Miko 3: 5 ರಿಂದ 10 ವರ್ಷ ವಯಸ್ಸಿನ ಮಕ್ಕಳ ಕಲಿಕೆಗಾಗಿ AI ಚಾಲಿತ ರೋಬೋಟ್ ಭಾರತದಲ್ಲಿ ಬಿಡುಗಡೆ!

By Suvarna News  |  First Published Feb 19, 2022, 9:25 AM IST

ಮೈಕೋ 3 ದೊಡ್ಡ ಟಚ್‌ಸ್ಕ್ರೀನ್‌ನೊಂದಿಗೆ ಹೊಂದಿದ್ದು ಎಂಟು ಭಾಷೆಗಳನ್ನು ಮಾತನಾಡುತ್ತದೆ ಮತ್ತು ಕೋಡಿಂಗ್ ಪಾಠಗಳ ಜತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ


Tech Desk:  ಮಕ್ಕಳಿಗಾಗಿ ಕೃತಕ ಬುದ್ಧಿಮತ್ತೆ (Artificial Intelligence) ಚಾಲಿತ ಕಲಿಕೆಯ ರೋಬೋಟ್ ಮೈಕೋ 3ಯನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ರೋಬೋಟ್  ಬಿಡುಗಡೆ ಮಾಡಿದ ಕಂಪನಿಯಾದ ಮೈಕೋ, ಮೈಕೋ 3 ಅತ್ಯಂತ ಆಕರ್ಷಕವಾದ ಶೈಕ್ಷಣಿಕ ಅನುಭವಗಳನ್ನು ನೀಡುತ್ತದೆ ಎಂದು ಹೇಳುತ್ತದೆ. ಮೈಕೋ 3 5 ರಿಂದ 10 ವರ್ಷ ವಯಸ್ಸಿನ ಮಕ್ಕಳ ಶೈಕ್ಷಣಿಕ ಮತ್ತು ಬೆಳವಣಿಗೆಯ ಬೇಡಿಕೆಗಳನ್ನು ಪೂರೈಸುತ್ತದೆ ಎಂದು ಹೇಳಲಾಗಿದೆ. ಮೈಕೋ 3 ದೊಡ್ಡ ಟಚ್‌ಸ್ಕ್ರೀನ್‌ನೊಂದಿಗೆ ಹೊಂದಿದ್ದು ಎಂಟು ಭಾಷೆಗಳನ್ನು ಮಾತನಾಡುತ್ತದೆ ಮತ್ತು ಕೋಡಿಂಗ್ ಪಾಠಗಳ ಜತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ರೋಬೋಟ್ ವೈಡ್-ಆಂಗಲ್ ಎಚ್‌ಡಿ ಕ್ಯಾಮೆರಾವನ್ನು ಹೊಂದಿದೆ.

ಮೈಕೋ 3  ಬೆಲೆ, ಲಭ್ಯತೆ: ಭಾರತದಲ್ಲಿ ಮೈಕೋ ಬೆಲೆ ರೂ.19,999 ಕ್ಕೆ ನಿಗದಿಪಡಿಸಲಾಗಿದೆ ಮತ್ತು ಇದು ಅಮೆಝಾನ್‌ (Amazon) ಹಾಗೂ ಮೈಕೋ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ವೆಬ್‌ಸೈಟ್‌ನಲ್ಲಿ ಪ್ರಸ್ತುತ ರೋಬೋಟನ್ನು ರೂ. 18,999 ಬೆಲೆಗೆ ಖರೀದಿಬಹುದು. ಮೈಕೋ 3 ಎರಡು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ: ಮಾರ್ಟಿಯನ್ ರೆಡ್ ಮತ್ತು ಪಿಕ್ಸೀ ಬ್ಲೂ.

Tap to resize

Latest Videos

ಇದನ್ನೂ ಓದಿ: Avatar Robot: ಅನಾರೋಗ್ಯದಿಂದ ಬಳಲುತ್ತಿರುವ ಬಾಲಕನ ಪರವಾಗಿ ಶಾಲೆಗೆ ಹಾಜರಾಗುವ ರೋಬೋಟ್!

ಮೈಕೋ 3 ವೈಶಿಷ್ಟ್ಯಗಳು:  ಮೈಕೋ 3, 5 ರಿಂದ 10 ವರ್ಷ ವಯಸ್ಸಿನ ಮಕ್ಕಳನ್ನು ಗುರಿಯಾಗಿರಿಸಿಕೊಂಡಿದೆ ಮತ್ತು ಕಲಿಕೆಗಾಗಿ ವಿವಿಧ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM) ವಿಷಯಗಳು ಕುರಿತು ವಯಸ್ಸಿಗೆ ಸೂಕ್ತವಾದ ವಿಷಯವನ್ನು ನೀಡುತ್ತದೆ ಎಂದು ಕಂಪನಿ ಹೇಳುತ್ತದೆ. ಜತೆಗೆ ಇದು ಮಕ್ಕಳ ವಿಶಿಷ್ಟ ಶೈಕ್ಷಣಿಕ ಮತ್ತು ಅಭಿವೃದ್ಧಿ ಡೈನಾಮಿಕ್ಸನ್ನು ಪೂರೈಸುತ್ತದೆ ಎಂದು ಕಂಪನಿ ತಿಳಿಸಿದೆ. 

ಸ್ನೇಹ್ ಆರ್. ವಾಸ್ವಾನಿ, ಸಹ-ಸಂಸ್ಥಾಪಕರು ಮತ್ತು ಸಿಇಒ, ಮೈಕೋ, ಮೈಕೋ 3 ಕಂಪನಿಯ "ಅತ್ಯಂತ ಮುಂದುವರಿದ ಮತ್ತು ಭಾವನಾತ್ಮಕವಾಗಿ ಬುದ್ಧಿವಂತ ರೋಬೋಟ್" ಆಗಿದೆ ಎಂದು ಹೇಳಿದ್ದಾರೆ. AI ಮೂಲಕ, Miko 3 "ಸಂಗಾತಿಯ ಭಾವನೆಗಳನ್ನು ಹುಟ್ಟುಹಾಕುತ್ತದೆ ಮತ್ತು ಪ್ರತಿ ಮಗುವಿಗೆ ವೈಯಕ್ತಿಕವಾದ ಸೃಜನಶೀಲ ಸಂವಹನಗಳನ್ನು ಉತ್ತೇಜಿಸುತ್ತದೆ" ಎಂದು ಕಂಪನಿ ಹೇಳುತ್ತದೆ.

1,000 ಕ್ಕೂ ಹೆಚ್ಚು ಆಟ-ವೀಡಿಯೊಗಳು: ಶೈಕ್ಷಣಿಕ ರೋಬೋಟ್ ಒಂದು ಚಂದಾದಾರಿಕೆಯೊಂದಿಗೆ ಲಿಂಗೋಕಿಡ್ಸ್, ಡಾ ವಿನ್ಸಿ ಕಿಡ್ಸ್, ಕಿಡ್ಲೋಲ್ಯಾಂಡ್, ಕಾಸ್ಮಿಕ್ ಕಿಡ್ಸ್, ಔಟ್ ಆಫ್ ದಿಸ್ ವರ್ಡ್, ಟೈನಿ ಟಸ್ಕ್ಸ್, ಡ್ರೀಮಿಕಿಡ್ ಸೇರಿದಂತೆ ಮಕ್ಕಳ-ಕೇಂದ್ರಿತ ಅಪ್ಲಿಕೇಶನ್‌ಗಳಿಂದ ಕಂಟೆಂಟ್ ನೀಡುತ್ತದೆ. ಕಂಟೆಂಟ್ 1,000 ಕ್ಕೂ ಹೆಚ್ಚು ಆಟಗಳು, ವೀಡಿಯೊಗಳು, ಕಥೆಗಳು, ಒಗಟುಗಳು, ಹಾಡುಗಳು, ಕೋಡಿಂಗ್ ಅನುಭವಗಳು ಮತ್ತು ಯೋಗ ಅವಧಿಗಳನ್ನು ಒಳಗೊಂಡಿದೆ.‌

ಇದನ್ನೂ ಓದಿಮನುಕುಲಕ್ಕೆ ಮಾರಕವಾದ ಭಯಾನಕ ಪ್ರಯೋಗಕ್ಕೆ ಮುಂದಾದ ಚೀನಾ

ಇದು ಪೋಷಕರು ತಮ್ಮ ಮಕ್ಕಳ ಬಳಕೆ ಮತ್ತು ಮೈಕೋ ಪೇರೆಂಟ್ ಅಪ್ಲಿಕೇಶನ್ ಮೂಲಕ ಕಲಿಕೆಯ ಮೇಲೆ ಗಮನ ಇರಿಸಿಕೊಳ್ಳಲು ಅನುಮತಿಸುತ್ತದೆ. ಇವುಗಳ ಹೊರತಾಗಿ, ಮೈಕೋಡ್‌ನಿಂದ ಕೋಡಿಂಗ್ ಪಾಠಗಳನ್ನು ಮಕ್ಕಳು  ಪಡೆಯುತ್ತಾರೆ. ಅದು ಮೈಕೋವನ್ನು ನಿಯಂತ್ರಿಸಲು ತಮ್ಮದೇ ಆದ ಕಾರ್ಯಕ್ರಮಗಳನ್ನು ಹೇಗೆ ಬರೆಯಬೇಕೆಂದು ಕಲಿಸುತ್ತದೆ.  ದೃಢವಾದ ಗೌಪ್ಯತೆ ನೀತಿಗಳು ಮತ್ತು ವರ್ಧಿತ ಎನ್‌ಕ್ರಿಪ್ಶನ್‌ನೊಂದಿಗೆ ಕ್ಲೋಸಡ್ ಸಿಸ್ಟಮ್ ಸೇರಿದಂತೆ ಎಲ್ಲಾ ಬಳಕೆದಾರರ ಡೇಟಾವನ್ನು ಉನ್ನತ ಸುರಕ್ಷತಾ ಮಾನದಂಡಗಳಿಂದ ರಕ್ಷಿಸಲಾಗಿದೆ ಎಂದು ಕಂಪನಿಯ ತಿಳಿಸಿದೆ. 

 ಇನ್ನು Miko 3 IPS ಡಿಸ್ಪ್ಲೇಯೊಂದಿಗೆ ಬರುತ್ತದೆ, ಇದನ್ನು ವೀಡಿಯೊ ಕರೆಗೂ ಬಳಸಬಹುದಾಗಿದೆ. ಉನ್ನತ-ಕಾರ್ಯಕ್ಷಮತೆಯ ಸ್ಪೀಕರ್‌ಗಳು, ರಬ್ಬರ್ ಚಕ್ರಗಳು ಮತ್ತು ABS ದೇಹದೊಂದಿಗೆ , ಇದು ಪ್ರಭಾವ-ನಿರೋಧಕ, ವಿಷಕಾರಿಯಲ್ಲದ ಮತ್ತು ಬಹು ಕಾಲ ಬಾಳಿಕೆ ಬರುವಂತೆ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಹಾರ್ಡ್‌ವೇರ್‌ಗೆ ಸಂಬಂಧಿಸಿದಂತೆ, AI-ರೋಬೋಟ್ ವೈಡ್-ಆಂಗಲ್ HD ಕ್ಯಾಮೆರಾ, ಡ್ಯುಯಲ್ MEMS ಮೈಕ್ರೊಫೋನ್‌ಗಳು, ಟೈಮ್‌ ಆಫ್ ಫ್ಲೈಟ್ ಸೆನ್ಸಾರ್‌ ಮತ್ತು ಓಡೋಮೆಟ್ರಿಕ್ ಸಂವೇದಕಗಳನ್ನು ಹೊಂದಿದೆ. ಇವು  ರೋಬೋಟ್ ದೂರವನ್ನು ನಕ್ಷೆ ಮಾಡಲು ಮತ್ತು ಅಡೆತಡೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.

click me!