು ಹೊಸ ಸ್ಮಾರ್ಟ್‌ಫೋನ್ ಕಂಪನಿ ಸಜ್ಜು!

click me!