ಗ್ರಾಹಕರಿಗೆ ಬಿಗ್ ಶಾಕ್ ಕೊಟ್ಟ ಏರ್‍‌ಟೆಲ್.. ನಿಮ್ಮ ಜೇಬಿಗೆ ಮತ್ತಷ್ಟು ಕತ್ತರಿ..!

Published : Jul 18, 2026, 09:50 AM IST
Airtel

ಸಾರಾಂಶ

ನೀವು ಏರ್‍‌ಟೆಲ್ ಪೋಸ್ಟ್‌ಪೇಯ್ಡ್ (Airtel Postpaid) ಗ್ರಾಹಕರೇ? ಹಾಗಿದ್ದಲ್ಲಿ ನಿಮಗೊಂದು ಶಾಕಿಂಗ್ ಸುದ್ದಿ ಇದೆ. ಭಾರತದ ಪ್ರಮುಖ ಟೆಲಿಕಾಂ ಸಂಸ್ಥೆಯಾದ ಭಾರ್ತಿ ಏರ್‍‌ಟೆಲ್ ತನ್ನ ಅತ್ಯಂತ ಜನಪ್ರಿಯ ಮತ್ತು ಕೈಗೆಟುಕುವ ದರದ 549 ರೂಪಾಯಿಗಳ ವೈಯಕ್ತಿಕ ಪೋಸ್ಟ್‌ಪೇಯ್ಡ್ ಪ್ಲಾನ್ ಅನ್ನು ಸದ್ದಿಲ್ಲದೇ ಸ್ಥಗಿತಗೊಳಿಸಿದೆ.

ಬೆಂಗಳೂರು: ನೀವು ಏರ್‍‌ಟೆಲ್ ಪೋಸ್ಟ್‌ಪೇಯ್ಡ್ (Airtel Postpaid) ಗ್ರಾಹಕರೇ? ಹಾಗಿದ್ದಲ್ಲಿ ನಿಮಗೊಂದು ಶಾಕಿಂಗ್ ಸುದ್ದಿ ಇದೆ. ಭಾರತದ ಪ್ರಮುಖ ಟೆಲಿಕಾಂ ಸಂಸ್ಥೆಯಾದ ಭಾರ್ತಿ ಏರ್‍‌ಟೆಲ್ ತನ್ನ ಅತ್ಯಂತ ಜನಪ್ರಿಯ ಮತ್ತು ಕೈಗೆಟುಕುವ ದರದ 549 ರೂಪಾಯಿಗಳ ವೈಯಕ್ತಿಕ ಪೋಸ್ಟ್‌ಪೇಯ್ಡ್ ಪ್ಲಾನ್ ಅನ್ನು ಸದ್ದಿಲ್ಲದೇ ಸ್ಥಗಿತಗೊಳಿಸಿದೆ. 2026ರ ಟ್ಯಾರಿಫ್ ದರ ಏರಿಕೆಯ ಭಾಗವಾಗಿ ಕಂಪನಿಯು ಈ ನಿರ್ಧಾರ ತೆಗೆದುಕೊಂಡಿದ್ದು, ಇದರಿಂದ ಸಾಮಾನ್ಯ ಗ್ರಾಹಕರ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳಲಿದೆ.

ಸ್ಥಗಿತಗೊಂಡ 549 ರೂ. ಪ್ಲಾನ್‌ನಲ್ಲಿ ಏನಿತ್ತು?

ಈ ಪ್ಲಾನ್ ವೈಯಕ್ತಿಕ ಬಳಕೆದಾರರಲ್ಲಿ ಬಹಳ ಪ್ರಸಿದ್ಧವಾಗಿತ್ತು. ಇದರಲ್ಲಿ ಗ್ರಾಹಕರಿಗೆ ಅನ್‌ಲಿಮಿಟೆಡ್ ಲೋಕಲ್ ಮತ್ತು ಎಸ್‌ಟಿಡಿ (STD) ಕಾಲಿಂಗ್, ಪ್ರತಿದಿನ 100 ಎಸ್‌ಎಂಎಸ್ (SMS), ತಿಂಗಳಿಗೆ 40 GB ಡೇಟಾ ಜೊತೆಗೆ ಡೇಟಾ ರೋಲ್‌ಓವರ್ ಸೌಲಭ್ಯ, ಹೆಚ್ಚುವರಿ ಪ್ರಯೋಜನವಾಗಿ ಏರ್‍‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇ (Xstream Play) ಮತ್ತು ವಿಂಕ್ ಮ್ಯೂಸಿಕ್ ಉಚಿತ ಚಂದಾದಾರಿಕೆ ಸಿಗುತ್ತಿತ್ತು. ಈಗ ಪ್ಲಾನ್ ರದ್ದಾಗಿರುವುದರಿಂದ ಬಳಕೆದಾರರು ಅನಿವಾರ್ಯವಾಗಿ ಹೆಚ್ಚಿನ ಬೆಲೆಯ ಪ್ಲಾನ್‌ಗಳಿಗೆ ಮೊರೆ ಹೋಗಬೇಕಿದೆ.

ಮುಂದಿನ ಆಯ್ಕೆಗಳೇನು?

  • ಈಗ 549 ರೂ. ಪ್ಲಾನ್ ಇಲ್ಲದಿರುವುದರಿಂದ ಹೊಸ ಗ್ರಾಹಕರಿಗೆ ಕೇವಲ ಎರಡು ಪ್ರಮುಖ ಆಯ್ಕೆಗಳು ಉಳಿದಿವೆ.
  • 449 ರೂಪಾಯಿ ಪ್ಲಾನ್: ಇದು ಈಗಿನ ಎಂಟ್ರಿ-ಲೆವೆಲ್ (ಕನಿಷ್ಠ ಬೆಲೆಯ) ವೈಯಕ್ತಿಕ ಪ್ಲಾನ್ ಆಗಿದೆ.
  • 699 ರೂಪಾಯಿ ಪ್ಲಾನ್: ನೀವು 549 ರೂ. ಪ್ಲಾನ್‌ಗಿಂತ ಹೆಚ್ಚಿನ ಪ್ರಯೋಜನಗಳನ್ನು ನಿರೀಕ್ಷಿಸುತ್ತಿದ್ದರೆ, ನೇರವಾಗಿ 699 ರೂಪಾಯಿಗಳ ಫ್ಯಾಮಿಲಿ ಪ್ಲಾನ್ ಅನ್ನು ಆರಿಸಿಕೊಳ್ಳಬೇಕಾಗುತ್ತದೆ.
  • ಅಂದರೆ ಮಧ್ಯಮ ವರ್ಗದ ಗ್ರಾಹಕರು ಈಗ ನೇರವಾಗಿ 150 ರೂಪಾಯಿಗಳಷ್ಟು ಹೆಚ್ಚಿನ ಹಣವನ್ನು ಪ್ರತಿ ತಿಂಗಳು ಪಾವತಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಏರ್‍‌ಟೆಲ್‌ನ ಈ ನಿರ್ಧಾರಕ್ಕೆ ಕಾರಣವೇನು?

ಟೆಲಿಕಾಂ ತಜ್ಞರ ಪ್ರಕಾರ, ಈ ಬದಲಾವಣೆಯ ಹಿಂದೆ ಒಂದು ಪ್ರಮುಖ ಗುರಿಯಿದೆ. ಅದುವೇ ARPU (Average Revenue Per User) ಅಂದರೆ ಪ್ರತಿ ಗ್ರಾಹಕನಿಂದ ಬರುವ ಸರಾಸರಿ ಆದಾಯವನ್ನು ಹೆಚ್ಚಿಸುವುದು. ಏರ್‍‌ಟೆಲ್ ಮತ್ತು ಜಿಯೋ ಸಂಸ್ಥೆಗಳು ದೇಶಾದ್ಯಂತ 5G ಮೂಲಸೌಕರ್ಯಕ್ಕಾಗಿ ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿವೆ. ಈ ಆದಾಯವನ್ನು ಸರಿದೂಗಿಸಲು ಅಗ್ಗದ ಪ್ಲಾನ್‌ಗಳನ್ನು ತೆಗೆದುಹಾಕಿ, ಗ್ರಾಹಕರನ್ನು ದುಬಾರಿ ಪ್ಲಾನ್‌ಗಳತ್ತ ಸೆಳೆಯಲಾಗುತ್ತಿದೆ.

ಫ್ಯಾಮಿಲಿ ಪ್ಲಾನ್‌ಗಳಿಗೆ ಒತ್ತು..

ಗ್ರಾಹಕರು ವೈಯಕ್ತಿಕ ಪ್ಲಾನ್‌ಗಳಿಗಿಂತ ಹೆಚ್ಚು ಬೆಲೆಯ ಫ್ಯಾಮಿಲಿ ಪ್ಲಾನ್‌ಗಳನ್ನು ಆರಿಸಿಕೊಳ್ಳುವಂತೆ ಕಂಪನಿಗಳು ಒತ್ತಡ ಹೇರುತ್ತಿವೆ. ನೀವು ಈಗಾಗಲೇ 549 ರೂ. ಪ್ಲಾನ್ ಬಳಸುತ್ತಿದ್ದರೆ, ನಿಮ್ಮ ಮುಂದಿನ ಬಿಲ್ಲಿಂಗ್ ಸೈಕಲ್‌ನಿಂದ ನೀವು ಹೊಸ ಪ್ಲಾನ್‌ಗೆ ಬದಲಾಗಬೇಕಾಗಬಹುದು. ಇಲ್ಲದಿದ್ದರೆ, ಪೋಸ್ಟ್‌ಪೇಯ್ಡ್‌ನಿಂದ ಪ್ರಿಪೇಯ್ಡ್‌ಗೆ (Prepaid) ಕನೆಕ್ಷನ್ ಬದಲಾಯಿಸಿಕೊಳ್ಳುವುದು ಸದ್ಯಕ್ಕೆ ಇರುವ ಏಕೈಕ ಉಳಿತಾಯದ ದಾರಿಯಾಗಿದೆ. ಒಟ್ಟಾರೆಯಾಗಿ ಟೆಲಿಕಾಂ ದರಗಳ ಏರಿಕೆ ಸಾಮಾನ್ಯ ಜನರ ಮಾಸಿಕ ಬಜೆಟ್ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವುದಂತೂ ಸುಳ್ಳಲ್ಲ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

Dhoni Earpiece: ಏಕದಿನ ಪಂದ್ಯದಲ್ಲಿ ಗಮನ ಸೆಳೆದ ಧೋನಿ ಕಿವಿ? ಕೂಲ್‌ ಕ್ಯಾಪ್ಟನ್‌ ಹಾಕಿಕೊಂಡಿದ್ದ ಡಿವೈಸ್‌ ಯಾವ್ದು?
ಐಫೋನ್, ಸ್ಯಾಮ್‌ಸಂಗ್‌ಗೆ ನಡುಕ ಹುಟ್ಟಿಸಿದ ಒಪ್ಪೊ ಫೈಂಡ್ X10 ಪ್ರೊ ಮ್ಯಾಕ್ಸ್: ಮೂರು 200MP ಕ್ಯಾಮೆರಾ ಮೊಬೈಲ್!