Google Pixel Watch: ಮೇನಲ್ಲಿ ಬಿಡುಗಡೆಯಾಗಲಿದೆ ಪಿಕ್ಸೆಲ್ ವಾಚ್, ಏನೆಲ್ಲ ವಿಶೇಷತೆ ಇದೆ?

By Suvarna News  |  First Published Jan 22, 2022, 2:49 PM IST

*ಗೂಗಲ್ ಫೋಲ್ಡಬಲ್ ಫೋನ್ ಸುದ್ದಿ ಬೆನ್ನಲ್ಲೇ ಪಿಕ್ಸೆಲ್ ಸ್ಮಾರ್ಟ್‌ವಾಚ್ ಬಿಡುಗಡೆ ಮಾಡಲಿದೆ ಗೂಗಲ್
*ಪಿಕ್ಸೆಲ್ ವಾಚ್ ಮಾಹಿತಿಯನ್ನು ಸೋರಿಕೆ ಮಾಡಿದ ಪ್ರಖ್ಯಾತ ಟಿಪ್ಸಟರ್‌ಗಳು
*ಹಾರ್ಟ್ ಮಾನಿಟರಿಂಗ್, ಸ್ಟೆಪ್ ಕೌಂಟಿಂಗ್ ಸೇರಿದಂತೆ ಅನೇಕ ವಿಶೇಷತೆಗಳು


Tech Desk: ಗೂಗಲ್‌ (Google) ತನ್ನ ಮೊದಲ ಫೋಲ್ಡಬಲ್ ಸ್ಮಾರ್ಟ್‌ಫೋನ್ ಪಿಕ್ಸೆಲ್ ಫೋಲ್ಡ್ (Pixel Fold) ಅನ್ನು ಪಿಕ್ಸೆಲ್ ನೋಟ್‌ಪ್ಯಾಡ್ (Pixel Notepad) ಎಂದು ಕರೆಯಲಿದೆ ಎಂಬ ಸುದ್ದಿ ಹೊರಬಿದ್ದ ಬೆನ್ನಲ್ಲೇ ಪಿಕ್ಸೆಲ್ ಸಾಧನಕ್ಕೆ ಮತ್ತೊಂದು ನ್ಯೂಸ್ ಬ್ರೇಕ್ ಆಗಿದೆ. ಆದರೆ, ಇದು ಸ್ಮಾರ್ಟ್‌ಫೋನ್‌ಗೆ ಸಂಬಂಧಿಸಿದ ಅಲ್ಲ, ಬದಲಿಗೆ ಸ್ಮಾರ್ಟ್‌ವಾಚ್‌ಗೆ ಸಂಬಂಧಿಸಿದ್ದು. ಅಂದರೆ, ಗೂಗಲ್‌ನ ಬಹು ನಿರೀಕ್ಷೆಯ ಪಿಕ್ಸೆಲ್ ವಾಚ್ (Pixel Watch) ಮುಂಬರುವ ಮೇ ತಿಂಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಹಾಕುವ ಸಾಧ್ಯತೆ ಎಂಬ ಮಾಹಿತಿ ಸೋರಿಕೆಯಾಗಿದೆ. ಪಿಕ್ಸೆಲ್ ಸ್ಮಾರ್ಟ್‌ವಾಚ್ ಬಿಡುಗಡೆಯ  ಬಗ್ಗೆ ಗೂಗಲ್ ಈವರೆಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ ಎಂಬುದನ್ನು ಗಮನಿಸಬೇಕು.

ಈ ಹಿಂದಿನ ಕೆಲವು ವರದಿಗಳ ಪ್ರಕಾರ, ಕಳೆದ ವರ್ಷವೇ ಪಿಕ್ಸೆಲ್ ವಾಚ್ ಮಾರುಕಟ್ಟೆಗೆ ಬರಲಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಕಳೆದ ವರ್ಷ ಗೂಗಲ್ ವಾಚ್ ಬಿಡುಗಡೆ ಮಾಡಿಲ್ಲ. ಹಾಗಾಗಿ, ಈ ಮೇ ತಿಂಗಳಲ್ಲಿ ಬಹುತೇಕ ಗೂಗಲ್‌ನ ಬಹುನಿರೀಕ್ಷೆಯ ಈ ಪಿಕ್ಸೆಲ್ ವಾಚ್ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಪ್ರಮುಖ ಟಿಪ್ಸಟರ್ ಜಾನ್ ಪ್ರೊಸ್ಸೆರ್ (Jon Prosser) ಈ ಬಗ್ಗೆ ಟ್ವೀಟ್ ಮಾಡಿ, ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಉತ್ಪನ್ನಗಳ ಬಗ್ಗೆ ಇವರು ನೀಡಿರುವ ಬಹಳಷ್ಟು ಮಾಹಿತಿಗಳು ವಾಸ್ತವದಲ್ಲಿ ನಿಜವಾಗಿವೆ. ಹಾಗಾಗಿ, ಗೂಗಲ್ ವಾಚ್ ಬಿಡುಗಡೆಯ ಬಗ್ಗೆ ಷೇರ್ ಮಾಡಿಕೊಂಡಿರುವ ಮಾಹಿತಿಯಿಂದಾಗಿ ಬಳಕೆದಾರರಲ್ಲಿ ಕುತೂಹಲ ಹೆಚ್ಚಿದೆ. ಗೂಗಲ್ ಪಿಕ್ಸೆಲ್ ವಾಚ್ ಮೇ 26ರಂದು ಬಿಡುಗಡೆಯಾಗಲಿದೆ ಎಂದು ಬರೆದುಕೊಂಡಿದ್ದಾರೆ.

Tap to resize

Latest Videos

undefined

ಇದನ್ನೂ ಓದಿ: Samsung Galaxy Unpacked ಫೆಬ್ರವರಿಯಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಖಚಿತ, ಯಾವೆಲ್ಲ ಹೊಸ ಫೋನು ಲಾಂಚ್?

ಪಿಕ್ಸೆಲ್ ವಾಚ್ ಅನ್ನು ಗೂಗಲ್ ಮೇ 26 ರಂದು ಗುರುವಾರ ಬಿಡುಗಡೆಗೆ ಯೋಜಿಸುತ್ತಿದೆ ಎಂದು ನಾನು ಕೇಳಿದ್ದೇನೆ - ನಾವು ಅದನ್ನು ಸೋರಿಕೆ ಮಾಡಿದ ನಂತರ ಒಂದು ವರ್ಷದಿಂದ. ತೆರೆಮರೆಯಲ್ಲಿರುವ ಸಾಧನದಲ್ಲಿ ನಾವು ದಿನಾಂಕವನ್ನು ಹೊಂದಿಸಿರುವುದು ಇದೇ ಮೊದಲು. ದಿನಾಂಕಗಳನ್ನು ಹಿಂದಕ್ಕೆ ತಳ್ಳಲು ಗೂಗಲ್ ಹೆಸರುವಾಸಿಯಾಗಿದೆ. ಆದರೆ, ಅವರು ಹಾಗೆ ಮಾಡಿದರೆ, ನಮಗದು ತಿಳಿಯುತ್ತದೆ ಎಂದು ತಮ್ಮ ಟ್ವೀಟ್‌ನಲ್ಲಿ ಜಾನ್ ಪ್ರೊಸ್ಸೆರ್ (Jon Prosser)  ಹೇಳಿದ್ದಾರೆ. 

 

Pixel Watch 👇

I’m hearing that Google is planning on launching it on Thursday, May 26th — over year since we leaked it.

This is the first we’ve seen a set date on the device behind the scenes.

Google is known for pushing back dates — but if they do, we’ll know 👀 pic.twitter.com/Kk0D4Bom6d

— Jon Prosser (@jon_prosser)

 

ಮೇ ತಿಂಗಳಲ್ಲಿ ಬಿಡುಗಡೆಯಾಗಬಹುದು ಎನ್ನಲಾಗಿರುವ ಸ್ಮಾರ್ಟ್‌ವಾಚ್ ಗೂಗಲ್ ಪ್ರೀಮಿಯಂ ವಾಚ್‌ ಸೆಗ್ಮೆಂಟ್‌ನಲ್ಲಿ ನಿರ್ಮಾಣವಾಗಿದೆ. ಸೋರಿಕೆಯಾಗಿರುವ 3D ರೆಂಡರ್‌ಗಳು ಸ್ಮಾರ್ಟ್‌ವಾಚ್ ಸ್ಲಿಮ್ ಫಾರ್ಮ್ ಫ್ಯಾಕ್ಟರ್‌ನಲ್ಲಿ ಬರಬಹುದು ಮತ್ತು ಲೋಹದ ಚೌಕಟ್ಟಿನ ಸುತ್ತಲೂ ಸುತ್ತುವ ಬಾಗಿದ ಡಿಸ್‌ಪ್ಲೇಯಲ್ಲಿ ಬರಬಹುದು ಎಂದು ಗೊತ್ತಾಗುತ್ತದೆ. ಡಯಲ್‌ನ ಬಲಭಾಗದಲ್ಲಿ, ದೊಡ್ಡ ಕ್ರೌನ್ ಬಟನ್ ಅನ್ನು ತೋರಿಸಲಾಗಿದೆ. ಆದರೆ ಬಟನ್‌ನ ಯಾವ ಕಾರ್ಯವನ್ನು ಮಾಡಲಿದೆ ಎಂಬುದು ಸ್ಪಷ್ಟವಾಗಿಲ್ಲ. ಇಷ್ಟು ಬಿಟ್ಟರೆ, ರೆಂಡರ್ಸ್‌ನಲ್ಲಿ ವಾಚ್‌ ವಿಶೇಷತೆಗಳ ಬಗ್ಗೆ ಅಷ್ಟೇನೂ ಮಾಹಿತಿಯು ಗೊತ್ತಾಗಿಲ್ಲ. ಆದರೆ, ಮ್ಯಾಪ್ ಇಂಟಿಗ್ರೇಷನ್, ಹಾರ್ಟ್ ರೇಟ್ ಮಾನಿಟರಿಂಗ್, ಸ್ಟೆಪ್ ಕೌಂಟರ್ ಸೇರಿದಂತೆ ಇನ್ನಿತರ ವಿಶೇಷತೆಗಳನ್ನು ನಿರೀಕ್ಷಿಸಬಹುದಾಗಿದೆ.

ಇದನ್ನೂ ಓದಿ: Apple iPhone 12 ಭಾರತದಲ್ಲಿ ಅತ್ಯಂತ ಜನಪ್ರಿಯ ಫೋನ್‌ ಬ್ರ್ಯಾಂಡ್ ಪಟ್ಟಿ ಪ್ರಕಟ, ಆ್ಯಪಲ್‌ಗೆ ಮೊದಲ ಸ್ಥಾನ

ಏತನ್ಮಧ್ಯೆ,  ಗೂಗಲ್ ತನ್ನ ಮೊದಲ ಮಡಚಬಹುದಾದ ಫೋನ್ ಅನ್ನು ಬಿಡುಗಡೆ ಮಾಡುವ ಗುರಿಯನ್ನು ಹಾಕಿಕೊಂಡಿದ್ದು, ಇದನ್ನು 'ಪಿಕ್ಸೆಲ್ ಫೋಲ್ಡ್ (Pixel Fold) ಎಂದು ಕರೆಯಲಾಗುತ್ತಿತ್ತು. ಆದರೆ, ಭವಿಷ್ಯದಲ್ಲಿ ಪಿಕ್ಸೆಲ್ ಫೋಲ್ಡ್ ಗೂಗಲ್ ಫೋಲ್ಡಬಲ್ ಅನ್ನು ಪಿಕ್ಸೆಲ್ ನೋಟ್‌ಪ್ಯಾಡ್ (Pixel Notepad) ಎಂದು ಕರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕೆಲವು ಮಾಧ್ಯಮ ವರದಿಗಳ ಪ್ರಕಾರ, ಗೂಗಲ್‌ನ ಈ ಫೋಲ್ಡಬಲ್ ಫೋನ್,  ಸ್ಯಾಮ್ಸಂಗ್‌ನ  ಗ್ಯಾಲಕ್ಸಿ Z ಫೋಲ್ಡ್ 3 (1,799 ಡಾಲರ್) ಗಿಂತ ಕಡಿಮೆ ಬೆಲೆಯಲ್ಲಿ ಇರಲಿದೆ ಎನ್ನಲಾಗುತ್ತಿದೆ. ಮುಂಬರುವ ಗೂಗಲ್‌ನ ಈ ಫೋಲ್ಡಬಲ್ ಫೋನ್‌ಗೆ ಸಿಮ್ ಕಾರ್ಡ್ ಅನ್ನು ಹೇಗೆ ಇನ್‌ಸ್ಟಾಲ್ ಮಾಡುವುದು ಎಂಬುದನ್ನು ಬಿಂಬಿಸುವ ಹೊಸ ಅನಿಮೇಷನ್‌ಗಳ ಸೋರಿಕೆಯನ್ನು Android 12L ಬೀಟಾ 2ನಲ್ಲಿ ಬಹಿರಂಗಪಡಿಸಲಾಗಿದೆ.

click me!