ಫಾಸಿಲ್ ಜೆನ್ 5ಇ ಸ್ಮಾರ್ಟ್‌ವಾಚ್ ಬಿಡುಗಡೆ, ಬೆಲೆ 18,490 ರೂ.!

Suvarna News   | Asianet News
Published : Feb 04, 2021, 06:03 PM IST
ಫಾಸಿಲ್ ಜೆನ್ 5ಇ ಸ್ಮಾರ್ಟ್‌ವಾಚ್ ಬಿಡುಗಡೆ, ಬೆಲೆ 18,490 ರೂ.!

ಸಾರಾಂಶ

ಭಾರತದಲ್ಲಿ ಬಿಡುಗಡೆಯಾಗಿರುವ  ಫಾಸಿಲ್ ಜೆನ್ 5ಇ ‌ಸ್ಮಾರ್ಟ್‌ವಾಚ್‌ ನಿಮಗೆ ಗೂಗಲ್ ಫಿಟ್‌ನೊಂದಿಗೇ ಸಿಗುತ್ತದೆ. ನೀವು ಆಕ್ಟಿವಿಟಿ ಗೋಲ್ಸ್, ಹೆಜ್ಜೆಗಳು, ನಿದ್ದೆ, ಹಾರ್ಟ್ ರೇಟ್, ಕಾರ್ಡಿಯೋ ಲೆವಲ್ಸ್ ಮತ್ತು ಇತ್ಯಾದಿ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಬಹುದಾಗಿದೆ. ಈ ಸ್ಮಾರ್ಟ್‌ವಾಚ್ ಅತ್ಯುತ್ತಮವಾದ ಫೀಚರ್‌ಗಳನ್ನು ಒಳಗೊಂಡಿವೆ.

ಯಾವುದೇ ಸಂಶಯವಿಲ್ಲದೇ ಹೇಳಬಹುದು. ಇದು ಸ್ಮಾರ್ಟ್ ವೀಯರ್ಬಲ್ ಯುಗ ಎಂದು. ಯಾಕೆಂದರೆ, ಸ್ಮಾರ್ಟ್‌ವಾಚ್‌ಗಳಲ್ಲಿ ಸಾಕಷ್ಟು ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆಯಾಗುತ್ತಿದ್ದು, ಬಳಕೆದಾರರಿಗೆ ಹೊಸ ಅನುಭವ ದೊರೆಯುತ್ತಿದೆ. ಇಂಥದ್ದೇ ಅತ್ಯಾಧುನಿಕ ಸ್ಮಾರ್ಟ್ ವಾಚ್‌ವೊಂದು  ಬಿಡುಗಡೆಯಾಗಿದೆ.

ಫಾಸಿಲ್ ಜೆನ್ 5ಇ ಭಾರತದಲ್ಲಿ ಬಿಡುಗಡೆಯಾಗಿರುವ ಅತ್ಯಾಧುನಿಕ ಸ್ಮಾರ್ಟ್ ವೀಯರ್‌ಬಲ್ ಡಿವೈಸ್. 2019ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಜೆನ್ 5ಇ ಮುಂದುವರಿದ ವರ್ಷನ್ ಈಗ ಬಿಡುಗಡೆಯಾಗಿರುವ ಸ್ಮಾರ್ಟ್‌ವಾಚ್ ಅಗಿದೆ. ಈ ಸ್ಮಾರ್ಟ್‌ವಾಚ್‌ನಲ್ಲಿ ಅಮೋಲ್ಡ್ ಡಿಸ್‌ಪ್ಲೇ ಇದ್ದು, ಓಲ್ಡರ್ ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 3100 ಎಸ್ಒಸಿ  ಮೈಕ್ರೋ ಪ್ರೊಸೆಸರ್ ಒಳಗೊಂಡಿದೆ. ಕ್ವಿಕ್ ಚಾರ್ಜ್, 3ಎಟಿಎಂ ವಾಟರ್ ರೆಸಿಸ್ಟನ್ಸ್, ಹಾರ್ಟ್ ರೇಟ್ ಮಾನಿಟರಿಂಗ್ ಇತ್ಯಾದಿ ಅತ್ಯಾಕರ್ಷಕ ಫೀಚರ್‌ಗಳನ್ನು ಈ ಫಾಸಿಲ್ ಜೆನ್ 5ಇ ಸ್ಮಾರ್ಟ್‌ವಾಚ್‌ನಲ್ಲಿ ಕಾಣಬಹುದು. ಜೊತೆಗೆ ಈ ವಾಚ್ ಬಹುವರ್ಣಗಳಲ್ಲಿ ಮಾರಾಟಕ್ಕೆ ದೊರೆಯತ್ತದೆ. ಅತ್ಯಾಧುನಿಕ ಸ್ಮಾರ್ಟ್‌ವಾಚ್ ಆಗಿರುವ ಫಾಸಿಲ್ ನಿಮ್ಮ ಒಟ್ಟು ವ್ಯಕ್ತಿತ್ವವನ್ನು ರೂಪಿಸಲು ನೆರವಾಗುತ್ತದೆ.

ಕೈಯಲ್ಲಿ ಫೋನ್ ಹಿಡ್ಕೊಂಡು ರೂಮ್‌ನಲ್ಲಿ ಓಡಾಡಿದ್ರೆ ಸಾಕು ಫೋನ್ ಚಾರ್ಜ್!

ಭಾರತದಲ್ಲಿ ಬಿಡುಗಡೆ ಕಂಡಿರುವ ಫಾಸಿಲ್ ಜೆನ್ 5ಇ ಸ್ಮಾರ್ಟ್‌ ವಾಚ್ ಬೆಲೆ ತುಸು ದುಬಾರಿ ಎನ್ನಬಹುದು. ಆದರೆ, ಮೌಲ್ಯಕ್ಕೆ ತಕ್ಕಂತೆ ನಿಮಗೆ ಸೇವೆಯನ್ನು ಒದಗಿಸುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಭಾರತದಲ್ಲಿ ಫಾಸಿಲ್ ಜೆನ್ 5ಇ ಬೆಲೆ 18,490 ರೂಪಾಯಿಯಾಗಿದೆ. ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ ಸೇರಿದಂತೆ ಕಂಪನಿಯ ಅಧಿಕೃತ ಜಾಲತಾಣದಲ್ಲಿ ಫಾಸಿಲ್ ಜೆನ್ 5ಇ ಸ್ಮಾರ್ಟ್‌ವಾಚ್ ಬಳಕೆದಾರರು ಖರೀದಿಸಬಹುದು. ಪುರುಷರಿಗೆ 44 ಎಂಎಂ ಮತ್ತು ಮಹಿಳೆಯರಿಗೆ 42 ಎಂಎಂ ಮಾದರಿ ಶೈಲಿ ಮತ್ತು ಬಹು ವರ್ಣಗಳಲ್ಲಿ ಈ ವಾಚ್ ಲಭ್ಯವಿದೆ. ಜೊತೆಗೆ ಫಾಸಿಲ್ ಜೆನ್ 5ಇ ಸ್ಮಾರ್ಟ್‌ವಾಚ್‌ಗೆ ಸಿಲಿಕೋನ್, ಸ್ಟೇನ್‌ಲೆಸ್ ಸ್ಟೀಲ್, ಲೆದರ್ ಮತ್ತು ಸ್ಟೇನಲ್‌ಲೆಸ್ ಸ್ಟೀಲ್ ಮೆಸ್ ಸ್ಟ್ಯಾಪ್ ಆಯ್ಕೆಗಳಲ್ಲಿ  ಮಾರಾಟಕ್ಕೆ ದೊರೆಯುತ್ತದೆ. ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಖರೀದಿಸಬಹುದು.

ಫಾಸಿಲ್ ಜೆನ್ 5ಇ ಸ್ಮಾರ್ಟ್ ವಾಚ್ ಸ್ಮೋಕ್ ಸ್ಟೇನ್‌ಲೆಸ್ 5ಎಟಿಎಂ ವಾಟರ್ ರೆಜಿಸ್ಟನ್ಸ್‌ನೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ಫೋನ್ 1.19 ಇಂಚ್ ಅಮೋಲೆಡ್ ಡಿಸ್‌ಪ್ಲೇ ಒಳಗೊಂಡಿದೆ. ಈ ಡಿಸ್‌ಪ್ಲೇ 390x390 ಪಿಕ್ಸೆಲ್ ರೆಸೂಲೆಷನ್ ಮತ್ತು 328ಪಿಪಿಐ ಪಿಕ್ಸೆಲ್ ಸಾಂದ್ರತೆಯನ್ನು ಒಳಗೊಂಡಿದೆ.

ರೂ.11ರ ಪ್ಲ್ಯಾನ್‌‌‌‌ನಲ್ಲಿ 1GB ಡೇಟಾ: 2.51 ಕೋಟಿ ಚಂದಾದಾರರು!

ಗೂಗಲ್‌ನ ವೀಯರ್ ಓಎಸ್ ಆಪರೇಟಿಂಗ್ ಸಾಫ್ಟ್‌ವೇರ್ ಮೇಲೆ ಈ ಫಾಸಿಲ್ ಜೆನ್ 5ಇ ಸ್ಮಾರ್ಟ್‌ವೀಯರ್ ರನ್ ಆಗುತ್ತದೆ. 44 ಎಂಎಂ ಮತ್ತು 42 ಎಂಎಂ ಗಾತ್ರ ಆಯ್ಕೆಯಗಳಿದ್ದು, ಎರಡೂ ಒಂದೇ ತೆರನಾದ ವಿಶೇಷತೆಗಳು ಮತ್ತು ಫೀಚರ್‌ಗಳನ್ನು ಒಳಗೊಂಡಿವೆ.  ಈ ಸ್ಮಾರ್ಟ್‌ವಾಚ್‌ನಲ್ಲಿ ಸ್ನ್ಯಾಪ್‌ಡ್ರಾಗನ್ ವೀಯರ್ 3100 ಎಸ್ಒಎಸಿ ಪ್ರೊಸೆಸರ್‌ ಇದೆ. ಇಷ್ಟು ಮಾತ್ರವಲ್ಲದೇ 1 ಜಿಬಿ ರ್ಯಾಮ್ ಮತ್ತು 4 ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನು ಈ ಸ್ಮಾರ್ಟ್‌ವಾಚ್ ಹೊಂದಿದೆ.

BSNL Offer: 199 ರೂ.ನಲ್ಲಿ 8 ಸಾವಿರಕ್ಕೂ ಅಧಿಕ ಸಿನಿಮಾ ನೋಡಿ

ಇನ್ನು ಕನೆಕ್ಟಿವಿಟಿ ಬಗ್ಗೆ ಹೇಳಬೇಕಾದರೆ ನಿಮಗೆ ಬ್ಲೂಟೂಥ್ 4.2 ಎಲ್ ಇ, ಎನ್‌ಎಫ್‌ಸಿ ಮತ್ತು ವೈ ಪೈ ಫೀಚರ್‌ಗಳು ದೊರೆಯುತ್ತವೆ. ಅಕ್ಸೆಲರ್ ಮೀಟರ್, ಗ್ರೀಯೋಸ್ಕೋಪ್, ಆಫ್ ಬಾಡಿ ಐಆರ್ ಮತ್ತು ಪಿಪಿಜಿ ಹಾರ್ಟ್ ಸೆನ್ಸರ್ ಸೇರಿ ಹಲವು ಸೆನ್ಸರ್‌ಗಳನ್ನು ಈ ಫಾಸಿಲ್ ಜೆನ್ 5ಇ ಸ್ಮಾರ್ಟ್ ವಾಚ್ ಹೊಂದಿದೆ. ಕಂಪನಿ ಹೇಳುವ ಪ್ರಕಾರ ಈ ಸ್ಮಾರ್ಟ್ ವಾಚ್‌ಗೆ ಕ್ವಿಕ್ ಚಾರ್ಜಿಂಗ್ ಸಾಮರ್ಥ್ಯವಿದೆ. ಅಂದರೆ, ಕೇವಲ 50 ನಿಮಿಷದಲ್ಲಿ ಶೇ.80ರಷ್ಟು ಬ್ಯಾಟರಿಯನ್ನು ಚಾರ್ಜ್ ಮಾಡಬಹುದು. ಅಷ್ಟು ಫಾಸ್ಟ್ ಆಗಿ ಈ ಸ್ಮಾರ್ಟ್ ವಾಚ್ ಚಾರ್ಜ್ ಆಗುತ್ತದೆ.  ಡೈಲಿ ಮೋಡ್, ಎಕ್ಸೆಟೆಂಡ್ ಮೋಡ್, ಟೈಮ್ ಓನ್ಲೀ ಮೋಡ್, ಕಸ್ಟಮ್ಸ್ ಮೋಡ್ ಸೇರಿದಂತೆ ಹಲವು ಮೋಡ್‌ಗಳಿದ್ದು ನಿಮ್ಮ ಅಗತ್ಯಕ್ಕೆ ತಕ್ಕಂತೆ ಬ್ಯಾಟರಿ ಮೋಡ್‌ಗಳನ್ನು ಬದಲಿಸಿಕೊಳ್ಳಬಹುದು.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ನಾನು ಬದುಕಿದ್ದೇನೆ, ಎರಡು ದಿನ ಬಟನ್ ಒತ್ತಿಲ್ಲ ಅಂದ್ರೆ ... ಚೀನಾದಲ್ಲಿ ಫೇಮಸ್ ಆಗ್ತಿದೆ Are you dead ಆಪ್
ಬೆಂಗಳೂರು ಸೇರಿ ಪ್ರಮುಖ ನಗರದಲ್ಲಿ ಡೆಲ್ ಟೆಕ್‌ ಆನ್‌ ವೀಲ್ಸ್‌ ಆರಂಭ, ಮನೆಬಾಗಿಲಲ್ಲೆ ಪರಿಹಾರ