2022ರ ಮೊದಲ ತ್ರೈಮಾಸಿಕದಲ್ಲಿ ಭಾರತದ ಸ್ಮಾರ್ಟ್‌ವಾಚ್ ಮಾರುಕಟ್ಟೆ %173ರಷ್ಟು ಬೆಳವಣಿಗೆ: ನಾಯ್ಸ್‌ಗೆ ಅಗ್ರಸ್ಥಾನ

Published : May 07, 2022, 01:52 PM IST
2022ರ ಮೊದಲ ತ್ರೈಮಾಸಿಕದಲ್ಲಿ ಭಾರತದ ಸ್ಮಾರ್ಟ್‌ವಾಚ್ ಮಾರುಕಟ್ಟೆ %173ರಷ್ಟು ಬೆಳವಣಿಗೆ: ನಾಯ್ಸ್‌ಗೆ ಅಗ್ರಸ್ಥಾನ

ಸಾರಾಂಶ

2022 ರ Q1 ನಲ್ಲಿ 23 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿರುವ  ನಾಯ್ಸ್ (Noise) ಮಾರುಕಟ್ಟೆಯಲ್ಲಿ ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿದೆ

India Smartwatch Market: ಕೌಂಟರ್‌ಪಾಯಿಂಟ್ ಡೇಟಾದ ಇತ್ತೀಚಿನ  ವರದಿ ಪ್ರಕಾರ, 2022ರ ಮೊದಲ ತ್ರೈಮಾಸಿಕದಲ್ಲಿ (Q1 2022) ಭಾರತದ ಸ್ಮಾರ್ಟ್‌ವಾಚ್ ಮಾರುಕಟ್ಟೆಯು  173 ಪ್ರತಿಶತದಷ್ಟು ಬೆಳೆವಣಿಗೆ ದಾಖಲಿಸಿದೆ. ಸ್ಮಾರ್ಟ್ ವಾಚ್ ತಯಾರಕ ನಾಯ್ಸ್ ಮೊದಲ ತ್ರೈಮಾಸಿಕದಲ್ಲಿ 23 ಪ್ರತಿಶತದಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದು ಪ್ರಥಮ ಸ್ಥಾನದಲ್ಲಿದೆ. ಫೈರ್-ಬೋಲ್ಟ್ 21 ಪ್ರತಿಶತ ಮಾರುಕಟ್ಟೆ ಪಾಲನ್ನು ಹೊಂದಿದ್ದು ಮೊದಲ ಬಾರಿಗೆ ಎರಡನೇ ಸ್ಥಾನ ಪಡೆದಿದೆ. ಬೋಟ್ ಮಾರುಕಟ್ಟೆಯಲ್ಲಿ 16 ಪ್ರತಿಶತ ಪಾಲನ್ನು ಹೊಂದಿದ್ದು ಮೂರನೇ ಸ್ಥಾನದಲ್ಲಿದೆ. 

ಇನ್ನು 2022 ರ Q1ರಲ್ಲಿ ಢಿಜೋ ಮೊದಲ ಬಾರಿಗೆ ಅಗ್ರ ಐದು ಸ್ಮಾರ್ಟ್‌ವಾಚ್ ಪಟ್ಟಿಯನ್ನು ಪ್ರವೇಶಿಸಿದೆ. Defy, Fastrack, Truke, ಮತ್ತು Reebok ಸೇರಿದಂತೆ ಮೊದಲ ತ್ರೈಮಾಸಿಕದಲ್ಲಿ ಹತ್ತಕ್ಕೂ ಹೆಚ್ಚು ಬ್ರಾಂಡ್‌ಗಳು ಮಾರುಕಟ್ಟೆಯನ್ನು ಪ್ರವೇಶಿಸಿರುವುದು ಗಮನಿಸಬೇಕಾದ ಸಂಗತಿ. Q1 2022ರಲ್ಲಿ  Amazfit ವರ್ಷದಿಂದ ವರ್ಷಕ್ಕೆ 35 ಶೇಕಡಾ ಇಳಿಕೆ ಕಂಡಿದೆ.

ನಾಯ್ಸ್‌ ನಂ.1:  ಅಗ್ರ ಮೂರು ಬ್ರಾಂಡ್‌ಗಳು - ನಾಯ್ಸ್, ಫೈರ್-ಬೋಲ್ಟ್ ಮತ್ತು ಬೋಟ್ - 60 ಪ್ರತಿಶತದಷ್ಟು ಮಾರುಕಟ್ಟೆ ಪಾಲನ್ನು ಹೊಂದಿವೆ.  ಕೌಂಟರ್‌ಪಾಯಿಂಟ್ ಡೇಟಾದ ಪ್ರಕಾರ, ನಾಯ್ಸ್ ತನ್ನ ಉತ್ಪನ್ನದ ಪೋರ್ಟ್‌ಫೋಲಿಯೊಗೆ ಸಂಬಂಧಿತ ವೈಶಿಷ್ಟ್ಯಗಳನ್ನು ಸೇರಿಸುವುದರ ಜೊತೆಗೆ ಮೇಕ್-ಇನ್-ಇಂಡಿಯಾ ಸ್ಕೀಮ್‌ಗೆ ಒತ್ತು ನೀಡಿದೆ. 

ಇದನ್ನೂ ಓದಿ: ಸಖತ್‌ ಫೀಚರ್ಸ್‌ನೊಂದಿಗೆ ಪೋಕೋದ ಮೊದಲ ಸ್ಮಾರ್ಟ್‌ವಾಚ್ ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆ!

ಅಲ್ಲದೇ  ಉತ್ತಮ ಮೌಲ್ಯದ ಕೊಡುಗೆಗಳಿಂದ 23 ಪ್ರತಿಶತ ಮಾರುಕಟ್ಟೆ ಪಾಲನ್ನು ಹೊಂದಿದ್ದು ಮೊದಲ ಸ್ಥಾನವನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ. ಕಲರ್‌ಫಿಟ್ ಪಲ್ಸ್ ನಾಯ್ಸ್‌ನ ಹೆಚ್ಚು ಮಾರಾಟವಾದ ಮಾದರಿಯಾಗಿದೆ.

ಫೈರ್‌ ಬೋಲ್ಟ್‌ ನಂ. 2:  ಫೈರ್-ಬೋಲ್ಟ್ ಕೈಗೆಟುಕುವ ಬೆಲೆಯ ಮತ್ತು ಹಲವು ವೈಶಿಷ್ಟ್ಯಗಳೊಂದಿಗೆ ಪ್ಯಾಕ್ ಮಾಡಿದ ಉತ್ಪನ್ನಗಳನ್ನು ಹೊರತರುವ ಮೂಲಕ ಮೊದಲ ಬಾರಿಗೆ ಎರಡನೇ ಸ್ಥಾನದಲ್ಲಿದೆ. ಸ್ಮಾರ್ಟ್ ವಾಚ್ ಬ್ರ್ಯಾಂಡ್ ಫ್ಯಾಷನ್, ಜೀವನಶೈಲಿ, ಫಿಟ್‌ನೆಸ್ ಮತ್ತು ಐಷಾರಾಮಿಗಳಂತಹ ವೈವಿಧ್ಯಮಯ ಸ್ಮಾರ್ಟ್‌ವಾಚ್ ವಿಭಾಗಗಳನ್ನು ಗುರಿಯಾಗಿಟ್ಟುಕೊಂಡು 21 ಪ್ರತಿಶತ ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದೆ. ಅದರ ನಿಂಜಾ ಪ್ರೊ ಮ್ಯಾಕ್ಸ್ ಕಂಪನಿಯ ಅತ್ಯಂತ ಜನಪ್ರಿಯ ಸಾಧನವಾಗಿದೆ. ‌

ಬೋಟ್‌ ನಂ. 3: 16 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿರುವ ಬೋಟ್ ಮೂರನೇ ಸ್ಥಾನದಲ್ಲಿದೆ, ವರ್ಷದ ಮೊದಲ ತ್ರೈಮಾಸಿಕದಲ್ಲಿ ಐದು ಹೊಸ ಸ್ಮಾರ್ಟ್‌ವಾಚ್ ಮಾದರಿಗಳೊಂದಿಗೆ ತನ್ನ ಪೋರ್ಟ್‌ಫೋಲಿಯೊವನ್ನು ಕಂಪನಿ ನವೀಕರಿಸಿದೆ. ಬೋಟ್‌ನ ಒಟ್ಟು ಪೋರ್ಟ್‌ಫೋಲಿಯೊದ ಸುಮಾರು ಮೂರನೇ ಎರಡರಷ್ಟು ಭಾಗವು ಎಕ್ಸ್‌ಟೆಂಡ್ ಮತ್ತು ಸ್ಟಾರ್ಮ್ ಮಾದರಿಗಳ ಮಾರಾಟದಿಂದ ಸಾಧ್ಯವಾಗಿದೆ. 

ಡಿಜೊ ಮೊದಲ ಬಾರಿಗೆ ಮೊದಲ ಟಾಪ್ ಐದು ಸ್ಥಾನಗಳಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಡೀಝೋ ತನ್ನ ವಾಚ್ ಆರ್ ಜೊತೆಗೆ OLED ಡಿಸ್ಪ್ಲೇಯನ್ನು ಪರಿಚಯಿಸುವುದರೊಂದಿಗೆ ಮೊದಲ ತ್ರೈಮಾಸಿಕದಲ್ಲಿ ತನ್ನ ಆಫ್‌ಲೈನ್ ಉಪಸ್ಥಿತಿಯನ್ನು ಹೆಚ್ಚಿಸಿದೆ.

ಸ್ಮಾರ್ಟ್‌ವಾಚ್ ಮಾರುಕಟ್ಟೆ ಬೆಳವಣಿಗೆ: ಇನ್ನು  ರೂ. 1,000 - ರೂ. 2,000 ಚಿಲ್ಲರೆ ಬೆಲೆ ಬ್ಯಾಂಡ್ ಕೇವಲ ಒಂದು ವರ್ಷದ ಹಿಂದೆ 2 ಪ್ರತಿಶತಕ್ಕೆ ಹೋಲಿಸಿದರೆ 14 ಪ್ರತಿಶತದಷ್ಟು ದೊಡ್ಡ ಮಾರುಕಟ್ಟೆ ಪಾಲನ್ನು ತಲುಪಿದೆ. ರೂ.5,000  ಅಡಿಯಲ್ಲಿ ಧರಿಸಬಹುದಾದ ವಸ್ತುಗಳ ಮಾರುಕಟ್ಟೆ ಪಾಲು 8 ಪ್ರತಿಶತದಿಂದ 87 ಪ್ರತಿಶತಕ್ಕೆ ಏರಿದೆ. 

45 ಪ್ರತಿಶತ ಮಾರುಕಟ್ಟೆ ಪಾಲನ್ನು ಹೊಂದುವ  ಮೂಲಕ ರೂ.10,000 - ರೂ. 15,000 ಬೆಲೆ ಶ್ರೇಣಿಯಲ್ಲಿ  OnePlus 45 ಮೊದಲ ಸ್ಥಾನ ಪಡೆದುಕೊಂಡಿದೆ. ಶೇಕಡಾ 87 ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದುವ ಮೂಲಕ ಆಪಲ್‌ನ ಧರಿಸಬಹುದಾದ ವಸ್ತುಗಳು ಪ್ರೀಮಿಯಂ ಸ್ಮಾರ್ಟ್‌ವಾಚ್ ವಿಭಾಗದಲ್ಲಿ ಮುನ್ನಡೆ ಸಾಧಿಸುತ್ತಿವೆ, ಅಂದರೆ ರೂ.30,000ಗಿಂತ ಹೆಚ್ಚು ಬೆಲೆಯ ಧರಿಸಬಹುದಾದ ಸಾಧನಗಳು.  

ಇದನ್ನೂ ಓದಿ: ವಾಟರ್‌ಪ್ರೂಫ್ ಬಾಡಿ, 20 ದಿನಗಳ ಬ್ಯಾಟರಿ ಲೈಫ್‌ನೊಂದಿಗೆ Dizo Watch S ಭಾರತದಲ್ಲಿ ಲಾಂಚ್:‌ ಬೆಲೆ ಎಷ್ಟು?

ಮೊದಲ ತ್ರೈಮಾಸಿಕದಲ್ಲಿ Defy, Fastrack, Truke, ಮತ್ತು Reebok ಸೇರಿದಂತೆ ಹತ್ತಕ್ಕೂ ಹೆಚ್ಚು ಬ್ರಾಂಡ್‌ಗಳು ಭಾರತೀಯ ಸ್ಮಾರ್ಟ್‌ವಾಚ್ ಮಾರುಕಟ್ಟೆಯನ್ನು ಪ್ರವೇಶಿಸಿವೆ. Samsung, Apple, Xiaomi ಮತ್ತು Realme ಸೇರಿದಂತೆ ಇತರ ಪ್ರಮುಖ ಸ್ಮಾರ್ಟ್ ವಾಚ್ ತಯಾರಕರು ಸಹ ಮೊದಲ ತ್ರೈಮಾಸಿಕದಲ್ಲಿ ಬೆಳವಣಿಗೆಯನ್ನು ದಾಖಲಿಸಿದ್ದಾರೆ.

ಸ್ಯಾಮ್‌ಸಂಗ್ 78 ಪ್ರತಿಶತದಷ್ಟು ಬೆಳೆದಿದೆ. ಗ್ಯಾಲಕ್ಸಿ ವಾಚ್ 4 ಸರಣಿಯು ಸ್ಯಾಮ್‌ಸಂಗ್‌ನ ಅತಿ ಹೆಚ್ಚು ಮಾರಾಟವಾದ ಧರಿಸಬಹುದಾದ ಸಾಧನವಾಗಿದೆ. ಪ್ರಮುಖ ವಾಲ್ಯೂಮ್ ಡ್ರೈವರ್ ಆಗಿ ಕಾರ್ಯನಿರ್ವಹಿಸುವ ಸರಣಿ 7 ರೂಪಾಂತರಗಳೊಂದಿಗೆ ಆಪಲ್ 104 ಪ್ರತಿಶತದಷ್ಟು ಬೆಳೆವಣಿಗೆ ಕಂಡಿದೆ. 

ಶಾಓಮಿ Q1 2022ರಲ್ಲಿ 238 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ. Redmi Watch 2 Lite ಮಾರುಕಟ್ಟೆಯಲ್ಲಿ ವೇಗವಾಗಿ ಮಾರಾಟವಾಗುತ್ತಿದೆ. Realme 3 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿದೆ. Smartwatch S100 Realme ನ Techlife ಬ್ರ್ಯಾಂಡ್‌ನ ಹೆಚ್ಚು ಮಾರಾಟವಾದ ಸ್ಮಾರ್ಟ್‌ವಾಚ್ ಆಗಿದೆ

Zebronics ಮೊದಲ ಹತ್ತರಲ್ಲಿ ಸ್ಥಾನವನ್ನು ಉಳಿಸಿಕೊಂಡಿದ್ದರೂ, ಮೊದಲ ತ್ರೈಮಾಸಿಕದಲ್ಲಿ Amazfit ನ ಮಾರುಕಟ್ಟೆ ಪಾಲು 35 ಪ್ರತಿಶತದಷ್ಟು ಕಡಿಮೆಯಾಗಿದೆ. GTS Mini 2 ಕಂಪನಿಯ ಸಾಗಣೆಗಳಲ್ಲಿ 30 ಪ್ರತಿಶತ ಬೆಳವಣಿಗೆ ಕಂಡಿದೆ. 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ನಿಮ್ಮ ಪವರ್‌ ಬ್ಯಾಂಕ್‌ನಲ್ಲಿ ಈ 5 ಸಂಕೇತ ಕಂಡರೆ ಅದು ಟೈಂ ಬಾಂಬ್! ತಕ್ಷಣ ಈ ಕೆಲಸ ಮಾಡಿ, ದುರಂತ ತಪ್ಪಿಸಿ!
ಜಿ ಮೇಲ್ ಫುಲ್ ಆಗಿದ್ಯಾ? Zoho Mail ಟ್ರೈ ಮಾಡಿ