Apple iPhoneನಲ್ಲಿನ ಈ ಸೆನ್ಸರ್ ಕೆಂಪು ಬಣ್ಣಕ್ಕೆ ತಿರುಗಿದರೆ ನಿಮ್ಮ ಸ್ಮಾರ್ಟ್‌ಫೋನ್ ಅಪಾಯದಲ್ಲಿದೆ ಎಂದರ್ಥ!

By Suvarna News  |  First Published Jan 11, 2022, 2:15 PM IST

ನಿಮ್ಮ ಐಫೋನ್‌ ಅಥವಾ ಆ್ಯಪಲ್‌ನ ಯಾವುದೇ ಸಾಧನ ನೀರಿನಿಂದ ಹಾನಿಗೊಳಗಾಗಿದ್ದರೆ ಸಾಧನದಲ್ಲಿರುವ ಸೆನ್ಸರ್ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಹಾಗಾಗಿ ಫೋನ್ ದೋಷಯುಕ್ತವಾಗಿದೆಯೇ ಎಂಬುದನ್ನು ಪರಿಶೀಲಿಸುವುದು ಅತ್ಯಗತ್ಯ. 


Tech Desk: ಜಗತ್ತಿನ ಟೆಕ್‌ ದೈತ್ಯ ಆ್ಯಪಲ್ ಐಫೋನ್‌ (Apple Iphone) ತನ್ನ ಉತ್ಕೃಷ್ಟ ಸಾಧನಗಳ ಮೂಲಕವೇ ಮನೆ ಮಾತಾಗಿದೆ. ಫ್ಲ್ಯಾಗ್‌ಶಿಪ್ ಫೋನ್‌ಗಳಲ್ಲೇ ಅತ್ಯಂತ ದುಬಾರಿ ಮತ್ತು ಬಹುತೇಕ ಬಳಕೆದಾರರು ಇಷ್ಟಪಡುವ ಐಫೋನ್‌ಗಳು ಹಲವು ಫೀಚರ್ಸ್‌ಗಳನ್ನು ನೀಡುತ್ತವೆ. ಆ್ಯಪಲ್‌ ಐಫೋನ್‌ ಲೇಟೆಸ್ಟ್ ಮಾದರಿಗಳು ವಾಟರ್‌ ರೆಸಿಸ್ಟಂಟ್‌ ವೈಶಿಷ್ಟ್ಯ ಹೊಂದಿವೆ. ಆದರೆ ಯಾವುದೇ ಐಫೋನ್ ಸಂಪೂರ್ಣವಾಗಿ ಜಲನಿರೋಧಕವಲ್ಲ (Water Proof). ನೀವು ಫೋನ್ ಅನ್ನು ನೀರಿನಲ್ಲಿ ಅಥವಾ ಇನ್ನಾವುದೇ ದ್ರವದಲ್ಲಿ ಸಾಕಷ್ಟು ಸಮಯದವರೆಗೆ ಇಟ್ಟರೆ ಹಾನಿಯಾಗುವುದು ಖಚಿತ. ಆ ಕಾರಣಕ್ಕಾಗಿ, ತಯಾರಕರು "Water Resistant" ಎಂಬ ಪದವನ್ನು ಬಳಸುತ್ತಾರೆ. ಹಾಗಾದರೆ ನಿಮ್ಮ ಐಫೋನ್‌ ನೀರಿನಿಂದ ಹಾನಿಗೊಳಗಾಗಿದೆ ಎಂದು ತಿಳಿಯುವುದು ಹೇಗೆ? ಇಲ್ಲಿದೆ ಡಿಟೇಲ್ಸ್

ನಿಮ್ಮ ಐಫೋನ್‌ ಅಥವಾ ಆ್ಯಪಲ್‌ನ ಯಾವುದೇ ಸಾಧನ ನೀರಿನಿಂದ ಹಾನಿಗೊಳಗಾಗಿದ್ದರೆ ಸಾಧನದಲ್ಲಿರುವ ಸೆನ್ಸರ್ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಆದ್ದರಿಂದ ನಿಮ್ಮ ಫೋನ್ ನೀರು ಅಥವಾ ಯಾವುದೇ ದ್ರವದಲ್ಲಿ ಬಿದ್ದಿದ್ದರೆ  ಅದು ದೋಷಯುಕ್ತವಾಗಿದೆಯೇ ಎಂಬುದನ್ನು ಪರಿಶೀಲಿಸುವುದು ಅತ್ಯಗತ್ಯವಾಗಿದೆ. ಹೆಚ್ಚಿನ ಆಧುನಿಕ ಐಫೋನ್‌ಗಳು ಮತ್ತು ಐಪ್ಯಾಡ್‌ಗಳಲ್ಲಿ ಲಿಕ್ವಿಡ್ ಕಾಂಟ್ಯಾಕ್ಟ್ ಇಂಡಿಕೇಟರ್‌ಗಳು ( Liquid Contact Indicators) ಎಂದು ಕರೆಯಲಾಗು ಸೆನ್ಸರ್‌ ಅಳವಡಿಸಲಾಗಿರುತ್ತದೆ. ಐಫೋನ್ 5 ಮತ್ತು ನಂತರ ಬಿಡುಗಡೆಯಾದ ಸಾಧನಗಳಲ್ಲಿ ಸಿಮ್ ಕಾರ್ಡ್ ಟ್ರೇ ಪಕ್ಕದಲ್ಲಿ  ಸೆನ್ಸರ್ ಕಾಣಬಹುದು. ಹಳೆಯ ಐಫೋನ್‌ಗಳ ಬಳಕೆದಾರರು ಹೆಡ್‌ಫೋನ್ ಜಾಕ್ ಸಾಕೆಟ್‌ನಲ್ಲಿ ಸೆನ್ಸರ್ ಪರಿಶೀಲಿಸಬಹುದು.

Tap to resize

Latest Videos

undefined

ಸೆನ್ಸರ್ ಬಿಳಿ ಅಥವಾ ಬೆಳ್ಳಿ ಬಣ್ಣದಾಗಿದ್ದರೆ ನಿಮ್ಮ ಸಾಧನವು ನೀರಿನ ಹಾನಿಯಾಗಿಲ್ಲ ಎಂದರ್ಥ.  ಸೆನ್ಸರ್ ಕೆಂಪು ಬಣ್ಣಕ್ಕೆ ತಿರುಗಿದ್ದರೆ ನಿಮ್ಮ ಸಾಧನ ಹಾನಿಗೊಳಗಾಗಿರಬಹುದು. ಸಿಮ್ ಕಾರ್ಡ್ ಟ್ರೇ ಅನ್ನು ತೆಗೆದು ಒಳಗೆ ಇಣುಕಿ ನೋಡಿದಾಗ ಈ ಇಂಡಿಕೇಟರ್‌ ಕಾಣುತ್ತದೆ. ಇದನ್ನು ನೋಡಲು ಸ್ವಲ್ಪ ಕಷ್ಟವಾಗಬಹುದು, ಆದ್ದರಿಂದ ಆಪಲ್  ಭೂತಗನ್ನಡಿಯನ್ನು (Magnifying Glass ) ಬಳಸಿ ಚೆಕ್‌ ಮಾಡುವಂತೆ ಸಲಹೆ ನೀಡುತ್ತದೆ.‌ ಆಪಲ್ ಸಾಧನಗಳ ಸಂಪೂರ್ಣ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಮತ್ತು ಅವುಗಳಲ್ಲಿ ಪ್ರತಿಯೊಂದಕ್ಕೂ ನೀವು ಸೆನ್ಸರ್‌ ಎಲ್ಲಿ ಚೆಕ್‌ ಮಾಡಬಹುದು ಎಂದಬುದನ್ನು ತಿಳಿಸಿದೆ. ಈ ಪಟ್ಟಿಯನ್ನು ನೀವು ಇಲ್ಲಿ ನೋಡಬಹುದು

ಇದನ್ನೂ ಓದಿ: Apple CEO Earnings 2021ರಲ್ಲಿ ಊಹೆಗೂ ನಿಲುಕದ ಆದಾಯ ಗಳಿಸಿದ ಆ್ಯಪಲ್ ಸಿಇಒ ಟಿಮ್ ಕುಕ್!

ಯಾವುದೇ ದ್ರವದಿಂದ ಉಂಟಾದ ಹಾನಿಯನ್ನು Apple ನ ಪ್ರಮಾಣಿತ ಒಂದು ವರ್ಷದ ಲಿಮಿಟೆಡ್‌ ವಾರಂಟಿ ಅಡಿಯಲ್ಲಿ ಕವರ್‌ ಮಾಡಲಾಗುವುದಿಲ್ಲ. ಆದ್ದರಿಂದ ನೀವು ರಿಪೇರಿಗಾಗಿ ಅಥವಾ ಬದಲಿಗಾಗಿ ಹಣ ಪಾವತಿಸಬೇಕಾಗಬಹುದು. "ನೀರು ಅಥವಾ ನೀರನ್ನು ಹೊಂದಿರುವ ದ್ರವವನ್ನು ಸಂಪರ್ಕಿಸಿದಾಗ LCI ಸಕ್ರಿಯಗೊಳ್ಳುತ್ತದೆ. ಸೂಚಕದ ಬಣ್ಣವು ಸಾಮಾನ್ಯವಾಗಿ ಬಿಳಿ ಅಥವಾ ಬೆಳ್ಳಿಯಾಗಿರುತ್ತದೆ, ಆದರೆ ಅದು ನೀರು ಅಥವಾ ನೀರನ್ನು ಹೊಂದಿರುವ ದ್ರವವನ್ನು ಸಂಪರ್ಕಿಸಿದಾಗ ಅದು ಸಂಪೂರ್ಣವಾಗಿ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಉತ್ಪನ್ನಗಳು ಸೂಚಿಸಿರುವ ಪರಿಸರ ಅಗತ್ಯತೆಗಳ ಅನುಸಾರವಾಗಿ  ತೇವಾಂಶ ಮತ್ತು ತಾಪಮಾನ ಹೊಂದಿದ್ದರೆ, ಈ ಬದಲಾವಣೆಗಳಿಂದಾಗಿ LCI ಸಕ್ರಿಯಗೊಳ್ಳುವುದಿಲ್ಲ" ಎಂದು ಆ್ಯಪಲ್  ಹೇಳಿದೆ.

3 ಲಕ್ಷ ಕೋಟಿ ಮೌಲ್ಯದ ಗಡಿ ಮುಟ್ಟಿದ ವಿಶ್ವದ ಮೊದಲ ಕಂಪನಿ!

ಟೆಕ್ ಜಗತ್ತಿನ ದೈತ್ಯ ಕಂಪನಿಗಳಲ್ಲಿ ಒಂದಾಗಿರುವ ಆ್ಯಪಲ್‌ ಇಂಕ್ (Apple Inc ) ಉದ್ಯಮ ಜಗತ್ತಿನಲ್ಲಿ ಹೊಸ ಮೈಲಿಗಲ್ಲು ನೆಟ್ಟಿದೆ. ವಿಶ್ವದಲ್ಲಿಯೇ 3 ಲಕ್ಷ ಕೋಟಿ ಷೇರು ಮಾರುಕಟ್ಟೆ ಮೌಲ್ಯದ ( $3 trillion stock market value)ಗಡಿ ಮುಟ್ಟಿದ ಮೊಟ್ಟಮೊದಲ ಕಂಪನಿ ಎನ್ನುವ ಖ್ಯಾತಿಗೆ ಸಿಲಿಕಾನ್ ವ್ಯಾಲಿಯ ಆ್ಯಪಲ್‌ ಇಂಕ್ ಪಾತ್ರವಾಗಿದೆ. 2022ರ ವರ್ಷದ ಮೊದಲ ಟ್ರೇಡಿಂಗ್ ದಿನದಂದೇ ಆ್ಯಪಲ್‌ ಈ ಮೈಲಿಗಲ್ಲು ಸಾಧಿಸಿರುವುದು ವಿಶೇಷವಾಗಿದೆ. ಇಂಟ್ರಾ ಡೇ ಟ್ರೇಡಿಂಗ್ ನಲ್ಲಿ ಕಂಪನಿಯ ಷೇರುಗಳು ದಾಖಲೆಯ ಗರಿಷ್ಠ 182.88 ಯುಎಸ್ ಡಾಲರ್ ಗೆ ಏರಿದ್ದರಿಂದ ಕಂಪನಿಯ ಒಟ್ಟಾರೆ ಮೌಲ್ಯ ಕೆಲ ಸಮಯದವರೆಗೆ 3 ಟ್ರಿಲಿಯನ್ ಯುಎಸ್ ಡಾಲರ್ ಗಡಿ ದಾಟಿತ್ತು. ಆದರೆ, ದಿನದ ಅಂತ್ಯಕ್ಕೆ ಷೇರುಗಳಲ್ಲಿ ಸಣ್ಣ ಕುಸಿತ ಕಾಣುವ ಮೂಲಕ ಈ ದಾಖಲೆಯನ್ನು ಉಳಿಸಿಕೊಳ್ಳಲು ವಿಫಲವಾಯಿತು.

click me!