iPhone 16 Pro Max: ಹೊಸ ಫೋನ್‌ಗಳಲ್ಲಿ ಇರಲಿದೆ ಈ 7 ಪ್ರಮುಖ ಅಪ್‌ಡೇಟ್‌ಗಳು!

By Santosh Naik  |  First Published Apr 11, 2024, 1:15 PM IST

ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿರುವ ಆಪಲ್‌ ಕಂಪನಿಯ ಫ್ಲ್ಯಾಗ್‌ಶಿಪ್‌ ಐಫೋನ್‌ ಸರಣಿಯ ಐಫೋನ್‌ 16 ಪ್ರೋ ಮ್ಯಾಕ್ಸ್‌ನಲ್ಲಿ ದೊಡ್ಡದಾ ಡಿಸ್‌ಪ್ಲೇಸ್‌, ಕ್ಯಾಮೆರಾ ಸೆನ್ಸಾರ್‌ ಸೇರಿದಂತೆ ಇನ್ನೂ ಕೆಲವು ಬದಲಾವಣೆಗಳು ಇರಲಿದೆಯಂತೆ.
 


ಬೆಂಗಳೂರು (ಏ.11): ಆಪಲ್‌ ಕಂಪನಿಯು ಐಫೋನ್‌ 16 ಸರಣಿಯ ಫೋನ್‌ಗಳನ್ನು ಈ ವರ್ಷದ ಕೊನೆಯಲ್ಲಿ ಬಿಡುಗಡೆ ಮಾಡಲಿ ಅಣಿಯಾಗಿದೆ. ಇದರ ನಡುವೆ ಹೊಸ ಸರಣಿಯ ಐಫೋನ್‌ಗಳ ನಗ್ಗೆ ಈಗಾಗಲೇ ಕುತೂಹಲಗಳು ಆರಂಭವಾಗಿದೆ. ಕೆಲವೊಂದು ಅಪ್‌ಡೇಟ್‌ಗಳು ಈಗಾಗಲೇ ಲೀಕ್‌ ಆಗಿದ್ದರೆ, ಇನ್ನೂ ಕೆಲವು ಅಪ್‌ಡೇಟ್‌ಗಳ ಬಗ್ಗೆ ರೂಮರ್‌ಗಳು ಹಬ್ಬಿದ್ದು, ಇದು ಆಪಲ್‌  ಫ್ಲ್ಯಾಗ್‌ಶಿಪ್‌ ಫೋನ್‌ಗಳ ನಗ್ಗೆ ಕುತೂಹಲ ಇನ್ನಷ್ಟು ಹೆಚ್ಚುವಂತೆ ಮಾಡಿದೆ. ಇಲ್ಲಿಯವರೆಗೂ ಬಂದಿರುವ ಮಾಹಿತಿಯ ಪ್ರಕಾರ, ಹೊಸ ಮಾದರಿಯ ಫೋನ್‌ನಲ್ಲಿ ಇನ್ನಷ್ಟು ದೊಡ್ಡ ಡಿಸ್‌ಪ್ಲೇ ಇರಲಿದೆ. ಅದರೊಂದಿಗೆ ಎ18 ಪ್ರೋ ಚಿಪ್‌ ಇರಲಿದ್ದು, ಕೆಲವೊಂದು ಹಾರ್ಡ್‌ವೇರ್‌ ಬದಲಾವಣೆಗಳೂ ಆಗಲಿದೆ. ಪ್ರಮುಖವಾಗಿ ಹೊಸ ಫೋನ್‌ನಲ್ಲಿ ಕ್ಯಾಪ್ಚರ್‌ ಬಟನ್‌ ಇರಲಿದೆಯಂತೆ. ಇನ್ನು ಐಫೋನ್‌ 16 ಸರಣಿಯ ಗರಿಷ್ಠ ಬೆಲೆಯ ಫೋನ್‌ ಎನಿಸಿಕೊಂಡಿರುವ ಐಫೋನ್‌ ಪ್ರೋ ಮ್ಯಾಕ್ಸ್‌ ಬಗ್ಗೆಯೇ ಹೆಚ್ಚಿನ ವದಂತಿಗಳಿವೆ. ಜನರೇಟಿವ್‌ ಎಐ ಅನ್ನು ಆಪಲ್‌ ಇದರಲ್ಲಿ ಸೇರಿಸಲಿದೆಯಂತೆ. ಕೆಲವು ಮೂಲಗಳ ಪ್ರಕಾರ ಐಓಎಸ್‌ 18 ಸಾಫ್ಟ್‌ವೇರ್‌ನಲ್ಲೂ ಜನರೇಟಿವ್‌ ಎಐ ಇರಲಿದೆ ಎಂದು ಹೇಳಲಾಗಿದ್ದರೆ, ಇನ್ನೂ ಕೆಲವರು ಇದು ಹೊಸ ಫೋನ್‌ಗಳಲ್ಲಿ ಇರುವ ವೈಶಿಷ್ಟ್ಯ ಮಾತ್ರ ಎಂದು ಹೇಳಲಾಗಿದೆ. ನಿಮ್ಮ ಐಫೋನ್‌ ಅನ್ನು ಅಪ್‌ಗ್ರೇಡ್‌ ಮಾಡವಷ್ಟು ಹೊಸ ಫೀಚರ್‌ಗಳು ವಿಭಿನ್ನವಾಗಿದೆಯೇ? ಇವುಗಳ ಬಗ್ಗೆ ಇಲ್ಲಿದೆ ಮಾಹಿತಿ..

ದೊಡ್ಡದಾಗಲಿದೆ ಡಿಸ್‌ಪ್ಲೇ: 2020ರಲ್ಲಿ ಐಫೋನ್‌ 12 ಪ್ರೋ ಮ್ಯಾಕ್ಸ್‌ ಅನ್ನು ಪರಿಚಯ ಮಾಡಿದ ಬಳಿಕ, ಐಫೋನ್‌ ಪ್ರೋ ಮ್ಯಾಕ್ಸ್‌ ಸಿರೀಸ್‌ ಫೋನ್‌ಗಳ ಡಿಸ್‌ಪ್ಲೇ 6.7 ಇಂಚು ಅಷ್ಟೇ ಇದೆ. ಆದರೆ, ಬಂದಿರುವ ವದಂತಿಗಳ ಪ್ರಕಾರ ಐಫೋನ್‌ 16 ಪ್ರೋ ಮ್ಯಾಕ್ಸ್‌, ಆಪಲ್‌ ಕಂಪನಿಯ ಈವರೆಗಿನ ಅತಿದೊಡ್ಡ ಮಾಡೆಲ್‌ ಎನ್ನಲಾಗಿದೆ. ಅನಾಲಿಸ್ಟ್‌ ಮಿಂಗ್‌ ಚಿ ಕ್ಯು ಪ್ರೆಡಿಕ್ಟ್‌ ಮಾಡಿರುವ ಪ್ರಕಾರ, ಐಫೋನ್‌ 16 ಪ್ರೋ ಮ್ಯಾಕ್ಸ್‌ 6.9 ಇಂಚಿನ ಡಿಸ್‌ ಪ್ಲೇ ಹೊಂದಿರಲಿದೆ. ಇದು 6.8 ಇಂಚು ಡಿಸ್‌ಪ್ಲೇ ಹೊಂದಿರುವ  ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 24 ಅಲ್ಟ್ರಾ ಫೋನ್‌ಗಿಂತ ದೊಡ್ಡದಾಗಿರಲಿದೆ. ಅದರೊಂದಿಗೆ ಐಫೋನ್‌ 16 ಪ್ರೋ ಫೋನ್‌ನ ಸ್ಕ್ರೀನ್‌ ಕೂಡ ದೊಡ್ಡದಾಗಲಿದೆ. 6.1 ಇಂಚಿನಿಂದ 6.3 ಇಂಚಿಗೆ ಏರಿಕೆಯಾಗಲಿದೆ. 6.9 ಇಂಚಿನ ಐಫೋನ್‌ ತುಂಬಾ ದೊಡ್ಡದು ಎನಿಸಿದಲ್ಲಿ, ಮೀಡಿಯಂ ಸೈಜ್‌ನ iPhone 16 Pro ಅನ್ನು ಬಳಸಬಹುದಾಗಿದೆ. ಒಳ್ಳೆಯ ಸುದ್ದಿ ಏನೆಂದರೆ, ಐಫೋನ್ 16 ಪ್ರೊ ಮ್ಯಾಕ್ಸ್‌ನ ಬೆಜೆಲ್‌ಗಳು ಇನ್ನಷ್ಟು ತೆಳ್ಳಗಾಗುವ ನಿರೀಕ್ಷೆ ಇದೆ.

Tap to resize

Latest Videos

ಹೊಸ ಕ್ಯಾಪ್ಚರ್‌ ಬಟನ್‌: ಐಫೋನ್‌ 15 ಪ್ರೋ ಮ್ಯಾಕ್ಸ್‌ನಲ್ಲಿ ಕಸ್ಟಮೈಸ್‌ ಮಾಡಬಹುದಾದ ಮೊದಲ ಆಕ್ಷನ್‌ ಬಟನ್‌ಅನ್ನು ನೀಡಲಾಗಿತ್ತು. ಆದರೆ ಐಫೋನ್ 16 ಪ್ರೊ ಮ್ಯಾಕ್ಸ್ ಮತ್ತು ಐಫೋನ್ 16 ಪ್ರೊ ಎರಡೂ ಹೊಸ ಕ್ಯಾಪ್ಚರ್ ಬಟನ್ ಅನ್ನು ಹೊಂದಿರಲಿದೆ. ಇದು ಐಫೋನ್‌ 16 ಮಾದರಿಯಲ್ಲೂ ಇರಲಿದೆ. ಬಟನ್ ಹ್ಯಾಪ್ಟಿಕ್ ಫೀಡ್‌ಬ್ಯಾಕ್‌ನ ಸಾಲಿಡ್‌ ಸ್ಟೇಟ್‌ ಕೆಪ್ಯಾಸಿಟಿವ್ ವಿನ್ಯಾಸವನ್ನು ಒಳಗೊಂಡಿರುತ್ತದೆ ಮತ್ತು ಅದು ಪವರ್ ಬಟನ್ ಕೆಳಗಡೆ ಇರಲಿದೆ. ಈ ಕ್ಯಾಪ್ಚರ್‌ ಬಟನ್‌ಅನ್ನು ಕ್ಯಾಮೆರಾವನ್ನು ಕ್ವಿಕ್‌ ಆಗಿ ತೆರೆಯಲು ಪೋಟೋ ತೆಗೆಯಲು, ಸೆನ್ಸಾರ್‌ ಫಂಕ್ಷನ್‌ ಅನ್ನು ತೆರೆಯಲು ಬಳಸಬಹುದಾಗಿದೆ. ಕ್ಯಾಪ್ಚರ್‌ ಬಟನ್‌ಅನ್ನು ಸ್ವಲ್ಪ ದೀರ್ಘಕಾಲ ಪ್ರೆಸ್‌ ಮಾಡಿ ಹಿಡಿದಲ್ಲಿ ಇದು ವಿಡಿಯೋವನ್ನೂ ರೆಕಾರ್ಡ್‌ ಮಾಡಲಿದೆ. ಕೆಲವು ಅತ್ಯುತ್ತಮ ಮಿರರ್‌ಲೆಸ್ ಕ್ಯಾಮೆರಾಗಳೊಂದಿಗೆ ಫೋಕಸಿಂಗ್ ಮಾಡುವ ರೀತಿ, ಐಫೋನ್ 16 ರ ಕ್ಯಾಮೆರಾವನ್ನು ಫೋಕಸ್ ಮಾಡಲು ಕ್ಯಾಪ್ಚರ್ ಬಟನ್ ಅನ್ನು ಬಳಸಬಹುದು ಎಂದು ವೈಬೋದಲ್ಲಿ ತಿಳಿಸಲಾಗಿದೆ. 

iPhone 16 Pro Max ಕ್ಯಾಮೆರಾ ಅಪ್‌ಗ್ರೇಡ್‌ಗಳು: ಐಫೋನ್ 15 ಪ್ರೊ ಮ್ಯಾಕ್ಸ್‌ಗೆ ಟೆಟ್ರಾಪ್ರಿಸಂ 5x ಆಪ್ಟಿಕಲ್ ಜೂಮ್ ಲೆನ್ಸ್ ಅನ್ನು ಸೇರಿಸಲು ಆಪಲ್‌ಗೆ ಎನ್‌ಕೋರ್ ಅಗತ್ಯವಿದೆ ಮತ್ತು ಸ್ಪಷ್ಟವಾಗಿ ಐಫೋನ್ 16 ಪ್ರೊ ಸರಣಿಯು ಅಲ್ಟ್ರಾವೈಡ್ ಲೆನ್ಸ್‌ಗೆ ಅಪ್‌ಗ್ರೇಡ್ ಆಗಲಿದೆ. ಪ್ರೊ ಮತ್ತು ಪ್ರೊ ಮ್ಯಾಕ್ಸ್ ಎರಡೂ 48MP ಅಲ್ಟ್ರಾವೈಡ್ ಕ್ಯಾಮೆರಾವನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಹಿಂದಿನ ಐಫೋನ್‌ ಮಾದರಿಗಿಂತ 12 ಎಂಪಿ ಹೆಚ್ಚಾಗಲಿದೆ. ಈ ಅಲ್ಟ್ರಾವೈಡ್ ಸೆನ್ಸಾರ್‌ 1/3.6-ಇಂಚಿನ ಸೆನ್ಸಾರ್‌ನಿಂದ 1/2.6-ಇಂಚಿನ ಸೆನ್ಸಾರ್‌ಗೆ ದೊಡ್ಡದಾಗಿದೆ. ಜೊತೆಗೆ, ಮುಖ್ಯ 48MP ಸೆನ್ಸಾರ್‌ 1/1.4-inch ಸೆನ್ಸಾರ್‌ ಹೊಂದುವ ಹಾದಿಯಲ್ಲಿದೆ. ಸೋನಿಯ ಹೊಸ IMX903 ಸೆನ್ಸಾರ್‌ಅನ್ನು ಆಧರಿಸಿ iPhone 16 Pro Max ಮಾತ್ರ 48MP ಮುಖ್ಯ ಕ್ಯಾಮೆರಾವನ್ನು ಪಡೆಯಲಿದೆ ಎನ್ನಲಾಗಿದೆ. ಉತ್ತಮ ಕಾರ್ಯಕ್ಷಮತೆಗಾಗಿ 1 ಗ್ಲಾಸ್ ಮತ್ತು 7 ಪ್ಲಾಸ್ಟಿಕ್ ಲೆನ್ಸ್ ಭಾಗಗಳ ಸಂಯೋಜನೆಯನ್ನು ಹೊಂದಿರುತ್ತದೆ ಎಂದು ಇನ್ನೊಂದು ನ್ಯೂಸ್‌ಲೀಕ್‌ನಲ್ಲಿ ತಿಳಿಸಲಾಗಿದೆ.

A18 ಪ್ರೊ ಚಿಪ್: ಆಪಲ್‌ನಲ್ಲಿ ಎ17 ಪ್ರೋ ಚಿಪ್‌ ಶಕ್ತಿಶಾಲಿಯಾಗಿದೆ. ಆದರೆ, ಐಫೋನ್‌ 16 ಪ್ರೋ ಮ್ಯಾಕ್ಸ್‌ನಲ್ಲಿ ಎ18 ಪ್ರೋ ಚಿಪ್‌ ಇರಲಿದ್ದು, ಆ ಮೂಲಕ ಜಗತ್ತಿನ ಅತ್ಯಂತ ವೇಗದ ಫೋನ್‌ ಎನ್ನುವ ಖ್ಯಾತಿ ಪಡೆಯುವ ಇರಾದೆಯಲ್ಲಿದೆ.  ಆದರೆ, ಈ ಬಗ್ಗೆ ಖಚಿತ ಮಾಹಿತಿಯಿಲ್ಲ.

ಜನರೇಟಿವ್ AI:  iPhone 16 Pro Max,  iOS 18 ನಿಂದ ಜನರೇಟಿವ್ AI ಅಪ್‌ಗ್ರೇಡ್‌ಗಳನ್ನು ಪಡೆಯುವ ಸಾಧ್ಯತೆ ಇದೆ. ಜೂನ್‌ನಲ್ಲಿ ನಡೆಯಲಿರುವ WWDC 2024ರಲ್ಲಿ ಇವುಗಳು ಅನಾವರಣವಾಗಬಹುದು ಎನ್ನಲಾಗಿದೆ. ಆಪಲ್ ಐಫೋನ್‌ಗಾಗಿ ಬಹು ಉತ್ಪಾದಕ AI ಪರಿಕರಗಳಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿದೆ, ಸಾಮಾನ್ಯವಾಗಿ ನಿಮ್ಮ ಧ್ವನಿಯನ್ನು ಬಳಸಿಕೊಂಡು ಅನೇಕ ಹಂತಗಳನ್ನು ಕೆಲಸವನ್ನು ಸ್ವಯಂಚಾಲಿತವಾಗಿಯೇ ಇದು ಮಾಡಲಿದೆ.  ಹಾಗೆಯೇ Apple ನ ದೊಡ್ಡ ಭಾಷಾ ಮಾದರಿಗಳನ್ನು (LLM) ಆಧರಿಸಿ ಸಿರಿಯ ಹೊಸ ಆವೃತ್ತಿಯನ್ನು ಒಳಗೊಂಡಿರುತ್ತದೆ.

ವೈಫೈ 7: ಬಹುಶಃ ನೀವಿನ್ನೂ ವೈಫೈ 7 ಬಗ್ಗೆ ಕೇಳಿಲ್ಲವೆಂದರೆ ಅದು ನಿಮ್ಮ ತಪ್ಪಲ್ಲ. ಯಾಕೆಂದರೆ, ಈ ತಂತ್ರಜ್ಞಾನ ಬಹಳ ಹೊಸದು. ವೈಫೈ 7 ರೌಟರ್‌ಗಳು ಈಗ ತುಂಬಾ ದುಬಾರಿ. ಆದರೆ, ದಿನಗಳು ಕಳೆದಂತೆ ಇದು ಬದಲಾವಣೆ ಆಗಲಿದೆ.  Wi-Fi 7 ಹೆಚ್ಚಿನ ಚಾನಲ್‌ಗಳ ಜೊತೆಗೆ ಹೆಚ್ಚಿನ ವೇಗದ ವೇಗವನ್ನು ನೀಡುತ್ತದೆ, ಅಂದರೆ ನಿಮ್ಮ ಸಾಧನಗಳಿಗೆ ಹೆಚ್ಚಿನ ಬ್ಯಾಂಡ್‌ವಿಡ್ತ್ ಸಾಧ್ಯವಾಗಲಿದೆ.'ಮಲ್ಟಿ-ಲಿಂಕ್ ಕಾರ್ಯಾಚರಣೆಯೊಂದಿಗೆ, iPhone 16 Pro Max ವಿವಿಧ ಬ್ಯಾಂಡ್‌ಗಳು ಮತ್ತು ಚಾನಲ್‌ಗಳಲ್ಲಿ ಒಂದೇ ಬಾರಿಗೆ ಡೇಟಾವನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗುತ್ತದೆ.

ದೀರ್ಘ ಬ್ಯಾಟರಿ ಬಾಳಿಕೆ: ಈಗಾಗಲೇ ಬಂದಿರುವ ಮಾಹಿತಿಯಂತೆ ಐಫೋನ್‌ 16 ಸರಣಿಯ ಫೋನ್‌ಗಳಲ್ಲಿ ಬೃಹತ್‌ ಬ್ಯಾಟರಿಗಳು ಇರಲಿದೆ. ಐಫೋನ್‌ 15 ಪ್ರೋ ಮ್ಯಾಕ್ಸ್‌ನಲ್ಲಿ 5ಜಿಯಲ್ಲಿ ಇಂಟರ್ನೆಟ್‌ ಬಳಕೆ ಮಾಡಿದರೂ, 14 ಗಂಟೆ 2 ನಿಮಿಷ ಬ್ಯಾಟರಿ ಬಾಳಿಕೆ ಬರುತ್ತದೆ. ಇದು 4422 mAh ಬ್ಯಾಟರಿ ಹೊಂದಿದೆ. ಆದರೆ, ಐಫೋನ್‌ 16 ಪ್ರೋ ಮ್ಯಾಕ್ಸ್‌ 4,676 mAh ಬ್ಯಾಟರಿ ಹೊಂದಿರಲಿದೆ ಎನ್ನಲಾಗಿದೆ.

iPhone 16 Update: ಐಫೋನ್‌ 16 ಸಿರೀಸ್‌ನ ಮೊಬೈಲ್‌ ಬಗ್ಗೆ ಬಿಗ್ಗೆಸ್ಟ್‌ ನ್ಯೂಸ್‌ ಲೀಕ್‌!

Flipkart Sale ಬಂಪರ್ ಆಫರ್‌, ಕೇವಲ 9900ಕ್ಕೆ ಸಿಗ್ತಿದೆ ಆ್ಯಪಲ್ ಐಫೋನ್‌ 12 ಮಿನಿ

click me!