Fuente success story: 13 ವರ್ಷಗಳ ಹಿಂದೆ ನಿರುದ್ಯೋಗಿ ಆಗಿದ್ದ ಫ್ಯುಂಟೆ ಈಗ ವಿಶ್ವಕಪ್‌ ವಿಜೇತ ಸ್ಪೇನ್‌ ಕೋಚ್‌!

Kannadaprabha News   | Kannada Prabha
Published : Jul 21, 2026, 07:39 AM IST
Who Is Luis De La Fuente ?

ಸಾರಾಂಶ

ಒಂದು ಕಾಲದಲ್ಲಿ ನಿರುದ್ಯೋಗಿಯಾಗಿದ್ದ ಲೂಯಿಸ್‌ ಡೆ ಲಾ ಫ್ಯುಂಟೆ, ಪತ್ರಿಕಾ ಜಾಹೀರಾತು ನೋಡಿ ಸ್ಪೇನ್‌ನ ಕಿರಿಯರ ತಂಡದ ಕೋಚ್‌ ಆದರು. ನಂತರ 2022ರಲ್ಲಿ ಹಿರಿಯರ ತಂಡದ ಕೋಚ್ ಆಗಿ ಬಡ್ತಿ ಪಡೆದು, ಸ್ಪೇನ್‌ ತಂಡವನ್ನು ಯುರೋ ಕಪ್ ಮತ್ತು ವಿಶ್ವ ಚಾಂಪಿಯನ್‌ ಪಟ್ಟಕ್ಕೇರಿಸಿದರು.

  •  ದಿನಪತ್ರಿಕೆಯಲ್ಲಿ ಬಂದಿದ್ದ ಜಾಹೀರಾತು ನೋಡಿ ಕೋಚ್‌ ಹುದ್ದೆಗೆ ಅರ್ಜಿ ಹಾಕಿದ್ದರು
  •  2013ರಲ್ಲಿ ಅಂಡರ್‌-19 ಕೋಚ್‌ । 2022ರಲ್ಲಿ ಹಿರಿಯರ ಟೀಂ ಕೋಚ್‌ ಆಗಿ ನೇಮಕ

ಸ್ಪೇನ್‌ ತಂಡವನ್ನು ವಿಶ್ವ ಚಾಂಪಿಯನ್‌ ಪಟ್ಟಕ್ಕೇರಿಸಿದ ಕೋಚ್‌ ಲೂಯಿಸ್‌ ಡೆ ಲಾ ಫ್ಯುಂಟೆ, ಹಿರಿಯರ ತಂಡದೊಳಕ್ಕೆ ಬಂದಿದ್ದು 2022ರಲ್ಲಿ. ಆದರೆ ಅವರು ಸ್ಪೇನ್‌ನ ಫುಟ್ಬಾಲ್‌ ವ್ಯವಸ್ಥೆಯೊಳಕ್ಕೆ 2013ರಲ್ಲೇ ಕಾಲಿಟ್ಟಿದ್ದರು.

ದಿನಪತ್ರಿಕೆಯಲ್ಲಿ ಬಂದಿದ್ದ ಜಾಹೀರಾತು ನೋಡಿ ಕೋಚ್‌ ಹುದ್ದೆಗೆ ಅರ್ಜಿ

13 ವರ್ಷಗಳ ಹಿಂದೆ ಫ್ಯುಂಟೆ ನಿರುದ್ಯೋಗಿ. ಸ್ಪೇನ್‌ನ ಕಿರಿಯರ ತಂಡಕ್ಕೆ ಕೋಚ್‌ ಹುಡುಕಾಟದ ಬಗ್ಗೆ ದಿನಪತ್ರಿಕೆಯಲ್ಲಿ ಜಾಹೀರಾತು ನೋಡಿ, ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಸ್ಪೇನ್‌ ಫುಟ್ಬಾಲ್‌ ಸಂಸ್ಥೆ 2013ರಲ್ಲಿ ಅವರನ್ನು ತನ್ನ ರಾಷ್ಟ್ರೀಯ ಅಂಡರ್‌-19 ತಂಡದ ಕೋಚ್‌ ಆಗಿ ನೇಮಿಸಿತು. ಅಲ್ಲಿಂದಾಚೆಗೆ ಫ್ಯುಂಟೆ ಮುಟ್ಟಿದ್ದೆಲ್ಲಾ ಚಿನ್ನ!

2022ರಲ್ಲಿ ಹಿರಿಯರ ಟೀಂ ಕೋಚ್‌ ಆಗಿ ನೇಮಕ

ಫ್ಯುಂಟೆ ಮಾರ್ಗದರ್ಶನದಲ್ಲಿ ಸ್ಪೇನ್‌ 2015ರಲ್ಲಿ ಯುರೋಪಿಯನ್‌ ಅಂಡರ್‌-19 ಚಾಂಪಿಯನ್‌ಶಿಪ್‌ ಜಯಿಸಿತು. 2019ರಲ್ಲಿ ಯುರೋಪಿಯನ್‌ ಅಂಡರ್‌-21 ಚಾಂಪಿಯನ್‌ಶಿಪ್‌ ಸ್ಪೇನ್‌ ಪಾಲಾಯಿತು. 2022ರಲ್ಲಿ ಫ್ಯುಂಟೆ ಹಿರಿಯರ ತಂಡದ ಕೋಚ್‌ ಆಗಿ ಬಡ್ತಿ ಪಡೆದರು. ಆ ಬಳಿಕ ಸ್ಪೇನ್‌, 2023ರಲ್ಲಿ ಯುಇಎಫ್‌ಎ ನೇಷನ್ಸ್‌ ಕಪ್‌ ಜಯಿಸಿತು. 2024ರಲ್ಲಿ ಯುರೋ ಕಪ್‌ ಗೆದ್ದಿತು. ಇದೀಗ 2026ರಲ್ಲಿ ವಿಶ್ವ ಚಾಂಪಿಯನ್‌ ಆಗಿದೆ.

ಈ ವಿಶ್ವಕಪ್‌ನಲ್ಲಿ ಸ್ಪೇನ್‌ ತಂಡದ ಆಧಾರಸ್ತಂಭವಾಗಿದ್ದ ರೋಡ್ರಿ, ಫ್ಯಾಬಿಯನ್‌ ರೂಯಿಜ್‌, ಮಿಕೆಲ್‌ ಮೆರಿನಿ, ಉನೈ ಸೈಮನ್‌ ಫ್ಯುಂಟೆ ಗರಡಿಯಲ್ಲೇ ಬೆಳೆದವರು ಎನ್ನುವುದು ವಿಶೇಷ. ಸ್ಪ್ಯಾನಿಶ್‌ ಫುಟ್ಬಾಲ್‌ನ ಆಳ-ಅಗಲ ತಿಳಿದಿರುವ ಫ್ಯುಂಟೆಗೆ ಕೋಚಿಂಗ್‌ ಜವಾಬ್ದಾರಿ ನೀಡಿದ್ದು ಸ್ಪೇನ್‌ ಫುಟ್ಬಾಲ್‌ ಸಂಸ್ಥೆಯ ಮಾಸ್ಟರ್‌ ಸ್ಟ್ರೋಕ್‌.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಫಿಫಾ ಫೈನಲ್‌ನ ಒಂದೂವರೆ ಗಂಟೆಯಲ್ಲಿ 15.92 ಕೋಟಿ ರೂ ಗಳಿಸಿದ ಮಾಜಿ ತಾರೆ ಮಿಯಾ ಖಲೀಫಾ
ಫೀನಿಕ್ಸ್‌ನಂತೆ ಎದ್ದ ಟೀಮ್‌ ಸ್ಪ್ಯಾನಿಶ್‌! ಇದು ಕೇವಲ ವಿಶ್ವಕಪ್ ಗೆಲುವಲ್ಲ, ದಶಕದ ನಿರಾಸೆ ಬಳಿಕ ಮತ್ತೆ ವಿಶ್ವ ಫುಟ್ಬಾಲ್‌ನ ಶಿಖರಕ್ಕೇರಿದ ಕಥೆ