ಜಿಯೋದಿಂದ 15000 ರೂಪಾಯಿಗೆ 4ಜಿ ಲ್ಯಾಪ್‌ಟಾಪ್‌?

By Anusha Kb  |  First Published Oct 4, 2022, 9:08 AM IST

ಮುಖೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೋ 4ಜಿ ಸಿಮ್‌ಕಾರ್ಡ್‌ ಇರುವ ಲ್ಯಾಪ್‌ಟಾಪ್‌ ಅನ್ನು ಕೇವಲ 15,000 ರೂಗಳಿಗೆ ಒದಗಿಸಲಿದೆ ಎಂದು ವರದಿಗಳು ಹೇಳಿವೆ.


ನವದೆಹಲಿ: ಮುಖೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೋ 4ಜಿ ಸಿಮ್‌ಕಾರ್ಡ್‌ ಇರುವ ಲ್ಯಾಪ್‌ಟಾಪ್‌ ಅನ್ನು ಕೇವಲ 15,000 ರು.ಗಳಿಗೆ ಒದಗಿಸಲಿದೆ ಎಂದು ವರದಿಗಳು ಹೇಳಿವೆ.

ಕಡಿಮೆ ದರದಲ್ಲಿ ಲಭ್ಯವಾಗುವ ಜಿಯೋ ಫೋನ್‌ಗಳು (Jio Phones) ಭಾರತದಲ್ಲಿ ಭಾರೀ ಯಶಸ್ಸು ಸಾಧಿಸಿದ ಬೆನ್ನಲ್ಲೇ, ಜಿಯೋ ಕಂಪನಿ 'ಜಿಯೋ ಬುಕ್‌' (Jio Book) ಎನ್ನುವ ಲ್ಯಾಪ್‌ಟಾಪ್‌ (laptop) ಬಿಡುಗಡೆಗೆ ಮುಂದಾಗಿದೆ. ಇದಕ್ಕಾಗಿ ಜಾಗತಿಕ ಕಂಪನಿಗಳಾದ ಕ್ವಾಲ್‌ಕೊಮ್‌ (Qualcomm) ಹಾಗೂ ಮೈಕ್ರೋಸಾಫ್ಟ್ (Microsoft) ಜತೆಗೆ ಕೈಜೋಡಿಸಿ 4ಜಿ ಸಿಮ್‌ಕಾರ್ಡ್‌ (4G SIM card) ಇರುವ ಜಿಯೋಬುಕ್‌ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎನ್ನಲಾಗಿದೆ.

Latest Videos

undefined

ಅಕ್ಟೋಬರ್‌ನಿಂದಲೇ ಶಾಲೆಗಳು, ಸರ್ಕಾರಿ (government) ಸಂಸ್ಥೆಗಳಿಗೆ ಈ ಲ್ಯಾಪ್‌ಟಾಪ್‌ ಒದಗಿಸುವ ಯೋಜನೆಯಿದ್ದು, ಮುಂದಿನ 3 ತಿಂಗಳಲ್ಲಿ ಇದು ಎಲ್ಲ ಗ್ರಾಹಕರಿಗೂ ಲಭ್ಯವಾಗಲಿದೆ. ಇದರೊಂದಿಗೆ ಜಿಯೋ 5ಜಿ ಬೆಂಬಲಿತ ಸ್ಮಾರ್ಟ್ ಪೋನ್‌ (smartphone) ಕೂಡಾ ಮಾರುಕಟ್ಟೆಗೆ ಬರಲಿದೆ ಎನ್ನಲಾಗಿದೆ.

ಜಿಯೋ ಲ್ಯಾಪ್‌ಟಾಪ್‌ನಲ್ಲಿ (Jio Laptop) ಜಿಯೋ ಆಪರೇಟಿಂಗ್‌ ಸಿಸ್ಟಮ್‌ (Jio Operating System) ಇರಲಿದ್ದು, ಆ್ಯಪ್‌ಗಳನ್ನು ಜಿಯೋ ಸ್ಟೋರ್‌ನಿಂದ ಡೌನ್ಲೋಡ್‌ ಮಾಡಿಕೊಳ್ಳಬಹುದಾಗಿದೆ. ಇದನ್ನು ಕಾರ್ಪೊರೇಟ್‌ ಕಚೇರಿಯಲ್ಲೂ ಟ್ಯಾಬ್ಲೆಟ್‌ಗೆ ಪರ್ಯಾಯವಾಗಿ ಬಳಸಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.
 

click me!