*2021ರ ನಾಲ್ಕನೇ ತ್ರೈಮಾಸಿಕದಲ್ಲಿ ಜಾಗತಿಕ ಕಂಪ್ಯೂಟರ್ ಮಾರಾಟದಲ್ಲಿ ಲೆನೋವೋ ಮುಂದಿದೆ.
*ಲೆನೋವೋ ಬಳಿಕ ನಂತರದ ಸ್ಥಾನದಲ್ಲಿ ಎಚ್, ಡೆಲ್, ಆಪಲ್, ಏಸರ್ ಕಂಪನಿಗಳಿವೆ
*ಇಡೀ ವರ್ಷದ ಲೆಕ್ಕಾಚಾರದಲ್ಲೂ ಲೆನೋವೋ ತನ್ನ ಮುಂಚೂಣಿಯನ್ನು ಕಾಯ್ದುಕೊಂಡಿದೆ.
Tech Desk: ಕೋವಿಡ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಮೊಬೈಲ್ (Mobile), ಟ್ಯಾಬ್ಲೆಟ್ (Tablet)ನಂಥ ಸಾಧನಗಳಿಗೆ ವಿಪರೀತ ಬೇಡಿಕೆಯುಂಟಾಗಿತ್ತು. ವರ್ಕ್ ಫ್ರಂ ಹೋಮ್ ಮತ್ತು ಆನ್‌ಲೈನ್ ಕ್ಲಾಸ್‌ಗಳು ಶುರುವಾಗಿದ್ದು ಇದಕ್ಕೆಕಾರಣ. ಅದೇ ರೀತಿ, ಪರ್ಸನಲ್ ಕಂಪ್ಯೂಟರ್ (PC)ಗಳಿಗೂ ಕಳೆದ ವರ್ಷ ಒಳ್ಳೆಯ ಬೇಡಿಕೆಯಿತ್ತು. ಪರಿಣಾಮ ಲೆನೋವೋ (Lenovo), ಎಚ್ ಪಿ (HP), ಡೆಲ್ (Dell), ಆಪಲ್ (Apple) ಸೇರಿ ಕೆಲವು ಕಂಪನಿಗಳು ಪರ್ವಾಗಿಲ್ಲ ಎನ್ನಬಹುದಾದಂಥ ಪ್ರದರ್ಶನವನ್ನು ತೋರಿವೆ. ಜಾಗತಿಕ ಪರ್ಸನಲ್ ಕಂಪ್ಯೂಟರ್ ಮಾರುಕಟ್ಟೆಯಲ್ಲಿ ಕನಿಷ್ಠ ಬೆಳವಣಿಗೆಯಂತೂ ಖಂಡಿತವಾಗಿದೆ.
2021ರ ನಾಲ್ಕನೇ ತ್ರೈಮಾಸಿಕದಲ್ಲಿ ಯಾವ ಕಂಪನಿಗಳು ಎಷ್ಟು ಕಂಪ್ಯೂಟರ್‌ಗಳು ಮಾರಾಟ ಮಾಡಿವೆ ಎಂಬ ಮಾಹಿತಿಯನ್ನು ಒಳಗೊಂಡ ವರದಿಯನ್ನು ಮಾರುಕಟ್ಟೆ ವಿಶ್ಲೇಷಕ ಕಂಪನಿಯಾಗಿರುವ Canalys ಬಿಡುಗಡೆ ಮಾಡಿದೆ. ಡೆಸ್ಕ್ ಟಾಪ್ ಲ್ಯಾಪ್‌ಟ್ಯಾಪ್ ಮತ್ತು ವರ್ಕ್‌ಸ್ಟೇಷನ್ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ.1ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದರೆ, ಜಾಗತಿಕ ಮಾರುಕಟ್ಟೆಯಲ್ಲಿ ಪರ್ಸನಲ್ ಕಂಪ್ಯೂಟರ್ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ.15 ಬೆಳವಣಿಗೆಯನ್ನು ದಾಖಲಿಸಿದೆ. ಇದರಲ್ಲಿ ಚೀನಾ ಮೂಲದ ಲೆನೋವೋ ಕಂಪನಿಯು ಮುಂಚೂಣಿಯಲ್ಲಿದೆ.
undefined
Canalys ವರದಿಯ ಪ್ರಕಾರ, ಜಾಗತಿಕ ಮಾರುಕಟ್ಟೆಯಲ್ಲಿ ವರ್ಷದಿಂದ ವರ್ಷಕ್ಕೆ ಪರ್ಸನಲ್ ಕಂಪ್ಯೂಟರ್‌ಗಳ ಮಾರಾಟ ಪ್ರಮಾಣವು 91 ದಶಲಕ್ಷದಿಂದ 92 ದಶಲಕ್ಷಕ್ಕೆ ಏರಿಕೆಯಾಗಿದೆ. ಈ ಮಾರಾಟ ಪ್ರಮಾಣದಲ್ಲಿ ಚೀನಾ ಮೂಲದ ಲೆನೋವೋ (Lenovo) ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದರೆ ನಂತರದ ಸ್ಥಾನದಲ್ಲಿ ಎಚ್‌ಪಿ(HP), ಡೆಲ್ (Dell), ಆಪಲ್ (Apple) ಮತ್ತು ಏಸರ್ (Acer) ಗಳಿವೆ.
ಇದನ್ನೂ ಓದಿ: Signal CEO Resigns: ವಾಟ್ಸಾಪ್ ಪ್ರತಿಸ್ಪರ್ಧಿ ಸಿಗ್ನಲ್ ಸಿಇಒ ಮೋಕ್ಸೀ ರಾಜಿನಾಮೆ, ಅವರ ಸ್ಥಾನಕ್ಕೆ ಯಾರು?
ವರದಿಯ ಪ್ರಕಾರ, 2021ರ ನಾಲ್ಕನೇ ತ್ರೈಮಾಸಿಕದಲ್ಲಿ 92 ಮಿಲಿಯನ್ ಡೆಸ್ಕ್‌ಟಾಪ್ (Desktop)ಗಳು, ಲ್ಯಾಪ್‌ಟಾಪ್ (Laptop)ಗಳು ಮತ್ತು ವರ್ಕ್‌ಸ್ಟೇಷನ್‌ಗಳನ್ನು ರವಾನಿಸುವುದರೊಂದಿಗೆ ಜಾಗತಿಕ ಪರ್ಸನಲ್ ಕಂಪ್ಯೂಟರ್ ಮಾರಾಟ ಶೇ.1ರಷ್ಟು ಬೆಳೆದಿದೆ. ಅದೇ ಸಮಯದಲ್ಲಿ 2020ರಲ್ಲಿ, 91 ಮಿಲಿಯನ್ ಕಂಪ್ಯೂಟರ್‌ಗಳನ್ನು ಜಾಗತಿಕವಾಗಿ ಮಾರಾಟ ಮಾಡಲಾಗಿದೆ. ಇದು ಡಿಸೆಂಬರ್ 2021ಕ್ಕೆ ಕೊನೆಗೊಳ್ಳುವ ವರ್ಷಕ್ಕೆ ಈ ಪ್ರಮಾಣ 341 ಮಿಲಿಯನ್ ಯುನಿಟ್‌ಗಳನ್ನು ತಲುಪಲು ಕಾರಣವಾಯಿತು.
ಹಾಗಾಗಿ ಈ ಹಿಂದಿನ ವರ್ಷದ ಮಾರಾಟಕ್ಕೆ ಹೋಲಿಸಿದರೆ 2021ರಲ್ಲಿ ಜಾಗತಿಕ ಕಂಪ್ಯೂಟರ್ ಮಾರಾಟದಲ್ಲಿ ಶೇ.15ರಷ್ಟು ಹೆಚ್ಚಳವಾಗಿದೆ. ಮತ್ತು 2019ರಿಂದ 29 ಪ್ರತಿಶತದಷ್ಟು ಬೆಳೆದಿದೆ. 2021 ಜಾಗತಿಕವಾಗಿ ಅತಿದೊಡ್ಡ ಕಂಪ್ಯೂಟರ್ ಮಾರಾಟವು ಸಾಧ್ಯವಾಗಿದೆ.
ಇದನ್ನೂ ಓದಿ: Apple Fitness ಹೊಸ ವರ್ಷದ ಫಿಟ್ನೆಸ್ ರೆಸಲ್ಯೂಶನ್ ಕಾರ್ಯಗತಗೊಳಿಸಲು ಬಂದಿದೆ ಆ್ಯಪಲ್ ಫಿಟ್ನೆಸ್ ಪ್ಲಸ್
2021ರ ನಾಲ್ಕನೇ ತ್ರೈಮಾಸಿಕದಲ್ಲಿ ಚೀನಾ ಮೂಲದ ಲೆನೋವೋ ಕಂಪನಿಯು ಪರ್ಸನಲ್ ಕಂಪ್ಯೂಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿದೆ. ಇದು ಒಟ್ಟಾರೆ, ನಾಲ್ಕನೇ ತ್ರೈಮಾಸಿಕದಲ್ಲಿ 21.7 ದಶಲಕ್ಷ ಕಂಪ್ಯೂಟರ್‌ಗಳನ್ನು ಮಾರಾಟ ಮಾಡಿದೆ. ನಂತರದ ಸ್ಥಾನದಲ್ಲಿ ಎಚ್‌ಪಿ 18.7 ದಶಲಕ್ಷ, ಡೆಲ್ 17.2 ದಶಲಕ್ಷ, ಆಪಲ್ 7.8 ದಶಲಕ್ಷ ಮತ್ತು ಏಸರ್ 6.6 ಮಿಲಿಯನ್ ಕಂಪ್ಯೂಟರ್ ಮಾರಾಟ ಮಾಡಿವೆ. ಇಡೀ ಪೂರ್ತಿ ವರ್ಷದ ಲೆಕ್ಕಾಚಾರವನ್ನು ತೆಗೆದುಕೊಂಡರೆ ಲೆನೋವೋ ಒಟ್ಟಾರೆ 82.1 ಮಿಲಿಯನ್ ಕಂಪ್ಯೂಟರ್ ಮಾರಾಟ ಮಾಡಿ, 13.1 ಪ್ರತಿಶತ ಬೆಳವಣಿಗೆಯನ್ನು ದಾಖಲಿಸಿದೆ. ಇದೇ ವೇಳೆ ಎಚ್‌ಪಿ ಶೇ.9.5 ಬೆಳವಣಿಗೆಯನ್ನು ದಾಖಲಿಸಿದರೆ, ಡೆಲ್ ಮತ್ತು ಆಪಲ್ ಕ್ರಮವಾಗಿ 2021ರಲ್ಲಿ ಒಟ್ಟು 59.3 ಮತ್ತು 29 ದಶಲಕ್ಷ ಕಂಪ್ಯೂಟರ್ ಮಾರಾಟ ಮಾಡಿವೆ. ಏಸರ್ ಜಾಗತಿಕ ಈ ವರ್ಷ 24.4 ಮಿಲಿಯನ್ ಪಿಸಿ ಮಾರಾಟ ಮಾಡುವಲ್ಲಿ ಸಕ್ಸೆಸ್ ಕಂಡಿದೆ.
ಇದೇ ವೇಳೆ, 2021ರ ನಾಲ್ಕನೇ ತ್ರೈಮಾಸಿಕದಲ್ಲಿ ಪರ್ಸನಲ್ ಕಂಪ್ಯೂಟರ್ ಉದ್ಯಮವು ಅಂದಾಜು ಒಟ್ಟು 5,17,510 ಕೋಟಿ ರೂ.( 70 ಶತಕೋಟಿ ಡಾಲರ್) ಮೌಲ್ಯದ ಆದಾಯವನ್ನು ಹೊಂದಿದೆ. ಅಂದರೆ, ವರ್ಷದಿಂದ ವರ್ಷಕ್ಕೆ ಈ ಪ್ರಮಾಣದಲ್ಲಿ ಶೇ.11ರಷ್ಟು ಬೆಳವಣಿಗೆಯನ್ನು ಕಾಣಲಾಗಿದೆ. ಹಾಗೆಯೇ, 2021ರಲ್ಲಿ ಒಟ್ಟು ಆದಾಯದ ಮೊತ್ತ 250 ಶತಕೋಟಿ ಡಾಲರ್ ಅಂದರೆ, ಹೆಚ್ಚು ಕಡಿಮೆ 18,48,290 ಕೋಟಿ ರೂಪಾಯಿ ಎಂದು ಹೇಳಬಹುದು. ಮತ್ತು ಇದು ವರ್ಷದಿಂದ ವರ್ಷಕ್ಕೆ ಬೆಳವಣಿಗೆಯಲ್ಲಿ ಶೇ. 15ರಷ್ಟಾಗಿದೆ ಎನ್ನಬಹುದು.