ಮೂರ್ನಾಲ್ಕು ತಿಂಗಳ ಹಿಂದೆ ಕಡಿಮೆ ಬೆಲೆಯ ಸ್ಟಾರ್ಮ್ ಸ್ಮಾರ್ಟ್ ವಾಚ್ ಬಿಡುಗಡೆ ಮಾಡಿದ್ದ ಬೋಟ್ ಕಂಪನಿ ಇದೀಗ ಪ್ರೀಮಿಯಂ ಮಾದರಿಯ ಬೋಟ್ ಫ್ಲ್ಯಾಶ್ ವಾಚ್ ಅನ್ನು ಆನ್‌ಲೈನ್ ಮೂಲಕ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ವಾಚ್‌ನ ನಿಜವಾದ ಬೆಲೆ 6,990 ರೂಪಾಯಿಯಾಗಿದ್ದು, ಪ್ರಮೋಷನಲ್ ಆಫರ್ ಆಗಿ ಕಂಪನಿ 2,499 ರೂಪಾಯಿಗೆ ಮಾರಾಟ ಮಾಡುತ್ತಿದೆ. ಈ ವಾಚ್ ಹಲವು ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡಿದೆ.
ಆಡಿಯೊ ಸಾಧನಗಳಾದ ಇಯರ್‌ಫೋನ್ ಮತ್ತು ಸ್ಪೀಕರ್ ಮಾರಾಟದಲ್ಲಿ ವಿಶೇಷ ಸ್ಥಾನಗಳಿಸಿರುವ ಬೋಟ್ ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ವಾಚ್‌ಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಹೊರಳಿಕೊಂಡು ಯಶಸ್ಸು ಗಳಿಸಿದೆ. ಈ ಬೋಟ್ ಕಂಪನಿ ಇದೀಗ ಬೋಟ್ ಫ್ಲ್ಯಾಶ್ ವಾಚ್(BoAt Flash Watch) ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಪವರ್‌ಫುಲ್ ಬ್ಯಾಟರಿಯ ಜಿಯೋನಿ ಮ್ಯಾಕ್ಸ್ ಪ್ರೋ ಫೋನ್ ಬಿಡುಗಡೆ
undefined
ಈ ಬೋಟ್ ಫ್ಲ್ಯಾಶ್ ವಾಚ್ ಬೆಲೆ 6,990 ರೂಪಾಯಿ ಎಂದು ಕಂಪನಿ ಹೇಳಿಕೊಂಡಿದೆ. ಆದರೆ, ಫ್ಲ್ಯಾಶ್ ವಾಚ್‌ನ ಪ್ರಮೋಷನಲ್ ಆಫರ್ ಆಗಿ ಕಂಪನಿ ಆರಂಭದಲ್ಲಿ 2,499 ರೂಪಾಯಿಗೆ ಮಾರಾಟ ಮಾಡುತ್ತಿದೆ. ಮಾರ್ಚ್ 9 ಮಧ್ಯಾಹ್ನ 12ಕ್ಕೆ ಬೋಟ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾರಾಟ ಆರಂಭಿಸುವ ಮೂಲಕ ಮಾರುಕಟ್ಟೆಗೆ ಬೋಟ್ ಫ್ಲ್ಯಾಶ್ ವಾಚ್ ಬಿಡುಗಡೆ ಮಾಡಿತು.
ಬೋಟ್ ಕಂಪನಿಯ ಈ ಫ್ಲ್ಯಾಶ್ ವಾಚ್‌ನ ಡಿಸ್‌ಪ್ಲೇ 1.3 ಇಂಚ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಕೈಗಡಿಯಾರದ ಸ್ಟ್ರ್ಯಾಪ್ ಬಹುವರ್ಣಗಳಲ್ಲಿ ದೊರೆಯುತ್ತದೆ. ಈ ವಾಚ್‌ನ ಬ್ಲೂಟೂಥ್ ವ್ಯಾಪ್ತಿ 10 ಮೀಟರ್‌ವರೆಗೂ ಇದ್ದು, ಬ್ಲೂಟೂಥ್ ವರ್ಷನ್ 5.0 ಆಗಿದೆ.
ಇನ್ನು ಈ ವಾಚ್‌ನಲ್ಲಿ ಕಂಪನಿ 200 ಎಂಎಎಚ್ ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಿದೆ ಮತ್ತು ಈ ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಿದರೆ 7 ದಿನಗಳವರೆಗೂ ಚಾರ್ಜಿಂಗ್ ಬಾಳಿಕೆ ಬರುತ್ತದೆ ಮಾತ್ರವಲ್ಲದೇ 2 ಗಂಟೆಯಲ್ಲಿ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ. ಮ್ಯಾಗ್ನೇಟಿಕ್ ಅಡಾಪ್ಟರ್ ಚಾರ್ಜರ್ ಕೇಬಲ್ ಇರಲಿದೆ. ಬ್ಯಾಟರಿ ಸ್ಡ್ಯಾಂಡ್‌ಬೈ ಟೈಮ್ 15ರಿಂದ 20 ದಿನಗಳವರೆಗೂ ಇರಲಿದೆ.
LGಯಿಂದ ಹೊಸ ಟಿವಿ ಮಾರುಕಟ್ಟೆಗೆ: ವೀಕ್ಷಣೆ ಜೊತೆ ಗೇಮಿಂಗ್ ಮಜಾ
ಇನ್ನು ಕಾಲ್ ಅಲರ್ಟ್, ಮ್ಯೂಸಿಕ್ ಕಂಟ್ರೋಲ್, ಬ್ಲಡ್ ಆಕ್ಸಿಜೆನ್ ಲೇವಲ್ ಮಾನಿಟರಿಂಗ್, ಸ್ಲೀಪ್ ಮಾನಿಟರಿಂಗ್ ಸೇರಿದಂತೆ ಇನ್ನು ಹಲವು ಫೀಚರ್‌ಗಳನ್ನು ಈ ವಾಚ್ ಹೊಂದಿದೆ. ಈ ಬೋಟ್ ಫ್ಲ್ಯಾಶ್ ವಾಚ್ ನಿಮಗೆ ನೀಲಿ, ಕಪ್ಪು ಮತ್ತು ಕೆಂಪು ಬಣ್ಣಗಳಲ್ಲಿ ಮಾರಾಟಕ್ಕೆ ಸಿಗಲಿದೆ. ಜೊತೆಗೆ ಈ ವಾಚ್ ವಾಟರ್‌ಪ್ರೂಫ್ ಕೂಡಾ ಆಗಿದ್ದು, ಮಲ್ಟಿ ವಾಚ್ ಫೇಸ್‌ಗಳನ್ನು ಹೊಂದಿದೆ.
ಎಸ್‌ಪಿಒ 2 ತಂತ್ರಜ್ಞಾನ ಮತ್ತು ಮೂರು ಬಣ್ಣ ಆಯ್ಕೆಗಳೊಂದಿಗೆ, ಫ್ಲ್ಯಾಶ್ ವಾಚ್ ಸಾಕಷ್ಟು ಅದ್ಭುತವಾದ ಅನುಭವನ್ನು ನೀಡುತ್ತದೆ. ಬೋಟ್ ಕಂಪನಿಯೇ ಹೇಳಿಕೊಂಡಿರುವಂತೆ ಇದು ನೀರು ಮತ್ತು ಬೆವರು ನಿರೋಧಕ ಸಾಮರ್ಥ್ಯವನ್ನು ಹೊಂದಿದ್ದು, IP68 ಪ್ರಮಾಣಪತ್ರದೊಂದಿಗೆ ಬರುತ್ತದೆ. ಅಂತಹ ವಿಶಿಷ್ಟ ಫೀಚರ್‌ಗಳನ್ನು ಒಳಗೊಂಡಿರುವ ಈ ಸ್ಮಾರ್ಟ್ ವಾಚ್ ಅನ್ನು ಕಂಪನಿ ಪ್ರಮೋಷನಲ್ ಆಫರ್ ಆಗಿ ಆರಂಭದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ.
ಬೋಟ್ ಫ್ಲ್ಯಾಸ್ ವಾಚ್ ಸ್ಮಾರ್ಟ್ ವಾಚ್ ಆಗಿರುವುದರಿಂದ ಮೀಡಿಯಾ ಕಂಟ್ರೋಲ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಫೋನ್ ನೋಟಿಫಿಕೇಷನ್‌ಗಳನ್ನು ಬಳಕೆದಾರರಿಗೆ ಪ್ರದರ್ಶಿಸುತ್ತದೆ, ಅಲಾರಾಮ್, ರಿಮೈಂಡರ್ಸ್, ಕ್ಯಾಮೆರಾ ಕಂಟ್ರೋಲ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಈ ಬೋಟ್ ಫ್ಲ್ಯಾಶ್ ವಾಚ್ ಒಳಗೊಂಡಿದೆ.
ನೋಡಲು ಕೂಡ ಈ ಸ್ಮಾರ್ಟ್ ಆಕರ್ಷವಾಗಿದ್ದು, ನೀಲಿ, ಕೆಂಪು ಮತ್ತು ಕಪ್ಪ ಬಣ್ಣಗಳು ಹೊಸ ಮೆರಗನ್ನು ತಂದುಕೊಟ್ಟಿವೆ. ಜೊತೆಗೆ ಈ ಸ್ಮಾರ್ಟ್ ವಾಚ್ ಒಟ್ಟು ಫೇಸ್‌ಗಳೊಂದಿಗೆ ಬರುತ್ತದೆ ಮತ್ತು 33 ಗ್ರಾಮ್ ತೂಕದ್ದಾಗಿದೆ.
ಜಿಯೋ ಲ್ಯಾಪ್‌ಟ್ಯಾಪ್..! ಇದರ ಬೆಲೆ ಭಾರೀ ಕಮ್ಮಿ
ಈ ಹಿಂದೆಯೂ ಬೋಟ್ ಕಂಪನಿ ಸ್ಟಾರ್ಮ್ ಸ್ಮಾರ್ಟ್ ವಾಚ್ ಅನ್ನು ಬಿಡುಗಡೆ ಮಾಡಿತ್ತು. ಅಗ್ಗದ ಬೆಲೆ ಈ ಸ್ಮಾರ್ಟ್ ವಾಚ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಕಂಪನಿ ಅಸಂಖ್ಯೆ ಗ್ರಾಹಕರನ್ನು ತನ್ನತ್ತ ಸೆಳೆಯಲು ಯಶಸ್ವಿಯಾಗಿತ್ತು. ಇದೀಗ ಪ್ರೀಮಿಯಂ ಮಾದರಿಯ ಈ ಫ್ಲ್ಯಾಶ್ ವಾಚ್ ಬಿಡುಗಡೆ ಮಾಡುವ ಮೂಲಕ ಮತ್ತೊಂದ ಸ್ತರದ ಬಳಕೆದಾರರನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡಿದಂತೆ ಎನ್ನುತ್ತಿದ್ದಾರೆ ವಿಶ್ಲೇಷಕರು.