Realme Smart TV X: ಏಪ್ರಿಲ್ ಅಂತ್ಯದಲ್ಲಿ ಭಾರತದಲ್ಲಿ 43 inch Full-HD ಸ್ಮಾರ್ಟ್‌ ಟಿವಿ ಬಿಡುಗಡೆ!

By Suvarna News  |  First Published Mar 13, 2022, 3:48 PM IST

ಸದ್ಯ ರಿಯಲ್‌ಮಿ 13,000 ರೂ.ನಿಂದ 49,000 ರೂ ಶ್ರೇಣಿಯಲ್ಲಿ  ಐದು ಟಿವಿ ಮಾಡೆಲ್‌ಗಳನ್ನು ಹೊಂದಿದೆ. ಕಂಪನಿಯು ಈಗ ಭಾರತದಲ್ಲಿ ತನ್ನ ಶ್ರೇಣಿಗೆ ಮತ್ತೊಂದು ಟಿವಿಯನ್ನು ಸೇರಿಸಲು ಸಿದ್ಧತೆ ನಡೆಸುತ್ತಿದೆ
 


Tech Desk: ರಿಯಲ್‌ಮಿ ಭಾರತದಲ್ಲಿ ಕಡಿಮೆ ಸಮಯದಲ್ಲಿ ಸ್ಮಾರ್ಟ್ ಟೆಲಿವಿಷನ್‌ಗಳ ಮಾರುಕಟ್ಟೆಯಲ್ಲಿ ಉತ್ತಮ ಬೆಳವಣಿಗೆ ಕಂಡಿದೆ. ಸದ್ಯ ರಿಯಲ್‌ಮಿ 13,000 ರೂ.ನಿಂದ 49,000 ರೂ ಶ್ರೇಣಿಯಲ್ಲಿ  ಐದು ಟಿವಿ ಮಾಡೆಲ್‌ಗಳನ್ನು ಹೊಂದಿದೆ. ಕಂಪನಿಯು ಈಗ ಭಾರತದಲ್ಲಿ ತನ್ನ ಶ್ರೇಣಿಗೆ ಮತ್ತೊಂದು ಟಿವಿಯನ್ನು ಸೇರಿಸಲು ಸಿದ್ಧತೆ ನಡೆಸುತ್ತಿದೆ.  ರಿಯಲ್‌ಮಿ ಏಪ್ರಿಲ್ ಅಂತ್ಯದ ವೇಳೆಗೆ ಭಾರತದಲ್ಲಿ ಹೊಸ 43-ಇಂಚಿನ ಸ್ಮಾರ್ಟ್ ಟೆಲಿವಿಷನನ್ನು ಬಿಡುಗಡೆ ಮಾಡಲಿದೆ ಎಂದು ವರದಿಗಳು ತಿಳಿಸಿವೆ. 

ಹೊಸ ಟಿವಿಯನ್ನು ರಿಯಲ್‌ಮಿ ಸ್ಮಾರ್ಟ್ ಟಿವಿ ಎಕ್ಸ್ ಫುಲ್ ಎಚ್‌ಡಿ (43") ಎಂಬ ಹೆಸರಿನೊಂದಿಗೆ ಬಿಡುಗಡೆ ಮಾಡಲಿದೆ.  ಇನ್ನು ಭಾರತದಲ್ಲಿ ಏಪ್ರಿಲ್ 28 ರಂದು ರಿಯಲ್‌ಮಿ  ಹೊಸ ಸ್ಮಾರ್ಟ್‌ ಟಿವಿಯನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಕಂಪನಿ ಈ ಬಗ್ಗೆ ಇನ್ನು ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ ಹಾಗೂ ಟಿವಿಯ ಬಿಡುಗಡೆಗೆ ಪ್ರತ್ಯೇಕ ಕಾರ್ಯಕ್ರಮ ಆಯೋಜಿಸಲಾಗುವುದೇ ಎಂಬುದರ ಬಗ್ಗೆ ಮಾಹಿತಿ ಇಲ್ಲ.

Tap to resize

Latest Videos

ಇದನ್ನೂ ಓದಿ: Realme C35 ಕೈಗೆಟುಕುವ ದರದಲ್ಲಿ ರಿಯಲ್‌ಮಿ C35 ಫೋನ್ ಲಾಂಚ್, ರೆಡ್‌ಮಿ ಸ್ಯಾಮ್ಸಂಗ್‌ಗೆ ಪೈಪೋಟಿ!

ರಿಯಲ್‌ಮಿ 2020 ರಲ್ಲಿ ಮೊದಲ ಟಿವಿಯನ್ನು ಪ್ರಾರಂಭಿಸಿತು ಮತ್ತು ಇದು ಆಂಡ್ರಾಯ್ಟ್‌ ಟಿವಿ ಸಾಫ್ಟ್‌ವೇರ್‌ನೊಂದಿಗೆ ಬಿಟುಗಡೆಯಾಗಿತ್ತು. ಅದರ ನಂತರದ ಟಿವಿಗಳು ಆಂಡ್ರಾಯ್ಡ್‌ ಸಾಫ್ಟವೇರ್‌ನಲ್ಲಿಯೇ ಕಾರ್ಯ ನಿರ್ವಹಿಸಿವೆ, ಆದರೆ ರಿಯಲ್‌ ಮಿ ಸಾಫ್ಟ್‌ವೇರ್ ಆವೃತ್ತಿಯನ್ನು Realme Smart TV 4K ನೊಂದಿಗೆ ಅಪ್‌ಗ್ರೇಡ್ ಮಾಡಿದ್ದು, ಇದು 43-ಇಂಚಿನ ಮತ್ತು 50-ಇಂಚಿನ ಗಾತ್ರಗಳಲ್ಲಿ ಬರುತ್ತದೆ. Realme Smart TV 4K ಆಂಡ್ರಾಯ್ಡ್ 9 ಸಾಫ್ಟ್‌ವೇರ್ ಅನ್ನು ಬೂಟ್ ಮಾಡುತ್ತದೆ ಮತ್ತು ಡಾಲ್ಬಿ ವಿಷನ್, ಡಾಲ್ಬಿ ಅಟ್ಮಾಸ್ ಮತ್ತು ಹ್ಯಾಂಡ್ಸ್-ಫ್ರೀ ಗೂಗಲ್ ಅಸಿಸ್ಟೆಂಟ್‌ನಂತಹ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ.

ಮುಂಬರುವ ರಿಯಲ್‌ಮಿ ಟಿವಿಯ ಪ್ರಮುಖ ವಿಶೇಷಣಗಳು ಸ್ಪಷ್ಟವಾಗಿಲ್ಲ. ಆದರೆ ಇದು ತೆಳುವಾದ ಬೆಜೆಲ್‌ಗಳು, ಸ್ಟಿರಿಯೊ ಸ್ಪೀಕರ್‌ಗಳು ಪ್ರಾಯಶಃ ಡಾಲ್ಬಿ ಅಟ್ಮಾಸ್ ಬೆಂಬಲದೊಂದಿಗೆ, ಡಾಲ್ಬಿ ವಿಷನ್ ಬಹುಶಃ ಹೊಂದಿರುವ ಪ್ಯಾನೆಲ್ ಮತ್ತು ಹೊಸ ಆಂಡ್ರಾಯ್ಡ್ ಸಾಫ್ಟ್‌ವೇರ್‌ನೊಂದಿಗೆ ಬರಬಹುದು ಎಂದು ನಿರೀಕ್ಷಿಸಲಾಗಿದೆ. ಮುಂಬರುವ ರಿಯಲ್‌ಮಿ ಟಿವಿಗೆ ಗೂಗಲ್ ಟಿವಿ ಇಂಟರ್ಫೇಸನ್ನು ಚಲಾಯಿಸಲು ಹೆಚ್ಚಿನ ಅವಕಾಶಗಳಿವೆ, ರಿಯಲ್‌ಮಿ ಈಗಾಗಲೇ ಭಾರತದಲ್ಲಿ ಗೂಗಲ್ ಟಿವಿ ಸ್ಟಿಕನ್ನು ಮಾರಾಟ ಮಾಡುತ್ತಿದೆ.

ಇದನ್ನೂ ಓದಿ: Realme Buds Q2s: 30 ಗಂಟೆಗಳ ಬ್ಯಾಟರಿ ಲೈಫ್‌, Dolby Atmos ಬೆಂಬಲದೊಂದಿಗೆ ಬಿಡುಗಡೆ

Realme GT 2 Pro: ಇನ್ನು ರಿಯಲ್‌ಮಿ ಭಾರತದಲ್ಲಿ GT 2 Pro ಸ್ಮಾರ್ಟ್‌ಫೋನನ್ನು ಮಾರ್ಚ್ ಅಂತ್ಯದ ವೇಳೆಗೆ ಬಿಡುಗಡೆ ಮಾಡಲು ಯೋಜಿಸುತ್ತಿದೆ ಎಂದು ವರದಿಗಳು ತಿಳಿಸಿವೆ. Realme GT 2 Pro ಜನವರಿಯಲ್ಲಿ ಕಂಪನಿಯ ಅಲ್ಟ್ರಾ-ಪ್ರೀಮಿಯಂ ಫೋನಾಗಿ  ಚೀನಾದಲ್ಲಿ ಬಿಡುಗಡೆಯಾಗಿದೆ. ರಿಯಲ್‌ಮಿ ನಂತರ Realme GT 2 Pro ಅನ್ನು ಯುರೋಪಿಯನ್ ಮಾರುಕಟ್ಟೆಗೆ  ಕಳೆದ ತಿಂಗಳು ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2022ನಲ್ಲಿ ಪರಚಯಿಸಲಾಗಿತ್ತು. ಫೋನ್‌ನ ಭಾರತೀಯ ಬಿಡುಗಡೆಯ ಮೊದಲು, ರಿಯಲ್‌ಮಿ ಅದನ್ನು ಇಂಡೋನೇಷ್ಯಾದಲ್ಲಿ ಮಾರಾಟ ಮಾಡಲು ಪ್ರಾರಂಭಿಸಲಿದೆ. 

Realme GT 2 Pro 6.7-ಇಂಚಿನ Samsung OLED LTPO ಡಿಸ್ಪ್ಲೇ ಜೊತೆಗೆ 3216x1440 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 120Hz ಅಡಾಪ್ಟಿವ್ ರಿಫ್ರೆಶ್ ದರದೊಂದಿಗೆ ಬರುತ್ತದೆ. ಇದು ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8 Gen 1 ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, 12GB ಯ RAM ಮತ್ತು 512GB ಸಂಗ್ರಹದೊಂದಿಗೆ ಜೋಡಿಸಲಾಗಿದೆ. ಫೋನ್ ಆಂಡ್ರಾಯ್ಡ್ 12 ಆಧಾರಿತ Realme UI 3.0 ಅನ್ನು ಬಳಸುತ್ತದೆ. 

Realme GT 2 Pro ನಲ್ಲಿ 50-ಮೆಗಾಪಿಕ್ಸೆಲ್ Sony IMX766 ಪ್ರಮುಖ ಕ್ಯಾಮೆರಾ, 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಮತ್ತು 3-ಮೆಗಾಪಿಕ್ಸೆಲ್ ಮೈಕ್ರೋಸ್ಕೋಪ್ ಕ್ಯಾಮೆರಾ ಇದೆ. ಸೆಲ್ಫಿಗಳಿಗಾಗಿ, ಡಿಸ್ಪ್ಲೇಯ ಪಂಚ್-ಹೋಲ್ ಒಳಗೆ 32-ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಫೋನ್ 5000mAh ಬ್ಯಾಟರಿಯನ್ನು ಹೊಂದಿದ್ದು 65W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿದೆ.

click me!